ಅರಣ್ಯ ಸಿಬ್ಬಂದಿ ಕಾರ್ಯಾಚರಣೆ; ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆ ತಾಲೂಕು ಹೌಸಿಂಗ್ ಬೋರ್ಡ್‌ನಲ್ಲಿ ಚಿರತೆ ಸೆರೆ
Oct 29, 2024 09:12 PM IST
ಚಿರತೆ, ಆನೆಗಳು ಆಹಾರ ಹುಡುಕಿಕೊಂಡು ನಾಡಿಗೆ ಬರುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಲೇ ಇದೆ. ಚಿರತೆ ಸಾಕುಪ್ರಾಣಿಗಳನ್ನು ತಿಂದರೆ, ಆನೆಗಳು ಬೆಳೆಗಳನ್ನು ನಾಶ ಮಾಡುತ್ತಿವೆ. ಮನುಷ್ಯರ ಮೇಲೂ ದಾಳಿ ಮಾಡಿರುವ ಉದಾಹರಣೆಗಳಿವೆ. ಇದೀಗ ಮತ್ತೆ ಮೈಸೂರು ಜಿಲ್ಲೆ ಹೆಚ್‌ಡಿ ಕೋಟೆ ತಾಲೂಕಿನಲ್ಲಿ ಚಿರಂತೆ ಕಾಟ ಹೆಚ್ಚಾಗಿದ್ದು ಇಂದು ತಾಲೂಕಿನ ಹೌಸಿಂಗ್ ಬೋರ್ಡ್‌ನ ಮಾಜಿ ಶಾಸಕ ದಿವಂಗತ ಎನ್ ನಾಗರಾಜು ಅವರ ಜಮೀನಿನಲ್ಲಿ ಮತ್ತೊಂದು ಚಿರತೆ ಬೋನಿನಲ್ಲಿ ಸೆರೆಯಾಗಿದೆ. ಈ ಸ್ಥಳದಲ್ಲಿ ಕಳೆದ ಒಂದು ವರ್ಷದಿಂದ ಚಿರತೆಗಳ ಕಾಟ ಹೆಚ್ಚಾಗಿತ್ತು. ಇದರಿಂದ ಅರಣ್ಯ ಇಲಾಖೆ ಸಿಬ್ಬಂದಿ ಈ ಸ್ಥಳದಲ್ಲಿ ಬೋನು ಇರಿಸಿದ್ದರು. ಬೋನಿನಲ್ಲಿ ಸೆರೆಯಾದ ಚಿರತೆಯನ್ನು ಅರಣ್ಯ ಸಿಬ್ಬಂದಿ ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ. ತಾಲೂಕಿನಲ್ಲಿ ಸೆರೆ ಸಿಕ್ಕಿರುವ 5ನೇ ಚಿರತೆ ಇದು.