ಹಾರ್ದಿಕ್ ಪಾಂಡ್ಯ ಕ್ಯಾಪ್ಟನ್ಸಿ ಅಹಂಕಾರದಿಂದ ಕೂಡಿದೆ; ಎಂಐ ನಾಯಕನನ್ನು ಟೀಕಿಸಿದ ಎಬಿ ಡಿವಿಲಿಯರ್ಸ್
AB de Villiers slams Hardik Pandya : ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವವನ್ನು ಎಬಿ ಡಿವಿಲಿಯರ್ಸ್ ಟೀಕಿಸಿದ್ದಾರೆ.
ಐಪಿಎಲ್-2024ರಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು (Mumbai Indians) ಮುನ್ನಡೆಸುತ್ತಿರುವ ಹಾರ್ದಿಕ್ ಪಾಂಡ್ಯ (Hardik Pandya) ಅವರ ನಾಯಕತ್ವದ ಶೈಲಿಯನ್ನು ಟೀಕಿಸಿರುವ ದಕ್ಷಿಣ ಆಫ್ರಿಕಾ ಮಾಜಿ ನಾಯಕ ಎಬಿ ಡಿವಿಲಿಯರ್ಸ್ (Ab de Villiers), ಅಹಂಕಾರ ಕೂಡಿರುವ ಮತ್ತು ಪ್ರಾಮಾಣಿಕತೆಯ ಕೊರತೆಯಿಂದ ಕೂಡಿದೆ ಎಂದು ಜರಿದಿದ್ದಾರೆ. ದೀರ್ಘಾವಧಿಯ ನಾಯಕ ರೋಹಿತ್ ಶರ್ಮಾ (Rohit Shrma) ಅವರಿಂದ ಅಧಿಕಾರ ಪಡೆದುಕೊಂಡ ನಂತರ ಪ್ರಸ್ತುತ ಟೂರ್ನಿಯಲ್ಲಿ ನೀರಸ ಅಭಿಯಾನ ಹೊಂದಿದ್ದಾರೆ.
ಎಂಐ ತನ್ನ 12 ಪಂದ್ಯಗಳಲ್ಲಿ 4 ಗೆಲವು, 8 ಸೋಲು ಕಂಡು ಪ್ಲೇಆಫ್ ಸ್ಪರ್ಧೆಯಿಂದ ನಿರ್ಗಮಿಸಿದ ಮೊದಲ ತಂಡವೆಂಬ ಕುಖ್ಯಾತಿಗೆ ಒಳಗಾಯಿತು. ಪಾಂಡ್ಯ ಟೂರ್ನಿಯುದ್ದಕ್ಕೂ ಅಭಿಮಾನಿಗಳಿಂದ ಸರಿಯಾದ ಬೆಂಬಲ ಪಡೆಯಲು ವಿಫಲರಾದರು. ಈ ಬಗ್ಗೆ ಮಾತಾಡಿದ ಎಬಿಡಿ, ಪಾಂಡ್ಯ ಕ್ಯಾಪ್ಟನ್ಸಿ ಶೈಲಿ ಸಾಕಷ್ಟು ಧೈರ್ಯಶಾಲಿಯಾಗಿದೆ. ಆದರೆ, ಇದು ಒಂದು ರೀತಿಯಲ್ಲಿ ಅಹಂಕಾರದಿಂದಲೂ ಕೂಡಿದೆ ಎಂದು ಟೀಕಿಸಿದ್ದಾರೆ.
ಅದು ನಿಜವೆಂದು ಭಾವಿಸುವುದಿಲ್ಲ ಎಂದ ಎಬಿಡಿ
ಅವರು (ಹಾರ್ದಿಕ್) ಮೈದಾನದಲ್ಲಿ ಹೇಗೆ ನಡೆಯುತ್ತಾರೆ ಎಂಬುದು ಯಾವಾಗಲೂ ನಿಜ ಎಂದು ನಾನು ಭಾವಿಸುವುದಿಲ್ಲ, ಆದರೆ ಅದು ತನ್ನ ನಾಯಕತ್ವದ ಮಾರ್ಗವಾಗಿದೆ ಎಂದು ಅವರು ನಿರ್ಧರಿಸಿದ್ದಾರೆ. ಮೈದಾನದಲ್ಲಿ ಎದುಯುಬ್ಬಿಸಿಕೊಂಡು ಓಡಾಡುವುದು ಪ್ರಾಮಾಣಿಕತೆ ಎಂದು ನಾನು ಭಾವಿಸುವುದಿಲ್ಲ. ಕೂಲ್, ಕಾಮ್ ಆಗಿ ಎದೆಯನ್ನು ಹೊರಹಾಕುತ್ತಾರೆ. ಆದರೆ ನೀವು ಅನುಭವಿ ಆಟಗಾರರ ಜೊತೆ ಮತ್ತು ವಯಸ್ಸಿನಲ್ಲೂ ದೊಡ್ಡವರೊಂದಿಗೆ ಆಡುವ ಉತ್ತಮವಾಗಿ ನಡೆದುಕೊಳ್ಳಬೇಕು ಎಂದು ಹೇಳಿದ್ದಾರೆ.
