logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಬರಿ ಸಿದ್ದು ಅಲ್ಲ, ಸಿಕ್ಸರ್ ಸಿದ್ದು; ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ವೇಳೆ ಸಿದ್ದರಾಮಯ್ಯ ಭರ್ಜರಿ ಬ್ಯಾಟಿಂಗ್, Video

ಬರಿ ಸಿದ್ದು ಅಲ್ಲ, ಸಿಕ್ಸರ್ ಸಿದ್ದು; ಕ್ರಿಕೆಟ್ ಸ್ಟೇಡಿಯಂ ಶಂಕುಸ್ಥಾಪನೆ ವೇಳೆ ಸಿದ್ದರಾಮಯ್ಯ ಭರ್ಜರಿ ಬ್ಯಾಟಿಂಗ್, VIDEO

Dec 02, 2024 09:45 PM IST

  • Siddaramaiah: ತುಮಕೂರಿನಲ್ಲಿ ನೂತನ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ನಿರ್ಮಾಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಶಂಕುಸ್ಥಾಪನೆ ನೆರವೇರಿಸಿದರು. ಕಾರ್ಯಕ್ರಮದಲ್ಲಿ  ಕ್ರಿಕೆಟ್ ಸ್ಟೇಡಿಯಂಗೆ ಭೂಮಿಯು ಮಂಜೂರಾಗಿರುವ ಆದೇಶ ಪತ್ರವನ್ನು ಕೆಎಸ್‌ಸಿಎ ಅಧ್ಯಕ್ಷ ರಘುರಾಮ್ ಭಟ್​​ಗೆ ಹಸ್ತಾಂತರಿಸಲಾಯಿತು. ಸುಮಾರು ವರ್ಷಗಳ ಕನಸಾಗಿದ್ದ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣದ ಜತೆಗೆ ಅಂತಾರಾಷ್ಟ್ರೀಯ ಕ್ರಿಕೆಟ್ ತರಬೇತಿಗೆ ಅಡಿಗಲ್ಲು ಹಾಕಲಾಗಿದೆ. ಕೆಎಸ್‌ಸಿಎ 2 ವರ್ಷದಲ್ಲಿ ಸ್ಟೇಡಿಯಂ ನಿರ್ಮಾಣದ ಕಾಮಗಾರಿ ಪೂರ್ಣಗೊಳಿಸುವುದಾಗಿ ತಿಳಿಸಿದೆ ಎಂದು ಹೇಳಿದರು. ಇದೇ ಸಿಎಂ ಬ್ಯಾಟಿಂಗ್ ಮಾಡುವ ಮೂಲಕ ಗಮನ ಸೆಳೆದರು.