logo
ಕನ್ನಡ ಸುದ್ದಿ  /  Sports  /  India Vs Australia Second Odi Vishakhapatnam Weather Report

Ind vs Aus 2nd ODI: ಭಾರತದ ಸರಣಿ ಗೆಲುವಿನ ಕನಸಿಗೆ ಮಳೆ ಅಡ್ಡಿ? ವಿಶಾಖಪಟ್ಟಣ ಹವಾಮಾನ ಹೇಗಿದೆ?

HT Kannada Desk HT Kannada

Mar 19, 2023 08:30 AM IST

ಮೊದಲ ಏಕದಿನ ಪಂದ್ಯದ ಚಿತ್ರ

    • ವಿಶಾಖಪಟ್ಟಣದಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಲು ಭಾರತ ಪ್ರಯತ್ನಿಸಲಿದೆ. ಉತ್ತಮ ಫಲಿತಾಂಶದ ನಿರೀಕ್ಷೆಯ ನಡುವೆ ಮಳೆ ಭಾರತಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. 
ಮೊದಲ ಏಕದಿನ ಪಂದ್ಯದ ಚಿತ್ರ
ಮೊದಲ ಏಕದಿನ ಪಂದ್ಯದ ಚಿತ್ರ (ANI)

ವಿಶಾಖಪಟ್ಟಣದ ವೈಎಸ್ ರಾಜಾ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಇಂದು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ಎರಡನೇ ಏಕದಿನ ಪಂದ್ಯ ನಡೆಯಲಿದೆ. ಮುಂಬೈನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಉಭಯ ತಂಡಗಳ ಬ್ಯಾಟಿಂಗ್‌ ಲೈನಪ್‌ ಕುಸಿತ ಕಂಡಿತ್ತು. ಅಂತಿಮವಾಗಿ ಕನ್ನಡಿಗ ಕೆಎಲ್‌ ರಾಹುಲ್‌ ಸ್ಟ್ಯಾಂಡಿಂಗ್‌ ಪ್ರದರ್ಶನದ ನೆರವಿನಿಂದ ಭಾರತ ಗೆದ್ದಿತ್ತು. ಇದೀಗ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಭರ್ಜರಿ ಬ್ಯಾಟಿಂಗ್‌ ನಡೆಸುವ ವಿಶ್ವಾಸದಲ್ಲಿದೆ. ಅಲ್ಲದೆ ಪಂದ್ಯ ಗೆದ್ದು ಸರಣಿ ವಶಪಡಿಸಿಕೊಳ್ಳುವ ಇರಾದೆ ಹೊಂದಿದೆ. ಪಂದ್ಯಕ್ಕೆ ನಾಯಕನಾಗಿ ರೋಹಿತ್‌ ಶರ್ಮಾ ಮರಳುತ್ತಿದ್ದು, ಆಡುವ ಬಳಗದಲ್ಲಿ ಕೊಂಚ ಬದಲಾವಣೆಯಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಪಂದ್ಯದಲ್ಲಿ ಮಳೆಯಾಟ ಕಂಡರೆ, ಅಭಿಮಾನಿಗಳ ಉತ್ಸಾಹ ಕುಂಠಿತವಾಗಬಹುದು. ಮೊದಲ ಪಂದ್ಯವನ್ನು ಈಗಾಗಲೇ ಗೆದ್ದಿರುವ ಭಾರತವು, ವಿಶಾಖಪಟ್ಟಣದಲ್ಲಿ ನಡೆಯುವ ಎರಡನೇ ಏಕದಿನ ಪಂದ್ಯವನ್ನು ಗೆದ್ದು ಸರಣಿಯನ್ನು ತನ್ನದಾಗಿಸಲು ಪ್ರಯತ್ನಿಸಲಿದೆ. ಉತ್ತಮ ಫಲಿತಾಂಶದ ನಿರೀಕ್ಷೆಯ ನಡುವೆ ಮಳೆ ಭಾರತಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ಮಳೆ ಬಂದರೆ, ಭಾರತದ ಸರಣಿ ಗೆಲುವಿನ ಪ್ರಯತ್ನಕ್ಕೆ ತೊಂದರೆಯಾಗಲಿದೆ.

ಹವಾಮಾನ ಹೇಗಿದೆ?

ಆಕ್ಯುವೆದರ್ ಪ್ರಕಾರ, ವಿಶಾಖಪಟ್ಟಣದಲ್ಲಿ ದಿನದ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ನಿರೀಕ್ಷಿಸಲಾಗಿದೆ. ಮೋಡಕವಿದ ವಾತಾವರಣ ಇರಲಿದ್ದು, ಸಾಂದರ್ಭಿಕ ಮಳೆ ಮತ್ತು ಬೆಳಗ್ಗೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ಮಧ್ಯಾಹ್ನ ಕೆಲ ಸ್ಥಳಗಳಲ್ಲಿ ತುಂತುರು ಮಳೆಯಾಗುವ ಸಂಭವವಿದೆ. ಸಂಜೆಯ ವೇಳೆಗೆ ಸುಮಾರು 24 ಡಿಗ್ರಿ ಸೆಲ್ಸಿಯಸ್ ಇರಬಹುದೆಂದು ಅಂದಾಜಿಸಲಾಗಿದೆ. ಗುಡುಗು ಸಹಿತ ಭಾಗಶಃ ಮೋಡ ಕವಿದ ವಾತಾವರಣವಿರುತ್ತದೆ. ಎರಡನೇ ಇನ್ನಿಂಗ್ಸ್‌ನ ಅಂತ್ಯದ ವೇಳೆಗೆ, ಮತ್ತೊಮ್ಮೆ ಗುಡುಗು ಸಹಿತ ಮಳೆ ಬರುವ ಸಾಧ್ಯತೆ ಇದೆ.

