ಮುಖದ ಗಲ್ಲದಲ್ಲಿ ಸಣ್ಣ ಗುಳಿ ಇದ್ದರೆ ನೀವು ಭಾರಿ ಅದೃಷ್ಟವಂತರು; ಸಂಪತ್ತು ಹೆಚ್ಚಳ ಸೇರಿ ಇಷ್ಟೆಲ್ಲಾ ಲಾಭಗಳಿವೆ
ಅಪರೂಪದಲ್ಲಿ ಅಪರೂಪ ಎಂಬಂತೆ ಕೆಲವರಿಗೆ ಮುಖದ ಗಲ್ಲದಲ್ಲಿ ಸಣ್ಣ ಗುಳಿಗಳಿರುತ್ತವೆ. ಈ ರೀತಿ ಗಲ್ಲದ ಗುಳಿಗಳನ್ನು ಹೊಂದಿರುವವರಿಗೆ ಆರ್ಥಿಕ ಸಮಸ್ಯೆಯೇ ಇರುವುದಿಲ್ಲ. ವಿವಿಧ ಮೂಲಗಳಿಂದ ಹಣವನ್ನು ಗಳಿಸುತ್ತಾರೆ. ಇವರು ಭಾರಿ ಅದೃಷ್ಟವಂತರಾಗಿರುತ್ತಾರೆ. ಏನೆಲ್ಲಾ ಗುಣಗಳಿವೆ ಹಾಗೂ ಎಷ್ಟೆಲ್ಲಾ ಪ್ರಯೋಜನಗಳು ಇವರಿಗಿದೆ ಎಂಬುದನ್ನು ತಿಳಿಯೋಣ.
ಗುರು ಗ್ರಹವು ಉಸಿರಾಟಕ್ಕೆ ಸಂಬಂಧಪಟ್ಟ ಗ್ರಹವಾಗಿದೆ. ಆದ್ದರಿಂದ ಇದು ಮೂಗನ್ನು ಸಹ ಪ್ರತಿನಿಧಿಸುತ್ತದೆ. ಗಲ್ಲವು ಶನಿಗೆ ಸಂಬಂಧಿಸಿದಾಗಿದೆ. ಆದ್ದರಿಂದ ಮೂಗು ಮತ್ತು ಗಲ್ಲ ಎರಡು ನೋಡಲು ಸುಂದರವಾಗಿದ್ದಲ್ಲಿ ಅವರ ಜೀವನದಲ್ಲಿ ಅನೇಕ ಒಳ್ಳೆಯ ಕೆಲಸ ಕಾರ್ಯಗಳು ನಡೆಯುತ್ತವೆ. ಇವರ ಜೀವನದಲ್ಲಿ ಅನೇಕ ಒಳ್ಳೆಯ ಶುಭಫಲಗಳು ದೊರೆಯುತ್ತವೆ. ಗಲ್ಲದಿಂದ ಒಬ್ಬ ವ್ಯಕ್ತಿಯ ಗುಣ ಧರ್ಮವನ್ನು ನಿರ್ಧರಿಸಬಹುದಾಗಿದೆ. ಸಾಮಾನ್ಯವಾಗಿ ಕೆನ್ನೆಯಲ್ಲಿ ಗುಳಿ ಬೀಳುವುದನ್ನು ನೀವು ನೋಡಿದ್ದೀರಿ. ಆದರೆ ಸೂಕ್ಷ್ಮವಾಗಿ ಗಮನಿಸಿದರೆ ಗಲ್ಲದಲ್ಲಿ ಸಣ್ಣ ಪ್ರಮಾಣದ ಗುಳಿಯನ್ನು ಕಾಣಬಹುದು. ಇಂತಹ ವ್ಯಕ್ತಿಗಳ ಜೀವನದಲ್ಲಿ ಹಣಕಾಸಿನ ತೊಂದರೆ ಕಂಡುಬರುವುದಿಲ್ಲ. ಒಂದಕ್ಕಿಂತಲೂ ಹೆಚ್ಚಿನ ರೀತಿಯಲ್ಲಿ ಹಣ ಸಂಪಾದನೆ ಮಾಡುತ್ತಾರೆ. ಇವರ ಮನಸ್ಸಿನಲ್ಲಿ ಸ್ವಾರ್ಥದ ಭಾವನೆ ಇರುವುದಿಲ್ಲ. ತಾವು ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಬೇರೆಯವರ ಒಳಿತಿಗಾಗಿ ಖರ್ಚು ಮಾಡುತ್ತಾರೆ. ಜನಸೇವೆ ಮಾಡುವ ಸಲುವಾಗಿ ಸಂಸ್ಥೆಗಳನ್ನು ಆರಂಭಿಸುತ್ತಾರೆ.
ಇವರಿಗೆ ಇಷ್ಟವಾದಂತಹ ಒಂದಕ್ಕಿಂತಲೂ ಹೆಚ್ಚು ವಾಹನಗಳನ್ನು ಕೊಳ್ಳುತ್ತಾರೆ. ಕಷ್ಟವೆನಿಸಿದರು ಸ್ವಂತ ಮನೆಯನ್ನು ಕೊಳ್ಳುತ್ತಾರೆ. ಉತ್ತಮ ಆದಾಯವಿದ್ದರೂ ಸಹ ಅಲ್ಪ ಪ್ರಮಾಣದ ಸಾಲ ಇವರ ಬಳಿ ಇರುತ್ತದೆ. ತಾವು ಕಷ್ಟದಲ್ಲಿದ್ದಾಗ ಯಾರಿಗೂ ಸಹಾಯವನ್ನು ಮಾಡುವುದಿಲ್ಲ. ಕುಟುಂಬದ ಹಿರಿಯರ ಹೆಸರಿನಲ್ಲಿ ಆಶ್ರಮದಲ್ಲಿ ಅಥವಾ ಧಾರ್ಮಿಕ ಕೇಂದ್ರದಲ್ಲಿ ಅನ್ನದಾನದ ವ್ಯವಸ್ಥೆಯನ್ನು ಮಾಡುತ್ತಾರೆ.
ಇವರ ಮಾತಿನಲ್ಲಿ ನೇರ ಮತ್ತು ನಿಷ್ಠುರದ ಮನಸ್ಥಿತಿ ಇರುತ್ತದೆ. ಆದರೆ ಕೆಲಸ ಕಾರ್ಯಗಳಲ್ಲಿ ಯಾವುದೇ ಲೋಪವನ್ನು ಮಾಡುವುದಿಲ್ಲ. ಅದೃಷ್ಟದಿಂದ ಉದ್ಯೋಗದಲ್ಲಿ ಇವರಿಗೆ ವಿರೋಧಿಗಳ ತೊಂದರೆ ಇರುವುದಿಲ್ಲ. ಇವರ ಆರೋಗ್ಯದಲ್ಲಿ ತೊಂದರೆ ಇರುವುದಿಲ್ಲ. ವ್ಯಾಪಾರ ವ್ಯವಹಾರವಿದ್ದಲ್ಲಿ ಬೇರೆಯವರಿಗೆ ಯಾವುದೇ ತೊಂದರೆಯಾಗದಂತೆ ಆದಾಯವನ್ನು ಗಳಿಸುತ್ತಾರೆ. ಬಾಳ ಸಂಗಾತಿಯನ್ನು ವಿಶ್ವಾಸ ಮತ್ತು ಗೌರವದಿಂದ ನಡೆಸಿಕೊಳ್ಳುವರು. ಮಕ್ಕಳ ಜೀವನವನ್ನು ರೂಪಿಸುವಲ್ಲಿ ಹೆಚ್ಚು ಪ್ರಯತ್ನ ಪಡುತ್ತಾರೆ.
ಮುಖದಲ್ಲಿ ಗಲ್ಲ ಮೃದುವಾಗಿ ದುಂಡಾಗಿ ಇದ್ದವರ ವ್ಯಕ್ತಿ ಮತ್ತು ಶುಭ ಫಲಗಳು ಹೇಗಿರುತ್ತವೆ
ಗಲ್ಲವೂ ಮೃದುವಾಗಿ ದುಂಡಾಗಿ ಇದ್ದರೆ ಅವರ ಜೀವನದಲ್ಲಿ ನಿರೀಕ್ಷಿತ ಕೆಲಸ ಕಾರ್ಯಗಳು ದೊರೆಯುತ್ತವೆ. ಇವರು ಭಾಗ್ಯಶಾಲಿಯಾಗಿ ಜೀವನ ನಡೆಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಇವರು ಸುಖವಾದ ಜೀವನವನ್ನು ನಡೆಸುತ್ತಾರೆ. ಬಾಲ್ಯದಲ್ಲಿ ಇವರಿಗೆ ನಾಯಕತ್ವದ ಗುಣವು ಇರುತ್ತದೆ. ಕಷ್ಟಪಟ್ಟು ದುಡಿಯುವುದು ಇವರಿಗೆ ಇಷ್ಟವಾಗದ ವಿಚಾರ. ಸರಳವಾದ ಆದರೆ ಉತ್ತಮ ಆದಾಯ ದೊರೆಯುವ ಕೆಲಸ ಕಾರ್ಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇವರಿಗೆ ಶುಚಿಯಾದ ಮತ್ತು ರುಚಿಯಾದ ಆಹಾರ ಇಷ್ಟವೆನಿಸುತ್ತದೆ. ಸಣ್ಣಪುಟ್ಟ ವಿಚಾರಗಳಿಗೂ ಇವರು ಬೇರೆಯವರನ್ನು ಅವಲಂಬಿಸುತ್ತಾರೆ. ತಮ್ಮ ಬಿಡುವಿನ ಸಮಯದಲ್ಲಿಯೂ ಕೆಲಸದಲ್ಲಿ ನಿರತರಾಗಿರುವಂತೆ, ಎಲ್ಲರಿಗೂ ತೋರುವಂತೆ ನಡೆದುಕೊಳ್ಳುತ್ತಾರೆ.
