ಕನ್ನಡ ಸುದ್ದಿ  /  ಕ್ರಿಕೆಟ್  /  ಹೇಗಿದ್ದರೂ ಇದು ನನ್ನ ಕೊನೆಯದು; ಕೆಕೆಆರ್ ಸಹಾಯಕ ಕೋಚ್​ ಜತೆಗಿನ ರೋಹಿತ್​ ಶರ್ಮಾ ಮೊಂಡು ಸಂಭಾಷಣೆ ವೈರಲ್

ಹೇಗಿದ್ದರೂ ಇದು ನನ್ನ ಕೊನೆಯದು; ಕೆಕೆಆರ್ ಸಹಾಯಕ ಕೋಚ್​ ಜತೆಗಿನ ರೋಹಿತ್​ ಶರ್ಮಾ ಮೊಂಡು ಸಂಭಾಷಣೆ ವೈರಲ್

Rohit Sharma: ಕೆಕೆಆರ್ ತಂಡದ ಸಹಾಯಕ ಕೋಚ್​ ಅಭಿಷೇಕ್ ನಾಯರ್ ಅವರೊಂದಿಗೆ ಹೆಸರೇಳದೆ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ವಿರುದ್ಧ ಅಸಮಾಧಾನ ತೋಡಿಕೊಳ್ಳುತ್ತಿರುವ ರೋಹಿತ್​ ಶರ್ಮಾ ಅವರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೇಗಿದ್ದರೂ ಇದು ನನ್ನ ಕೊನೆಯದು; ಕೆಕೆಆರ್ ಸಹಾಯಕ ಕೋಚ್​ ಜತೆಗಿನ ರೋಹಿತ್​ ಶರ್ಮಾ ಮೊಂಡು ಸಂಭಾಷಣೆ ವೈರಲ್
ಹೇಗಿದ್ದರೂ ಇದು ನನ್ನ ಕೊನೆಯದು; ಕೆಕೆಆರ್ ಸಹಾಯಕ ಕೋಚ್​ ಜತೆಗಿನ ರೋಹಿತ್​ ಶರ್ಮಾ ಮೊಂಡು ಸಂಭಾಷಣೆ ವೈರಲ್

ಮುಂಬೈ ಇಂಡಿಯನ್ಸ್ 2024ರ ಐಪಿಎಲ್​ನಲ್ಲಿ ಪ್ಲೇಆಫ್​ ರೇಸ್​ನಿಂದ ಹೊರಬಿದ್ದ ಮೊದಲ ತಂಡವಾಗಿದೆ. ಉಳಿದ ಎರಡು ಪಂದ್ಯಗಳು ಸಹ ಔಪಚಾರಿಕವಷ್ಟೆ. ಇದರ ನಡುವೆ ಮೇ 11ರಂದು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿರುವ ವೇಳೆ ಮುಂಬೈ ಮಾಜಿ ನಾಯಕ ರೋಹಿತ್​ ಶರ್ಮಾ, ಇದೇ ಕೊನೆಯ ಐಪಿಎಲ್ ಎನ್ನುವ ಸುಳಿವು ಕೊಟ್ಟಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ. ಕೆಕೆಆರ್​​ ಸಹಾಯಕ ಕೋಚ್​​ಗೆ ರೋಹಿತ್​​ ಹೇಳುತ್ತಿರುವ ವಿಡಿಯೋ ಇದಾಗಿದೆ.

ಟ್ರೆಂಡಿಂಗ್​ ಸುದ್ದಿ

ಫ್ರಾಂಚೈಸಿಗೆ 5 ಬಾರಿ ಪ್ರಶಸ್ತಿ ಗೆದ್ದುಕೊಟ್ಟ ರೋಹಿತ್​ ಶರ್ಮಾ ಬದಲಿಗೆ ಹಾರ್ದಿಕ್ ಪಾಂಡ್ಯ ಅವರನ್ನು ನೂತನ ನಾಯಕನಾಗಿ ನೇಮಿಸಿದ ನಂತರ ಫ್ರಾಂಚೈಸಿ ಸಾಕಷ್ಟು ವಿವಾದಗಳಿಗೆ ಗುರಿಯಾಗಿದೆ. ಸ್ವಂತ ಅಭಿಮಾನಿಗಳು ಸಹ ಫ್ರಾಂಚೈಸಿ ನಿರ್ಧಾರಕ್ಕೆ ಅಸಮಾಧಾನಗೊಂಡಿದ್ದರು. ಐಪಿಎಲ್​ ಆರಂಭದಲ್ಲಿ ಕ್ರೀಡಾಂಗಣದಲ್ಲಿ ಅಭಿಮಾನಿಗಳು ಹಾರ್ದಿಕ್​ ವಿರುದ್ಧ ಘೋಷಣೆ ಕೂಗಿದ್ದರು.

ಎಂಐ ಒಂದು ಘಟಕವಾಗಿ ಹೆಜ್ಜೆ ಇಡಲು ವಿಫಲವಾದ ಕಾರಣ ಪ್ಲೇಆಫ್ ರೇಸ್​ನಿಂದ ಹೊರಹಾಕಲ್ಪಟ್ಟ ಮೊದಲ ತಂಡವಾಯಿತು. ಇದರೊಂದಿಗೆ ಈ ಋತುವಿನಲ್ಲಿ ಎಂಐನ ಅಧ್ಯಾಯದ ಅಂತ್ಯವಾಯಿತು. ಆದರೆ ಟೂರ್ನಿ ಮುಕ್ತಾಯದ ಹಂತಕ್ಕೆ ಬಂದರೂ ತಂಡದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ರೋಹಿತ್​ ಮಾತನಾಡಿದ ಸಾಕ್ಷಿಯಾಗಿದೆ. ಕೆಕೆಆರ್​ ಸಹಾಯಕ ಕೋಚ್ ಅಭಿಷೇಕ್ ನಾಯರ್ ಅವರೊಂದಿಗೆ ಫ್ರಾಂಚೈಸಿ ಬಗ್ಗೆ ತಮ್ಮ ಅಸಮಾಧಾನ ಹಾಕಿದ್ದಾರೆ. ಈ ವಿಡಿಯೋ ಕಾಡ್ಗಿಚ್ಚಿನಂತೆ ಹರಡಿದೆ.

ವೈರಲ್ ವಿಡಿಯೋದಲ್ಲಿ ಎಲ್ಲೂ ತಮ್ಮ ಫ್ರಾಂಚೈಸಿ ಹೆಸರನ್ನು ಬಳಸಿದಿದ್ದರೂ ಅವರು ಮಾತುಗಳು ಮುಂಬೈ ಇಂಡಿಯನ್ಸ್ ಬಗ್ಗೆಯೇ ಮಾತನಾಡುತ್ತಿದ್ದಾರೆ ಎಂಬುದನ್ನು ಸೂಚಿಸುತ್ತವೆ. ಕೆಕೆಆರ್​ ಪಂದ್ಯಕ್ಕೂ ಮುನ್ನಾ ದಿನ ಮೈದಾನದಲ್ಲಿ ಅಭಿಷೇಕ್ ನಾಯರ್ ಜೊತೆ ತಮ್ಮ ಬೇಸರವನ್ನು ತೋಡಿಕೊಂಡಿರುವ ರೋಹಿತ್, ಮಾತುಗಳು ಕೇಳಿ ಫ್ಯಾನ್ಸ್​ಗೆ ಆಘಾತವಾಗಿದೆ. ಮುಂಬೈ ಫ್ರಾಂಚೈಸಿ ಏನೆಲ್ಲಾ ನಡೆಯುತ್ತಿದೆ ಎಂಬುದರ ಕುರಿತು ವಿವರಿಸಿದ್ದಾರೆ. ಈ ವಿಡಿಯೋವನ್ನು ಕೆಕೆಆರ್​ ಪೋಸ್ಟ್ ಮಾಡಿ ಡಿಲೀಟ್ ಮಾಡಿದೆ.

ನಾನು ಕಟ್ಟಿದ ದೇವಾಲಯ ಎಂದ ರೋಹಿತ್​ ಶರ್ಮಾ

ಆದರೆ ಅಷ್ಟರಲ್ಲಾಗಲೇ ಕಾಡ್ಗಿಚ್ಚಿನಂತೆ ವಿಡಿಯೋ ವೈರಲ್ ಆಗಿದೆ. ಎಲ್ಲವೂ ಒಂದೊಂದಾಗಿ ಬದಲಾಗುತ್ತಿದೆ. ಆದರೆ, ಇದೆಲ್ಲವೂ ಅವರ ನಿರ್ಧಾರ. ಹಾಗಂತ ನಾನು ಅದರ ಬಗ್ಗೆ ತಲೆಕೆಡಿಸಿಕೊಳ್ಳಲು ಹೋಗುವುದಿಲ್ಲ. ಏನೇ ಆಗಲಿ ಇದು ನನ್ನ ಮನೆ. ಇದು ನಿರ್ಮಿಸಿದ ದೇವಾಲಯ. ಏನೇ ಆಗಲಿ ಇದು ನನ್ನ ಕೊನೆಯದ್ದು ಎಂದು ನಾಯರ್​ಗೆ ರೋಹಿತ್​ ಶರ್ಮಾ ಹೇಳಿರುವುದರೊಂದಿಗೆ ಚಾಟ್ ಮುಗಿಸುವುದನ್ನು ಕಾಣಬಹುದು. ಆದಾಗ್ಯೂ, ಆಡಿಯೋ ಅಸ್ಪಷ್ಟವಾಗಿದೆ. ವಿಡಿಯೋ ಈ ಮುಂದಿದೆ ನೋಡಿ.

ಆರ್​ಸಿಬಿಗೆ ಬನ್ನಿ ಎಂದ ಫ್ಯಾನ್ಸ್

ರೋಹಿತ್​ ಶರ್ಮಾ ಮಾತುಗಳನ್ನು ಕೇಳಿದರೆ ಇದು ಅವರಿಗೆ ಕೊನೆಯ ಸೀಸನ್​ ಎಂಬ ಸುಳಿವು ನೀಡುತ್ತಿದೆ. ಈ ಮಾತುಗಳನ್ನು ಕೇಳಿದ ಅಭಿಮಾನಿಗಳು ಆಘಾತಕ್ಕೆ ಒಳಗಾಗಿದ್ದಾರೆ. ಆರ್​ಸಿಬಿ ಅಭಿಮಾನಿಗಳು, ನೀವು ನಮ್ಮ ತಂಡಕ್ಕೆ ಬಂದು ಬಿಡಿ. ರಾಜನಂತೆ ನೋಡಿಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ನೀವು ಮುಂಬೈ ತಂಡವನ್ನು ಬಿಟ್ಟುಹೋಗುವುದನ್ನು ನೋಡುವುದು ಕಷ್ಟವಾಗುತ್ತದೆ ಎಂದು ಹಿಟ್​ಮ್ಯಾನ್ ಫ್ಯಾನ್ಸ್​ ಬೇಸರ ಹೊರಹಾಕಿದ್ದಾರೆ.

ಇನ್ನೂ ಕೆಲವರು ಆ ತಂಡವನ್ನು ತೊರೆದು ಬೇರೆ ತಂಡಕ್ಕೆ ಸೇರ್ಪಡೆಯಾಗಿ. ಗೌರವ ಸಿಗದ ಜಾಗದಲ್ಲಿ ಯಾವುದೇ ಕಾರಣಕ್ಕೂ ಇರಬೇಡಿ. ಐದು ಟ್ರೋಫಿ ಗೆದ್ದುಕೊಟ್ಟಿದ್ದಾರೆ ಎಂಬ ಕಾಮನ್​ಸೆನ್ಸ್ ಕೂಡ ಅವರಿಗಿಲ್ಲ (ಫ್ರಾಂಚೈಸಿ) ಎಂದು ಕಿಡಿಕಾರಿದ್ದಾರೆ. ಮುಂದಿನ ಐಪಿಎಲ್​ಗೆ ರೋಹಿತ್​, ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಸೇರಿದಂತೆ ಹಲವರು ತಂಡವನ್ನು ತೊರೆಯವ ಸಾಧ್ಯತೆ ಇದೆ.

ಕೆಕೆಆರ್ ಆತಿಥೇಯ ಮುಂಬೈ

ಮುಂಬೈ ಇಂಡಿಯನ್ಸ್ ತಂಡವು ಈಗಾಗಲೇ ಪ್ಲೇ ಆಫ್ ರೇಸ್​​ನಿಂದ ಹೊರಗುಳಿದಿದ್ದು, ಕೋಲ್ಕತ್ತಾದಲ್ಲಿ ನಡೆಯಲಿರುವ ಪಂದ್ಯದಲ್ಲಿ ನೈಟ್ ರೈಡರ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಕೆಕೆಆರ್ ಗೆದ್ದರೆ ನೇರವಾಗಿ ಪ್ಲೇಆಫ್​ ಪ್ರವೇಶಿಸಲಿದೆ.

ಇನ್ನಷ್ಟು ಕ್ರಿಕೆಟ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ.

IPL_Entry_Point