ಕನ್ನಡ ಸುದ್ದಿ  /  ಕ್ರೀಡೆ  /  The Cost Of Protest: ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಧರಣಿ; 5 ದಿನಗಳಲ್ಲಿ 5 ರಿಂದ 6 ಲಕ್ಷ ಖರ್ಚು ಮಾಡಿದ್ದೇವೆ ಎಂದ ಕುಸ್ತಿಪಟುಗಳು

The Cost Of Protest: ಬ್ರಿಜ್​ ಭೂಷಣ್​ ಸಿಂಗ್​ ವಿರುದ್ಧ ಧರಣಿ; 5 ದಿನಗಳಲ್ಲಿ 5 ರಿಂದ 6 ಲಕ್ಷ ಖರ್ಚು ಮಾಡಿದ್ದೇವೆ ಎಂದ ಕುಸ್ತಿಪಟುಗಳು

ಭಾರತ ಕುಸ್ತಿ ಒಕ್ಕೂಟ ಮುಖ್ಯಸ್ಥ ಬ್ರಿಜ್​ ಭೂಷಣ್​ ಸಿಂಗ್​ (WFI President Brij Bhushan Singh) ಅವರ ವಿರುದ್ಧ ನಡೆಸುತ್ತಿರುವ ಪ್ರತಿಭಟನೆಗೆ ಅಗ್ರ ಕುಸ್ತಿಪಟುಗಳಾದ ಬಜರಂಗ್​ ಪೂನಿಯಾ (Bajranj Punia), ಸಾಕ್ಷಿ ಮಲಿಕ್​ (Sakshi Malik), ವಿನೇಶ್​ ಫೋಗಟ್ (Vinesh Phoghat)​​ ನೇತೃತ್ವ ವಹಸಿದ್ದಾರೆ. ಆದರೆ ಈ ಧರಣಿಗೆ ಆಗುತ್ತಿರುವ ಖರ್ಚು ವೆಚ್ಚ ಎಷ್ಟು?

ಕುಸ್ತಿಪಟುಗಳ ಪ್ರತಿಭಟನೆ
ಕುಸ್ತಿಪಟುಗಳ ಪ್ರತಿಭಟನೆ (ANI)

ಲೈಂಗಿಕ ಕಿರುಕುಳ (Sexual Harassment) ನೀಡಿದ್ದಾರೆ ಎಂದು ಆರೋಪಿಸಿ ಭಾರತ ಕುಸ್ತಿ ಫೆಡರೇಷನ್​ ಅಧ್ಯಕ್ಷ ಬ್ರಿಜ್​ ಭೂಷಣ್​ ಶರಣ್ ಸಿಂಗ್ ((WFI President Brij Bhushan Sharan Singh))​ ವಿರುದ್ಧ ದೆಹಲಿಯ ಮಂತರ್​​ನಲ್ಲಿ ಕುಸ್ತಿಪಟುಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಬ್ರಿಜ್ ಭೂಷಣ್ ಬಂಧನಕ್ಕೆ ಕ್ರಮ ಕೈಗೊಳ್ಳದ ಹೊರತು ಧರಣಿ ಕೈಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಪ್ರತಿಭಟನೆ ತೀವ್ರಗೊಂಡ ಬೆನ್ನಲ್ಲೇ ದೆಹಲಿ ಪೊಲೀಸರು ಡಬ್ಲ್ಯುಎಫ್​ಐ ಮುಖ್ಯಸ್ಥನ ವಿರುದ್ಧ ಎರಡು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಆದರೆ ಇನ್ನೂ ಬಂಧಿತವಾಗಿಲ್ಲ.

