logo
ಕನ್ನಡ ಸುದ್ದಿ  /  Sports  /  Pakistan Pacer Sohail Khan Come Up With Bizarre Take On Umran Malik

Sohail Khan: 'ನಮ್ಮ ದೇಶದಲ್ಲಿ ಉಮ್ರಾನ್‌ನಂತಹ ಸಾಕಷ್ಟು ವೇಗಿಗಳಿದ್ದಾರೆ'; ಪಾಕ್‌ ವೇಗಿಯ ಕೊಂಕು ಮಾತು

HT Kannada Desk HT Kannada

Feb 04, 2023 08:43 PM IST

ಉಮ್ರಾನ್ ಮಲಿಕ್

    • ಪಾಕಿಸ್ತಾನದ ವೇಗದ ಬೌಲರ್ ಸೊಹೈಲ್ ಖಾನ್ ಮಾತ್ರ, ಉಮ್ರಾನ್‌ ಬಗ್ಗೆ ಕೊಂಕು ಮಾತನಾಡಿದ್ದಾರೆ. ಉಮ್ರಾನ್‌ ಭರವಸೆಯ ಪ್ರತಿಭೆಯಾಗಿದ್ದರೂ, ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲೇ 'ಅವನಂತಹ ಬೌಲರ್‌ಗಳು' ಹಲವರಿದ್ದಾರೆ ಎಂದು ಹೇಳಿದ್ದಾರೆ.
ಉಮ್ರಾನ್ ಮಲಿಕ್
ಉಮ್ರಾನ್ ಮಲಿಕ್ (Getty)

ಭಾರತವು ಈಗಾಗಲೇ ಸಾಕಷ್ಟು ವೇಗದ ಬೌಲರ್‌ಗಳನ್ನು ಕಂಡಿದೆ. ಆದರೆ ಉಮ್ರಾನ್ ಮಲಿಕ್ ಅವರೆಲ್ಲರಿಗಿಂತ ವಿಭಿನ್ನ. ಭಾರತದ ಈ ವೇಗಿ ನಿಯಮಿತವಾಗಿ ಗಂಟೆಗೆ 150 ಕಿಲೋಮೀಟರ್ ವೇಗದಲ್ಲಿ ಬೌಲಿಂಗ್‌ ಮಾಡುತ್ತಾರೆ. ಹೀಗಾಗಿ ಈ ಬೌಲರ್ ಭಾರತೀಯ ಕ್ರಿಕೆಟ್‌ನಲ್ಲೇ ಸೆನ್ಸೇಷನ್‌ ಸೃಷ್ಟಿಸಿದ್ದಾರೆ. ತಮ್ಮ 23ನೇ ವಯಸ್ಸಿನಲ್ಲಿ, ಉಮ್ರಾನ್ ಶಿಸ್ತುಬದ್ಧವಾಗಿ ಬೌಲಿಂಗ್‌ ಮಾಡುತ್ತಿದ್ದಾರೆ. ಕಳೆದ ವರ್ಷದ ಜೂನ್‌ ತಿಂಗಳಲ್ಲಿ ಅಂತಾರಾಷ್ಟ್ರೀಯ ಕ್ರಕೆಟ್‌ಗೆ ಪದಾರ್ಪಣೆ ಮಾಡಿದ ಬಳಿಕ, ಉಮ್ರಾನ್ ಭಾರತದ ಪರ 16 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ ಏಕದಿನ ಮತ್ತು ಟಿ20ಗಳನ್ನು ಸೇರಿ ಒಟ್ಟು 24 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಇವರ ಎಕಾನಮಿಯು ಸ್ವಲ್ಪಮಟ್ಟಿಗೆ ಹೆಚ್ಚಿರಬಹುದು. ಆದರೆ ಭಾರತದ ಭವಿಷ್ಯದ ದೃಷ್ಟಿಯಿಂದ ಅಮೂಲ್ಯ ಪ್ರತಿಭೆಯಾಗಿರುವ ಇವರು, ವಿಕೆಟ್ ಟೇಕಿಂಗ್ ಬೌಲರ್‌‌ ಆಗಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಮಾಜಿ ಕ್ರಿಕೆಟಿಗರು ಮಾತ್ರವಲ್ಲದೆ ವಿಶ್ವ ಕ್ರಿಕೆಟ್‌ನ ಕೆಲವು ದಿಗ್ಗಜ ವೇಗಿಗಳು ಉಮ್ರಾನ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ. ಜಾಗತಿಕ ಮಟ್ಟದ ದಿಗ್ಗಜ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಬ್ರೆಟ್ ಲೀ ಕೂಡ ಉಮ್ರಾನ್‌ ಬೌಲಿಂಗ್‌ ಅನ್ನು ಮೆಚ್ಚಿಕೊಂಡಿದ್ದಾರೆ. ಅಲ್ಲದೆ ಕಳೆದ ಬಾರಿ ಭಾರತದ ಟಿ20 ವಿಶ್ವಕಪ್ ತಂಡದಿಂದ ಅವರನ್ನು ಕೈಬಿಟ್ಟಿದ್ದಕ್ಕೂ ಅವರು ಅಚ್ಚರಿ ವ್ಯಕ್ತಪಡಿಸಿದ್ದರು. ಈ ಎಲ್ಲಾ ಹೇಳಿಕೆಗಳ ನಡುವೆ, ಪಾಕಿಸ್ತಾನದ ವೇಗದ ಬೌಲರ್ ಸೊಹೈಲ್ ಖಾನ್ ಮಾತ್ರ, ಉಮ್ರಾನ್‌ ಬಗ್ಗೆ ವಿಚಿತ್ರ ಹೇಳಿಕೆ ನೀಡಿದ್ದಾರೆ. ಉಮ್ರಾನ್‌ ಭರವಸೆಯ ಪ್ರತಿಭೆಯಾಗಿದ್ದರೂ, ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲೇ 'ಅವನಂತಹ ಬೌಲರ್‌ಗಳು' ಹಲವರಿದ್ದಾರೆ ಎಂದು ಹೇಳಿದ್ದಾರೆ.

“ಉಮ್ರಾನ್ ಮಲಿಕ್ ಒಬ್ಬ ಉತ್ತಮ ಬೌಲರ್ ಎಂದು ನಾನು ಭಾವಿಸುತ್ತೇನೆ. ನಾನು ಆತ ಆಡಿದ ಒಂದೆರಡು ಪಂದ್ಯಗಳನ್ನು ಕೂಡಾ ನೋಡಿದ್ದೇನೆ. ಆತ ವೇಗವಾಗಿ ಓಡುತ್ತಾನೆ ಮತ್ತು ಇತರ ವಿಷಯಗಳ ಬಗ್ಗೆಯೂ ಎಚ್ಚರದಿಂದಿರುತ್ತಾನೆ. ಆದರೆ ನೀವು ಗಂಟೆಗೆ 150-155 ಕಿ.ಮೀ.ಗಿಂತ ಹೆಚ್ಚಿನ ವೇಗದ ಬೌಲರ್‌ಗಳ ಬಗ್ಗೆ ಹೇಳುವುದಾದರೆ, ನಾನು ಪಾಕಿಸ್ತಾನದಲ್ಲಿ ಟೇಪ್-ಬಾಲ್ ಕ್ರಿಕೆಟ್ ಆಡುವ 12ರಿಂದ 15 ಆಟಗಾರರನ್ನು ಲೆಕ್ಕ ಹಾಕಬಹುದು. ಲಾಹೋರ್ ಖಲಂದರ್ಸ್ ಆಯೋಜಿಸಿರುವ ಪಂದ್ಯಗಳತ್ತ ಭೇಟಿ ನೀಡಿದರೆ, ನೀವು ಇಂತಹ ಅನೇಕ ಆಟಗಾರರನ್ನು ಕಾಣುತ್ತೀರಿ” ಎಂದು ನಾದಿರ್ ಅಲಿ ಪಾಡ್‌ಕ್ಯಾಸ್ಟ್‌ನಲ್ಲಿ ಸೊಹೈಲ್ ಹೇಳಿದ್ದಾರೆ.

ವಿಶ್ವದ ಅತ್ಯಂತ ವೇಗದ ಬೌಲರ್‌ಗಳಲ್ಲಿ ಒಬ್ಬರಾದ ಉಮ್ರಾನ್, ಈಗಾಗಲೇ ಶ್ರೀಲಂಕಾ ವಿರುದ್ಧ 156 ಕಿಮೀ ವೇಗದಲ್ಲಿ ಬೌಲ್ ಮಾಡಿದ್ದಾರೆ. ಜಾಗತಿಕ ಸಾರ್ವಕಾಲಿಕ ವೇಗದ ಎಸೆತ ಇರುವ ಪಾಕಿಸ್ತಾನದ ಶೋಯೆಬ್ ಅಖ್ತರ್ ಅವರ ದಾಖಲೆಯನ್ನು ಮುರಿಯುವ ಹಂತಕ್ಕೆ ಬಂದಿದ್ದಾರೆ. ಈ ಬಗ್ಗೆ ನ್ಯೂಸ್ 24ಗೆ ನೀಡಿದ ಸಂದರ್ಶನದಲ್ಲಿ ಉಮ್ರಾನ್ ಮಾತನಾಡಿದ್ದರು. ಭಾರತ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವುದು ತನ್ನ ಪ್ರಾಥಮಿಕ ಗುರಿ ಎಂದು ಹೇಳಿದ್ದರು. ಆದರೂ, ಅಖ್ತರ್‌ ಅವರ ದಾಖಲೆ ಮುರಿಯುವ ಪ್ರಯತ್ನವೂ ಇರುತ್ತದೆ ಎಂದು ಹೇಳಿದ್ದರು. ಅಖ್ತರ್‌ ಎಸೆದ 161.3 kph ವೇಗದ ಎಸೆತವು ಜಾಗತಿಕ ದಾಖಲೆಯಾಗಿದೆ.

ಗಮನಿಸಬಹುದಾದ ಇತರೆ ಸುದ್ದಿಗಳು

Shaheen Afridi marriage: ವಿವಾಹ ಬಂಧನಕ್ಕೊಳಗಾದ ಪಾಕ್‌ ವೇಗಿ; ಶಹೀನ್‌ ಅಫ್ರಿದಿ ಈಗ ಶಾಹಿದ್‌ ಅಳಿಯ

ಪಾಕಿಸ್ತಾನದ ವೇಗದ ಬೌಲರ್ ಶಹೀನ್ ಅಫ್ರಿದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಶುಕ್ರವಾರ ಕರಾಚಿಯಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಅವರು, ಪಾಕಿಸ್ತಾನ ಕ್ರಿಕೆಟ್‌ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ ಅವರ ಪುತ್ರಿ ಅನ್ಶಾ ಅವರನ್ನು ಮದುವೆಯಾಗಿದ್ದಾರೆ. ವಿವರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು