ನಿಮ್ಮ ಬೆಂಬಲಕ್ಕೆ ನಾವಿದ್ದೇವೆ: ವಿನೇಶ್ ಫೋಗಟ್‌ಗೆ ಮಾನಸಿಕ ಸ್ಥೈರ್ಯ ತುಂಬಿದ ಪಂಜಾಬ್ ಸರ್ಕಾರ; ಕುಸ್ತಿಪಟುವಿಗೆ ಬೆಳ್ಳಿ ಪದಕದ ಸ್ಥಾನಮಾನ
Aug 08, 2024 12:49 PM IST
ಒಲಿಂಪಿಕ್ಸ್ ಫೈನಲ್‌ಗೆ ಅನರ್ಹವಾದ ಬೆನ್ನಲ್ಲೇ ಬೇಸರದಿಂದ ಕುಸ್ತಿಗೆ ನಿವೃತ್ತಿ ಘೋಷಿಸಿದ ಕುಸ್ತಿಪಟು ವಿನೇಶ್ ಫೋಗಟ್‌ಗೆ ಮಾನಸಿಕ ಬೆಂಬಲ ತುಂಬಲು ಪಂಜಾ ಸರ್ಕಾರ ಮುಂದಾಗಿದೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಘಟಾನುಘಟಿ ಕುಸ್ತಿಪಟುಗಳ ವಿರುದ್ಧ ಸೆಣಸಾಡಿ ಫೈನಲ್ ಪ್ರವೇಶಿಸಿದ್ದ ವಿನೇಶ್ ಫೋಗಟ್, ತೂಕ ಹೆಚ್ಚಾದ ಕಾರಣದಿಂದ ಫೈನಲ್‌ಗೆ ಅನರ್ಹರಾಗಿದ್ದಾರೆ. ವಿನೇಶ್‌ಗೆ ಚಿನ್ನ ಗೆಲ್ಲಲ್ಲು ಎಲ್ಲಾ ಅವಕಾಶಗಳಿದ್ದರೂ ಒಲಿಂಪಿಕ್ಸ್ ಸಮಿತಿ ಆಕೆಯನ್ನು ಅನರ್ಹಗೊಳಿಸಿದ್ದರಿಂದ ಆಕೆಗೆ, ಭಾರತಕ್ಕೂ ಅನ್ಯಾಯವಾಗಿದೆ. ಆದ್ದರಿಂದ ಆಕೆಗೆ ಮಾನಸಿಕ ಸ್ಥೈರ್ಯ ತುಂಬಲು ಆಕೆಗೆ ಬೆಳ್ಳಿ ಪದಕದ ಸ್ಥಾನಮಾನ ನೀಡುತ್ತಿದ್ದೇವೆ ಎಂದು ಪಂಜಾಬ್ ಸಿಎಂ ಭಗವಂತ ಮಾನ್ ಹೇಳಿದ್ದಾರೆ.