2025ರ ಮೊದಲ ಹಬ್ಬ ಮಕರ ಸಂಕ್ರಾಂತಿ ಯಾವಾಗ? ಹಬ್ಬಕ್ಕೆ ಊರಿಗೆ ಹೋಗುವ ಆಸೆ ಇದ್ದರೆ ಈಗಲೇ ಪ್ಲಾನ್ ಮಾಡಿ, ದುಬಾರಿ ಟಿಕೆಟ್ ವೆಚ್ಚ ತಪ್ಪಿಸಿ
ಮಕರ ಸಂಕ್ರಾಂತಿ 2025: ಇನ್ನು ಕೆಲವೇ ದಿನಗಳಲ್ಲಿ ಹಳೆಯ ವರ್ಷ ಮುಗಿದು ಹೊಸ ವರ್ಷವನ್ನು ಸ್ವಾಗತಿಸಲಿದ್ದೇವೆ. ಮಕರ ಸಂಕ್ರಾಂತಿ ಹೊಸ ವರ್ಷದ ಮೊದಲ ಹಬ್ಬ. 2025 ರ ಸಂಕ್ರಾಂತಿ ಹಬ್ಬದ ದಿನಾಂಕವನ್ನು ತಿಳಿಯೋಣ. ಇದರ ಜೊತೆಗೆ ಹಬ್ಬಕ್ಕೆ ಊರಿಗೆ ಹೋಗುವ ಪ್ಲಾನ್ ಮಾಡುತ್ತಿದ್ದರೆ ಟಿಕೆಟ್ ಈಗಲೇ ಬುಕ್ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ತಿಳಿಯಿರಿ.
ಹಿಂದೂ ಧರ್ಮದಲ್ಲಿ ಮಕರ ಸಂಕ್ರಾಂತಿಗೆ ವಿಶೇಷ ಮಹತ್ವವಿದೆ. ಶಾಸ್ತ್ರಗಳ ಪ್ರಕಾರ ಹನ್ನೆರಡು ರಾಶಿಗಳ ಚಕ್ರದ ಭಾಗವಾಗಿ ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದಾಗ ಮಕರ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಗುತ್ತದೆ. ಪ್ರದೇಶವನ್ನು ಅವಲಂಬಿಸಿ ಈ ಹಬ್ಬವನ್ನು ಸರ್ಕತ್, ಲೋಹ್ರಾ, ತೆಹ್ರಿ, ಪೊಂಗಲ್ ಇತ್ಯಾದಿ ಹೆಸರುಗಳಿಂದ ಆಚರಿಸಲಾಗುತ್ತದೆ. ಹೊಸ ವರ್ಷದ ಆರಂಭದಲ್ಲಿ ಬರುವ ಹಬ್ಬವೇ ಸಂಕ್ರಾಂತಿ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಜನರು ಈ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಸೂರ್ಯ ಮಕರ ರಾಶಿಯಲ್ಲಿದ್ದಾಗ ಎಳ್ಳು ತಿನ್ನುವುದು ಒಳ್ಳೆಯದು. ಈ ದಿನ ಸ್ನಾನ ಮತ್ತು ದಾನಕ್ಕೂ ವಿಶೇಷ ಪ್ರಾಮುಖ್ಯತೆ ಇದೆ. ಮಕರ ಸಂಕ್ರಾಂತಿಯಂದು ಜನರು ಪವಿತ್ರ ನದಿಗಳಲ್ಲಿ ಸ್ನಾನ ಮಾಡುತ್ತಾರೆ.
ಮಕರ ಸಂಕ್ರಾಂತಿಯ ದಿನ ದಾನ ಮಾಡುವುದು ಕೂಡ ಮಂಗಳಕರ. ಮಕರ ಸಂಕ್ರಾಂತಿಯಂದು ದಾನ ಮಾಡುವುದರಿಂದ ಅನೇಕ ಪಟ್ಟು ಹೆಚ್ಚಿನ ಫಲಿತಾಂಶ ಬರುತ್ತದೆ ಎಂದು ನಂಬಲಾಗಿದೆ. ಮಕರ ಸಂಕ್ರಾಂತಿಯಂದು, ಸೂರ್ಯನು ತನ್ನ ಮಗನಾದ ಶನಿಗ್ರಹವನ್ನು ಭೇಟಿಯಾಗುತ್ತಾನೆ. ಈ ದಿನ ಶುಕ್ರನೂ ಉದಯಿಸುತ್ತಾನೆ. ಅಂದಿನಿಂದ ಶುಭ ಕಾರ್ಯಗಳು ಪ್ರಾರಂಭವಾಗುತ್ತವೆ.
