ಕನ್ನಡ ಸುದ್ದಿ  /  ಕ್ರಿಕೆಟ್  /  ಇವರ ಸಂಬಳ ಮೊದಲು ಕಟ್ ಮಾಡಿ; ಐಪಿಎಲ್ ತೊರೆಯುವ ಕ್ರಿಕೆಟಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಸುನಿಲ್ ಗವಾಸ್ಕರ್

ಇವರ ಸಂಬಳ ಮೊದಲು ಕಟ್ ಮಾಡಿ; ಐಪಿಎಲ್ ತೊರೆಯುವ ಕ್ರಿಕೆಟಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಸುನಿಲ್ ಗವಾಸ್ಕರ್

Sunil Gavaskar: ಸಂಪೂರ್ಣ ಐಪಿಎಲ್ ಆಡದೆ ಪ್ಲೇಆಫ್​​ಗೂ ಮುನ್ನ ಟೂರ್ನಿ ತೊರೆಯುವ ಕ್ರಿಕೆಟಿಗರ ವಿರುದ್ಧ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್​ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಸಂಬಳ ಕಡಿತಗೊಳಿಸಿ ದಂಡ ವಿಧಿಸಬೇಕು; ಐಪಿಎಲ್ ಬೇಗ ತೊರೆಯುವ ಕ್ರಿಕೆಟಿಗರ ವಿರುದ್ಧ ಕ್ರಮಕ್ಕೆ ಸುನಿಲ್ ಗವಾಸ್ಕರ್ ಆಗ್ರಹ
ಸಂಬಳ ಕಡಿತಗೊಳಿಸಿ ದಂಡ ವಿಧಿಸಬೇಕು; ಐಪಿಎಲ್ ಬೇಗ ತೊರೆಯುವ ಕ್ರಿಕೆಟಿಗರ ವಿರುದ್ಧ ಕ್ರಮಕ್ಕೆ ಸುನಿಲ್ ಗವಾಸ್ಕರ್ ಆಗ್ರಹ

ಜೂನ್​ 1 ರಿಂದ ಶುರುವಾಗುವ 2024ರ ಟಿ20 ವಿಶ್ವಕಪ್ ಟೂರ್ನಿಗೆ (T20 World Cup 2024) ತಿಂಗಳ ಆರಂಭದಲ್ಲಿ ಇಂಗ್ಲೆಂಡ್ (England Cricket Team) ತನ್ನ ತಂಡ ಪ್ರಕಟಿಸಿತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ವೇಲ್ಸ್ (ECB), ವಿಶ್ವಕಪ್​ಗೂ ಮುನ್ನ ಮೇ 22 ರಿಂದ ನಡೆಯುವ ಪಾಕಿಸ್ತಾನ ವಿರುದ್ಧದ ಟಿ20 ಸರಣಿಗೆ ತವರಿಗೆ ಮರಳುವಂತೆ ಐಪಿಎಲ್​ ಆಡುತ್ತಿರುವ ತಮ್ಮ ಕ್ರಿಕೆಟಿಗರಿಗೆ ಸೂಚಿಸಿದೆ. ಹೀಗಾಗಿ ಐಪಿಎಲ್​ ಪ್ಲೇಆಫ್ ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ. ಆದರೆ ಈ ನಿರ್ಧಾರ ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ (Sunil Gavaskar) ಅವರನ್ನು ಕೆರಳಿಸಿದೆ.

ಟ್ರೆಂಡಿಂಗ್​ ಸುದ್ದಿ

ತಮ್ಮ ರಾಷ್ಟ್ರೀಯ ಕರ್ತವ್ಯಗಳಿಗೆ ಮರಳಲು ಐಪಿಎಲ್ ಟೂರ್ನಿಯನ್ನು ತೊರೆಯುವ ಆಟಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಗೆ (ಬಿಸಿಸಿಐ) ಕರೆ ನೀಡಿದ್ದಾರೆ. ಮೇ 17ರ ನಂತರ ದೊಡ್ಡ ನಷ್ಟವನ್ನು ಅನುಭವಿಸಲಿರುವ ಐಪಿಎಲ್ ಫ್ರಾಂಚೈಸಿಗಳ ಪರವಾಗಿ ತೀರ್ಮಾನಕ್ಕೆ ಬರಲು ಬಿಸಿಸಿಐ ಇಸಿಬಿಯೊಂದಿಗೆ ಸಂಭಾಷಣೆ ನಡೆಸುತ್ತಿದೆ. ಆದರೆ ಇಂಗ್ಲೆಂಡ್ ಆಟಗಾರರ ಯೋಜನೆಗಳ ಬದಲಾವಣೆಯ ಬಗ್ಗೆ ಯಾವುದೇ ಅಧಿಕೃತ ನವೀಕರಣವಿಲ್ಲ.