ಆಡಂಬರದ ಜೀವನ ಇಷ್ಟವಾಗುವುದಿಲ್ಲ. ಆದರೆ ವೈಭವದ ಜೀವನಕ್ಕೆ ಮಾರುಹೋಗುತ್ತಾರೆ. ಕಷ್ಟದಲ್ಲಿ ಇದ್ದವರಿಗೆ ನೀಡಿದ ಹಣವನ್ನು ಪ್ರಾಯಾಸವೆನಿಸಿದರು ಮರಳಿ ಪಡೆಯುತ್ತಾರೆ. ಇವರ ಜೀವನದಲ್ಲಿ ಅಪಜಯಕ್ಕೆ ಸ್ಥಳವಿರುವುದಿಲ್ಲ. ಇವರನ್ನು ಕುಟುಂಬದ ಸದಸ್ಯರು ಬೆಂಬಲಿಸುತ್ತಾರೆ. ಸ್ನೇಹಿತರೊಂದಿಗೆ ಪ್ರವಾಸಕ್ಕೆ ತೆರಳುವುದು ಇವರ ಒಂದು ಹವ್ಯಾಸವಾಗಿರುತ್ತದೆ. ವಂಶದ ಆಸ್ತಿಯಲ್ಲಿ ಇವರಿಗೆ ಹೆಚ್ಚಿನ ಪಾಲು ದೊರೆಯುತ್ತದೆ. ಸೋದರ ಸೋದರಿಯ ಜೀವನದಲ್ಲಿ ಇವರ ಅವಶ್ಯಕತೆ ಬಹಳಷ್ಟಿರುತ್ತದೆ. ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಪ್ರಯತ್ನ ಪಡುವುದಿಲ್ಲ. ವಿದ್ಯಾರ್ಜನೆಯಲ್ಲಿ ಅಲ್ಪತೃಪ್ತಿ, ದುರಾಸೆ ಇರುವುದಿಲ್ಲ.
ಬೇರೆಯವರಿಗೆ ಸಿಗಬೇಕಾದ ಅವಕಾಶಗಳನ್ನು ಬಳುವಳಿಯಾಗಿ ಪಡೆಯುತ್ತಾರೆ. ಕಷ್ಟಪಟ್ಟು ಓದುವ ವಿಷಯಗಳನ್ನು ಆಯ್ಕೆ ಮಾಡುವುದಿಲ್ಲ. ಚಿಂತೆ ಮಾಡುವುದೆಂದರೆ ಇವರಿಗೆ ಬೇಸರ. ಆದ್ದರಿಂದ ಚಿಂತೆಯು ಇವರಿಂದ ದೂರವೇ ಉಳಿಯುತ್ತದೆ. ಹಣಕಾಸಿನ ವಿಚಾರದಲ್ಲಿ ಎಚ್ಚರಿಕೆಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತಾರೆ. ಆದಾಯಕ್ಕೆ ತಕ್ಕಂತಹ ಖರ್ಚು ವೆಚ್ಚಗಳಿದ್ದರೂ ಗಂಭೀರತೆ ಇವರಲ್ಲಿ ಇರುವುದಿಲ್ಲ. ಕುಟುಂಬದ ಹಿರಿಯರು ಒಪ್ಪಿದ ವ್ಯಕ್ತಿಯೊಡನೆ ವಿವಾಹವಾಗುತ್ತಾರೆ. ಸ್ತ್ರೀಯರಾಗಲಿ ಪುರುಷರಾಗಲಿ ತಮ್ಮ ಬಾಳ ಸಂಗಾತಿಯ ಮೇಲೆ ಅಧಿಕಾರ ಚಲಾಯಿಸುತ್ತಾರೆ.
ಗಮನಿಸಿ: ಇದು ಪ್ರಚಲಿತದಲ್ಲಿರುವ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದಷ್ಟೇ ಪ್ರಕಟಿಸಲಾಗಿದೆ.