ಇದೇ ವರ್ಷ ಭಾರತದಲ್ಲಿ ಏಕದಿನ ವಿಶ್ವಕಪ್‌ ನಡೆಯಲಿರುವುದರಿಂದ ಭಾರತಕ್ಕೆ ಈ ಸರಣಿ ಒಂದು ರೀತಿಯ ಪರೀಕ್ಷೆ. ಇದೇ ಹಿನ್ನೆಲೆಯಲ್ಲಿ ತಂಡದ ಸಂಯೋಜನೆಯನ್ನು ಅಂತಿಮಗೊಳಿಸಲು ಉಭಯ ತಂಡಗಳು ಆಶಿಸುತ್ತಿವೆ. ರಿಷಬ್ ಪಂತ್ ಗಾಯಗೊಂಡಿರುವ ಕಾರಣ, ಭಾರತವು ಸೀಮಿತ ಓವರ್‌ಗಳ ಕ್ರಿಕೆಟ್‌ಗೆ ನಿಯಮಿತ ವಿಕೆಟ್‌ ಕೀಪರ್ ಅನ್ನು ಹುಡುಕಬೇಕಾಗಿದೆ. ಅದರೊಂದಿಗೆ ಅವರ ಬ್ಯಾಟಿಂಗ್ ಸಮಸ್ಯೆಗಳನ್ನು ಪರಿಹರಿಸಲು ಎದುರು ನೋಡುತ್ತಿದೆ. ಇಶಾನ್ ಕಿಶನ್ ಅವರನ್ನು ಸದ್ಯ ತಂಡದಿಂದ ಕೈಬಿಡುವ ಸಾಧ್ಯತೆ ಇದ್ದು, ನಾಯಕ ರೋಹಿತ್ ಜೊತೆಗೆ ಗಿಲ್‌ ಆರಂಭಿಕರಾಗುವುದು ಬಹುತೇಕ ಖಚಿತವಾಗಿದೆ. ಸದ್ಯ ಎರಡನೇ ಏಕದಿನ ಪಂದ್ಯದಲ್ಲಿ ಉಮ್ರಾನ್ ಮಲಿಕ್‌ಗೆ ಅವಕಾಶ ಸಿಗುತ್ತದೆ ಎಂದು ಅನೇಕ ಅಭಿಮಾನಿಗಳು ನಿರೀಕ್ಷಿಸುತ್ತಿದ್ದಾರೆ.

ಲೈವ್‌ ಸ್ಟ್ರೀಮಿಂಗ್‌ ವಿವರ

ಭಾರತ ಮತ್ತು ಆಸ್ಟ್ರೇಲಿಯಾ ನಡುವಣ ಎರಡನೇ ಏಕದಿನ ಪಂದ್ಯವು ಮಾರ್ಚ್ 19ರ ಭಾನುವಾರ ನಡೆಯಲಿದೆ. ಪಂದ್ಯವು ಮಧ್ಯಾಹ್ನ 1:30ಕ್ಕೆ ಆರಂಭವಾಗಲಿದೆ. ವಿಶಾಖಪಟ್ಟಣಂನ ವೈಎಸ್ ರಾಜಾ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಈ ಪಂದ್ಯ ನಡೆಯಲಿದೆ. ಸರಣಿಯ ಎಲ್ಲಾ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್ ಮೂಲಕ ನೇರಪ್ರಸಾರವಾಗಲಿದೆ. ಅಲ್ಲದೆ ಮೊಬೈಲ್‌ನಲ್ಲಿ ಹಾಟ್‌ಸ್ಟಾರ್ ಮೂಲಕ ಲೈವ್-ಸ್ಟ್ರೀಮ್ ವೀಕ್ಷಿಸಬಹುದು.

ಭಾರತ ತಂಡ

ಶುಬ್ಮನ್ ಗಿಲ್, ರೋಹಿತ್​ ಶರ್ಮಾ (ನಾಯಕ) ಇಶಾನ್ ಕಿಶನ್ (ವಿಕೆಟ್​ ಕೀಪರ್​​), ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಕೆಎಲ್ ರಾಹುಲ್ (ವಿಕೆಟ್​ ಕೀಪರ್​​​), ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ವಾಷಿಂಗ್ಟನ್ ಸುಂದರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಹಲ್, ಶಾರ್ದೂಲ್ ಠಾಕೂರ್, ಅಕ್ಷರ್​ ಪಟೇಲ್, ಕುಲ್ದೀಪ್ ಯಾದವ್, ಉಮ್ರಾನ್ ಮಲಿಕ್, ಜಯದೇವ್ ಉನಾದ್ಕತ್.

    ಹಂಚಿಕೊಳ್ಳಲು ಲೇಖನಗಳು