logo
ಕನ್ನಡ ಸುದ್ದಿ  /  Sports  /  Pakistan Wins 3rd T20i Against Afghanistan

Afghanistan vs Pakistan: ಮೂರನೇ ಟಿ20 ಗೆದ್ದು ವೈಟ್‌ವಾಶ್ ತಪ್ಪಿಸಿಕೊಂಡ ಪಾಕ್; ಅಫ್ಘಾನ್‌ಗೆ ಸರಣಿ ಜಯ

HT Kannada Desk HT Kannada

Mar 28, 2023 09:40 AM IST

ಶದಾಬ್‌ ಖಾನ್

  • ಪಂದ್ಯ ಸೋತರೂ ಅಫ್ಘಾನಿಸ್ತಾನ ಸರಣಿ ಗೆದ್ದ ಸಾಧನೆ ಮಾಡಿತು. ಇದು ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನಕ್ಕೆ ತನ್ನ ಮೊದಲ ಪಂದ್ಯ ಮತ್ತು ಸರಣಿ ಗೆಲುವಾಗಿದೆ. 2-1 ಅಂತರದಿಂದ ಸರಣಿ ಗೆದ್ದು ಇತಿಹಾಸದ ನಿರ್ಮಿಸುವ ಅಫ್ಘಾನಿಸ್ತಾನದ ಪ್ರಯತ್ನವನ್ನು ಪಾಕಿಸ್ತಾನದಿಂದ ಹಾಳುಮಾಡಲು ಸಾಧ್ಯವಾಗಲಿಲ್ಲ.

ಶದಾಬ್‌ ಖಾನ್
ಶದಾಬ್‌ ಖಾನ್

ಅಂತೂ ಇಂತೂ ಅಫ್ಘಾನಿಸ್ತಾನ ವಿರುದ್ಧ ಸರಣಿ ವೈಟ್‌ವಾಶ್ ಆಗುವುದನ್ನು ಪಾಕಿಸ್ತಾನ ತಪ್ಪಿಸಿಕೊಂಡಿದೆ. ಸೋಮವಾರ ನಡೆದ ಮೂರನೇ ಮತ್ತು ಕೊನೆಯ ಟಿ20 ಪಂದ್ಯವನ್ನು ಪಾಕಿಸ್ತಾನವು 66 ರನ್‌ಗಳಿಂದ ಭರ್ಜರಿಯಾಗಿ ಗೆಲ್ಲುವ ಮೂಲಕ, ಅಫ್ಘಾನಿಸ್ತಾನವು ಸರಣಿ ಕ್ಲೀನ್ ಸ್ವೀಪ್‌ ಮಾಡುವ ಪ್ರಯತ್ನದಲ್ಲಿ ವಿಫಲವಾಯಿತು.

ಟ್ರೆಂಡಿಂಗ್​ ಸುದ್ದಿ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಕಿರಿಯ ವಿಶ್ವ ಚೆಸ್ ಚಾಂಪಿಯನ್ ಆಗುವುದೇ ನನ್ನ ಗುರಿ; ಕ್ಯಾಂಡಿಡೇಟ್ಸ್ ಗೆದ್ದ ಬೆನ್ನಲ್ಲೇ ಗುಕೇಶ್ ಹಳೆಯ ವಿಡಿಯೊ ವೈರಲ್