ಬಜರಂಗ್​ ಪೂನಿಯಾ (Bajranj Punia), ಸಾಕ್ಷಿ ಮಲಿಕ್​ (Sakshi Malik), ವಿನೇಶ್​ ಫೋಗಟ್ (Vinesh Phoghat)​​ ನೇತೃತ್ವದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಆದರೆ ಈ ಧರಣಿಗೆ ಆಗುತ್ತಿರುವ ಖರ್ಚು ವೆಚ್ಚ ಎಷ್ಟು? ಜಂತರ್ ಮಂತರ್‌ನಲ್ಲಿ ನ್ಯಾಯಕ್ಕಾಗಿ ಪ್ರತಿಭಟನಾನಿರತ ಕುಸ್ತಿಪಟುಗಳ ಹೋರಾಟವು 'ದುಬಾರಿ' ಆಗಿ ಹೊರಹೊಮ್ಮುತ್ತಿದೆ. ದಿನೇ ದಿನೇ ಜೇಬಿಗೆ ಕತ್ತರಿ ಬೀಳುತ್ತಿದೆ. ಮೂಲಭೂತ ಸೌಕರ್ಯಗಳಿಗಾಗಿ ದೊಡ್ಡ ಮೊತ್ತವನ್ನು ಖರ್ಚು ಮಾಡುತ್ತಿದ್ದಾರೆ. ಈ ಐದು ದಿನಗಳಲ್ಲಿ 5 ಲಕ್ಷಕ್ಕೂ ಹೆಚ್ಚು ವೆಚ್ಚವಾಗಿದೆ.

ನೀರು ಮತ್ತು ಊಟದ ಹೊರತಾಗಿ ಹಾಸಿಗೆಗಳು, ಬೆಡ್​ಶೀಟ್​ಗಳು​, ಫ್ಯಾನ್​ಗಳು​, ಸ್ಪೀಕರ್​ಗಳು, ಮೈಕ್ರೋಫೋನ್​​ ಮತ್ತು ಮಿನಿ ಪವರ್ ಜನರೇಟರ್​​ಗಳನ್ನು ಪ್ರತಿಭಟನಾ ಸ್ಥಳದಲ್ಲಿ ಅವಳವಡಿಸಲಾಗಿದೆ. ಪ್ರತಿಭಟನೆಯ ಆರಂಭದಲ್ಲಿ ಹಾಸಿಗೆ, ಜನರೇಟರ್​​, ಸ್ಪೀಕರ್, ಸೌಂಡ್ ಸಿಸ್ಟಮ್​​​ಗಳನ್ನು ಬಾಡಿಗೆಗೆ ಪಡೆಯಲಾಗಿತ್ತು. ಆದರೆ ದಿನವೊಂದಕ್ಕೆ 27 ಸಾವಿರ ರೂಪಾಯಿ ಪಾವತಿಸಬೇಕಿತ್ತು. ಇದು ದುಬಾರಿ ಎಂದು ಅರಿತ ಕುಸ್ತಿಪಟುಗಳು ಬಳಿಕ ಅವುಗಳನ್ನೇ ಖರೀದಿಸಿದರು. ದೀರ್ಘ ಹೋರಾಟ ನಡೆಸುವ ಯೋಜನೆ ಹಾಕಿಕೊಂಡೇ ದೊಡ್ಡ ಆರ್ಥಿಕ ಹೊರೆಯಾದರೂ ಮುಂದುವರೆದಿದ್ದಾರೆ.

ಈ ಬಗ್ಗೆ ಮಾತನಾಡಿದ ವಿನೇಶ್​ ಫೋಗಟ್​​ ಅವರ ಪತಿ ಸೋಮ್​​ವೀರ್​ ರಾಠಿ ಮಾತನಾಡಿದ್ದು, ಯಾವುದಕ್ಕೆ ಎಷ್ಟೆಲ್ಲಾ ಖರ್ಚು ಆಗಿದೆ ಎಂಬುದನ್ನು ವಿವರಿಸಿದ್ದಾರೆ. ನಾವು ಹಾಸಿಗೆಗಳನ್ನು ಖರೀದಿಸಲು ನಿರ್ಧರಿಸಿದ್ದೇವೆ. ನನ್ನ ಗ್ರಾಮ ಖಾರ್ಖೋಡಾದಿಂದ 50,000 ಪಾವತಿಸಿ ಒಟ್ಟು 80 ಹಾಸಿಗೆ ಖರೀದಿಸಿದ್ದೇವೆ. ಆದರೆ ಈ ಹಾಸಿಗೆಗಳಿಗೆ ದಿನಕ್ಕೆ 12 ಸಾವಿರ ರೂಪಾಯಿ ಬಾಡಿಗೆ ನೀಡಿದ್ದರೆ, ದುಬಾರಿಯಾಗುತ್ತಿತ್ತು ಎಂದು ಹೇಳಿದ್ದಾರೆ. 

