logo
ಕನ್ನಡ ಸುದ್ದಿ  /  Sports  /  Suryakumar Slams 3rd Century Against Sri Lanka In 3rd T20i

India vs Sri Lanka 3rd T20I: ಸೂರ್ಯಕುಮಾರ್ ಭರ್ಜರಿ ಶತಕ; ಲಂಕಾ ಸರಣಿ ಗೆಲುವಿಗೆ ಬೃಹತ್ ಗುರಿ ನೀಡಿದ ಭಾರತ

HT Kannada Desk HT Kannada

Jan 07, 2023 10:37 PM IST

ಸೂರ್ಯಕುಮಾರ್‌ ಯಾದವ್‌

    • ಸೂರ್ಯಕುಮಾರ್‌ ಯಾದವ್‌ ಶತಕದ ನೆರವಿನಿಂದ ಲಂಕಾ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತ ದಾಖಲಿಸಿದೆ.
ಸೂರ್ಯಕುಮಾರ್‌ ಯಾದವ್‌
ಸೂರ್ಯಕುಮಾರ್‌ ಯಾದವ್‌ (BCCI)

ಶ್ರೀಲಂಕಾ ವಿರುದ್ಧದ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್‌ ಯಾದವ್‌ ಅಬ್ಬರಿಸಿದ್ದಾರೆ. ಲಂಕಾ ವಿರುದ್ಧ ಸ್ಫೋಟಕವಾಗಿ ಆಡಿದ ಸೂರ್ಯ ಟಿ20ಯಲ್ಲಿ ಮೂರನೇ ಶತಕ ಸಿಡಿಸಿ ಮಿಂಚಿದರು.

ಟ್ರೆಂಡಿಂಗ್​ ಸುದ್ದಿ

1900 ರಿಂದ 2020ರ ತನಕ; 120 ವರ್ಷಗಳ ಒಲಿಂಪಿಕ್ಸ್ ಇತಿಹಾಸದಲ್ಲಿ ಭಾರತ ಗೆದ್ದಿರುವ ಪದಕಗಳೆಷ್ಟು? ವರ್ಷವಾರು ಒಂದು ನೋಟ

ಆರ್ಚರಿ ವಿಶ್ವಕಪ್ 2024: ಭಾರತಕ್ಕೆ ಹ್ಯಾಟ್ರಿಕ್ ಚಿನ್ನ, ಪುರುಷರ-ಮಹಿಳೆಯರ ಮತ್ತು ಮಿಶ್ರ ತಂಡ ಸ್ಪರ್ಧೆಯಲ್ಲಿ ಸ್ವರ್ಣ

ಕ್ಯಾಂಡಿಡೇಟ್ಸ್ ಗೆದ್ದು ಭಾರತಕ್ಕೆ ಮರಳಿದ ಗುಕೇಶ್‌ಗೆ ಸಂಭ್ರಮದ ಸ್ವಾಗತ-ಸನ್ಮಾನ; ಅಮ್ಮನ ಅಪ್ಪುಗೆ, ಮಮತೆಯ ಮುತ್ತಿನ ಧಾರೆ

T20 World Cup 2024: ಟಿ20 ವಿಶ್ವಕಪ್ ಟೂರ್ನಿಗೆ ಒಲಿಂಪಿಕ್ ಲೆಜೆಂಡ್ ಉಸೇನ್ ಬೋಲ್ಟ್ ರಾಯಭಾರಿಯಾಗಿ ನೇಮಕ

ಸೂರ್ಯಕುಮಾರ್‌ ಯಾದವ್‌ ಶತಕದ ನೆರವಿನಿಂದ ಲಂಕಾ ವಿರುದ್ಧದ ಮೂರನೇ ಹಾಗೂ ನಿರ್ಣಾಯಕ ಟಿ20 ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತ ದಾಖಲಿಸಿದೆ. ಸರಣಿ ಗೆಲ್ಲಲು ಉಭಯ ತಂಡಗಳಿಗೆ ಇಂದು ಮಾಡಿ ಇಲ್ಲವೇ ಮಡಿ ಪಂದ್ಯವಾಗಿದ್ದು, ಭಾರತ ಅಂತಿಮವಾಗಿ 5 ವಿಕೆಟ್‌ ನಷ್ಟಕ್ಕೆ 228 ರನ್‌ ಕಲೆ ಹಾಕಿದೆ. ಆ ಮೂಲಕ ಲಂಕಾ ಗೆಲುವಿಗೆ 229 ರನ್‌ಗಳ ಬೃಹತ್‌ ಗುರಿ ನೀಡಿದೆ.

ಇದು ಸೂರ್ಯಕುಮಾರ್‌ ಯಾದವ್‌ಗೆ ಟಿ20ಯಲ್ಲಿ ಮೂರನೇ ಶತಕ. ಅಲ್ಲದೆ ಚುಟುಕು ಮಾದರಿಯ ಕ್ರಿಕೆಟ್‌ನಲ್ಲಿ ಭಾರತದ ಪರ ಎರಡನೇ ವೇಗದ ಶತಕ ದಾಖಲಿಸಿದ ಖ್ಯಾತಿಗೆ ಸೂರ್ಯ ಪಾತ್ರರಾಗಿದ್ದಾರೆ. ದೇಶದ ಪರ ವೇಗದ ಶತಕ ದಾಖಲಿಸಿದ ಕೀರ್ತಿ ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾಗೆ ಸಲ್ಲುತ್ತದೆ.

ಭಾರತದ ಪರ ಅತಿ ವೇಗದ ಟಿ20 ಶತಕಗಳು

ರೋಹಿತ್ ಶರ್ಮಾ - 35 ಎಸೆತ (2017)

ಸೂರ್ಯಕುಮಾರ್ ಯಾದವ್ - 45 (2023) ಇಂದು

ಕೆ ಎಲ್‌ ರಾಹುಲ್ - 46 (2016)

ಸೂರ್ಯಕುಮಾರ್ ಯಾದವ್ - 48 (2022)

ಸೂರ್ಯಕುಮಾರ್ ಯಾದವ್ - 49 (2022)

ವಿಶೇಷವೆಂದರೆ, ಸೂರ್ಯ ಸಿಡಿಸಿದ ಮೂರೂ ಶತಕಗಳು ಈ ಪಟ್ಟಿಯಲ್ಲಿವೆ.

ಅತಿಥೇಯ ಭಾರತದ ವಿರುದ್ಧ ಇದುವರೆಗೂ ಲಂಕಾ ಭಾರತದಲ್ಲಿ ಸರಣಿ ಗೆದ್ದಿಲ್ಲ. ಹೀಗಾಗಿ ತಮ್ಮ ಮೊದಲ ಸರಣಿ ಗೆಲುವಿನ ಮೇಲೆ ಶನಕ ನೇತೃತ್ವದ ತಂಡ ಕಣ್ಣಿಟ್ಟಿದೆ. ಇದಕ್ಕೆ ಅಡ್ಡಿಪಡಿಸಿರುವ ಭಾರತ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಅಮೋಘ ಆಟ ಪ್ರದರ್ಶಿಸಿದೆ. ಯಾದವ್ 51 ಎಸೆತಗಳಲ್ಲಿ 112 ರನ್ ಸಿಡಿಸಿ ಅಜೇಯರಾಗಿ ಉಳಿದರು. ಡೆತ್‌ ಓವರ್‌ಗಳಲ್ಲಿ ಯಾದವ್‌ ಜತೆಗೂಡಿದ ಅಕ್ಷರ್ ಪಟೇಲ್, 9 ಎಸೆತಗಳಲ್ಲಿ ನಿರ್ಣಾಯಕ 21 ರನ್ ಗಳಿಸಿದರು.

ಟಿ20ಯಲ್ಲಿ ನಂ.1 ಸ್ಥಾನದಲ್ಲಿರುವ ಭಾರತೀಯ ಬ್ಯಾಟರ್, ಭಾರತ 52 ರನ್‌ಗಳಿಗೆ 2 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿರುವಾಗ ಕ್ರೀಸ್‌ಗೆ ಬಂದರು. ಆರಂಭದಲ್ಲಿ ಶುಭಮನ್ ಗಿಲ್ ಜತೆಗೂಡಿ ಇನ್ನಿಂಗ್ಸ್‌ ಕಟ್ಟಿದರು. ಕೇವಲ 26 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ತಲುಪಿದ ಸೂರ್ಯ, ಬಳಿಕ ಅದೇ ವೇಗದಲ್ಲಿ ಶತಕ ಗಳಿಸಿದರು.

ಕೆ ಎಲ್‌ ರಾಹುಲ್‌ ಸ್ಟೇಟಸ್‌ ಅರ್ಥವೇನು?

ಕೆ ಎಲ್‌ ರಾಹುಲ್‌ ಇನ್ಸ್ಟಾಗ್ರಾಂ ಸ್ಟೇಟಸ್‌

ಭಾರತದ ಇನ್ನಿಂಗ್ಸ್‌ ಮುಗಿಯುತ್ತಿದ್ದಂತೆಯೇ, ಕನ್ನಡಿಗ ಕೆ ಎಲ್‌ ರಾಹುಲ್‌ ಇನ್ಸ್ಟಾಗ್ರಾಂನಲ್ಲಿ ಸ್ಟೇಟಸ್‌ ಒಂದನ್ನು ಹಾಕಿದ್ದಾರೆ. ಇಂಗ್ಲೀಷ್ ಅಕ್ಷರಗಳಲ್ಲಿ ಹಾಕಿರುವ ಇದರ ಬರಹವನ್ನು ಓದಿದ ಹಲವರಿಗೆ ಅದರ ಅರ್ಥ ಏನೆಂಬುದು ಗೊತ್ತಾಗಿಲ್ಲ. ‘Baari yedde gobbiya’ ಎಂದು ರಾಹುಲ್‌ ಬರೆದಿರುವ ಈ ವಾಕ್ಯದ ಅರ್ಥ ತಿಳಿಯಲು ಹಲವರು ಪ್ರಯತ್ಮ ಪಟ್ಟಿದ್ದಾರೆ.

ಇದು ತುಳು ವಾಕ್ಯವಾಗಿದ್ದು, ಇದರ ಅರ್ಥ ‘ತುಂಬಾ ಚೆನ್ನಾಗಿ ಆಡಿದ್ದೀಯಾ’ ಎಂದಾಗಿದೆ. ಈ ಸ್ಟೇಟಸ್‌ನಲ್ಲಿ ರಾಹುಲ್‌ ಅವರು ಸೂರ್ಯಕುಮಾರ್‌ ಪತ್ನಿ ದೇವಿಶಾ ಶೆಟ್ಟಿಯವರನ್ನು ಟ್ಯಾಗ್‌ ಮಾಡಿದ್ದಾರೆ. ದೇವಿಶಾ ಉಡುಪಿ ಮೂಲದವರಾಗಿದ್ದು, ತುಳು ಮಾತನಾಡಬಲ್ಲರು. ಅಲ್ಲದೆ ರಾಹುಲ್‌ ಕೂಡಾ ಮಂಗಳೂರು ಮೂಲದವರು. ಇವರು ಕೂಡಾ ತುಳು ಬಲ್ಲರು. ಪತ್ನಿ ಹಾಗೂ ರಾಹುಲ್‌ ಜತೆಗೂಡಿ ಸೂರ್ಯ ಕೂಡಾ ಅಲ್ಪಸ್ವಲ್ಪ ತುಳು ಮಾತನಾಡುತ್ತಾರೆ. ಹೀಗಾಗಿ ರಾಹುಲ್‌ ತುಳು ಭಾಷೆಯಲ್ಲಿ ಬರೆದು ಸ್ಟೇಟಸ್‌ ಹಾಕಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು