logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ದೀಪಾವಳಿ 2024: ಪದೇ ಪದೆ ಪಟಾಕಿ ಹಚ್ಚಬೇಡಿ, ಒಂದೇ ಸಲಕ್ಕೆ ಸಾವಿರ ಹೊಡೆದುಬಿಡಿ; ಚಕ್ರವರ್ತಿ ಸೂಲಿಬೆಲೆ

ದೀಪಾವಳಿ 2024: ಪದೇ ಪದೆ ಪಟಾಕಿ ಹಚ್ಚಬೇಡಿ, ಒಂದೇ ಸಲಕ್ಕೆ ಸಾವಿರ ಹೊಡೆದುಬಿಡಿ; ಚಕ್ರವರ್ತಿ ಸೂಲಿಬೆಲೆ

Nov 02, 2024 03:37 PM IST

ಇಂದು ದೇಶಾದ್ಯಂತ ಬಲಿಪಾಡ್ಯಮಿ ಆಚರಿಸಲಾಗುತ್ತಿದೆ. ಗುರುವಾರ ನರಕ ಚತುರ್ದಶಿ, ಶುಕ್ರವಾರ ಲಕ್ಷ್ಮೀ ಪೂಜೆ ನೆರವೇರಿಸಲಾಗಿದೆ. ದೊಡ್ಡವರು, ಮಕ್ಕಳೆನ್ನದೆ ಕಳೆದ ಒಂದು ವಾರದಿಂದ ಪಟಾಕಿ ಸಿಡಿಸುತ್ತಿದ್ದಾರೆ. ಪಟಾಕಿ ಹಚ್ಚುವಾಗ ಕೆಲವು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಪರಿಸರದ ಬಗ್ಗೆಯೂ ಕಾಳಜಿ ಇರಬೇಕು. ಈ ವಿಚಾರವಾಗಿ ಚಕ್ರವರ್ತಿ ಸೂಲಿಬೆಲೆ ಜನರಿಗೆ ಸಂದೇಶ ನೀಡಿದ್ದಾರೆ. ಎಲ್ಲರಿಗೂ ದೀಪಾವಳಿ ಶುಭಾಶಯಗಳು, ದಿನವೆಲ್ಲಾ ಪಟಾಕಿ ಹಚ್ಚುತ್ತಾ ಇರಬೇಡಿ. ಇದರಿಂದ ಪರಿಸರಕ್ಕೆ ಹಾನಿಯಾಗುತ್ತೆ, ಹಿರಿಯರಿಗೆ ತೊಂದರೆ ಆಗುತ್ತೆ, ಪ್ರಾಣಿ ಪಕ್ಷಿಗಳಿಗೆ ಕಷ್ಟ ಆಗುತ್ತೆ, ಅದಕ್ಕೆ ಒಂದೇ ಸಲ ಸಾವಿರ ಪಟಾಕಿ ಹಚ್ಚಿಬಿಡಿ ಎಂದಿದ್ದಾರೆ.