logo
ಕನ್ನಡ ಸುದ್ದಿ  /  ಕ್ರೀಡೆ  /  Asia Cup Row: 'ಪಾಕಿಸ್ತಾನದ ಜನರೇ ಸುರಕ್ಷಿತವಾಗಿಲ್ಲ, ಮತ್ತೆ ನಾವು...'; ಪಾಕ್ ಏಷ್ಯಾಕಪ್ ಆತಿಥ್ಯ ಕುರಿತು ಹರ್ಭಜನ್ ಟೀಕೆ

Asia Cup row: 'ಪಾಕಿಸ್ತಾನದ ಜನರೇ ಸುರಕ್ಷಿತವಾಗಿಲ್ಲ, ಮತ್ತೆ ನಾವು...'; ಪಾಕ್ ಏಷ್ಯಾಕಪ್ ಆತಿಥ್ಯ ಕುರಿತು ಹರ್ಭಜನ್ ಟೀಕೆ

HT Kannada Desk HT Kannada

Mar 18, 2023 11:02 AM IST

ಹರ್ಬಜನ್‌ ಸಿಂಗ್

    • “ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಬಾರದು. ಏಕೆಂದರೆ ಅಲ್ಲಿ ಹೋಗುವುದು ಸುರಕ್ಷಿತವಾಗಿಲ್ಲ. ಪಾಕಿಸ್ತಾನದ ಜನರೇ ತಮ್ಮ ದೇಶದಲ್ಲಿ ಸುರಕ್ಷಿತವಾಗಿಲ್ಲದಿರುವಾಗ, ನಾವು ಅಲ್ಲಿಗೆ ಪ್ರಯಾಣಿಸಿ ಅಪಾಯವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು?” ಎಂದು ಮಾಜಿ ಸ್ಪಿನ್ನರ್ ಪ್ರಶ್ನಿಸಿದ್ದಾರೆ.
ಹರ್ಬಜನ್‌ ಸಿಂಗ್
ಹರ್ಬಜನ್‌ ಸಿಂಗ್

ಈ ವರ್ಷದ(2023) ಏಷ್ಯಾಕಪ್‌ ಪಂದ್ಯಾವಳಿಯ ಆತಿಥ್ಯದ ಗೊಂದಲ ಇನ್ನೂ ಬಗೆಹರಿದಿಲ್ಲ. ಎರಡು ನೆರೆಯ ದೇಶಗಳ ನಡುವಿನ ದೀರ್ಘಕಾಲದ ರಾಜಕೀಯ ಉದ್ವಿಗ್ನತೆಯು ಪಾಕ್‌ಗೆ ಕಂಟಕವಾಗಿದೆ. ಆದರೆ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಕಠಿಣ ನಿರ್ಧಾರದ ನಡುವೆಯೂ ಆತಿಥ್ಯ ವಹಿಸಬಹುದೆಂಬ ಭರವಸೆಯಲ್ಲಿ ಪಾಕಿಸ್ತಾನ ಕೂತಿದೆ. ಈ ನಡುವೆ ಭಾರತದ ಸಂಕಲ್ಪಕ್ಕೆ ಮಾಜಿ ಸ್ಪಿನ್ನರ್ ಹರ್ಭಜನ್ ಸಿಂಗ್ ಕೂಡಾ ಬೆಂಬಲ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ನಾನು ಹೇಳಿದ್ದು ತುಂಬಾ ಕಡಿಮೆ, ಆದರೂ ನಾನು ಮೌನಿಯಾಗಿದ್ದೇನೆ; ಸಾನಿಯಾ ಮಿರ್ಜಾ ಪೋಸ್ಟ್​ನ ಅರ್ಥವೇನು?

ಏಷ್ಯಾಕಪ್ ಆತಿಥ್ಯ ಕುರಿತಾಗಿ ಸುದ್ದಿಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಹರ್ಭಜನ್, ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡ ಏಷ್ಯಾಕಪ್‌ನಲ್ಲಿ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸಬಾರದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದಕ್ಕೆ ಕಾರಣವನ್ನೂ ನೀಡಿದ ಅವರು, ತಮ್ಮದೇ ದೇಶದ ಜನರು ಅಸುರಕ್ಷಿತರಾಗಿರುವ ರಾಷ್ಟ್ರದಲ್ಲಿ ಭಾರತದ ಆಟಗಾರರ ಸುರಕ್ಷತೆಯನ್ನು ಪ್ರಶ್ನಿಸಿದ್ದಾರೆ.

“ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಬಾರದು. ಏಕೆಂದರೆ ಅಲ್ಲಿ ಹೋಗುವುದು ಸುರಕ್ಷಿತವಾಗಿಲ್ಲ. ಪಾಕಿಸ್ತಾನದ ಜನರೇ ತಮ್ಮ ದೇಶದಲ್ಲಿ ಸುರಕ್ಷಿತವಾಗಿಲ್ಲದಿರುವಾಗ, ನಾವು ಅಲ್ಲಿಗೆ ಪ್ರಯಾಣಿಸಿ ಅಪಾಯವನ್ನು ಏಕೆ ಮೈಮೇಲೆ ಎಳೆದುಕೊಳ್ಳಬೇಕು?” ಎಂದು ಮಾಜಿ ಸ್ಪಿನ್ನರ್ ಪ್ರಶ್ನಿಸಿದ್ದಾರೆ.

ಕಳೆದ ವರ್ಷದ ಅಕ್ಟೋಬರ್‌ನಲ್ಲಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿರುವ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು, ಭಾರತವು ಏಷ್ಯಾಕಪ್‌ ಆಡಲು ಪಾಕಿಸ್ತಾನಕ್ಕೆ ಪ್ರಯಾಣಿಸುವುದಿಲ್ಲ ಎಂದು ತಿಳಿಸಿದ್ದರು. ಅದರ ಬೆನ್ನಲ್ಲೇ ಏಷ್ಯಾಕಪ್ ಆತಿಥ್ಯ ವಿವಾದ ಆರಂಭವಾಯಿತು. ಅಲ್ಲದೆ ಆತಿಥೇಯ ರಾಷ್ಟ್ರವನ್ನು ಬದಲಾಯಿಸುವಂತೆ ಒತ್ತಾಯ ಹೊರಬಂತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ) ಕೂಡಾ ಬಲವಾದ ಹೇಳಿಕೆಗಳನ್ನು ನೀಡಿದೆ. ಒಂದು ವೇಳೆ ಪಾಕಿಸ್ತಾನದ ಆತಿಥ್ಯ ಹಕ್ಕುಗಳನ್ನು ಕಿತ್ತುಕೊಂಡರೆ, 2023ರಲ್ಲಿ ಭಾರತದಲ್ಲಿ ನಡೆಯಬೇಕಿರುವ ಏಕದಿನ ವಿಶ್ವಕಪ್ ಅನ್ನು ಕೂಡಾ ಬಹಿಷ್ಕರಿಸುವುದಾಗಿ ಪಾಕ್ ಬೆದರಿಕೆ ಹಾಕಿದೆ.

ಕಳೆದ ತಿಂಗಳು ಬಹ್ರೇನ್‌ನಲ್ಲಿ ನಡೆದ ಎಸಿಸಿ ಸಭೆಯಲ್ಲಿ, ಈ ವಿಷಯಕ್ಕೆ ಒಂದು ತಾರ್ಕಿಕ ಅಂತ್ಯ ಸಿಗುತ್ತದೆ ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಅಲ್ಲಿ ಯಾವುದೇ ಅಧಿಕೃತ ಪ್ರಕಟಣೆ ಹೊರಬಂದಿಲ್ಲ. ಆದರೆ, ಏಷ್ಯಾಕಪ್‌ಗೆ ಪರ್ಯಾಯ ಸ್ಥಳವಾಗಿ ಯುಎಇ ಆಯ್ಕೆಯಾಗಿದೆ ಎಂದು ಹಲವು ವರದಿಗಳು ತಿಳಿಸಿವೆ. ಆದರೂ ಪಾಕಿಸ್ತಾನವು ಟೂರ್ನಿಯ ಆತಿಥ್ಯ ಹಕ್ಕುಗಳನ್ನು ಉಳಿಸಿಕೊಳ್ಳಲಿದೆ.

ಈ ವಾರಾಂತ್ಯದಲ್ಲಿ ದುಬೈನಲ್ಲಿ ನಡೆಯಲಿರುವ ಐಸಿಸಿ ಮಂಡಳಿ ಸಭೆಯಲ್ಲಿ ಏಷ್ಯಾಕಪ್ ವಿವಾದ ಅಂತ್ಯಗೊಳ್ಳುವ ಸಾಧ್ಯತೆ ಇದೆ.

“ನಮ್ಮ ಮುಂದೆ ಸಂಕೀರ್ಣವಾದ ಸಮಸ್ಯೆಗಳಿವೆ. ಆದರೆ ನಾನು ಎಸಿಸಿ ಮತ್ತು ಐಸಿಸಿ ಸಭೆಗಳಲ್ಲಿ ನಮ್ಮ ಮುಂದಿರುವ ಎಲ್ಲಾ ಆಯ್ಕೆಗಳನ್ನು ತೆರೆದಿಡುತ್ತೇನೆ. ನಾವು ಈಗ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕಾಗಿದೆ.” ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಧ್ಯಕ್ಷ ನಜಮ್ ಸೇಥಿ ಹೇಳಿದ್ದಾರೆ. ಈ ಹಿಂದೆ ಇದೇ ವಿಚಾರವಾಗಿ ಎಸಿಸಿ ಜೊತೆಗೆ ನಡೆಸಿದ್ದ ಸಭೆ ವಿಫಲವಾಗಿತ್ತು. ಅದರ ಬೆನ್ನಲ್ಲೇ ಮುಂದಿನ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಮತ್ತು ಐಸಿಸಿ ಸಭೆಗಳಲ್ಲಿ ಈ ವಿಷಯಗಳನ್ನು ಪ್ರಸ್ತಾಪಿಸುವುದಾಗಿ ಅವರು ಹೇಳಿದ್ದಾರೆ.

“ನಿಸ್ಸಂಶಯವಾಗಿ ಭಾರತದ ಈ ನಿಲುವನ್ನು ನಾವು ಬೆಂಬಲಿಸುವುದಿಲ್ಲ. ಏಕೆಂದರೆ ಏಷ್ಯಾಕಪ್‌ಗೆ ನಾವೇ ಆತಿಥ್ಯ ವಹಿಸಲು ಬಯಸುತ್ತೇವೆ. ಇದು ಕೇವಲ ಏಷ್ಯಾಕಪ್ ಮತ್ತು ವಿಶ್ವಕಪ್ ವಿಷಯವಲ್ಲ. ಪಾಕಿಸ್ತಾನದಲ್ಲಿ 2025ರಲ್ಲಿ ಚಾಂಪಿಯನ್ಸ್ ಟ್ರೋಫಿ ಕೂಡಾ ನಡೆಯಲಿದೆ. ಅದರ ಬಗ್ಗೆಯೂ ನೆನಪಿರಲಿ,” ಎಂದು ಸೇಥಿ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು