ಜಂಬೂ ಸವಾರಿಗೆ ಕ್ಷಣಗಣನೆ: 5ನೇ ಬಾರಿ ಅಂಬಾರಿ ಹೊರಲು ಸಿದ್ಧನಾದ ಅಭಿಮನ್ಯುಗೆ ಲಕ್ಷ್ಮೀ, ಹಿರಣ್ಯ ಸಾಥ್
Oct 12, 2024 02:39 PM IST
ಮೈಸೂರು ಜಂಬೂ ಸವಾರಿಗೆ ಕ್ಷಣಗಣನೆ ಆರಂಭವಾಗಿದೆ. ಇಂದು ಸಂಜೆ 4 ಗಂಟೆಯಿಂದ 4.30ರ ನಡುವೆ ಕುಂಭ ಲಗ್ನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಜಂಬೂಸವಾರಿಗೆ ಚಾಲನೆ ನೀಡಲಿದ್ದಾರೆ. ಐದನೇ ಬಾರಿಗೆ ಅಭಿಮನ್ಯು ಅಂಬಾರಿ ಹೊರುತ್ತಿದ್ದು, ಅವನಿಗೆ ಲಕ್ಷ್ಮೀ ಹಾಗೂ ಹಿರಣ್ಯ, ಕುಮ್ಕಿ ಆನೆಗಳಾಗಿ ಸಾಥ್ ನೀಡುತ್ತಿವೆ. ಒಟ್ಟು 9 ಆನೆಗಳು ದಸರಾ ಮೆರವಣಿಗೆಯಲ್ಲಿ ಸಾಗಲಿವೆ. ರಾಜ್ಯದ 31 ಜಿಲ್ಲೆಗಳ ಸ್ತಬ್ಧ ಚಿತ್ರಗಳ ಜೊತೆಗೆ ಕೇಂದ್ರ, ರಾಜ್ಯ ಸರ್ಕಾರದ ವಿವಿಧ ಇಲಾಖೆಗಳ ಸ್ತಬ್ಧ ಚಿತ್ರಗಳು ಸೇರಿ ಈ ಬಾರಿ ಒಟ್ಟು 51 ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ. ಜಂಬೂಸವಾರಿ ಹಿನ್ನೆಲೆ ಮೈಸೂರಿನಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜನರು ಜಂಬೂಸವಾರಿ ನೋಡಲು ರಸ್ತೆಯ ಎರಡೂ ಬದಿಗಳ ನಡುವೆ ಜಮಾಯಿಸಿದ್ದಾರೆ