ಗುಜರಾತ್ ಟೈಟಾನ್ಸ್ ತಂಡದಲ್ಲಿ ನಿಮ್ಮ ನಾಯಕತ್ವ ಚೆನ್ನಾಗಿತ್ತು. ಏಕೆಂದರೆ, ಅಲ್ಲಿ ಬಹುತೇಕರು ಕಿರಿಯರಿದ್ದರು. ಅನಾನುಭವಿ ಆಟಗಾರರು ಅಂತಹ ನಾಯಕತ್ವ ಅನುಸರಿಸಲು ಇಷ್ಟಪಡುತ್ತಾರೆ. ಅಂತಹ ವೇಳೆ ಧೈರ್ಯದ ಅಗತ್ಯವಿಲ್ಲ ಎಂದು ಪಾಂಡ್ಯ ವಿಭಿನ್ನ ವಿಧಾನವನ್ನು ಅಳವಡಿಸಿಕೊಳ್ಳುವುದು ಅನುಕೂಲಕರವೆಂದು ಡಿವಿಲಿಯರ್ಸ್ ಸುಳಿವು ನೀಡಿದ್ದಾರೆ. ಎಬಿಡಿ, ಸೌತ್ ಆಫ್ರಿಕಾ ರಾಷ್ಟ್ರೀಯ ತಂಡದಲ್ಲಿ ಗ್ರೇಮ್ ಸ್ಮಿತ್ ಅವರ ಅಡಿಯಲ್ಲಿ ಆಡಿದ ವೈಯಕ್ತಿಕ ಅನುಭವವನ್ನು ಹಂಚಿಕೊಂಡಿದ್ದಾರೆ.
ಆಗ ನಾನು ಸಾಕಷ್ಟು ಕಲಿತಿದ್ದೆ ಎಂದ ಆರ್ಸಿಬಿ ಮಾಜಿ ಆಟಗಾರ
ಗ್ರೇಮ್ ಸ್ಮಿತ್ ಅಡಿಯಲ್ಲಿ ಆಡಿದ್ದು, ಆಟಗಾರನಾಗಿ ಬೆಳೆಯಲು ಸಾಕಷ್ಟು ನೆರವಾಯಿತು. ನನ್ನ ಮೇಲೆ ಧನಾತ್ಮಕ ಪರಿಣಾಮ ಬೀರಿತು. ಗ್ರೇಮ್ ಸ್ಮಿತ್ ತಂಡದಿಂದ ಹೊರಗಿದ್ದಾಗ ಕೆಲವೊಮ್ಮೆ ನಾನು ಸಾಕಷ್ಟು ಅನುಕರಿಸಿದ್ದೆ. ಸಾಕಷ್ಟು ಕಲಿತೆ. ಆದರೆ ಈಗ ರೋಹಿತ್ ಇದ್ದಾರೆ, ಜಸ್ಪ್ರೀತ್ ಬುಮ್ರಾ ಇದ್ದಾರೆ. ನೀವು ಶಾಂತವಾಗಿರಬೇಕು. ಪಂದ್ಯಗಳನ್ನು ಗೆಲ್ಲುವುದು ಹೇಗೆ ಎಂಬುದರ ಕುರಿತು ಸ್ವಲ್ಪ ಇನ್ಪುಟ್ ನೀಡಿ. ಎದೆಯುಬ್ಬಿಸಿಕೊಂಡು ಹೋಗುವ ಧೈರ್ಯ ಬೇಕಾಗಿಲ್ಲ ಎಂದಿದ್ದಾರೆ.
ನಾನು ಹಾರ್ದಿಕ್ ವಿರುದ್ಧವಾಗಿ ಹೋಗುತ್ತಿಲ್ಲ. ಅವರು ಆಡುವುದನ್ನು ನೋಡುವುದು ನನಗೆ ತುಂಬಾ ಇಷ್ಟ. ನಾನು ಅವರು ತಮ್ಮ ಎದೆಯನ್ನು ಹೊರಗೆ ಹಾಕುವುದನ್ನು ಪ್ರೀತಿಸುತ್ತೇನೆ. ಏಕೆಂದರೆ ನಾನು ಹಾಗೆಯೇ ಇದ್ದೆ. ಬ್ಯಾಟರ್ ಆಗಿ, ಕೆಲವೊಮ್ಮೆ ನೀವು ಅದನ್ನು ಮಾಡಲು ನಕಲು ಮಾಡಲೇಬೇಕು ಎಂದು ನಾನು ನಂಬಿದ್ದೇನೆ ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.