logo
ಕನ್ನಡ ಸುದ್ದಿ  /  Sports  /  Rcb Appoint Sania Mirza As Mentor And Australian Ben Sawyer As Head Coach

WPL 2023: ವನಿತೆಯರ ತಂಡಕ್ಕೆ ಬಲಿಷ್ಠ ಕೋಚಿಂಗ್ ಸಿಬ್ಬಂದಿ ನೇಮಿಸಿದ ಆರ್‌ಸಿಬಿ; ಮೂಗುತಿ ಸುಂದರಿ ಮೆಂಟರ್

HT Kannada Desk HT Kannada

Feb 15, 2023 05:04 PM IST

ಆರ್‌ಸಿಬಿ ಕೋಚಿಂಗ್‌ ಸಿಬ್ಬಂದಿ

    • ಪ್ರಸ್ತುತ ನ್ಯೂಜಿಲೆಂಡ್ ಮಹಿಳಾ ಕ್ರಿಕೆಟ್‌ ತಂಡದ ಉಸ್ತುವಾರಿ ವಹಿಸಿರುವ ಆಸ್ಟ್ರೇಲಿಯಾದ ಬೆನ್ ಸ್ವೇಯರ್ ಅವರು, ಡಬ್ಲ್ಯುಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.
ಆರ್‌ಸಿಬಿ ಕೋಚಿಂಗ್‌ ಸಿಬ್ಬಂದಿ
ಆರ್‌ಸಿಬಿ ಕೋಚಿಂಗ್‌ ಸಿಬ್ಬಂದಿ (twitter)

ವಿಮೆನ್ಸ್‌ ಪ್ರೀಮಿಯರ್ ಲೀಗ್‌ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬಲಿಷ್ಠ ಆಟಗಾರ್ತಿರನ್ನು ತಂಡಕ್ಕೆ ಪಡೆದುಕೊಂಡಿದೆ. ಆ ಬೆನ್ನಲ್ಲೇ ಕೋಚಿಂಗ್‌ ಸೇರಿದಂತೆ ತಂಡದ ಇತರ ಸಿಬ್ಬಂದಿಯನ್ನು ತಂಡ ನೇಮಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡದ ಮೆಂಟರ್ ಆಗಿ ಭಾರತದ ಟೆನಿಸ್ ತಾರೆ, ಮೂಗುತಿ ಸುಂದರಿ ಸಾನಿಯಾ ಮಿರ್ಜಾ ನೇಮಕಗೊಂಡಿದ್ದಾರೆ. ಮತ್ತೊಂದೆಡೆ ಪ್ರಸ್ತುತ ನ್ಯೂಜಿಲೆಂಡ್ ಮಹಿಳಾ ತಂಡದ ಉಸ್ತುವಾರಿ ವಹಿಸಿರುವ ಆಸ್ಟ್ರೇಲಿಯಾದ ಬೆನ್ ಸ್ವೇಯರ್ ಅವರು, ಡಬ್ಲ್ಯುಪಿಎಲ್‌ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವನಿತೆಯರ ತಂಡಕ್ಕೆ ಮುಖ್ಯ ಕೋಚ್ ಆಗಿ ನೇಮಕಗೊಂಡಿದ್ದಾರೆ.

45 ವರ್ಷ ವಯಸ್ಸಿನ ಬೆನ್ ಸ್ವೇಯರ್ ಅವರು ದಿ ಹಂಡ್ರೆಡ್‌ನಲ್ಲಿ ಬರ್ಮಿಂಗ್ಹ್ಯಾಮ್ ಫೀನಿಕ್ಸ್‌ನ ತರಬೇತುದಾರರಾಗಿದ್ದಾರೆ. ಅಲ್ಲದೆ, ಮಹಿಳಾ ಬಿಗ್ ಬ್ಯಾಷ್ ಲೀಗ್ (WBBL) ನಲ್ಲಿ ಸಿಡ್ನಿ ಸಿಕ್ಸರ್ಸ್‌ ತಂಡದ ಮುಖ್ಯ ತರಬೇತುದಾರರಾಗಿ ಸೇವೆ ಸಲ್ಲಿಸಿದ್ದಾರೆ. ಇದಲ್ಲದೆ ಆಸ್ಟ್ರೇಲಿಯಾದ ಮಹಿಳೆಯರ ತಂಡದ ಸಹಾಯಕ ಕೋಚ್ ಆಗಿದ್ದಾರೆ.

ಸಾನಿಯಾ ಅವರನ್ನು ಅಚ್ಚರಿಯ ರೀತಿಯಲ್ಲಿ ಮೆಂಟರ್‌ ಆಗಿ ಘೋಷಿಸಿರುವ ಆರ್‌ಸಿಬಿಯು, ವೃತ್ತಿಜೀವನದುದ್ದಕ್ಕೂ ಧೈರ್ಯಶಾಲಿ ಮುನ್ನುಗ್ಗಿ ಮೈದಾನದಲ್ಲಿ ಮತ್ತು ಮೈದಾನದ ಹೊರಗೆ ಚಾಂಪಿಯನ್ ಆಗಿರುವ ಸಾನಿಯಾ ಮಿರ್ಜಾ ಅವರನ್ನು RCB ಮಹಿಳಾ ಕ್ರಿಕೆಟ್ ತಂಡದ ಮೆಂಟರ್ ಆಗಿ ಸ್ವಾಗತಿಸಲು ನಾವು ಹೆಮ್ಮೆಪಡುತ್ತೇವೆ ಎಂದು ಹೇಳಿದೆ.

ಹೊಸ ಜವಾಬ್ದಾರಿ ಪಡೆದುಕೊಂಡಿರುವ ಬಗ್ಗೆ ಮಾತನಾಡಿರುವ ಸಾನಿಯಾ, “ನನಗೆ ಈ ಬಗ್ಗೆ ತಿಖಿಸಿದಾದಗ ಸ್ವಲ್ಪ ಆಶ್ಚರ್ಯವಾಯಿತು. ನಾನು 20 ವರ್ಷಗಳಿಂದ ವೃತ್ತಿಪರ ಅಥ್ಲೀಟ್ ಆಗಿದ್ದೇನೆ. ನನ್ನ ಮುಂದಿನ ಕೆಲಸವೆಂದರೆ, ಯುವತಿಯರು ಮತ್ತು ಬಾಲಕಿಯರಿಗೆ ಕ್ರೀಡೆಯು ಅವರ ವೃತ್ತಿಜೀವನದ ಮೊದಲ ಆಯ್ಕೆಗಳಲ್ಲಿ ಒಂದಾಗಿದೆ ಎಂಬುದನ್ನುಅರ್ಥ ಮಾಡಿಸಲು ಸಹಾಯ ಮಾಡುವುದಾಗಿದೆ,” ಎಂದು ಮಿರ್ಜಾ ಆರ್‌ಸಿಬಿಯೊಂದಿಗೆ ಮಾತನಾಡಿದ್ದಾರೆ.

