logo
ಕನ್ನಡ ಸುದ್ದಿ  /  ಕ್ರೀಡೆ  /  Shoaib Akhtar Bollywood Offer: ನನಗೆ ಬಾಲಿವುಡ್ ಸಿನಿಮಾ ಹೀರೋ ಆಗಲು ಆಫರ್ ಬಂದಿತ್ತು: ಅಖ್ತರ್

Shoaib Akhtar Bollywood offer: ನನಗೆ ಬಾಲಿವುಡ್ ಸಿನಿಮಾ ಹೀರೋ ಆಗಲು ಆಫರ್ ಬಂದಿತ್ತು: ಅಖ್ತರ್

HT Kannada Desk HT Kannada

Feb 21, 2023 09:50 AM IST

ಶೋಯೆಬ್ ಅಖ್ತರ್

    • ಅಖ್ತರ್‌ ಅವರಿಗೆ ಬಾಲಿವುಡ್‌ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸುವ ಆಫರ್‌ ಬಂದಿತ್ತಂತೆ. ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ 2005ರ 'ಗ್ಯಾಂಗ್‌ಸ್ಟರ್' ಚಲನಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸುವಂತೆ, ಅಖ್ತರ್‌ ಅವರನ್ನು ಸಂಪರ್ಕಿಸಲಾಗಿತ್ತಂತೆ.
ಶೋಯೆಬ್ ಅಖ್ತರ್
ಶೋಯೆಬ್ ಅಖ್ತರ್ (Getty Images)

ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಅವರಿಗೆ ಭಾರತದಲ್ಲೂ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರದೇಶದ ರಾವಲ್ಪಿಂಡಿಯಲ್ಲಿ ಜನಿಸಿದ ಅಖ್ತರ್‌ಗೆ, "ರಾವಲ್ಪಿಂಡಿ ಎಕ್ಸ್‌ಪ್ರೆಸ್" ಎಂದೇ ಅಡ್ಡಹೆಸರು. ಅದಕ್ಕೆ ಅವರ ವೇಗದ ಬೌಲಿಂಗ್ ಸಾಕ್ಷಿ. ವೇಗದ ಎಸೆತಗಳಿಂದ ಜಾಗತಿಕ ದಾಖಲೆ ನಿರ್ಮಿಸಿರುವ ಅಖ್ತರ್‌, ಕ್ರಿಕೆಟ್‌ನಲ್ಲಿ ಅಪಾರ ಸಾಧನೆ ಮಾಡಿದ್ದಾರೆ. ಕ್ರೀಡಾ ಕ್ಷೇತ್ರದ ಹೊರತಾಗಿ, ಅವರಿಗೆ ನಟನೆಯಲ್ಲೂ ಆಸಕ್ತಿ ಇತ್ತಂತೆ.

ಟ್ರೆಂಡಿಂಗ್​ ಸುದ್ದಿ

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಪ್ಯಾರಿಸ್ ಒಲಿಂಪಿಕ್ಸ್​ಗೆ ಅರ್ಹತೆ ಗಳಿಸಿದ ಭಾರತದ 7 ಷಟ್ಲರ್​​ಗಳು; ಅರ್ಹತೆ; ಕನ್ನಡತಿ ಅಶ್ವಿನಿ ಪೊನ್ನಪ್ಪ, ಪಿವಿ ಸಿಂಧುಗೆ ಅವಕಾಶ

ಅಖ್ತರ್‌ ಅವರಿಗೆ ಬಾಲಿವುಡ್‌ ಚಿತ್ರದಲ್ಲಿ ಹೀರೋ ಆಗಿ ಅಭಿನಯಿಸುವ ಆಫರ್‌ ಬಂದಿತ್ತಂತೆ. ಬಾಲಿವುಡ್ ನಿರ್ದೇಶಕ ಮಹೇಶ್ ಭಟ್ ಅವರ 2005ರ 'ಗ್ಯಾಂಗ್‌ಸ್ಟರ್' ಚಲನಚಿತ್ರದಲ್ಲಿ ನಾಯಕನ ಪಾತ್ರದಲ್ಲಿ ನಟಿಸುವಂತೆ, ಅಖ್ತರ್‌ ಅವರನ್ನು ಸಂಪರ್ಕಿಸಲಾಗಿತ್ತಂತೆ. ಈ ಕುರಿತು ಪಾಕಿಸ್ತಾನದ ವೇಗದ ಬೌಲರ್ ತಿಳಿಸಿದ್ದಾರೆ. ಈ ಬಗ್ಗೆ ದಿ ಎಕ್ಸ್‌ಪ್ರೆಸ್ ಟ್ರಿಬ್ಯೂನ್(The Express Tribune) ಮಾಡಿರುವ ವರದಿಯನ್ನು ಸುದ್ದಿಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಕಳೆದ ವರ್ಷವಷ್ಟೇ, ಅಖ್ತರ್ ತಮ್ಮ ಜೀವನಚರಿತ್ರೆಯ ಶೀರ್ಷಿಕೆಯನ್ನು ಬಹಿರಂಗಪಡಿಸಿದ್ದರು.‌ ಅದುವೇ "ರಾವಲ್ಪಿಂಡಿ ಎಕ್ಸ್‌ಪ್ರೆಸ್: ರೇಸಿಂಗ್ ಎಗೇನ್ಸ್ಟ್ ದಿ ಆಡ್ಸ್". ಈ ಚಿತ್ರದ ನಿರ್ಮಾಣ ಆರಂಭವಾಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ, ಕಳೆದ ತಿಂಗಳು ಅಖ್ತರ್ ಭಿನ್ನಾಭಿಪ್ರಾಯಗಳು ಮತ್ತು ಒಪ್ಪಂದದ ಉಲ್ಲಂಘನೆಯ ಕುರಿತು ಟ್ವಿಟರ್ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದರು.

ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನದ ಪಂದ್ಯ ಎಲ್ಲಿಲ್ಲದ ರೋಚಕತೆ ಸೃಷ್ಟಿಸುತ್ತದೆ. ಉಭಯ ತಂಡಗಳನ್ನು ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿಸಲಾಗಿದೆ. ಮೈದಾನದಲ್ಲಿ ಈ ತಂಡಗಳ ನಡುವಿನ ಉತ್ಸಾಹ ಮತ್ತು ಭಾವನೆಗಳು ಆಟಗಾರರು ಅತ್ಯುತ್ತಮ ಪ್ರದರ್ಶನ ನೀಡಲು ಪ್ರೋತ್ಸಾಹಿಸುತ್ತದೆ.

ಶೋಯೆಬ್ ಅಖ್ತರ್ ಅತ್ಯುತ್ತಮ ಮತ್ತು ಮಾರಕ ವೇಗದ ಆಟಗಾರರಲ್ಲಿ ಒಬ್ಬರಾಗಿದ್ದರು. 2011ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ಅವರು ನಿವೃತ್ತರಾದರು. ತಮ್ಮ ದೇಶದ ಪರ 163 ಏಕದಿನ, 14 ಟಿ20 ಮತ್ತು 46 ಟೆಸ್ಟ್‌ಗಳಲ್ಲಿ ಅಖ್ತರ್‌ ಕಣಕ್ಕಿಳಿದಿದ್ದಾರೆ. ಟೆಸ್ಟ್‌ನಲ್ಲಿ 178 ವಿಕೆಟ್‌ಗಳನ್ನು ಪಡೆದರೆ, ಏಕದಿನ ಕ್ರಿಕೆಟ್‌ನಲ್ಲಿ 247 ಹಾಗೂ ಟಿ20ಯಲ್ಲಿ 21 ವಿಕೆಟ್‌ಗಳನ್ನು ಪಡೆದಿದ್ದಾರೆ. ಅವರು 100 mph ವೇಗದಲ್ಲಿ ಬೌಲ್ ಮಾಡಿದ ಮೊದಲ ಕ್ರಿಕೆಟ್ ಆಟಗಾರ ಎಂಬ ದಾಖಲೆ ನಿರ್ಮಿಸಿದ್ದಾರೆ.

ಇದನ್ನೂ ಓದಿ

Ramiz Raja on Team India: 'ಭಾರತವನ್ನು ಸೋಲಿಸುವುದು ಅಸಾಧ್ಯ'; ಟೀಮ್ ಇಂಡಿಯಾವನ್ನು ಹಾಡಿ ಹೊಗಳಿದ ರಮೀಜ್ ರಾಜಾ

ಆಸ್ಟ್ರೇಲಿಯಾವನ್ನು ಮಣಿಸಿ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ಉಳಿಸಿಕೊಂಡ ರೋಹಿತ್ ಶರ್ಮಾ ನೇತೃತ್ವದ ಟೀಮ್ ಇಂಡಿಯಾವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಯ ಮಾಜಿ ಮುಖ್ಯಸ್ಥ ರಮಿಜ್ ರಾಜಾ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ 2ನೇ ಟೆಸ್ಟ್ ಪಂದ್ಯವನ್ನು ಭಾರತವು 6 ವಿಕೆಟ್‌ಗಳಿಂದ ಗೆದ್ದಿತ್ತು. ರವೀಂದ್ರ ಜಡೇಜಾ ಅವರ ಸ್ಪಿನ್‌ ದಾಳಿಗೆ ಪ್ಯಾಟ್ ಕಮಿನ್ಸ್ ಬಳಗವು ಮುಗ್ಗರಿಸಿತು. ಆ ಮೂಲಕ ಆತಿಥೇಯ ತಂಡವು ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-0 ಅಂತರದಿಂದ ಮುನ್ನಡೆ ಸಾಧಿಸಿದೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು