ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶೀಘ್ರದಲ್ಲೇ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಶುಕ್ರ; ಸಂಪತ್ತಿನ ಗ್ರಹದ ಜೊತೆ ಈ 3 ರಾಶಿಯವರಿಗಿದೆ ಲಕ್ಷ್ಮೀ ಕಟಾಕ್ಷ

ಶೀಘ್ರದಲ್ಲೇ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಶುಕ್ರ; ಸಂಪತ್ತಿನ ಗ್ರಹದ ಜೊತೆ ಈ 3 ರಾಶಿಯವರಿಗಿದೆ ಲಕ್ಷ್ಮೀ ಕಟಾಕ್ಷ

ಕೆಲವು ದಿನಗಳ ಹಿಂದೆ ಮಿಥುನ ರಾಶಿಯಲ್ಲಿ ಅಸ್ತಂಗತ ಹಂತಕ್ಕೆ ತಲುಪಿದ್ದ ಪ್ರೀತಿ, ಸಂತೋಷ ಮತ್ತು ಸಂಪತ್ತಿನ ಗ್ರಹ ಶುಕ್ರ ಜೂನ್‌ 30ರಂದು ಮತ್ತೆ ಉದಯಿಸಲಿದ್ದಾನೆ. ತನ್ನೊಂದಿಗೆ ವೃಷಭ ಸೇರಿ 3 ರಾಶಿಯವರಿಗೆ ಅದೃಷ್ಟವನ್ನೂ ತರಲಿದ್ದಾನೆ. ಈ ರಾಶಿಯವರಿಗೆ ಲಕ್ಷ್ಮೀ ಅನುಗ್ರಹದಿಂದ ಹಣಕಾಸಿನ ಸ್ಥಿತಿ ಬಲಗೊಳ್ಳಲಿದೆ.

ಶೀಘ್ರದಲ್ಲೇ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಶುಕ್ರ; ಸಂಪತ್ತಿನ ಗ್ರಹದ ಜೊತೆ ಈ 3 ರಾಶಿಯವರಿಗಿದೆ ಲಕ್ಷ್ಮೀ ಕಟಾಕ್ಷ
ಶೀಘ್ರದಲ್ಲೇ ಉದಯಿಸಲಿದ್ದಾನೆ ಅಸ್ತಂಗತ ಹಂತದಲ್ಲಿರುವ ಶುಕ್ರ; ಸಂಪತ್ತಿನ ಗ್ರಹದ ಜೊತೆ ಈ 3 ರಾಶಿಯವರಿಗಿದೆ ಲಕ್ಷ್ಮೀ ಕಟಾಕ್ಷ

ಪ್ರೀತಿ, ಸಂತೋಷ ಮತ್ತು ಸಂಪತ್ತನ್ನು ನೀಡುವ ಶುಕ್ರನು ಪ್ರಸ್ತುತ ಬುಧನ ಸ್ವಂತ ರಾಶಿಯಾದ ಮಿಥುನದಲ್ಲಿ ಅಸ್ತಂಗತ ಹಂತದಲ್ಲಿದ್ದಾನೆ. ಏಪ್ರಿಲ್‌ 25 ರಂದು ಅಸ್ತಂಗತ ಹಂತ ತಲುಪಿದ್ದ ಶುಕ್ರನು ಶೀಘ್ರವೇ ಉದಯಿಸಲಿದ್ದಾನೆ. ಜೂನ್ 30 ರಿಂದ ಜುಲೈ 7 ರವರೆಗೆ ಶುಕ್ರನು ಮಿಥುನ ರಾಶಿಯನ್ನು ತೊರೆದು ಕರ್ಕ ರಾಶಿಗೆ ಪ್ರವೇಶಿಸುತ್ತಾನೆ.