ಆಟಗಾರರ ವೇತನ ಕಡಿತಗೊಳಿಸಿ ಎಂದ ಸುನಿಲ್ ಗವಾಸ್ಕರ್​​

ಬಹುನಿರೀಕ್ಷಿತ ಟಿ20 ವಿಶ್ವಕಪ್​ ಟೂರ್ನಿಗೆ ತಯಾರಿ ನಡೆಸಲು ಇಂಗ್ಲೆಂಡ್ ಆಟಗಾರರು ತವರು ಸರಣಿಗೆ ತೆರಳುವ ಕುರಿತು ಗವಾಸ್ಕರ್ ಮಿಡ್​ ಡೇ ವೆಬ್​ಸೈಟ್​ಗೆ ಬರೆದರುವ ಅಂಕಣದಲ್ಲಿ ಆಟಗಾರರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಆಯಾ ಐಪಿಎಲ್ ಫ್ರಾಂಚೈಸಿಗಳು ಮತ್ತು ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಂಪೂರ್ಣ ಐಪಿಎಲ್ ಆಡದ ಆಟಗಾರರ ವೇತನವನ್ನು ಕಡಿತಗೊಳಿಸಬೇಕು. ಅಲ್ಲದೆ, ಶೇಕಡಾ 10 ರಷ್ಟು ಬಿಸಿಸಿಐ ದಂಡ ವಿಧಿಸಬೇಕು ಎಂದು ಹೇಳಿದ್ದಾರೆ.

ಆಟಗಾರರು ಎಲ್ಲಕ್ಕಿಂತ ಮೊದಲು ದೇಶವನ್ನು ಆಯ್ಕೆ ಮಾಡುವುದನ್ನು ನಾನು ಬೆಂಬಲಿಸುತ್ತೇನೆ. ಆದರೆ, ಪೂರ್ಣ ಋತುವಿಗೆ ಲಭ್ಯತೆಯ ಬಗ್ಗೆ ತಮ್ಮ ಫ್ರಾಂಚೈಸಿಗಳಿಗೆ ಭರವಸೆ ನೀಡಿದ ನಂತರ ಹೀಗೆ ಮಾಡುವುದು ಸರಿಯಿಲ್ಲ. ಪೂರ್ಣ ಪ್ರಮಾಣದ ಹಣ ಪಾವತಿಸುವ ಫ್ರಾಂಚೈಸಿಗಳನ್ನು ತೀವ್ರ ನಿರಾಸೆಗೊಳಿಸುತ್ತದೆ. ಫ್ರಾಂಚೈಸಿಗಳು ಆಟಗಾರನನ್ನು ಖರೀದಿಸಿದ ಶುಲ್ಕದಿಂದ ಗಣನೀಯ ಮೊತ್ತವನ್ನು ಕಡಿತಗೊಳಿಸಲು ಅನುಮತಿಸಬೇಕು. ಅಲ್ಲದೆ, ಆಯಾ ಕ್ರಿಕೆಟ್ ಮಂಡಳಿಗೆ ಪ್ರತಿ ಆಟಗಾರನು ನೀಡುವ ಶುಲ್ಕದ ಶೇಕಡಾ 10 ರಷ್ಟು ಕಮಿಷನ್ ಕೊಡಬಾರದು ಎಂದು ಹೇಳಿದ್ದಾರೆ.

ಎಲ್ಲಿಯೂ ಕಮಿಷನ್ ಕೊಡಲಾಗುತ್ತಿಲ್ಲ ಎಂದ ದಿಗ್ಗಜ

ಮಂಡಳಿಯು ತನ್ನ ಕೊಟ್ಟ ಮಾತಿನಿಂದ ಹಿಂದೆ ಸರಿದಿದ್ದರೆ ಅವರಿಗೂ ದಂಡ ವಿಧಿಸಬೇಕಾಗುತ್ತದೆ. ಅಂದಹಾಗೆ, ಮಂಡಳಿಗಳಿಗೆ ಶೇ 10 ರಷ್ಟು ಕಮಿಷನ್ ಐಪಿಎಲ್​​ನಲ್ಲಿ ಮಾತ್ರ ನೀಡಲಾಗುತ್ತಿದೆ. ಮತ್ತು ಬೇರೆಲ್ಲಿಯೂ ಇಲ್ಲ. ಆಸ್ಟ್ರೇಲಿಯಾದ ಬಿಗ್​​ ಬ್ಯಾಷ್ ಅಥವಾ ಇಸಿಬಿಯ ದಿ ಹಂಡ್ರೆಡ್, ಕೆರಿಬಿಯನ್ ಪ್ರೀಮಿಯರ್ ಲೀಗ್ ಅಥವಾ ವಿಶ್ವದ ಯಾವುದೇ ಟಿ20 ಲೀಗ್​​ನಲ್ಲೂ ಆಯಾ ಕ್ರಿಕೆಟ್ ಮಂಡಳಿಗಳಿಗೆ ಕಮಿಷನ್ ಕೊಡುತ್ತಿಲ್ಲ. ಬಿಸಿಸಿಐ ತನ್ನ ಔದಾರ್ಯಕ್ಕಾಗಿ ಯಾವುದೇ ಲಾಭ ಪಡೆಯುತ್ತಿೆಯೇ? ಇಲ್ಲ ಎಂದು ಅವರು ಹೇಳಿದ್ದಾರೆ.

IPL_Entry_Point