ಕನ್ನಡ ಸುದ್ದಿ  /  ಕ್ರಿಕೆಟ್  /  400 ಕೋಟಿ ಲಾಭ ಪಡೀತಿದ್ರು ಅವರಿಗೇನು ಸಮಸ್ಯೆ; ಸಂಜೀವ್ ಗೋಯೆಂಕಾ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್

400 ಕೋಟಿ ಲಾಭ ಪಡೀತಿದ್ರು ಅವರಿಗೇನು ಸಮಸ್ಯೆ; ಸಂಜೀವ್ ಗೋಯೆಂಕಾ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್

Virender Sehwag on Sanjiv Goenka: ಐಪಿಎಲ್ 2024 ಮುಕ್ತಾಯವಾದ ನಂತರ ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಅವರು ಫ್ರಾಂಚೈಸಿಯನ್ನು ತೊರೆಯಬಹುದು ಎಂದು ವೀರೇಂದ್ರ ಸೆಹ್ವಾಗ್ ಅವರು ಸಂಜೀವ್ ಗೋಯೆಂಕಾ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

400 ಕೋಟಿ ಲಾಭ ಪಡೀತಿದ್ರು ಅವರಿಗೇನು ಸಮಸ್ಯೆ; ಸಂಜೀವ್ ಗೋಯೆಂಕಾ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್
400 ಕೋಟಿ ಲಾಭ ಪಡೀತಿದ್ರು ಅವರಿಗೇನು ಸಮಸ್ಯೆ; ಸಂಜೀವ್ ಗೋಯೆಂಕಾ ವಿರುದ್ಧ ಗುಡುಗಿದ ವೀರೇಂದ್ರ ಸೆಹ್ವಾಗ್

ಸನ್​ರೈಸರ್ಸ್ ಹೈದರಾಬಾದ್ ತಂಡದ ಎದುರು 10 ವಿಕೆಟ್​ ಸೋಲನುಭವಿಸಿದ ನಂತರ ಲಕ್ನೋ ಸೂಪರ್ ಜೈಂಟ್ಸ್ ಮಾಲೀಕ ಸಂಜೀವ್ ಗೋಯೆಂಕಾ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ವಾಗ್ದಾಳಿ ನಡೆಸಿದ್ದಾರೆ. ಹೈದರಾಬಾದ್​​​ನ ರಾಜೀವ್ ​ಗಾಂಧಿ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನದಲ್ಲಿ ಪಂದ್ಯ ಮುಗಿದ ಕೆಲವೇ ಕ್ಷಣಗಳಲ್ಲಿ ಕೆಎಲ್ ರಾಹುಲ್​ ಅವರನ್ನು ಮಾಲೀಕ ಬೈದಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಗೋಯೆಂಕಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.

ಟ್ರೆಂಡಿಂಗ್​ ಸುದ್ದಿ

ಕೋಲ್ಕತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಐಪಿಎಲ್ 2024ರ ಪಂದ್ಯಕ್ಕೂ ಮುನ್ನ ಕ್ರಿಕ್​ಬಜ್​ನೊಂದಿಗೆ ಮಾತನಾಡಿದ ಸೆಹ್ವಾಗ್, ಯಾವುದೇ ಫ್ರಾಂಚೈಸಿ ಮಾಲೀಕರು ಸಕಾರಾತ್ಮಕ ಅಥವಾ ಪ್ರೇರಕವಾಗಿ ಮಾತನಾಡಲು ಬಯಸಿದರೆ ಮಾತ್ರ ಆಟಗಾರರನ್ನು ಭೇಟಿಯಾಗಬೇಕು. ಉಳಿದ ಕ್ರಿಕೆಟ್ ಜವಾಬ್ದಾರಿಗಳನ್ನು ನಾಯಕ ಮತ್ತು ಸಹಾಯಕ ಸಿಬ್ಬಂದಿಯ ಹೆಗಲಿಗೆ ಬಿಡಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ. ಅಲ್ಲದೆ, ಮಾಲೀಕರ ಪಾತ್ರ ಏನೆಂಬುದನ್ನು ಇದೇ ವೇಳೆ ವಿವರಿಸಿದ್ದಾರೆ.

ಮಾಲೀಕರ ಪಾತ್ರ ಏನೆಂಬುದನ್ನು ವಿವರಿಸಿದ ವೀರೇಂದ್ರ ಸೆಹ್ವಾಗ್

ಡ್ರೆಸ್ಸಿಂಗ್ ರೂಮ್​ನಲ್ಲಿ ಅಥವಾ ಪತ್ರಿಕಾಗೋಷ್ಠಿಯಲ್ಲಿ ಆಟಗಾರರನ್ನು ಭೇಟಿಯಾಗುವ ಸಂದರ್ಭದಲ್ಲಿ ಮಾಲೀಕರು ಪ್ರೇರೇಪಿಸಬೇಕು. ಆದರೆ, ಏನು ನಡೆಯುತ್ತಿದೆ? ಸಮಸ್ಯೆ ಏನು? ಅಥವಾ ತಂಡದ ನಿರ್ವಹಣಾ ಸದಸ್ಯರಲ್ಲಿ ಒಬ್ಬರನ್ನು ಹಿಡಿದು ನಿರ್ದಿಷ್ಟ ಆಟಗಾರನ ಬಗ್ಗೆ ಮಾಲೀಕರು ಬಂದು ಕೇಳುವ ಹಕ್ಕಿಲ್ಲ. ಹಾಗಾಗಿ ಮಾಲೀಕರು ಆಟಗಾರರೊಂದಿಗೆ ಭಾಗಿಯಾಗಬಾರದು ಅಥವಾ ಹೀಗೇ ಹೇಳಿದ್ದಕ್ಕೆ ನನ್ನ ಮೇಲೆ ಕೋಪಗೊಳ್ಳದಿರುವುದು ಉತ್ತಮ ಎಂದು ಸೆಹ್ವಾಗ್ ಹೇಳಿದ್ದಾರೆ.

2016 ಮತ್ತು 2018ರ ನಡುವೆ 3 ಐಪಿಎಲ್ ಆವೃತ್ತಿಗಳಲ್ಲಿ ಪಂಜಾಬ್ ಕಿಂಗ್ಸ್​ನಲ್ಲಿ​​ ಮಾರ್ಗದರ್ಶಕರಾಗಿಯೂ ಸೇವೆ ಸಲ್ಲಿಸಿದ್ದ ಸೆಹ್ವಾಗ್, ಗೋಯೆಂಕಾ ಅವರ ಕೃತ್ಯವನ್ನು ಟೀಕಿಸಿದ್ದಾರೆ. ಉದ್ಯಮಿಯಾಗಿ ಅವರು ಎಸ್ಆರ್​ಹೆಚ್​ ವಿರುದ್ಧ ಎಲ್ಎಸ್​ಜಿ ಸೋಲಿನ ನಂತರ ಯಾವುದೇ ನಷ್ಟ ಅನುಭವಿಸಿಲ್ಲ ಎಂದ ವೀರೂ, ತಂಡವು ಸೋಲು-ಗೆಲುವಿನ ಪ್ರದರ್ಶನದ ನಡುವೆಯೂ ಮಾಲೀಕರು ಸಾಕಷ್ಟು ಲಾಭ ಗಳಿಸುತ್ತಾರೆ ಎಂದು ಗಮನ ಸೆಳೆದಿದ್ದಾರೆ. ಮಾಲೀಕರು ಎದುರಿಸಬಹುದಾದ ಏಕೈಕ ನಷ್ಟವೆಂದರೆ ರಾಹುಲ್ 2024ರ ಋತುವಿನ ನಂತರ ಫ್ರಾಂಚೈಸಿ ತೊರೆಯಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.

400 ಕೋಟಿ ಲಾಭ ಪಡೀತಿದ್ರು ನಿಮಗೇನು ಸಮಸ್ಯೆ ಎಂದ ವೀರು

ಇವರೆಲ್ಲರೂ ಉದ್ಯಮಿಗಳು. ಲಾಭ-ನಷ್ಟವನ್ನು ಮಾತ್ರ ಅರ್ಥಮಾಡಿಕೊಳ್ಳುತ್ತಾರೆ. ಆದರೆ ಇಲ್ಲಿ ಅವರ ಉದ್ಯಮಕ್ಕೆ ಯಾವುದೇ ನಷ್ಟವಾಗಿಲ್ಲ. ನೀವು 400 ಕೋಟಿ ಲಾಭ ಗಳಿಸುತ್ತಿದ್ದರೂ ನಿಮಗೆ ತೊಂದರೆ ಏನು? ನನ್ನ ಪ್ರಕಾರ, ತಂಡದ ವಿಚಾರಗಳಿಗೆ ಸಂಬಂಧಿಸಿ ತಲೆ ಹಾಕಬಾರದ ವಿಚಾರ ಇದಾಗಿದೆ. ನೀವಿದನ್ನು ನೋಡಿಕೊಳ್ಳಲೆಂದೇ ತಂಡವೊಂದಿದೆ. ಏನೇ ಆದರೂ ಸಹ ತಪ್ಪದೇ ಲಾಭ ಗಳಿಸುತ್ತೀರಿ. ಹಾಗಾಗಿ ನಿಮ್ಮ ಕೆಲಸ ಏನಿದ್ದರೂ ಆಟಗಾರರನ್ನು ಪ್ರೇರೇಪಿಸುವುದಷ್ಟೇ ಎಂದಿದ್ದಾರೆ.

ನಿಮಗೆ ನಷ್ಟ ಎಂಬುದನ್ನು ಮರೆಯಬೇಡಿ ಎಂದ ಸೆಹ್ವಾಗ್

ಇಂತಹ ವರ್ತನೆಗಳಿಂದ ನಿಮಗೆ ಸಾಕಷ್ಟು ಪರಿಣಾಮಗಳು ಬೀರುತ್ತವೆ. ಆಟಗಾರರ ಮನಸ್ಥಿತಿಯೂ ಬದಲಾಗುತ್ತದೆ. ಐಪಿಎಲ್​​ನಲ್ಲಿರುವುದು ಇದೊಂದೇ ಫ್ರಾಂಚೈಸಿಯಲ್ಲ ಎಂದು ಆಟಗಾರ ಭಾವಿಸುತ್ತಾನೆ. ಈ ತಂಡವನ್ನು ತೊರೆದರೆ, ಬೇರೆ ಯಾರಾದರೂ ನನ್ನನ್ನು ತೆಗೆದುಕೊಳ್ಳುತ್ತಾರೆ ಎಂಬ ವಿಶ್ವಾಸ ಅವರಲ್ಲಿರುತ್ತದೆ. ಆದರೆ ನೀವು ಒಬ್ಬ ಆಟಗಾರನನ್ನು ಕಳೆದುಕೊಂಡರೆ ನಿಮ್ಮ ಗೆಲ್ಲುವ ಸಾಧ್ಯತೆಗಳು ಶೂನ್ಯ. ನಾನು ಪಂಜಾಬ್ ತೊರೆದಾಗ ಆ ತಂಡ ಐದನೇ ಸ್ಥಾನದಲ್ಲಿತ್ತು. ಆ ಬಳಿಕ ಬೇರೆ ಯಾವುದೇ ಋತುಗಳಲ್ಲಿ 5ನೇ ಸ್ಥಾನ ಪಡೆದಿಲ್ಲ ಎಂದು ಅವರು ಹೇಳಿದ್ದಾರೆ.

ಗೋಯೆಂಕಾ ಅವರು ಕೆಎಲ್ ರಾಹುಲ್ ಮೇಲೆ ರೇಗಾಡಿದ ದೃಶ್ಯವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ಬೆನ್ನಲ್ಲೇ ಕೆಎಲ್ ರಾಹುಲ್ ನಾಯಕತ್ವ ತೊರೆದಿದ್ದಾರೆ ಎಂದು ವರದಿಗಳು ಹುಟ್ಟಿಕೊಂಡವು. ಅವರು ಪ್ರಸಕ್ತ ಸಾಲಿನ ಐಪಿಎಲ್ ಬೆನ್ನಲ್ಲೇ ಫ್ರಾಂಚೈಸಿ ತೊರೆಯಲಿದ್ದಾರೆ ಎಂಬ ಸುದ್ದಿಗಳು ಹರಿದಾಡಿವು. ಹೀಗಾಗಿ ಅವರು ಐಪಿಎಲ್ ಬಳಿಕ ಅವರು ತಂಡದಲ್ಲಿ ಉಳಿಯುತ್ತಾರಾ ಇಲ್ಲವೇ ಹೊರ ಹೋಗುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

IPL_Entry_Point