logo
ಕನ್ನಡ ಸುದ್ದಿ  /  ಕ್ರೀಡೆ  /  Wrestlers Arrest: ಹೊಸ ಸಂಸತ್​ ಭವನದ ಎದುರು ಪ್ರತಿಭಟನೆಗೆ ಯತ್ನ; ಬಂಧಿಸಲು ಎಳೆದಾಡಿದ ಪೊಲೀಸರು, ಒಬ್ಬರನ್ನೊಬ್ರು ಅಪ್ಪಿಕೊಂಡ ಕುಸ್ತಿಪಟುಗಳು

Wrestlers Arrest: ಹೊಸ ಸಂಸತ್​ ಭವನದ ಎದುರು ಪ್ರತಿಭಟನೆಗೆ ಯತ್ನ; ಬಂಧಿಸಲು ಎಳೆದಾಡಿದ ಪೊಲೀಸರು, ಒಬ್ಬರನ್ನೊಬ್ರು ಅಪ್ಪಿಕೊಂಡ ಕುಸ್ತಿಪಟುಗಳು

Prasanna Kumar P N HT Kannada

May 28, 2023 04:45 PM IST

ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬಂಧಿಸಿದ ದೆಹಲಿ ಪೊಲೀಸರು

    • Wrestlers Arrest: ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಪ್ರತಿಭಟನಾ ನಿರತ ಕುಸ್ತಿಪಟುಗಳು ಪ್ರಯತ್ನಿಸಿದರು. ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡದೆ ಖ್ಯಾತನಾಮ ಕುಸ್ತಿಪಟುಗಳನ್ನು ಬಂಧಿಸಿದರು.
ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬಂಧಿಸಿದ ದೆಹಲಿ ಪೊಲೀಸರು
ಪ್ರತಿಭಟನಾ ನಿರತ ಕುಸ್ತಿಪಟುಗಳನ್ನು ಬಂಧಿಸಿದ ದೆಹಲಿ ಪೊಲೀಸರು

ಭಾರತದ ಕುಸ್ತಿ ಫೆಡರೇಷನ್​ ಒಕ್ಕೂಟದ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್ ಸಿಂಗ್ (WFI president Brij Bhushan Singh) ಬಂಧನಕ್ಕೆ ಒತ್ತಾಯಿಸಿ ಉದ್ಘಾಟನೆಯಾದ ನೂತನ ಸಂಸತ್​ ಭವನದ (New Parliament House) ಮುಂಭಾಗ ಪ್ರತಿಭಟನೆ ನಡೆಸಲು ಯತ್ನಿಸಿದ ಖ್ಯಾತನಾಮ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ. ಅವರಿಗೆ ಬೆಂಬಲ ನೀಡಿದ ರೈತ ಮುಖಂಡರನ್ನೂ ವಶಕ್ಕೆ ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅತ್ಯಂತ ಅಮಾನವೀಯವಾಗಿ ನಡೆದುಕೊಂಡಿರುವುದು ಭಾರಿ ಟೀಕೆಗೆ ಗುರಿಯಾಗಿದೆ.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಒಲಿಂಪಿಯನ್​ಗಳು, ಕಾಮನ್​ವೆಲ್ತ್​ ಒಲಿಂಪಿಯನ್​ಗಳು ಸೇರಿ ಖ್ಯಾತನಾಮ ಕುಸ್ತಿಪಟುಗಳು ಕಳೆದ ಒಂದು ತಿಂಗಳಿಂದಲೂ ಪ್ರತಿಭಟನೆ ನಡೆಸುತ್ತಿದ್ದಾರೆ. ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ (Wrestling Federation of India president Brij Bhushan Singh) ವಿರುದ್ಧ ಸಂತ್ರಸ್ತೆ ಸೇರಿದಂತೆ ಮಹಿಳಾ ಕುಸ್ತಿಪಟುಗಳಿಗೆ ಲೈಂಗಿಕ ಕಿರುಕುಳ ಮತ್ತು ಬೆದರಿಕೆ ಆರೋಪ ಮಾಡಿರುವ ಕ್ರೀಡಾಪಟುಗಳು, ಜಂತರ್ ​ಮಂತರ್​ನಲ್ಲಿ ತಿಂಗಳಿಗೂ ಹೆಚ್ಚು ಕಾಲ ಧರಣಿ ನಡೆಸುತ್ತಿದ್ದಾರೆ. ಆದರೆ, ಕೇಂದ್ರ ಸರ್ಕಾರದಿಂದ ಯಾವುದೇ ಸ್ಪಂದನೆ ಈವರೆಗೂ ಸಿಕ್ಕಿಲ್ಲ.

ಹಾಗಾಗಿ ಪ್ರತಿಭಟನಾ ನಿರತ ಕುಸ್ತಿಪಟುಗಳು, ಹೊಸ ಸಂಸತ್ ಭವನದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದರು. ಮಹಿಳಾ ಮಹಾ ಪಂಚಾಯತ್ (Mahila Maha Panchayat) ನಡೆಸಲು ನಿರ್ಧರಿಸಿರುವುದಾಗಿ ಮೊದಲೇ ಹೇಳಿದ್ದ ಕುಸ್ತಿಪಟುಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರಧಾನಿ ನರೇಂದ್ರ ಮೋದಿ (Prime Minister Narenadra Modi) ಅವರು ಉದ್ಘಾಟಿಸಿದ ನೂತನ ಸಂಸತ್ ಭವನಕ್ಕೆ ಮುತ್ತಿಗೆ ಹಾಕಲು ಪ್ರಯತ್ನಿಸಿದರು.

ಆದರೆ, ಪೊಲೀಸರು ಅದಕ್ಕೆ ಅವಕಾಶ ನೀಡಲಿಲ್ಲ. ಪ್ರತಿಭಟನೆಯ ಕುರಿತು ಮೊದಲೇ ತಿಳಿದಿದ್ದ ದೆಹಲಿ ಪೊಲೀಸರು ಐಟಿಒ ರಸ್ತೆ, ಟಿಕ್ರಿ ಗಡಿ ಮತ್ತು ಸಿಂಘು ಗಡಿ ಪ್ರದೇಶದ ಬಳಿ ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಪ್ರತಿಭಟನಾ ಮೆರವಣಿಗೆ ಬಂದ ಕುಸ್ತಿಪಟುಗಳನ್ನು ಅಲ್ಲಿಯೇ ತಡೆದರು. ಕುಸ್ತಿಪಟುಗಳಿಗೆ ನ್ಯಾಯ ದೊರಕಿಸಿಕೊಡುವಂತೆ ಖಾಪ್ ಪಂಚಾಯತ್ ಮುಖಂಡರು ಮತ್ತು ರೈತ ಮುಖಂಡರೂ ಬೆಂಬಲ ಸೂಚಿಸಿದ್ದರು. ಆದರೆ ಕುಸ್ತಿಪಟುಗಳು, ರೈತರು ಸೇರಿ ಎಲ್ಲರನ್ನೂ ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

ಕುಸ್ತಿಪಟುಗಳಾದ ಬಜರಂಗ್ ಪುನಿಯಾ (Bajrang Punia), ವಿನೇಶ್ ಫೋಗಟ್ (Vinesh Phogat) ಮತ್ತು ಸಾಕ್ಷಿ ಮಲಿಕ್ (Sakshi Malik) ನೇತೃತ್ವದಲ್ಲಿ ಈ ಪ್ರತಿಭಟನಾ ಮೆರವಣಿಗೆ ನಡೆಯಿತು. ಇನ್ನೆಷ್ಟು ದಿನ ಪ್ರತಿಭಟನೆ ನಡೆಸಬೇಕು. ಬಿಜೆಪಿ ಸಂಸದನ ರಕ್ಷಣೆಗೆ ಇಷ್ಟೊಂದು ಒಲವು ಏಕೆ ಎಂದು ಪ್ರಶ್ನಿಸಿದ್ದಾರೆ. ಬ್ರಿಜ್ ಭೂಷಣ್ ಸಿಂಗ್ ಅವರನ್ನು ಶೀಘ್ರವೇ ಬಂಧಿಸಿ ಎಂದು ಒತ್ತಾಯಿಸಿದ್ದಾರೆ. ಬೇಟಿ ಬಚಾವೋ ಅಂತೀರಾ, ಅದೇ ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದರೂ ಯಾಕೆ ಗಮನ ಹರಿಸುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.

ಒಬ್ಬರನ್ನೊಬ್ಬರು ಅಪ್ಪಿಕೊಂಡ ಕುಸ್ತಿಪಟುಗಳು

ಸಂಸತ್​ ಮುತ್ತಿಗೆಗೆ ಯತ್ನಿಸಿದ ಪ್ರತಿಭಟನಾ ನಿರತ ಕುಸ್ತಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನು ಮನಬಂದಂತೆ ಎಳೆದಾಡಿದ್ದಾರೆ. ಆದರೆ ಕುಸ್ತಿಪಟುಗಳು ಒಬ್ಬರನ್ನೊರು ಅಪ್ಪಿಕೊಂಡ ದೃಶ್ಯ ಕರುಳು ಕಿವುಚುವಂತೆ ಮಾಡಿತ್ತು. ದೇಶದ ಘನತೆ, ಗೌರವ ಹೆಚ್ಚಿಸಿದ ಖ್ತಾತನಾಮ ಕ್ರೀಡಾಪಟುಗಳನ್ನು ರಸ್ತೆಯ ತುಂಬೆಲ್ಲಾ ಎಳೆದಾಡಿದ್ದು, ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

    ಹಂಚಿಕೊಳ್ಳಲು ಲೇಖನಗಳು