logo
ಕನ್ನಡ ಸುದ್ದಿ  /  ಕ್ರೀಡೆ  /  Ponting On Surya: ಸೂರ್ಯ, ಆ್ಯಂಡ್ರೂ ಸೈಮಂಡ್ಸ್ ಇದ್ದಂತೆ, ಸರಿಯಾಗಿ ಬಳಸಿಕೊಂಡರೆ ವಿಶ್ವಕಪ್​ ಗೆದ್ದುಕೊಡ್ತಾರೆ: ರಿಕಿ ಪಾಂಟಿಂಗ್​

Ponting on Surya: ಸೂರ್ಯ, ಆ್ಯಂಡ್ರೂ ಸೈಮಂಡ್ಸ್ ಇದ್ದಂತೆ, ಸರಿಯಾಗಿ ಬಳಸಿಕೊಂಡರೆ ವಿಶ್ವಕಪ್​ ಗೆದ್ದುಕೊಡ್ತಾರೆ: ರಿಕಿ ಪಾಂಟಿಂಗ್​

Prasanna Kumar P N HT Kannada

Apr 08, 2023 03:18 PM IST

ಸೂರ್ಯಕುಮಾರ್​ ಮತ್ತು ರಿಕಿ ಪಾಂಟಿಂಗ್​​

    • ಸೂರ್ಯಕುಮಾರ್ ಯಾದವ್ ಅವರು ಆ್ಯಂಡ್ರೂ ಸೈಮಂಡ್ಸ್​ ಇದ್ದಂತೆ. ಹಾಗಾಗಿ ಅವರನ್ನು ಸರಿಯಾಗಿ ಉಪಯೋಗಿಸಿಕೊಂಡೆ ಭಾರತಕ್ಕೆ ವಿಶ್ವಕಪ್​ ಗೆದ್ದುಕೊಡಲಿದ್ದಾರೆ ಎಂದು ರಿಕಿ ಪಾಂಟಿಂಗ್​ ಭವಿಷ್ಯ ನುಡಿದಿದ್ದಾರೆ.
ಸೂರ್ಯಕುಮಾರ್​ ಮತ್ತು ರಿಕಿ ಪಾಂಟಿಂಗ್​​
ಸೂರ್ಯಕುಮಾರ್​ ಮತ್ತು ರಿಕಿ ಪಾಂಟಿಂಗ್​​

2023ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ (ODI World Cup) ಟೀಮ್ ಇಂಡಿಯಾ (Team India) ಪ್ರಶಸ್ತಿ ಗೆಲ್ಲುವ ಫೇವರಿಟ್ ಎನಿಸಿದೆ. 2019ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಿಂದ ನಿರ್ಗಮಿಸಿದ ಭಾರತ ತಂಡ, 2022ರ ಟಿ20 ವಿಶ್ವಕಪ್‌ ಸೆಮಿಫೈನಲ್‌ನಿಂದಲೂ ಹೊರ ಬಿದ್ದಿತ್ತು. ಆದರೆ, ಈ ಬಾರಿ ತವರಿನಲ್ಲಿ ನಡೆಯಲಿರುವ ಒಡಿಐ ವಿಶ್ವಕಪ್​​​​​​ಗೂ ಮುನ್ನ ರೋಹಿತ್​ ಪಡೆ ಮೇಲೆ ಭಾರೀ ನಿರೀಕ್ಷೆ ಸೃಷ್ಟಿಸಿದೆ.

ಟ್ರೆಂಡಿಂಗ್​ ಸುದ್ದಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ದೇಶಕ್ಕಾಗಿ ಪದಕ ಗೆಲ್ಲುವುದೇ ನನ್ನ ಗುರಿ; ಅದಕ್ಕಾಗಿ ತೂಕ ಕಾಪಾಡಿಕೊಳ್ಳಬೇಕು ಎಂದ ವಿನೇಶ್ ಫೋಗಟ್

ಭಾರತದ ಸ್ಟಾರ್ ವೇಗಿ ಜಸ್​ಪ್ರಿತ್​ ಬೂಮ್ರಾ (Jasprit Bumrah), ಶ್ರೇಯಸ್ ಅಯ್ಯರ್ (Shreyas Iyer) ಮತ್ತು ರಿಷಭ್​​ ಪಂತ್ (Rishabh Pant) ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದಾರೆ. ಕಾರು ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ರಿಷಭ್​​ ಪಂತ್ ಏಕದಿನ ವಿಶ್ವಕಪ್ ವೇಳೆಗೆ ಚೇತರಿಸಿಕೊಳ್ಳುವ ಸಾಧ್ಯತೆ ತೀರಾ ಕಡಿಮೆ. ಬೂಮ್ರಾ ಮತ್ತು ಅಯ್ಯರ್ ಆಡುತ್ತಾರೆಯೇ? ಇಲ್ಲವೇ ಎಂಬುದು ಹೇಳಲಾಗದ ಪರಿಸ್ಥಿತಿ.

ಶ್ರೇಯಸ್ ಅಯ್ಯರ್ ಸತತವಾಗಿ ಗಾಯಗೊಂಡಿರುವ ಕಾರಣ ಸೂರ್ಯಕುಮಾರ್ ಯಾದವ್ (Suryakumar Yadav) ಏಕದಿನದಲ್ಲಿ ಅವಕಾಶ ಪಡೆಯುತ್ತಿದ್ದಾರೆ. ಆದರೆ, ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರು ಏಕದಿನ ಪಂದ್ಯಗಳಲ್ಲೂ ಸೂರ್ಯಕುಮಾರ್ ಗೋಲ್ಡನ್ ಡಕ್ ಔಟ್ ಆದರು. ಒಂದೇ ಸರಣಿಯಲ್ಲಿ ಸತತ ಮೂರು ಪಂದ್ಯಗಳಲ್ಲಿ ಡಕ್ ಔಟ್ ಆದ ಆಟಗಾರನಾಗಿ ಅತ್ಯಂತ ಕೆಟ್ಟ ದಾಖಲೆ ನಿರ್ಮಿಸಿದರು.

ಟಿ20ಯಲ್ಲಿ ನಂ.1 ಬ್ಯಾಟ್ಸ್​ಮನ್ ಆಗಿ ಮುಂದುವರಿದಿರುವ ಸೂರ್ಯ, ಏಕದಿನ ಮಾದರಿಯಲ್ಲಿ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿಗೂ ಮುನ್ನ 4ನೇ ಕ್ರಮಾಂಕದಲ್ಲಿ ಸರಿಯಾದ ಬ್ಯಾಟ್ಸ್​ಮನ್ ಇಲ್ಲದಿರುವುದು ಟೀಮ್​​ ಇಂಡಿಯಾಗೆ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಈ ಬಗ್ಗೆ ಆಸೀಸ್ ಮಾಜಿ ನಾಯಕ ರಿಕಿ ಪಾಂಟಿಂಗ್​​ (Ricky Ponting) ಪ್ರತಿಕ್ರಿಯಿಸಿದ್ದಾರೆ.

ಕಳೆದ ಒಂದೂವರೆ ವರ್ಷದಿಂದ ಚುಟುಕು ಕ್ರಿಕೆಟ್​ನಲ್ಲಿ ಸೂರ್ಯಕುಮಾರ್ ಯಾದವ್ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಟಿ20ಯಲ್ಲಿ ಸೂರ್ಯ ಹೇಗೆ ಆಡುತ್ತಾರೆ ಎಂಬುದನ್ನು ಎಲ್ಲರೂ ನೋಡಿದ್ದಾರೆ. ಐಸಿಸಿ ಟಿ20 ರ್ಯಾಂಕಿಂಗ್​​​ನಲ್ಲೂ​​​ ಅಗ್ರಸ್ಥಾನದಲ್ಲಿದ್ದಾರೆ. ಒಂದೇ ಒಂದು ಸರಣಿಯು ಅವರ ಸಾಮರ್ಥ್ಯವನ್ನು ಕುಗ್ಗಿಸುವುದಿಲ್ಲ ಎಂದು ಪಾಂಟಿಂಗ್​, ಸೂರ್ಯನ ಬೆಂಬಲಕ್ಕೆ ಸೂಚಿಸಿದಾರೆ.

ಸೂರ್ಯಕುಮಾರ್ ಅವರನ್ನು ಏಕದಿನ ಕ್ರಿಕೆಟ್​​ನಲ್ಲೂ ಮುಂದುವರಿಸಿದರೆ, ಭಾರತಕ್ಕೆ ವಿಶ್ವಕಪ್ ಗೆಲ್ಲಿಸಿಕೊಡುತ್ತಾರೆ ಎಂಬುದು ನನ್ನ ಭವಿಷ್ಯ. ಪ್ರತಿಯೊಬ್ಬ ಆಟಗಾರನೂ ತಮ್ಮ ವೃತ್ತಿಜೀವನದ ಒಂದು ಹಂತದಲ್ಲಿ ಎಡವುದು ಮತ್ತು ಫಾರ್ಮ್ ಕಳೆದುಕೊಳ್ಳುವುದು ಸರ್ವೇ ಸಾಮಾನ್ಯ. ಸೂರ್ಯ ಕೂಡ ಇದೇ ಪರಿಸ್ಥಿತಿಯಲ್ಲಿದ್ದಾರೆ. ಇದನ್ನೇ ನೆಪವಾಗಿಟ್ಟುಕೊಂಡು ಭವಿಷ್ಯ ಹಾಳು ಮಾಡಬಾರದು ಎಂದು ಹೇಳಿದ್ದಾರೆ.

ಸೂರ್ಯ ಲಯಕ್ಕೆ ಮರಳಿದರೆ ಹೇಗೆ ಆಡುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಆಂಡ್ರ್ಯೂ ಸೈಮಂಡ್ಸ್ ಆಸ್ಟ್ರೇಲಿಯಾಕ್ಕೆ ಎಷ್ಟು ಉಪಯುಕ್ತ ಆಗಿದ್ದರೋ, ಡೇಂಜರಸ್​​ ಬ್ಯಾಟ್ಸ್​​ಮನ್​ ಸೂರ್ಯಕುಮಾರ್ ಭಾರತಕ್ಕೆ ಅಷ್ಟೇ ಉಪಯುಕ್ತ ಎಂದು ನಾನು ಭಾವಿಸುತ್ತೇನೆ. ಕೆಲವು ಆಟಗಾರರಿಗೆ ಎಚ್ಚರಿಕೆಯಿಂದ ಆಟವಾಡುವುದು ತಿಳಿದಿಲ್ಲ. ಆದರೆ, ಇದು ಸೂರ್ಯ ಅವರಲ್ಲಿ ಕರಗತವಾಗಿದೆ. ನನ್ನ ಪ್ರಕಾರ ಸೂರ್ಯ ಎಂದಿಗೂ ಮ್ಯಾಚ್​ ವಿನ್ನರ್​ ಎಂದು ನಾನು ಭಾವಿಸುತ್ತೇನೆ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಪ್ರತಿಕ್ರಿಯಿಸಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು