logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  Basangouda Patil Yatnal : 45 ರೂಪಾಯಿ ಮಾಸ್ಕ್ ಗೆ 485 ; ಕರೋನಾದಲ್ಲಿ 40 ಸಾವಿರ ಕೋಟಿ ದೋಚಿದ್ದಾರೆ..!

Basangouda Patil Yatnal : 45 ರೂಪಾಯಿ ಮಾಸ್ಕ್ ಗೆ 485 ; ಕರೋನಾದಲ್ಲಿ 40 ಸಾವಿರ ಕೋಟಿ ದೋಚಿದ್ದಾರೆ..!

Dec 27, 2023 04:49 PM IST

ಬಿಸ್ ಯಡಿಯೂರಪ್ಪ ವಿರುದ್ಧ ಸಿಡಿಯುತ್ತಲೇ ಇರುವ ಬಸನಗೌಡ ಪಾಟೀಲ್ ಯತ್ನಾಳ್ ಇದೀಗ ಮತ್ತೊಂದು ಸ್ಫೋಟಕ ಆರೋಪ ಮಾಡಿದ್ದಾರೆ. ಕರೋನಾ ವೇಳೆ 45 ರೂಪಾಯಿ ಮಾಸ್ಕ್ ಗೆ 485 ರೂಪಾಯಿ ಬಿಲ್ ಹಾಕಿದ್ದಾರೆ. ಒಂದು ಬೆಡ್ ಗೆ 20 ಸಾವಿರ ಬಾಡಿಗೆ ಅಂತ ತೋರಿಸಿದ್ದಾರೆ. ಅದರ ಬದಲು ಹೊಸದಾಗಿ ಖರೀದಿ ಮಾಡಬಹುದಿತ್ತು. ಆದರೆ ಎಲ್ಲರೂ ಭ್ರಷ್ಟಾಚಾರ ಮಾಡಿ ಕರೋನಾದಲ್ಲಿ 40 ಸಾವಿರ ಕೋಟಿ ದೋಚಿದ್ದಾರೆ ಎಂದು ಯಡಿಯೂರಪ್ಪ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದ್ದಾರೆ. ತಮ್ಮನ್ನ ಒಂದೊಮ್ಮೆ ಪಕ್ಷದಿಂದ ಉಚ್ಛಾಟನೆ ಮಾಡಿದರೆ ದಾಖಲೆ ಬಿಚ್ಚಿಡುವೆ ಎಂದಿದ್ದಾರೆ.