logo
ಕನ್ನಡ ಸುದ್ದಿ  /  ಕ್ರೀಡೆ  /  Virat Kohli Century: ಇಪ್ಪತ್ತೆಂಟನೇ ಶತಕವನ್ನು ಪತ್ನಿ ಅನುಷ್ಕಾಗೆ ಅರ್ಪಿಸಿದ ಕಿಂಗ್ ಕೊಹ್ಲಿ; ಮೈದಾನದಲ್ಲಿ ಸಂಭ್ರಮ ಹೀಗಿತ್ತು

Virat Kohli century: ಇಪ್ಪತ್ತೆಂಟನೇ ಶತಕವನ್ನು ಪತ್ನಿ ಅನುಷ್ಕಾಗೆ ಅರ್ಪಿಸಿದ ಕಿಂಗ್ ಕೊಹ್ಲಿ; ಮೈದಾನದಲ್ಲಿ ಸಂಭ್ರಮ ಹೀಗಿತ್ತು

HT Kannada Desk HT Kannada

Mar 12, 2023 03:05 PM IST

ಶತಕವನ್ನು ಪತ್ನಿಗೆ ಅರ್ಪಿಸಿದ ವಿರಾಟ್

    • ಸರಣಿ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಹಳೆಯ ಖದರ್‌ ತೋರಿಸಿದ ವಿರಾಟ್, ತಮ್ಮ ಫಾರ್ಮ್ ಮರಳಿ ಪಡೆದರು. ನಿಧಾನವಾಗಿ ಬ್ಯಾಟ್‌ ಬೀಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 28ನೇ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ 75ನೇ ಶತಕ ಸಿಡಿಸಿದರು.
ಶತಕವನ್ನು ಪತ್ನಿಗೆ ಅರ್ಪಿಸಿದ ವಿರಾಟ್
ಶತಕವನ್ನು ಪತ್ನಿಗೆ ಅರ್ಪಿಸಿದ ವಿರಾಟ್ (AP-ANI/Instagram)

ಬಾರ್ಡರ್-ಗವಾಸ್ಕರ್ ಟ್ರೋಫಿ 2023ರ ಸರಣಿಯ ನಿರ್ಣಾಯಕ ಪಂದ್ಯದಲ್ಲಿ, ಕಿಂಗ್‌ ಕೊಹ್ಲಿ ತಮ್ಮ ಟೆಸ್ಟ್‌ ಶತಕದ ಬರವನ್ನು ನೀಗಿಸಿದರು. ಭಾರತದ ಮಾಜಿ ನಾಯಕ ವಿರಾಟ್, ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆಸ್ಟ್ರೇಲಿಯಾ ವಿರುದ್ಧ ಶತಕ ಸಿಡಿಸಿ ಸಂಭ್ರಮಿಸಿದರು. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಎರಡನೇ ಆವೃತ್ತಿಯಲ್ಲಿ ಕೊನೆಯ ಪಂದ್ಯವನ್ನು ಆಡುತ್ತಿರುವ ಭಾರತಕ್ಕೆ, ಸತತ ಎರಡನೇ ಬಾರಿ ಫೈನಲ್‌ಗೆ ಏರುವ ಕನಸಿಗೆ ವಿರಾಟ್‌ ಶತಕ ಮಹತ್ವದ ಪಾತ್ರ ವಹಿಸಿತು.

ಟ್ರೆಂಡಿಂಗ್​ ಸುದ್ದಿ

ಮಲೇಷ್ಯಾ ಫುಟ್ಬಾಲ್ ಆಟಗಾರ ಫೈಸಲ್ ಹಲೀಮ್ ಮೇಲೆ ಆ್ಯಸಿಡ್ ದಾಳಿ; ಮೈಮೇಲೆ ಸುಟ್ಟ ಗಾಯ, ಆರೋಪಿ ಅರೆಸ್ಟ್

ಮೊದಲು ರಾಯ್​ಬರೇಲಿ ಗೆಲ್ಲಿ; ತನ್ನ ನೆಚ್ಚಿನ ಚೆಸ್ ದಿಗ್ಗಜ ಆಟಗಾರನಿಂದಲೇ ಟೀಕೆಗೊಳಗಾದ ರಾಹುಲ್ ಗಾಂಧಿ

Hamida Banu: ಭಾರತದ ಮೊದಲ ಮಹಿಳಾ ವೃತ್ತಿಪರ ಕುಸ್ತಿಪಟು ಹಮೀದಾ ಬಾನು ಅವರಿಗೆ ಇಂದು ಗೂಗಲ್ ಡೂಡಲ್ ಗೌರವ, 5 ಆಸಕ್ತಿದಾಯಕ ಅಂಶಗಳು

ಕೇಳ್ರಪ್ಪೋ ಕೇಳಿ; ನೀವೂ ಬೆಂಗಳೂರು ಬುಲ್ಸ್ ತಂಡ ಸೇರಲು ಇಲ್ಲಿದೆ ಸುವರ್ಣಾವಕಾಶ, ನಿಯಮ ಮತ್ತು ಷರತ್ತುಗಳು ಅನ್ವಯ

ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇ ಟೆಸ್ಟ್‌ಗೆ ಮೊದಲು, ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಅರ್ಧ ಶತಕ ಗಳಿಸಲು ಕೂಡಾ ಕೊಹ್ಲಿ ಹೆಣಗಾಡಿದ್ದರು. ಸರಣಿ ನಿರ್ಣಾಯಕ ಪಂದ್ಯದಲ್ಲಿ ತಮ್ಮ ಹಳೆಯ ಖದರ್‌ ತೋರಿಸಿದ ಅವರು, ತಮ್ಮ ಫಾರ್ಮ್ ಮರಳಿ ಪಡೆದರು. ನಿಧಾನವಾಗಿ ಬ್ಯಾಟ್‌ ಬೀಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ 28ನೇ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನ 75ನೇ ಶತಕ ಸಿಡಿಸಿದರು.

ಪಂದ್ಯದ ನಾಲ್ಕನೇ ದಿನದಂದು ತಾಳ್ಮೆಯ ಇನ್ನಿಂಗ್ಸ್ ಕಟ್ಟಿದ ಮಾಜಿ ನಾಯಕ, ದಿನದ ಎರಡನೇ ಅವಧಿಯ ಅಂತ್ಯದ ಮೊದಲು ತಮ್ಮ ಮೊತ್ತವನ್ನು ಮೂರಂಕಿ ಗಡಿ ದಾಟಿಸಿದರು. ಆಟದ ಸುದೀರ್ಘ ಮತ್ತು ಹಳೆಯ ಸ್ವರೂಪದಲ್ಲಿ ಬರೋಬ್ಬರಿ 1205 ದಿನಗಳ ನಂತರ ಶತಕ ಸಿಡಿಸಿದರು. ವಿಶ್ವದ ಅತಿದೊಡ್ಡ ಕ್ರಿಕೆಟ್ ಸ್ಟೇಡಿಯಂನಲ್ಲಿ ತಮ್ಮ 28ನೇ ಟೆಸ್ಟ್ ಸೆಂಚುರಿ ಸಿಡಿಸಿ, ಟೀಕಾಕರರಿಗೆ ಬ್ಯಾಟ್‌ನಿಂದಲೇ ಉತ್ತರಿಸಿದರು. ಈ ವಿಶೇಷ ಸಾಧನೆಯನ್ನು ಸರಳವಾಗಿ ಸಂಭ್ರಮಿಸುತ್ತಾ, ತಮ್ಮ ವಿಶೇಷ ಆಟವನ್ನು ತಮ್ಮ ಪತ್ನಿ ಅನುಷ್ಕಾ ಶರ್ಮಾಗೆ ಅರ್ಪಿಸಿದರು. ತಮ್ಮ ಕೊರಳಲ್ಲಿದ್ದ ಸರದ ಲಾಕೆಟ್‌ಗೆ ಮುತ್ತು ಕೊಟ್ಟು ಭಾವನಾತ್ಮಕವಾಗಿ ಸಂಭ್ರಮವನ್ನಾಚರಿಸಿದರು.

ಆಸೀಸ್‌ ಸ್ಪಿನ್ನರ್‌ ನಾಥನ್ ಲಿಯಾನ್ ಅವರ ಓವರ್‌ನಲ್ಲಿ ಸಿಂಗಲ್ ತೆಗೆದುಕೊಳ್ಳುವ ಮೂಲಕ 241 ಎಸೆತಗಳಲ್ಲಿ ತಮ್ಮ 28ನೇ ಟೆಸ್ಟ್ ಶತಕವನ್ನು ಕೊಹ್ಲಿ ಪೂರ್ಣಗೊಳಿಸಿದರು. “ಈ ದಿನ ಸಂಜೆಯ ವೇಳೆಗೆ ಅವನು ಒಂದೆರಡು ಇಂಚುಗಳಷ್ಟು ಎತ್ತರಕ್ಕೆ ಬೆಳೆಯುತ್ತಾನೆ,” ಎಂದು ಶತಕದ ವೇಳೆ ಭಾರತದ ಮಾಜಿ ಕೋಚ್‌ ರವಿಶಾಸ್ತ್ರಿ ಅವರು ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಪಂದ್ಯದ ವೀಕ್ಷಕ ವಿವರಣೆಯ ಸಮಯದಲ್ಲಿ ಕೊಹ್ಲಿಯನ್ನು ಶ್ಲಾಘಿಸಿದರು.

ಅಹಮದಾಬಾದ್‌ನಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4ನೇ ಟೆಸ್ಟ್ ಪಂದ್ಯದ 3ನೇ ದಿನದಂದು ಕೊಹ್ಲಿ ಅಜೇಯ 59 ರನ್ ಗಳಿಸಿದ್ದರು. ಇಂದು ಬ್ಯಾಟಿಂಗ್ ಪುನರಾರಂಭಿಸಿದ ಅವರು, ಅದನ್ನು ಶತಕವಾಗಿ ಪರಿವರ್ತಿಸಿದರು. ಕ್ರಿಕೆಟ್‌ನ ಎಲ್ಲಾ ಸ್ವರೂಪಗಳಲ್ಲಿ ಶ್ರೇಷ್ಠ ಬ್ಯಾಟರ್ ಎಂದು ಪರಿಗಣಿಸಲ್ಪಟ್ಟ ಕೊಹ್ಲಿ, ಟೆಸ್ಟ್ ಕ್ರಿಕೆಟ್‌ನಲ್ಲಿ ತಮ್ಮ 28ನೇ ಸೆಂಚುರಿ ಗಳಿಸಲು 42 ಇನ್ನಿಂಗ್ಸ್‌ಗಳನ್ನು ತೆಗೆದುಕೊಂಡರು. ಟೀಂ ಇಂಡಿಯಾ ಪರ ಬ್ಯಾಟಿಂಗ್ ಮಾಂತ್ರಿಕ ಕೊಹ್ಲಿಒಟ್ಟು 75 ಅಂತಾರಾಷ್ಟ್ರೀಯ ಶತಕ ಸಿಡಿಸಿದ್ದಾರೆ.

ಈ ಪಂದ್ಯಕ್ಕೂ ಮುನ್ನ ಕೊಹ್ಲಿ ಅವರ ಕೊನೆಯ ಶತಕವು 2019ರಲ್ಲಿ ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ಬಂದಿತ್ತು. ಇದಕ್ಕೂ ಮೊದಲು, ಕೊಹ್ಲಿ ಕಳೆದ ವರ್ಷ ಏಷ್ಯಾ ಕಪ್‌ನಲ್ಲಿ 1,020 ದಿನಗಳ ನಂತರ ಶತಕವನ್ನು ಸಿಡಿಸಿ ಫಾರ್ಮ್‌ಗೆ ಮರಳಿದ್ದರು. 2022ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಭಾರತದ ರನ್ ಮಷಿನ್ ಹೆಚ್ಚು ರನ್ ಗಳಿಸಿದ ಆಟಗಾರನಾಗಿ ಹೊರಹೊಮ್ಮಿದರು. ಜನವರಿಯಲ್ಲಿ ಶ್ರೀಲಂಕಾ ವಿರುದ್ಧದ ಕ್ರಮವಾಗಿ 113 ಮತ್ತು ಅಜೇಯ 166 ರನ್‌ ಸಿಡಿಸುವುದರೊಂದಿಗೆ ಏಕದಿನ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೊಹ್ಲಿ ಮೂರು ಶತಕಗಳನ್ನು ದಾಖಲಿಸಿದ್ದರು.‌

    ಹಂಚಿಕೊಳ್ಳಲು ಲೇಖನಗಳು