ಮಕರ ರಾಶಿಯಲ್ಲಿ ಸೂರ್ಯೋದಯವಾದ ತಕ್ಷಣ ಸೂರ್ಯದೇವನು ಕೆಳಗಿಳಿದು ದೇವತೆಗಳಿಗೆ ಹಗಲು ಮತ್ತು ರಾಕ್ಷಸರಿಗೆ ರಾತ್ರಿಯನ್ನು ಪ್ರಾರಂಭಿಸುತ್ತಾನೆ. ಮಾಘ ಮಾಸವು ಕರ್ಮಗಳ ಅಂತ್ಯದೊಂದಿಗೆ ಪ್ರಾರಂಭವಾಗುತ್ತದೆ. ಮಕರ ಸಂಕ್ರಾಂತಿ ಹಬ್ಬದ ದಿನಾಂಕವು ಒಂದು ದಿನದ ವ್ಯತ್ಯಾಸದೊಂದಿಗೆ ಬರುತ್ತದೆ. ಕೆಲವೊಮ್ಮೆ ಇದನ್ನು ಜನವರಿ 15 ರಂದು ಆಚರಿಸಲಾಗುತ್ತದೆ ಮತ್ತು ಕೆಲವೊಮ್ಮೆ ಇದನ್ನು ಜನವರಿ 14 ರಂದು ಆಚರಿಸಲಾಗುತ್ತದೆ. ಮುಂದಿನ ಹೊಸ ವರ್ಷದಲ್ಲಿ ಅಂದರೆ 2025 ರಲ್ಲಿ ಸಂಕ್ರಾಂತಿ ಹಬ್ಬ ಯಾವಾಗ ಬರುತ್ತವೆ ಎಂಬುದನ್ನು ನೋಡೋಣ.
2025ರ ಮಕರ ಸಂಕ್ರಾಂತಿ ಹಬ್ಬ ಯಾವಾಗ?
2025 ರಲ್ಲಿ ಮಕರ ಸಂಕ್ರಾಂತಿ ದಿನಾಂಕ: 2025 ಜನವರಿ 14ರ ಮಂಗಳವಾರ
ಮಕರ ಸಂಕ್ರಾಂತಿ ಪುಣ್ಯಕಾಲ - 09:03 AM ನಿಂದ 05:46 PM
ಅವಧಿ - 08 ಗಂಟೆಗಳು 42 ನಿಮಿಷಗಳು
ಮಕರ ಸಂಕ್ರಾಂತಿ ಮಹಾ ಪುಣ್ಯ ಕಾಲ - 09:03 AM ರಿಂದ 10:48 AM
ಅವಧಿ - 01 ಗಂಟೆ 45 ನಿಮಿಷಗಳು
ಮಕರ ಸಂಕ್ರಾಂತಿ ಕ್ಷಣ - 09:03 AM
ಎಳ್ಳು ತಿನ್ನುವುದು ಒಳ್ಳೆಯದು
ಸೂರ್ಯನು ಮಕರ ರಾಶಿಗೆ ಪ್ರವೇಶಿಸಿದ ಸಂದರ್ಭದಲ್ಲಿ ಸ್ನಾನದ ನಂತರ ಮೊಸರು ಮತ್ತು ಎಳ್ಳು ತಿನ್ನುವುದು ಹಾಗೂ ಶುಭಕಾಲದಲ್ಲಿ ದಾನ ಮಾಡುವುದು ಮಂಗಳಕರವಾಗಿರುತ್ತದೆ. ಶುಭ ಮುಹೂರ್ತದಲ್ಲಿ ಸ್ನಾನ ಮಾಡಿ ಬಳೆ, ಎಳ್ಳು, ಸಿಹಿತಿಂಡಿ, ಕಿಚಿಡಿ ಪದಾರ್ಥಗಳು, ಚಳಿಗಾಲದ ಹೊದಿಕೆ ಅಥವಾ ಬಟ್ಟೆಗಳನ್ನು ದಾನ ಮಾಡಲಾಗುತ್ತದೆ. ನಂತರ ಎಳ್ಳು ಹೋಮ ಮಾಡುವುದರಿಂದ ಮನೆಯಲ್ಲಿ ಸುಖ-ಸಮೃದ್ಧಿ ನೆಲೆಸುತ್ತದೆ. ಸಂಕ್ರಾಂತಿಯಿಂದ ಹವಾಮಾನದಲ್ಲಿ ಬದಲಾವಣೆಗಳು ಸಣ್ಣದಾಗಿ ಪ್ರಾರಂಭವಾಗುತ್ತವೆ. ದೇಹವು ಅವುಗಳನ್ನು ಸಹಿಸಿಕೊಳ್ಳಲು ಎಳ್ಳು ಬೀಜಗಳನ್ನು ತಿನ್ನಲು ಸೂಚಿಸಲಾಗುತ್ತದೆ.
ಮಕರ ಸಂಕ್ರಾಂತಿಯಂದು ಈ ಕೆಲಸಗಳನ್ನು ಮಾಡಿ
ನೀರು, ಕೆಂಪು ಹೂವುಗಳು, ಹೂವುಗಳು, ಬಟ್ಟೆಗಳು, ಗೋಧಿ, ಅಕ್ಷತೆ, ವೀಳ್ಯದೆಲೆಗಳು ಇತ್ಯಾದಿಗಳನ್ನು ಮಕರ ಸಂಕ್ರಾಂತಿಯಂದು ಅರ್ಘ್ಯದ ಸಮಯದಲ್ಲಿ ಸೂರ್ಯನಿಗೆ ಅರ್ಪಿಸಲಾಗುತ್ತದೆ. ಪೂಜೆಯ ನಂತರ ಜನರು ಬಡವರಿಗೆ ಅಥವಾ ನಿರ್ಗತಿಕರಿಗೆ ದಾನ ಮಾಡುತ್ತಾರೆ. ಮಕರ ಸಂಕ್ರಾಂತಿಯ ದಿನದಂದು ಕಿಚಿಡಿಗೆ ವಿಶೇಷ ಮಹತ್ವವಿದೆ.
ಸಂಕ್ರಾಂತಿಗಾಗಿ ಊರಿಗೆ ಹೋಗುವ ಪ್ಲಾನ್ ಮಾಡುತ್ತಿದ್ದರೆ ಬಸ್, ರೈಲು ಟಿಕೆಟ್ ಮುಂಚಿತವಾಗಿ ಬುಕ್ ಮಾಡಿ
ಸಾಮಾನ್ಯವಾಗಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಾಗಿರುತ್ತದೆ. ಇದನ್ನೇ ಬಂಡವಾಳವನ್ನಾಗಿ ಮಾಡಿಕೊಳ್ಳುವ ಖಾಸಗಿ ಬಸ್ ನವರು ದುಪ್ಪಟ್ಟು ದರಗಳು ಮಾಡುತ್ತಾರೆ. 500 ರೂಪಾಯಿ ಇರುವ ಟಿಕೆಟ್ ದರಕ್ಕೆ ಹಬ್ಬದ ವೇಳೆ 2000 ರೂಪಾಯಿಗೂ ಅಧಿಕ ವಸೂಲಿ ಮಾಡುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹ ಅಧಿಕ ವೆಚ್ಚಗಳನ್ನು ತಪ್ಪಿಸಬೇಕೆಂದರೆ ನೀವು ನಿಮ್ಮ ಊರಿಗೆ ಹೋಗಲು ಕೆಎಸ್ ಆರ್ ಟಿಸಿ ಸೇರಿದಂತೆ ಯಾವುದೇ ಪ್ರಯಾಣಕ್ಕೆ ಕೆಲವು ದಿನಗಳಿಗಿಂತ ಮೊದಲೇ ಟಿಕೆಟ್ ಬುಕ್ ಮಾಡಿಕೊಂಡರೆ ವೆಚ್ಚ ಕಡಿಮೆ ಮಾಡಬಹುದು. ಹಬ್ಬಗಳ ಸಂದರ್ಭದಲ್ಲಿ ಕೆಎಸ್ ಆರ್ ಟಿಸಿಯಿಂದ ಹೆಚ್ಚುವರಿ ಬಸ್ ಗಳ ವ್ಯವಸ್ಥೆ ಮಾಡಲಾಗುತ್ತದೆ. ರೈಲ್ವೆ ಕೂಡ ಹೆಚ್ಚುವರಿಯಾಗಿ ವಿಶೇಷ ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತದೆ.