logo
ಕನ್ನಡ ಸುದ್ದಿ  /  ಕ್ರೀಡೆ  /  Women's Premier League: ಅನ್‌ಲಕ್ಕಿ ಮಂಧನಾ ಪಡೆಗಿಂದು ಬಲಿಷ್ಠ ಡೆಲ್ಲಿ ಸವಾಲು; ಸೋಲಿನ ಸರಪಳಿ ತುಂಡರಿಸುತ್ತಾ ಆರ್‌ಸಿಬಿ?

Women's Premier League: ಅನ್‌ಲಕ್ಕಿ ಮಂಧನಾ ಪಡೆಗಿಂದು ಬಲಿಷ್ಠ ಡೆಲ್ಲಿ ಸವಾಲು; ಸೋಲಿನ ಸರಪಳಿ ತುಂಡರಿಸುತ್ತಾ ಆರ್‌ಸಿಬಿ?

HT Kannada Desk HT Kannada

Mar 13, 2023 03:25 PM IST

google News

ಮಂಧನಾ, ಲ್ಯಾನಿಂಗ್

    • ಆರ್‌ಸಿಬಿ ಪರ ಸೋಫಿ ಡಿವೈನ್‌ ಮತ್ತು ಎಲಿಸ್‌ ಪೆರ್ರಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾಯಕಿ ಹಾಗೂ ಅಗ್ರ ಕ್ರಮಾಂಕದ ಆಟಗಾರ್ತಿಯಾಗಿರುವ ಸ್ಮೃತಿ ಎಲ್ಲಾ ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಚಾ ಘೋಷ್ ಬ್ಯಾಟ್‌ ಬೀಸಲು ಹೆಣಗಾಡುತ್ತಿದ್ದಾರೆ.
ಮಂಧನಾ, ಲ್ಯಾನಿಂಗ್
ಮಂಧನಾ, ಲ್ಯಾನಿಂಗ್

ಮಹಿಳಾ ಪ್ರೀಮಿಯರ್ ಲೀಗ್ (ಡಬ್ಲ್ಯುಪಿಎಲ್)ನ ಸೋಮವಾರದ ಹಣಾಹಣಿಯಲ್ಲಿ ಮೆಗ್ ಲ್ಯಾನಿಂಗ್ಸ್ ನೇತೃತ್ವದ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡವು, ಸ್ಮೃತಿ ಮಂಧನಾ ನೇತೃತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದೊಂದಿಗೆ ಕಣಕ್ಕಿಳಿಯಲಿದೆ. ಟೂರ್ನಿಯಲ್ಲಿ ಸತತ ನಾಲ್ಕು ಸೋಲುಗಳೊಂದಿಗೆ ಅತ್ಯಂತ ಕಳಪೆ ಪ್ರದರ್ಶನ ನೀಡಿರುವ ಆರ್‌ಸಿಬಿ, ಮೊದಲ ಜಯಕ್ಕೆ ಎದುರು ನೋಡುತ್ತಿದೆ. ಮತ್ತೊಂದೆಡೆ ಮುಂಬೈ ಬಳಿಕ ಟೂರ್ನಿಯಲ್ಲಿ ಹೆಚ್ಚು ಪಂದ್ಯಗಳನ್ನು ಗೆದ್ದಿರುವ ಮುಂಬೈ, ಅಂಕಪಟ್ಟಿಯ ಕೆಳಸ್ಥಾನಿಯನ್ನು ಸುಲಭವಾಗಿ ಮಣಿಸಲು ಹವಣಿಸುತ್ತಿದೆ.

ಡೆಲ್ಲಿ ತಂಡವು ಪಂದ್ಯಾವಳಿಯಲ್ಲಿ ಅತ್ಯುನ್ನತ ಆಟ ಪ್ರದರ್ಶಿಸಿದೆ. ಇದುವರೆಗೆ ಆಡಿದ ನಾಲ್ಕು ಪಂದ್ಯಗಳಲ್ಲಿ ಮೂರರಲ್ಲಿ ಗೆದ್ದಿರುವ ಲ್ಯಾನಿಂಗ್‌ ಪಡೆ, ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ ಆರಂಭಿಕರಾದ ಮೆಗ್‌ ಲ್ಯಾನಿಂಗ್‌ ಹಾಗೂ ಶಫಾಲಿ ವರ್ಮಾ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಮತ್ತೊಂದೆಡೆ, ಸ್ಮೃತಿ ಮಂಧನ ನಾಯಕತ್ವದ ಬೆಂಗಳೂರು ತಂಡವು ಇನ್ನೂ ಗೆಲುವಿನ ಖಾತೆಯನ್ನು ತೆರೆಯದೆ ಎಲ್ಲಾ ನಾಲ್ಕು ಪಂದ್ಯಗಳಲ್ಲೂ ಸೋತಿದೆ. ಅದು ಕೂಡಾ ಹೀನಾಯ ಸೋಲುಗಳು. ಟೂರ್ನಿಯಲ್ಲಿ ಉತ್ತಮ ಲಯದಲ್ಲಿ ಆಡಲು ವಿಫಲವಾಗಿರುವ ಆರ್‌ಸಿಬಿ, ಉಳಿದಿರುವ ಕೊನೆಯ ನಾಲ್ಕು ಪಂದ್ಯಗಳಲ್ಲಿ ಗೆದ್ದು ಟೂರ್ನಿಯನ್ನು ಮುಗಿಸಲು ಎದುರು ನೋಡುತ್ತಿದೆ.

ಆರ್‌ಸಿಬಿ ಪರ ಸೋಫಿ ಡಿವೈನ್‌ ಮತ್ತು ಎಲಿಸ್‌ ಪೆರ್ರಿ ಮಾತ್ರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ನಾಯಕಿ ಹಾಗೂ ಅಗ್ರ ಕ್ರಮಾಂಕದ ಆಟಗಾರ್ತಿಯಾಗಿರುವ ಸ್ಮೃತಿ ಎಲ್ಲಾ ಪಂದ್ಯಗಳಲ್ಲೂ ಕಳಪೆ ಪ್ರದರ್ಶನ ನೀಡಿದ್ದಾರೆ. ವಿಕೆಟ್ ಕೀಪರ್ ಹಾಗೂ ಬ್ಯಾಟರ್ ರಿಚಾ ಘೋಷ್ ಬ್ಯಾಟ್‌ ಬೀಸಲು ಹೆಣಗಾಡುತ್ತಿದ್ದಾರೆ. ಬೌಲಿಂಗ್‌ನಲ್ಲಂತೂ ತಂಡದ ಪ್ರದರ್ಶನ ಶೂನ್ಯ. ಭಾರತ ವನಿತೆಯರ ತಂಡದ ಭರವಸೆಯ ವೇಗಿ, ಟೂರ್ನಿಯಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಯಾವಾಗ ನಡೆಯುತ್ತದೆ?

ಡೆಲ್ಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವು ಸೋಮವಾರ, ಮಾರ್ಚ್ 13ರಂದು ನಡೆಯಲಿದೆ. ಪಂದ್ಯವು ಸಂಜೆ 7:30ಕ್ಕೆ ಪ್ರಾರಂಭವಾಗಲಿದೆ. ಟಾಸ್ ಪ್ರಕ್ರಿಯೆಯು 07:00 ಗಂಟೆಗೆ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯವು ಎಲ್ಲಿ ನಡೆಯುತ್ತದೆ?

ಈ ಪಂದ್ಯವು ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆಯಲಿದೆ.

ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ WPL ಪಂದ್ಯವನ್ನು ಟಿವಿಯಲ್ಲಿ ಯಾವ ವಾಹಿನಿಯಲ್ಲಿ ವೀಕ್ಷಿಸಬಹುದು?

ದೆಹಲಿ ಕ್ಯಾಪಿಟಲ್ಸ್ vs ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯ ಮತ್ತು ವಿಮೆನ್ಸ್‌ ಪ್ರೀಮಿಯರ್‌ ಲೀಗ್‌ನ ಎಲ್ಲಾ ಪಂದ್ಯಗಳು ಸ್ಪೋರ್ಟ್ಸ್ 18 ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಕನ್ನಡ ಕಾಮೆಂಟರಿಯೊಂದಿಗೆ ಕಲರ್ಸ್‌ ಕನ್ನಡ ಸಿನೆಮಾ ವಾಹಿನಿಯಲ್ಲಿ ನೇರಪ್ರಸಾರ ಇರಲಿದೆ.

ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಮೊಬೈಲ್‌ ಮೂಲಕ ಹೇಗೆ ವೀಕ್ಷಿಸಬಹುದು?

WPL 2023ರ ಎಲ್ಲಾ ಪಂದ್ಯಗಳ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಅಪ್ಲಿಕೇಶನ್‌ಲ್ಲಿ ಲಭ್ಯವಿರುತ್ತದೆ. ಇದು ಸಂಪೂರ್ಣ ಉಚಿತ.

ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ ಆಡುವ ಬಳಗ: ಮೆಗ್ ಲ್ಯಾನಿಂಗ್ (ನಾಯಕಿ), ಶಫಾಲಿ ವರ್ಮಾ, ಮರಿಜಾನ್ನೆ ಕಪ್, ಜೆಮಿಮಾ ರೋಡ್ರಿಗಸ್, ಆಲಿಸ್ ಕ್ಯಾಪ್ಸೆ / ಲಾರಾ ಹ್ಯಾರಿಸ್, ಜೆಸ್ ಜೊನಾಸ್ಸೆನ್, ತಾನಿಯಾ ಭಾಟಿಯಾ, ಮಿನ್ನು ಮಣಿ, ಶಿಖಾ ಪಾಂಡೆ, ರಾಧಾ ಯಾದವ್, ತಾರಾ ನಾರ್ರಿಸ್.

ಆರ್‌ಸಿಬಿ ಸಂಭಾವ್ಯ ಆಡುವ ಬಳಗ: ಸ್ಮೃತಿ ಮಂಧನ (ನಾಯಕಿ), ಸೋಫಿ ಡಿವೈನ್, ಎಲ್ಲಿಸ್ ಪೆರ್ರಿ, ಹೆದರ್ ನೈಟ್, ರಿಚಾ ಘೋಷ್, ಡೇನ್ ವ್ಯಾನ್ ನೀಕರ್ಕ್ / ಎರಿನ್ ಬರ್ನ್ಸ್, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ಸಹನಾ ಪವಾರ್, ಕೋಮಲ್ ಝಂಜಾದ್, ರೇಣುಕಾ ಠಾಕೂರ್.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