“ಕ್ರಿಕೆಟ್ ಮತ್ತು ಟೆನ್ನಿಸ್ ನಡುವೆ ತುಂಬಾ ಸಾಮಾನ್ಯತೆಗಳಿವೆ. ಪ್ರತಿಯೊಬ್ಬ ಕ್ರೀಡಾಪಟುವೂ ಒಂದೇ ರೀತಿಯಲ್ಲಿ ಯೋಚಿಸುತ್ತಾನೆ. ಅವರು ಒಂದೇ ರೀತಿಯ ಒತ್ತಡವನ್ನು ಎದುರಿಸುತ್ತಾರೆ. ಒತ್ತಡದ ಸಂದರ್ಭಗಳನ್ನು ನಿಭಾಯಿಸುವುದು ಬಹಳ ಮುಖ್ಯ. ಒತ್ತಡವು ಒಂದು ಸವಲತ್ತು. ನೀವು ಅದನ್ನು ಸ್ವೀಕರಿಸಲು ಸಾಧ್ಯವಾಗದಿದ್ದರೆ, ನೀವು ಅದರಲ್ಲಿ ಉತ್ಕೃಷ್ಟರಾಗಲು ಸಾಧ್ಯವಿಲ್ಲ. ಒತ್ತಡವನ್ನು ನಿಭಾಯಿಸಬಲ್ಲವರು ಚಾಂಪಿಯನ್‌ಗಳಲ್ಲಿ ದೊಡ್ಡವರು,” ಎಂದು ಮಿರ್ಜಾ ಹೇಳಿದ್ದಾರೆ. ಆ ಮೂಲಕ ಆಟಗಾರ್ತಿಯರಿಗೆ ಒತ್ತಡವನ್ನು ನಿಭಾಯಿಸಲು ನೆರವಾಗುವುದಾಗಿ ತಿಳಿಸಿದ್ದಾರೆ. ಸಾನಿಯಾ ಇತ್ತೀಚೆಗಷ್ಟೇ ಟೆನಿಸ್‌ನಿಂದ ನಿವೃತ್ತಿ ಘೋಷಿಸಿದ್ದರು.

ಮತ್ತೊಂದೆಡೆ, ಆರ್‌ಸಿಬಿ ತಂಡಕ್ಕೆ ಮಲೋರನ್ ರಂಗರಾಜನ್ ಅವರು ಸಹಾಯಕ ಕೋಚ್ ಆಗಿ ನೇಮಕಗೊಂಡಿದ್ದಾರೆ. ಇದೇ ವೇಳೆ ವಿ ಆರ್ ವನಿತಾ ಫೀಲ್ಡಿಂಗ್ ಕೋಚ್, ಮತ್ತು ಆರ್ ಎಕ್ಸ್ ಮುರಳಿ ಬ್ಯಾಟಿಂಗ್ ಕೋಚ್ ಆಗಿರಲಿದ್ದಾರೆ. ಡಬ್ಲ್ಯೂಪಿಎಲ್‌ ಟೂರ್ನಮೆಂಟ್‌ಗೆ ಆರ್‌ಸಿಬಿಯ ಮ್ಯಾನೇಜರ್ ಮತ್ತು ವೈದ್ಯರಾಗಿ ಡಾ ಹರಿಣಿ ನೇಮಕಗೊಂಡಿದ್ದಾರೆ.

ಫೆಬ್ರವರಿ 13 ರಂದು ನಡೆದ WPL ಹರಾಜಿನಲ್ಲಿ, ಆರ್‌ಸಿಬಿಯು ಬಲಿಷ್ಠ ಆಗಾರ್ತಿಯರನ್ನು ಖರೀದಿಸಿದೆ. 3.4 ಕೋಟಿ ರೂಪಾಯಿಗೆ ಸ್ಮೃತಿ ಮಂಧನರನ್ನು ಖರೀದಿಸಿತು. ಆ ಮೂಲಕ ಆರಂಭಿಕ ಆಟಗಾರ್ತಿಯು ವನಿತೆಯರ ಪ್ರೀಮಿಯರ್‌ ಲೀಗ್‌ನ ಅತ್ಯಂತ ದುಬಾರಿ ಆಟಗಾರ್ತಿ ಎನಿಸಿಕೊಂಡರು. ಮತ್ತೊಂದೆಡೆ ತಂಡವು ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ರೇಣುಕಾ ಸಿಂಗ್ ಮತ್ತು ರಿಚಾ ಘೋಷ್ ಅವರನ್ನು ಕೂಡಾ ಖರೀದಿಸಿದೆ.

    ಹಂಚಿಕೊಳ್ಳಲು ಲೇಖನಗಳು