ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Horoscope Today: ದುಬಾರಿ ವಸ್ತುಗಳಿಗಾಗಿ ಹಣ ಖರ್ಚು, ದೂರದ ಸಂಬಂಧದಲ್ಲಿ ವಿವಾಹ ನಿಶ್ಚಯ; ಮೇ 2ರ ರಾಶಿಫಲ

Horoscope Today: ದುಬಾರಿ ವಸ್ತುಗಳಿಗಾಗಿ ಹಣ ಖರ್ಚು, ದೂರದ ಸಂಬಂಧದಲ್ಲಿ ವಿವಾಹ ನಿಶ್ಚಯ; ಮೇ 2ರ ರಾಶಿಫಲ

2 ಮೇ 2024: ಪ್ರತಿಯೊಂದು ರಾಶಿಗೂ ಅದರದ್ದೇ ಆದ ಅಧಿಪತಿಗಳಿರುತ್ತಾರೆ. ಪಾಪ-ಪುಣ್ಯಗಳಿಗೆ ಅನುಸಾರವಾಗಿ ಗ್ರಹಗತಿಗಳು ಫಲಾಫಲಗಳನ್ನು ನೀಡುತ್ತವೆ. ಧನಸ್ಸು, ಮಕರ, ಕುಂಭ, ಮೀನ ರಾಶಿಯವರಿಗೆ ಇಂದು ಏನು ಫಲ? ಇಂದಿನ ದಿನಭವಿಷ್ಯ ಇಲ್ಲಿದೆ. (2nd May 2024 2024 Daily Horoscope).

ಮೇ 2ರ ರಾಶಿಫಲ
ಮೇ 2ರ ರಾಶಿಫಲ

ಇಂದಿನ ರಾಶಿ ಭವಿಷ್ಯ: ನಾಳೆ ಏನಾಗುವುದೋ ಬಲ್ಲವರು ಯಾರು' ಎನ್ನುವುದು ತತ್ವಶಾಸ್ತ್ರದ ದೊಡ್ಡ ಮಾತು. ಜನಪ್ರಿಯ ಭಕ್ತಿಗೀತೆಯ ಸಾಲೂ ಹೌದು. ಎಷ್ಟೋ ಜನರು ದಿನ ಆರಂಭಿಸುವ ಮೊದಲು, ಏನಾದರೂ ಮಹತ್ವದ ಕೆಲಸಗಳನ್ನು ಆರಂಭಿಸುವ ಮೊದಲು 'ದಿನ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಅಂಥವರಿಗೆ ಕೈ ದೀವಿಗೆಯಾಗುವ ಬರಹ ಇದು. ಜ್ಯೋತಿಷ್ಯ ಶಾಸ್ತ್ರವನ್ನು ಸಾಂಪ್ರದಾಯಿಕವಾಗಿ ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಪ್ರತಿದಿನ ಅಚ್ಚುಕಟ್ಟಾಗಿ ಎಲ್ಲ ರಾಶಿಗಳ ಭವಿಷ್ಯವನ್ನು ಶ್ರದ್ಧೆಯಿಂದ ಬರೆಯುತ್ತಾರೆ. ಈ ಮಾತನ್ನು ಒತ್ತಿ ಹೇಳಲು ಕಾರಣವಿದೆ. ಇದು ಜ್ಯೋತಿಷಿಯೇ ಬರೆಯುವ ರಾಶಿ ಭವಿಷ್ಯ. ನಿಮ್ಮ ನಂಬಿಕೆಗಳನ್ನು ನಾವು ಗೌರವಿಸುತ್ತೇವೆ.(2nd May 2024 Daily Horoscope).

ಇಂದಿನ ಪಂಚಾಂಗ

ಶ್ರೀ ಕ್ರೋಧಿನಾಮ ಸಂವತ್ಸರ-ಉತ್ತರಾಯಣ-ವಸಂತ ಋತು-ಚೈತ್ರ ಮಾಸ-ಕೃಷ್ಣಪಕ್ಷ-ಗುರುವಾರ

ತಿಥಿ: ನವಮಿ ರಾತ್ರಿ 10.35 ರವರೆಗೂ ಇದ್ದು ನಂತರ ದಶಮಿ ಆರಂಭವಾಗುತ್ತದೆ.

ನಕ್ಷತ್ರ : ಧನಿಷ್ಠ ನಕ್ಷತ್ರವು ರಾತ್ರಿ 10.55 ರವರೆಗೂ ಇದ್ದು ನಂತರ ಶತಭಿಷ ನಕ್ಷತ್ರ ಆರಂಭವಾಗುತ್ತದೆ.

