ಹಟಮಾರಿ ಗುಣ, ಎಷ್ಟೇ ಕಷ್ಟವಿದ್ದರೂ ಮತ್ತೊಬ್ಬರ ಸಹಾಯ ಬಯಸುವುದಿಲ್ಲ; ಸಿಂಹ ರಾಶಿಗೆ ಸೇರಿದವರ ಗುಣಲಕ್ಷಣ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಹಟಮಾರಿ ಗುಣ, ಎಷ್ಟೇ ಕಷ್ಟವಿದ್ದರೂ ಮತ್ತೊಬ್ಬರ ಸಹಾಯ ಬಯಸುವುದಿಲ್ಲ; ಸಿಂಹ ರಾಶಿಗೆ ಸೇರಿದವರ ಗುಣಲಕ್ಷಣ

ಹಟಮಾರಿ ಗುಣ, ಎಷ್ಟೇ ಕಷ್ಟವಿದ್ದರೂ ಮತ್ತೊಬ್ಬರ ಸಹಾಯ ಬಯಸುವುದಿಲ್ಲ; ಸಿಂಹ ರಾಶಿಗೆ ಸೇರಿದವರ ಗುಣಲಕ್ಷಣ

Leo: ಜ್ಯೋತಿಷ್ಯಶಾಸ್ತ್ರದ ಪ್ರಕಾರ ಸಿಂಹ ರಾಶಿಯ ಅದಿಪತಿ ಸೂರ್ಯ. ಈ ರಾಶಿಯವರು ಹಟಮಾರಿ ಸ್ವಭಾವದವರು. ಎಷ್ಟೇ ಕಷ್ಟ ಬಂದರೂ ಇವರು ಯಾರ ಬಳಿಯೂ ಸಹಾಯ ಕೇಳದೆ ತಾವೇ ಪೂರ್ಣಗೊಳಿಸುತ್ತಾರೆ. ಸಿಂಹ ರಾಶಿಯವರ ಇನ್ನಷ್ಟು ಗುಣ ಲಕ್ಷಣ ತಿಳಿಯಿರಿ.

ಹಟಮಾರಿ ಗುಣ, ಎಷ್ಟೇ ಕಷ್ಟವಿದ್ದರೂ ಮತ್ತೊಬ್ಬರ ಸಹಾಯ ಬಯಸುವುದಿಲ್ಲ; ಸಿಂಹ ರಾಶಿಗೆ ಸೇರಿದವರ ಗುಣಲಕ್ಷಣ
ಹಟಮಾರಿ ಗುಣ, ಎಷ್ಟೇ ಕಷ್ಟವಿದ್ದರೂ ಮತ್ತೊಬ್ಬರ ಸಹಾಯ ಬಯಸುವುದಿಲ್ಲ; ಸಿಂಹ ರಾಶಿಗೆ ಸೇರಿದವರ ಗುಣಲಕ್ಷಣ

ಜ್ಯೋತಿಷ್ಯಶಾಸ್ತ್ರದಲ್ಲಿ 12 ರಾಶಿಗಳ ಉಲ್ಲೇಖವಿದ್ದು ಒಂದೊಂದು ರಾಶಿಗೂ ಒಂದೊಂದು ಪ್ರಾಮುಖ್ಯತೆ ಇದೆ. ಜನ್ಮದಿನಾಂಕ, ಜನ್ಮ ಸ್ಥಳ, ಗ್ರಹಗತಿಗಳ ಆಧಾರದ ಮೇಲೆ ರಾಶಿಯನ್ನು ನಿರ್ಧರಿಸಲಾಗುತ್ತದೆ. ಒಂದೊಂದು ರಾಶಿಯ ಜನರು ಒಂದೊಂದು ರೀತಿಯ ಸ್ವಭಾವ ಹೊಂದಿರುತ್ತಾರೆ. ಇಲ್ಲಿ ಸಿಂಹ ರಾಶಿಯ ಜನರ ಸ್ವಭಾವದ ಬಗ್ಗೆ ತಿಳಿಸಲಾಗಿದೆ.

ನಾಯಕತ್ವ ಗುಣ ಹೊಂದಿರುವ ವ್ಯಕ್ತಿಗಳು

ಸಿಂಹ ರಾಶಿಯ ಅಧಿಪತಿ ಸೂರ್ಯ. ಸೂರ್ಯನನ್ನು ಆತ್ಮ, ಶಕ್ತಿ ಮತ್ತು ಧೈರ್ಯದ ಅಂಶವೆಂದು ಪರಿಗಣಿಸಲಾಗಿದೆ. ಸಿಂಹ ರಾಶಿಯಲ್ಲಿ ಜನಿಸಿದ ಜನರು ಅನೇಕ ಗುಣಗಳನ್ನು ಹೊಂದಿದ್ದಾರೆ, ಇದರಿಂದ ಈ ಜನರು ಇತರರಿಗಿಂತ ಭಿನ್ನವಾಗಿ ಕಾಣುತ್ತಾರೆ. ಅದೇ ರೀತಿ ಈ ರಾಶಿಗೆ ಸೇರಿದ ಜನರ ದೌರ್ಬಲ್ಯವು ಅವರ ವೈಫಲ್ಯಕ್ಕೆ ಹೆಚ್ಚಾಗಿ ಕಾರಣವಾಗುತ್ತದೆ. 

ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಸಿಂಹ ರಾಶಿಯ ಜನರು ಜನ್ಮತಃ ನಾಯಕತ್ವದ ಗುಣ ಹೊಂದಿರುತ್ತಾರೆ. ಈ ಗುಣದಿಂದಾಗಿ ಜನರು ಅವರತ್ತ ಆಕರ್ಷಿತರಾಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಅವನ ಉತ್ಸಾಹ ಮತ್ತು ಆತ್ಮವಿಶ್ವಾಸವು ಪ್ರತಿಯೊಬ್ಬರೂ ಅವರನ್ನು ನಂಬುವಂತೆ ಮಾಡುತ್ತದೆ. ಸಿಂಹ ರಾಶಿಯ ಜನರು ಉದಾರಿಗಳು. ಕಷ್ಟ ಎಂದು ಬಂದವರಿಗಾಗಿ ಏನೇ ಸಹಾಯ ಮಾಡಲು, ತ್ಯಾಗ ಮಾಡಲು ಸಿದ್ಧರಿರುತ್ತಾರೆ. ತಮ್ಮ ಪ್ರೀತಿ ಪಾತ್ರರ ಬಗ್ಗೆ ಬಹಳ ಕಾಳಜಿ ಹೊಂದಿರುತ್ತಾರೆ.

ಈ ರಾಶಿಯವರು ಹಟಮಾರಿಗಳು, ಈ ಸ್ವಭಾವದಿಂದಲೇ ಅವರು ತಮ್ಮ ಗುರಿಗಳನ್ನು ಸಾಧಿಸುವವರೆಗೆ ವಿಶ್ರಾಂತಿ ಮಾಡುವುದಿಲ್ಲ. ಒಮ್ಮೆ ಅವರು ಏನನ್ನಾದರೂ ಮಾಡಲು ನಿರ್ಧರಿಸಿದರೆ, ಯಾರೂ ಅವರನ್ನು ತಡೆಯಲು ಸಾಧ್ಯವಿಲ್ಲ. ಸಕಾರಾತ್ಮಕ ಮನೋಭಾವದಿಂದಲೇ ಇವರಿಗೆ ಎಲ್ಲಾ ಕಷ್ಟಗಳನ್ನು ಎದುರಿಸುವ ಶಕ್ತಿ ದೊರೆಯುತ್ತದೆ. ಇವರು ಸ್ನೇಹಪರ ಮತ್ತು ಧೈರ್ಯಶಾಲಿಗಳು, ಆದರೆ ಕೆಲವೊಮ್ಮೆ ಭಾವನಾತ್ಮಕವಾಗಿರುತ್ತಾರೆ. ಬಹಳ ಉತ್ಸಾಹಿಗಳಾಗಿರುತ್ತಾರೆ. ಇವರು ಬಹಳ ಪ್ರಾಬಲ್ಯ ಹೊಂದಿರುತ್ತಾರೆ. ಅವಶ್ಯಕತೆ ಇದ್ದಲ್ಲಿ ಮತ್ತೊಬ್ಬರಿಗೆ ಸಲಹೆ ನೀಡುತ್ತಾರೆ. ತಮ್ಮ ಮಾರ್ಗದರ್ಶನದಿಂದ ಇತರರನ್ನು ಸರಿದಾರಿಗೆ ತರುವ ಗುಣಗಳನ್ನು ಹೊಂದಿದ್ದಾರೆ.

ಹಟಮಾರಿ ಸ್ವಭಾವ

ಸಿಂಹ ರಾಶಿಯವರು ಒಮ್ಮೆ ತೆಗೆದುಕೊಂಡ ನಿರ್ಧಾರವನ್ನು ಎಂದಿಗೂ ಬದಲಿಸುವುದಿಲ್ಲ. ಇದು ಕೆಲವೊಮ್ಮೆ ಅವರಿಗೆ ದೌರ್ಬಲ್ಯವಾಗಿ ಪರಿಣಮಿಸುತ್ತದೆ. ಒಮ್ಮೆ ಮಾತನಾಡಲು ಆರಂಭಿಸಿದರೆ ಎದುರಿಗೆ ಇದ್ದವರಿಗೆ ಬೇಸರ ಉಂಟಾಗುವಷ್ಟು ಮಾತನಾಡುತ್ತಾರೆ. ಮತ್ತೊಬ್ಬರಿಗೆ ಸಹಾಯ ಮಾಡುವ ಮೂಲಕ ಈ ರಾಶಿಯವರೇ ಕೆಲವೊಮ್ಮೆ ಕಷ್ಟಕ್ಕೆ ಸಿಲುಕುತ್ತಾರೆ. ಎಷ್ಟೋ ಬಾರಿ ಇವರು ತಾವೇ ಸರಿ ಬೇರೆಯವರು ತಪ್ಪು ಎಂಬ ಭಾವನೆ ಹೊಂದಿರುತ್ತಾರೆ. ಇದೇ ವಿಚಾರವಾಗಿ ಮತ್ತೊಬ್ಬರನ್ನು ಟೀಕಿಸುತ್ತಾರೆ. ಎಷ್ಟೇ ಕಷ್ಟ ಆದರೂ ತಮ್ಮ ಕೆಲಸಕ್ಕೆ ಮತ್ತೊಬ್ಬರ ಸಹಾಯ ಕೇಳದೆ ತಾವೇ ಅದನ್ನು ಪೂರೈಸುತ್ತಾರೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.