ಮಿಥುನ ರಾಶಿಯಲ್ಲಿ ಶುಕ್ರನ ಉದಯದಿಂದಾಗಿ , ಕೆಲವು ರಾಶಿಗಳ ಜನರು ತಮ್ಮ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶುಕ್ರನು ಮಂಗಳಕರವಾಗಿದ್ದರೆ ಲಕ್ಷ್ಮಿ ದೇವಿಯು ಸಹ ಆಶೀರ್ವದಿಸುತ್ತಾಳೆ. ಶುಕ್ರನು ರಾಹು, ಕೇತು ಅಥವಾ ಮಂಗಳದಂತಹ ದುಷ್ಟ ಗ್ರಹಗಳೊಂದಿಗೆ ಸಂಬಂಧ ಹೊಂದಿದ್ದರೆ ಸವಾಲುಗಳು ಮತ್ತು ಅಡೆತಡೆಗಳು ಉದ್ಭವಿಸುತ್ತವೆ. ಮಂಗಳನೊಂದಿಗೆ ಇದ್ದರೆ ಕಿರಿಕಿರಿ ಮತ್ತು ಆಕ್ರಮಣಕಾರಿ ನಡವಳಿಕೆ ಇರುತ್ತದೆ.

ಶುಕ್ರನು ಬಲಿಷ್ಠನಾಗಿದ್ದರೆ, ಜನರು ತೃಪ್ತರಾಗುತ್ತಾರೆ, ಉತ್ತಮ ಆರೋಗ್ಯ ಮತ್ತು ಬುದ್ಧಿವಂತಿಕೆ ಹೆಚ್ಚಾಗುತ್ತದೆ. ಈ ರಾಶಿಯ ಜನರು ವಿವಿಧ ಸೌಕರ್ಯಗಳನ್ನು ಅನುಭವಿಸುತ್ತಾ ಸಂತೋಷದಿಂದ ಬದುಕುತ್ತಾರೆ. ವಿವಿಧ ಮೂಲಗಳಿಂದ ಹಣ ಗಳಿಸುವಲ್ಲಿ ಯಶಸ್ವಿಯಾಗುವರು. ಜೀವನಶೈಲಿ ಸುಧಾರಿಸುತ್ತದೆ. ಸುಮಾರು 66 ದಿನಗಳ ನಂತರ, ಶುಕ್ರ ಅಸ್ತಂಗತ ಹಂತದಿಂದ ಹೊರ ಬರಲಿದ್ದಾನೆ. ಈ ಸಮಯದಲ್ಲಿ ಶುಕ್ರನ ಉದಯವು ಕೆಲವರ ಜೀವನವನ್ನು ಆರ್ಥಿಕವಾಗಿ ಬಲಪಡಿಸುತ್ತದೆ.

ವೃಷಭ ರಾಶಿ

ಮಿಥುನ ರಾಶಿಯಲ್ಲಿ ಶುಕ್ರ ಉದಯವಾಗುವುದು ವೃಷಭ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ. ವರ್ಷಗಟ್ಟಲೇ ಸ್ಥಗಿತಗೊಂಡಿದ್ದ ಕೆಲಸಗಳು ಈಗ ಆರಂಭವಾಗುತ್ತವೆ. ವಿವಿಧ ಮೂಲಗಳಿಂದ ಆದಾಯ ಒದಗಿಬರುತ್ತದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯುತ ವಾತಾವರಣವಿರುತ್ತದೆ. ಶುಕ್ರನ ಉತ್ತಮ ಪ್ರಭಾವದಿಂದಾಗಿ ವೃತ್ತಿಯಲ್ಲಿಯೂ ಬಡ್ತಿ ದೊರೆಯುವ ಸಾಧ್ಯತೆ ಇದೆ. ವೃತ್ತಿ ಜೀವನದಲ್ಲಿ ಹೊಸ ಯಶಸ್ಸು ಸಿಗಲಿದೆ. ವಿದೇಶ ಪ್ರಯಾಣ ಅನುಕೂಲಕರವಾಗಿದೆ. ಭೌತಿಕ ಸೌಲಭ್ಯಗಳು ಹೆಚ್ಚುತ್ತವೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ಹಣಕಾಸಿನ ಪ್ರಯತ್ನಗಳು ಯಶಸ್ಸನ್ನು ತರುತ್ತದೆ.

ಕನ್ಯಾ ರಾಶಿ

ಶುಕ್ರನು ಉದಯವು ಕನ್ಯಾ ರಾಶಿಯವರಿಗೆ ತುಂಬಾ ಒಳ್ಳೆಯದು . ಈ ರಾಶಿಯವರಿಗೆ ಕೂಡಾ ಆದಾಯ ಹೆಚ್ಚಲಿದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸಲಿದೆ. ಮನೆಯಲ್ಲಿ ಸಂತೋಷ ಮತ್ತು ಶಾಂತಿಯ ವಾತಾವರಣ ಇರುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರು ಸಿಹಿ ಸುದ್ದಿ ಕೇಳಿದ್ದಾರೆ. ಸ್ನೇಹಿತರ ಸಹಾಯದಿಂದ ಜೀವನದಲ್ಲಿ ಕಷ್ಟಗಳು ದೂರವಾಗುತ್ತವೆ. ಸಮಾಜದಲ್ಲಿ ಕೀರ್ತಿ, ಪ್ರತಿಷ್ಠೆ ಹೆಚ್ಚುತ್ತದೆ. ಆದಾಯದ ಹೊಸ ಮಾರ್ಗಗಳು ಸೃಷ್ಟಿಯಾಗಲಿವೆ. ಮನಸ್ಸು ಅಧ್ಯಾತ್ಮದತ್ತ ಸಾಗುತ್ತದೆ. ಹೆಚ್ಚಿನ ಸಮಯವನ್ನು ದೈವಿಕ ಸೇವಾ ಕಾರ್ಯಗಳಲ್ಲಿ ಕಳೆಯುವಿರಿ.

ತುಲಾ ರಾಶಿ

ಮಿಥುನ ರಾಶಿಯಲ್ಲಿ ಉದಯಿಸುತ್ತಿರುವ ಶುಕ್ರನು ತುಲಾ ರಾಶಿಯವರಿಗೆ ಲಾಭ ತರುತ್ತಾನೆ . ಹಣಕಾಸಿನ ಸಮಸ್ಯೆಗಳು ಕ್ರಮೇಣ ಮಾಯವಾಗುತ್ತವೆ. ನಿಮ್ಮ ಹಿರಿಯ ಅಧಿಕಾರಿ ಮತ್ತು ಸಹೋದ್ಯೋಗಿಗಳ ಬೆಂಬಲದೊಂದಿಗೆ ನೀವು ನಿಮ್ಮ ವೃತ್ತಿಜೀವನದ ಎಲ್ಲಾ ಕಾರ್ಯಗಳನ್ನು ಉತ್ತಮವಾಗಿ ಪೂರ್ಣಗೊಳಿಸುತ್ತೀರಿ. ವಿದೇಶಕ್ಕೆ ಹೋಗುವ ಅವಕಾಶವೂ ಇದೆ. ಆರೋಗ್ಯದ ಬಗ್ಗೆ ಗಮನ ಕೊಡಬೇಕು. ಶುಕ್ರನ ಪ್ರಭಾವದಿಂದ ಪ್ರೇಮಿಗಳ ನಡುವಿನ ಪ್ರೀತಿ ಇನ್ನಷ್ಟು ಹೆಚ್ಚಾಗುತ್ತದೆ. ಇತರರ ನಡುವೆ ಪ್ರಭಾವಶಾಲಿಗಳು ಎನಿಸಿಕೊಳ್ಳಲಿದ್ದೀರಿ.

ಜಾತಕದಲ್ಲಿ ಶುಕ್ರನನ್ನು ಬಲಪಡಿಸುವ ಪರಿಹಾರಗಳು

ಶುಕ್ರನ ಕೃಪೆ ಬೇಕೆಂದರೆ ಹೆಚ್ಚಾಗಿ ಬಿಳಿ ಅಥವಾ ತಿಳಿ ಬಣ್ಣದ ಬಟ್ಟೆಗಳನ್ನು ಧರಿಸುವುದು ಉತ್ತಮ. 6 ಮುಖದ ರುದ್ರಾಕ್ಷಿ ಧರಿಸಿದರೆ ಶುಕ್ರನ ಆಶೀರ್ವಾದ ಸಿಗುತ್ತದೆ. ಇದರೊಂದಿಗೆ ಶುಕ್ರವಾರ ಉಪವಾಸ ಆಚರಿಸಬೇಕು. ಮೊಸರು, ಅಕ್ಕಿ, ಬಾರ್ಲಿ, ಸುಗಂಧ ದ್ರವ್ಯ, ಬೆಳ್ಳಿಯನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ಪಡೆಯಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.