ಸೂರ್ಯೋದಯ: ಬೆಳಗ್ಗೆ 05.58

ಸೂರ್ಯಾಸ್ತ: ಸಂಜೆ 06.34

ರಾಹುಕಾಲ: 01.54 ರಿಂದ 03.28

ರಾಶಿಫಲ

ಧನಸ್ಸು

ಆತುರದ ನಿರ್ಧಾರವು ಕುಟುಂಬದಲ್ಲಿ ಬೇಸರ ಉಂಟು ಮಾಡುತ್ತದೆ. ಉದ್ಯೋಗದಲ್ಲಿ ಒರಟು ವರ್ತನೆಯ ಕಾರಣ ಸಂದಿಗ್ಧತೆ ಉಂಟಾಗುತ್ತದೆ. ದಾಂಪತ್ಯದಲ್ಲಿ ವಾದ ವಿವಾದ ಎದುರಾಗುತ್ತದೆ. ವ್ಯಾಪಾರ ವ್ಯವಹಾರದಲ್ಲಿ ದುಡುಕದೆ ಆಲೋಚಿಸಿ ಮುಂದಿನ ತೀರ್ಮಾನ ಕೈಗೊಳ್ಳಿರಿ. ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ತಂದೆಯವರ ಸಹಾಯ ದೊರೆಯುತ್ತದೆ. ದೂರದ ಸಂಬಂಧದಲ್ಲಿ ನಿಮ್ಮ ವಿವಾಹ ಆಗಲಿದೆ. ಮಾನಸಿಕವಾಗಿ ಸದೃಢಗೊಳ್ಳಲು ಧ್ಯಾನ ಯೋಗದ ಮಾರ್ಗ ಅನುಸರಿಸುವಿರಿ. ಮನೆಯನ್ನು ಅಲಂಕೃತಗೊಳಿಸಲು ದುಬಾರಿ ವಸ್ತುಗಳನ್ನು ಕೊಳ್ಳುವಿರಿ.

ಪರಿಹಾರ : ಕುಟುಂಬದ ಹಿರಿಯರಿಗೆ ಬೆಳ್ಳಿಯ ವಸ್ತುವನ್ನು ಉಡುಗೊರೆಯಾಗಿ ನೀಡಿ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 7

ಅದೃಷ್ಟದ ದಿಕ್ಕು : ಪಶ್ಚಿಮ

ಅದೃಷ್ಟದ ಬಣ್ಣ: ನೀಲಿ ಮಿಶ್ರಿತ ಬಿಳಿ

ಮಕರ

ಕುಟುಂಬದಲ್ಲಿ ಸ್ನೇಹ ಮತ್ತು ಸಂಭ್ರಮದ ವಾತಾವರಣೆ ಇರುತ್ತದೆ. ಸ್ವಂತ ಪ್ರತಿಭೆಯ ಕಾರಣ ಪ್ರಖ್ಯಾತ ಸಂಸ್ಥೆಯಲ್ಲಿ ಉದ್ಯೋಗ ದೊರಕುತ್ತದೆ. ಆರೋಗ್ಯವನ್ನು ಸುಧಾರಿಸಿ ನೆಮ್ಮದಿಯಿಂದ ಬಾಳುವಿರಿ. ದೃಢವಾದ ನಿರ್ಧಾರದಿಂದ ವಾಸಸ್ಥಳವನ್ನು ಬದಲಿಸುವಿರಿ. ವ್ಯಾಪಾರ ವ್ಯವಹಾರದಲ್ಲಿ ಒಳ್ಳೆಯ ವರಮಾನ ದೊರೆಯುತ್ತದೆ. ಹಣಕಾಸಿನ ಯೋಜನೆಗಳಲ್ಲಿ ಹಣವನ್ನು ಹೂಡುವಿರಿ. ವಿದ್ಯಾರ್ಥಿಗಳು ಉನ್ನತ ಅಧ್ಯಯನಕ್ಕಾಗಿ ವಿದೇಶಕ್ಕೆ ತೆರಳುತ್ತಾರೆ. ಪ್ರೀತಿಪಾತ್ರರ ಜೊತೆ ಪಾಲುದಾರಿಕೆಯ ವ್ಯಾಪಾರವನ್ನು ಆರಂಭಿಸುವಿರಿ. ನೇರವಾದ ನಡೆ ನುಡಿ ಬಂಧುವರ್ಗದಲ್ಲಿ ಕಿರಿಕಿರಿ ಉಂಟುಮಾಡುತ್ತದೆ. ಉದ್ಯೋಗದಲ್ಲಿ ಅಚ್ಚರಿಯ ಬದಲಾವಣೆಯೊಂದು ಘಟಿಸಲಿದೆ.

ಪರಿಹಾರ : ಜೇನು ಸೇವಿಸಿ ನೀರನ್ನು ಕುಡಿದ ನಂತರ ದಿನದ ಕೆಲಸವನ್ನು ಆರಂಭಿಸಿರಿ.

ಅದೃಷ್ಟದ ಸಂಖ್ಯೆ : 2

ಅದೃಷ್ಟದ ದಿಕ್ಕು : ಈಶಾನ್ಯ

ಅದೃಷ್ಟದ ಬಣ್ಣ: ಬಿಳಿ

ಕುಂಭ

ಕುಟುಂಬದ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಇರುವುದಿಲ್ಲಉದ್ಯೋಗದಲ್ಲಿಆರೋಗ್ಯ ಪೂರ್ಣ ವಾತಾವರಣ ಇರುತ್ತದೆ. ಹೊಸ ಉದ್ಯೋಗದ ಅವಕಾಶ ದೊರೆಯಲಿದೆ. ಕೆಲಸದ ನಡುವೆ ಆರೋಗ್ಯದ ಬಗ್ಗೆ ಗಮನ ನೀಡಲು ಸಾಧ್ಯವಾಗದು. ಅನಾವಶ್ಯಕ ಖರ್ಚು ವೆಚ್ಚದ ಕಾರಣ ಹಣದ ಕೊರತೆ ಎದುರಾಗುತ್ತದೆ. ವಿದ್ಯಾರ್ಥಿಗಳು ಮೌನದಿಂದ ಕೆಲಸ ಸಾಧಿಸುತ್ತಾರೆ. ವಂಶಾನುಗತವಾಗಿ ಬಂದ ಆಸ್ತಿಯ ಪ್ರಕರಣದಲ್ಲಿ ಜಯ ಲಭಿಸುತ್ತದೆ. ಅಕಸ್ಮಿಕವಾಗಿ ದೊರೆಯುವ ಹಣ, ಸಂತಸಕ್ಕೆ ಕಾರಣವಾಗಲಿದೆ. ವಿದ್ಯಾರ್ಥಿಗಳು ಬಿಡುವಿನ ಸಮಯದಲ್ಲಿ ಉದ್ಯೋಗದಲ್ಲಿ ನಿರತರಾಗುತ್ತಾರೆ. ಪಾಲುದಾರಿಕೆಯ ವ್ಯಾಪಾರ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸ್ವಂತ ಕೆಲಸ ಕಾರ್ಯಗಳಲ್ಲಿ ಆಸಕ್ತಿ ಕಡಿಮೆಯಾಗುತ್ತದೆ..

ಪರಿಹಾರ : ಪುಟ್ಟ ಮಕ್ಕಳಿಗೆ ಬೆಣ್ಣೆ ನೀಡಿ ಇಂದಿನ ಕೆಲಸವನ್ನು ಆರಂಬಿಸಿ.

ಅದೃಷ್ಟದ ಸಂಖ್ಯೆ : 5

ಅದೃಷ್ಟದ ದಿಕ್ಕು : ಪೂರ್ವ

ಅದೃಷ್ಟದ ಬಣ್ಣ: ಆಕಾಶ ನೀಲಿ

ಮೀನ

ಒಮ್ಮತದ ಕೊರತೆಯ ಕಾರಣ ಕುಟುಂಬದ ಕೆಲಸದಲ್ಲಿ ಹಿನ್ನಡೆ ಉಂಟಾಗುತ್ತದೆ. ಉದ್ಯೋಗದಲ್ಲಿ ಆತುರ ಪಡದೆ ಜಾಗರೂಕತೆಯಿಂದ ವರ್ತಿಸಿ. ವ್ಯಾಪಾರ ವ್ಯವಹಾರದಲ್ಲಿ ಉತ್ತಮ ಲಾಭ ಗಳಿಸುವಿರಿ. ವಿದ್ಯಾರ್ಥಿಗಳ ಮನದಾಸೆಗಳು ಪೂರೈಸಲ್ಪಡುತ್ತವೆ. ಹಿರಿಯರ ಪ್ರಯತ್ನದ ಫಲವಾಗಿ ಕುಟುಂಬದ ನೆಮ್ಮದಿ ಮರು ಕಳಿಸುತ್ತದೆ. ಸಂಗಾತಿಯ ಜೊತೆ ಸಂತೋಷದ ಜೀವನ ಇರುತ್ತದೆ. ಕೋಪಕ್ಕೆ ಕಡಿವಾಣ ಹಾಕಿ. ಸಹನೆಯಿಂದ ವರ್ತಿಸಿ. ಅವಿವಾಹಿತರಿಗೆ ವಿವಾಹ ಯೋಗವಿದೆ. ಹೊಸ ಆಭರಣಗಳನ್ನು ಕೊಳ್ಳುವಿರಿ. ಬೇಸರ ಕಳೆಯಲು ಮನರಂಜನಾ ಸ್ಥಳಕ್ಕೆ ಪ್ರವಾಸ ಏರ್ಪಡಿಸುವಿರಿ. ಮಕ್ಕಳ ಸಂತಸದ ಕ್ಷಣಗಳಲ್ಲಿ ಪಾಲ್ಗೊಳ್ಳುವಿರಿ. ಆರೋಗ್ಯದ ಬಗ್ಗೆ ಅಸಡ್ಡೆ ತೋರದಿರಿ.

ಪರಿಹಾರ : ಕೈ ಅಥವಾ ಕಾಲಿನಲ್ಲಿ ಕಪ್ಪು ದಾರವನ್ನು ಧರಿಸುವದರಿಂದ ಶುಭವಿರುತ್ತದೆ..

ಅದೃಷ್ಟದ ಸಂಖ್ಯೆ : 8

ಅದೃಷ್ಟದ ದಿಕ್ಕು : ನೈರುತ್ಯ

ಅದೃಷ್ಟದ ಬಣ್ಣ : ನೀಲಿ

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).