ಆರಂಭದಲ್ಲಿ ನಾವು ಸ್ಪೀಕರ್ ಮತ್ತು ಮೈಕ್‌ಗಳನ್ನು ಬಾಡಿಗೆಗೆ ತೆಗೆದುಕೊಂಡಿದ್ದೆವು. ಆದರೆ, ಒಂದು ದಿನಕ್ಕೆ 12,000 ಬಾಡಿಗೆ ನೀಡಬೇಕಿತ್ತು. ಇದು ತುಂಬಾ ದುಬಾರಿಯಾದ ಕಾರಣ, ಈಗ ನಾವು ನಮ್ಮದೇ ಆದ ಧ್ವನಿವರ್ಧಕ ಖರೀದಿಸಿದ್ದೇವೆ. ಚಾಂದಿನಿ ಚೌಕ್ ಮಾರುಕಟ್ಟೆಯಿಂದ 60 ಸಾವಿರ ನೀಡಿ ಖರೀದಿಸಿದ್ದೇವೆ. ಕ್ರೀಡಾಪಟುಗಳು ರಸ್ತೆಯಲ್ಲಿ ಪ್ರತಿಭಟನೆ ನಡೆಸುತ್ತಿರುವುದಕ್ಕೆ ಮರುಕಪಟ್ಟು ಅಂಗಡಿಯವ ಖರೀದಿಸಿದ ವಸ್ತುಗಳಿಗೆ ಲಾಭ ಪಡೆಯಲಿಲ್ಲ ಎಂದು ತಿಳಿಸಿದ್ದಾರೆ.

ಆದರೆ, ಫ್ಯಾನ್‌ಗಳು, ಜನರೇಟರ್‌ ಸೇರಿದಂತೆ ಕೆಲವು ವಸ್ತುಗಳನ್ನು ಬಾಡಿಗೆಗೆ ಪಡೆದಿದ್ದೇವೆ. ಫ್ಯಾನ್​ಗಳು, ಜನರೇಟರ್​ಗೆ ಒಂದು ದಿನವೊಂದಕ್ಕೆ 10 ಸಾವಿರ ಪಾವತಿಸುತ್ತಿದ್ದೇವೆ. ದೆಹಲಿಯಲ್ಲಿ ಉಷ್ಣಾಂಶ ಬಿಸಿಯಾಗಿದ್ದು, ಅಗತ್ಯ ಎನಿಸಿದರೆ ಕೂಲರ್‌ಗಳನ್ನೂ ಖರೀದಿಸುತ್ತೇವೆ. ಪ್ರತಿಭಟನೆ ಬಂದ ಎಲ್ಲರೂ ತಲಾ ಎರಡು ಲಕ್ಷ ತಂದಿದ್ದೇವೆ. ಈಗಾಗಲೇ ಸುಮಾರು 5-6 ಲಕ್ಷ ರೂಪಾಯಿ ಖರ್ಚು ಮಾಡಿದ್ದೇವೆ ಎಂದಿದ್ದಾರೆ.

ವಿನೇಶ್ ಫೋಗಟ್​, ಸಾಕ್ಷಿ ಮಲಿಕ್, ಬಜರಂಗ್ ಪೂನಿಯಾ ಪ್ರತಿಭಟನೆಯ ನೇತೃತ್ವ ವಹಿಸಿದ್ದಾರೆ. ಇವರೊಂದಿಗೆ ಅನೇಕರು ಹಗಲಿರುಳು ಶ್ರಮಿಸುತ್ತಿದ್ದಾರೆ. ನಾವು ಕೆಲಸವನ್ನು ನಮ್ಮಲ್ಲಿಯೇ ಹಂಚಿಕೊಂಡಿದ್ದೇವೆ. ಕೆಲವರು ಊಟದ ಜವಾವ್ಬಾರಿ, ಕೆಲವರಿಗೆ ನೀರಿನ ಜವಾಬ್ದಾರಿ.. ಹೀಗೆ ಪ್ರತಿಯೊಂದರಲ್ಲೂ ಕೆಲಸಗಳನ್ನು ಹಂಚಿಕೊಂಡಿದ್ದೇವೆ. ಶುಚಿತ್ವವನ್ನೂ ಕಾಪಾಡಿಕೊಳ್ಳುತ್ತಿದ್ದೇವೆ. ಯಾರ ಸಹಾಯ ಪಡೆದಿಲ್ಲ. ನಾವೇ ನಿರ್ವಹಣೆ ಮಾಡುತ್ತಿದ್ದೇವೆ. ಬಹಳ ಎಚ್ಚರಿಕೆಯಿಂದ ಖರ್ಚು ಮಾಡುತ್ತಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.