ಪ್ರಮುಖ ಆಟಗಾರರ ಅನುಪಸ್ಥಿತಿಯೊಂದಿಗೆ ಅಫ್ಘಾನ್ ವಿರುದ್ಧದ ಸರಣಿಯಲ್ಲಿ ಆಡಲು ಇಳಿದ ಪಾಕ್‌ ತಂಡವು, ಮೊದಲೆರಡು ಟಿ20 ಪಂದ್ಯಗಳಲ್ಲಿ ಸೋತಿತ್ತು. ಐವರು ಮುಂಚೂಣಿ ಆಟಗಾರರಿಗೆ ವಿಶ್ರಾಂತಿ ನೀಡಿದ ಹಿನ್ನೆಲೆಯಲ್ಲಿ ಈ ಸರಣಿ ಪಾಕ್‌ ತಂಡಕ್ಕೆ ಸುಲಭದ ತುತ್ತಾಗಲಿಲ್ಲ. ಮೊದಲ ಎರಡು ಸೋಲುಗಳಿಂದ ಕಂಗೆಟ್ಟಿದ್ದ ಪಾಕ್‌, ಅಂತಿಮ ಪಂದ್ಯವನ್ನು ಗೆಲ್ಲಲೇ ಬೇಕಿತ್ತು. ಅದೇ ಪ್ರಯತ್ನದಿಂದ ಆಡಿದ ತಂಡವು, ಅಂತಿಮ ಪಂದ್ಯ ಗೆದ್ದಿದೆ. ಆದರೆ ಸರಣಿಯನ್ನು ಕಳೆದುಕೊಂಡಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಪಾಕ್‌, ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 182 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಅಫ್ಘಾನಿಸ್ತಾನ, ಇನ್ನೂ 8 ಎಸೆತಗಳು ಬಾಕಿ ಇರುವಂತೆಯೇ 116 ರನ್ ‌ಗಳಿಸಿ ಆಲೌಟ್ ಆಯ್ತು.‌ ಆ ಮೂಲಕ ಪಾಕಿಸ್ತಾನ ಭರ್ಜರಿಯಾಗಿ 66 ರನ್‌ಗಳಿಂದ ರನ್‌ಗಳ ಅಂತರದಿಂದ ಗೆಲುವು ತನ್ನದಾಗಿಸಿಕೊಂಡಿತು.

ಪಾಕಿಸ್ತಾನದ ಹಂಗಾಮಿ ನಾಯಕ ಶಾದಾಬ್ ಖಾನ್ ಮತ್ತು ಯುವ ವೇಗಿ ಇಹ್ಸಾನುಲ್ಲಾ ತಲಾ ಮೂರು ವಿಕೆಟ್ ಪಡೆದರು. 13 ರನ್‌ ಬಿಟ್ಟುಕೊಟ್ಟು 3 ವಿಕೆಟ್ ಕಿತ್ತ ಶಾದಾಬ್, ಟಿ20 ಕ್ರಿಕೆಟ್‌ನಲ್ಲಿ 100 ವಿಕೆಟ್‌ಗಳನ್ನು ತಲುಪಿದ ಪಾಕಿಸ್ತಾನದ ಮೊದಲ ಪುರುಷ ಆಟಗಾರ ಎನಿಸಿಕೊಂಡರು.

ಮೊದಲು ಬ್ಯಾಟಿಂಗ್‌ ಮಾಡಿದ ಪಾಕ್‌ ಪರ, ಸೈಮ್ ಅಯೂಬ್ ಚೊಚ್ಚಲ ಟಿ20 ಅರ್ಧಶತಕವನ್ನು ಒಂದು ರನ್‌ನಿಂದ ಕಳೆದುಕೊಂಡರು. ನಂತರ ನಾಯಕ ಶಾದಾಬ್ 17 ಎಸೆತಗಳಲ್ಲಿ 28 ರನ್ ಗಳಿಸುವ ಮೂಲಕ ಬ್ಯಾಟ್‌ನೊಂದಿಗೆ ತಂಡದ ಮೊತ್ತ ಹಿಗ್ಗಿಸಿದರು.

ಪಂದ್ಯ ಸೋತರೂ ಅಫ್ಘಾನಿಸ್ತಾನ ಸರಣಿ ಗೆದ್ದ ಸಾಧನೆ ಮಾಡಿತು. ಇದು ಪಾಕಿಸ್ತಾನ ವಿರುದ್ಧ ಅಫ್ಘಾನಿಸ್ತಾನಕ್ಕೆ ತನ್ನ ಮೊದಲ ಪಂದ್ಯ ಮತ್ತು ಸರಣಿ ಗೆಲುವಾಗಿದೆ. 2-1 ಅಂತರದಿಂದ ಸರಣಿ ಗೆದ್ದು ಇತಿಹಾಸದ ನಿರ್ಮಿಸುವ ಅಫ್ಘಾನಿಸ್ತಾನದ ಪ್ರಯತ್ನವನ್ನು ಪಾಕಿಸ್ತಾನದಿಂದ ಹಾಳುಮಾಡಲು ಸಾಧ್ಯವಾಗಲಿಲ್ಲ.

“ನಾವು ಸರಣಿ ಗೆದ್ದಿದ್ದೇವೆ. ಆದರೆ ನಾವು ಕೆಲವು ಕ್ಷೇತ್ರಗಳಲ್ಲಿ ಸುಧಾರಿಸಬೇಕಿದೆ. ಒತ್ತಡದ ಸಂದರ್ಭಗಳಲ್ಲೂ ನಾವು ಉತ್ತಮವಾಗಿ ಆಡಿದ್ದೇವೆ. ನಾವು ಈ ಹಿಂದೆ ಒತ್ತಡದಲ್ಲಿ ಆಡಲು ಸ್ವಲ್ಪ ಕಷ್ಟಪಟ್ಟಿದ್ದೇವೆ. ಆದರೆ ನಾವು ಒಂದೆರಡು ಪಂದ್ಯಗಳಲ್ಲಿ ಚೇಸಿಂಗ್‌ ಮಾಡಿ ಗೆದ್ದಿದ್ದಕ್ಕೆ ನನಗೆ ಸಂತೋಷವಾಗಿದೆ. ಈ ತಂಡದ ಭಾಗವಾಗಿರಲು ಇದು ವಿಶೇಷ ಸಂದರ್ಭವಾಗಿದೆ.” ಎಂದು ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್ ಹೇಳಿದ್ದಾರೆ.

ಮೊದಲೆರಡು ಟಿ20ಗಳಲ್ಲಿ ಪಾಕಿಸ್ತಾನ ಕೇವಲ 92-9 ಮತ್ತು 130-6 ಗಳಿಸಿತು. ಆ ಎರಡೂ ಪಂದ್ಯಗಳಲ್ಲಿ ಅಫ್ಘಾನಿಸ್ತಾನ ಗೆದ್ದು ಬೀಗಿತು.

“ನಾವು ಸರಣಿಯನ್ನು ಉನ್ನತ ಮಟ್ಟದಲ್ಲಿ ಮುಗಿಸಲು ಬಯಸಿದ್ದೆವು. ಸದ್ಯ ನಾವದನ್ನು ಮಾಡಿದ್ದೇವೆ” ಎಂದು ಪಂದ್ಯದ ಬಳಿಕ ಪಾಕ್‌ ನಾಯಕ ಶಾದಾಬ್ ಹೇಳಿದರು. “ನಾವು ಪಾಕಿಸ್ತಾನ ಹೆಮ್ಮೆ ಪಡುವಂತೆ ಆಡಬೇಕಾಗಿತ್ತು. ನಾವು ಅದನ್ನು ಮಾಡಿದ್ದೇವೆ. ಯುವ ಆಟಗಾರರಿಗೆ ಅವಕಾಶ ನೀಡುವುದು ಈ ಸರಣಿಯ ಪ್ರಮುಖ ಉದ್ದೇಶವಾಗಿತ್ತು. ಆಶಾದಾಯಕವಾಗಿ, ಅವರು ಈ ಪಂದ್ಯಗಳಿಂದ ಹೆಚ್ಚು ಆತ್ಮವಿಶ್ವಾಸ ಪಡೆಯುತ್ತಾರೆ ಎಂಬುದು ನಮ್ಮ ಉದ್ದೇಶ. ಇದು ಭವಿಷ್ಯದಲ್ಲಿ ಅವರಿಗೆ ಸಹಾಯ ಮಾಡುತ್ತದೆ," ಎಂದು ಅವರು ಸಮರ್ಥಿಸಿಕೊಂಡರು.

    ಹಂಚಿಕೊಳ್ಳಲು ಲೇಖನಗಳು