logo
ಕನ್ನಡ ಸುದ್ದಿ  /  ವೀಡಿಯೊ ಗ್ಯಾಲರಿ  /  ಫೆಂಗಲ್ ಚಂಡಮಾರುತ; ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಮಳೆಗೆ ರಸ್ತೆಗುರುಳಿದ ಬಂಡೆ, ಕೆಲಕಾಲ ಸಂಚಾರಕ್ಕೆ ಅಡ್ಡಿ- ವಿಡಿಯೋ

ಫೆಂಗಲ್ ಚಂಡಮಾರುತ; ಮೈಸೂರು ಚಾಮುಂಡಿ ಬೆಟ್ಟದಲ್ಲಿ ಭಾರಿ ಮಳೆಗೆ ರಸ್ತೆಗುರುಳಿದ ಬಂಡೆ, ಕೆಲಕಾಲ ಸಂಚಾರಕ್ಕೆ ಅಡ್ಡಿ- ವಿಡಿಯೋ

Dec 03, 2024 05:50 PM IST

ಫೆಂಗಲ್ ಚಂಡಮಾರುತದ ಪರಿಣಾಮ ಮೈಸೂರಿನಲ್ಲೂ ಭಾರಿ ಮಳೆಯಾಗಿದೆ. ಚಾಮುಂಡಿ ಬೆಟ್ಟ ರಸ್ತೆಯಲ್ಲಿ ಮಳೆಯ ಕಾರಣ ಗುಡ್ಡದ ಮಣ್ಣು ಸಡಿಲವಾಗಿದ್ದು, ಬೃಹತ್ ಬಂಡೆಯೊಂದು ರಸ್ತೆಗೆ ಉರುಳಿದೆ. ಅದೃಷ್ಟವಶಾತ್ ರಸ್ತೆಯಲ್ಲಿ ಬಂಡೆ ಯಾವುದೇ ವಾಹನದ ಮೇಲೆ ಬಿದ್ದಿಲ್ಲ. ಬಂಡೆ ರಸ್ತೆಗೆ ಉರುಳಿದ ಕಾರಣ ಕೆಲ ಹೊತ್ತು ಸಂಚಾರಕ್ಕೆ ಅಡ್ಡಿಯಾಯಿತು. ಬಂಡೆ ತೆರವುಗೊಳಿಸಿದ ಬಳಿಕ ವಾಹನ ಸಂಚಾರ ಸುಗಮವಾಗಿತ್ತು. ಘಟನಾ ಸ್ಥಳದ ವಿಡಿಯೋ ಇಲ್ಲಿದೆ.