ಚಳಿಗಾಲದಲ್ಲಿ ಅಸ್ತಮಾ ಅಪಾಯಕಾರಿ; ಉಸಿರಾಟ ಸಮಸ್ಯೆ ಇದ್ದರೆ ಮನೆಯ ಒಳಗೆ-ಹೊರಗೆ ಈ ಮುಂಜಾಗ್ರತೆಯಲ್ಲಿರಿ
ಚಳಿಗಾಲದ ಶೀತ ವಾತಾವರಣ ಉಸಿರಾಟದ ಸಮಸ್ಯೆ ಹೆಚ್ಚಿಸುತ್ತದೆ. ಹೀಗಾಗಿ ಅಸ್ತಮಾ ಬಾಧಿಸುವ ಸಾಧ್ಯತೆ ಹೆಚ್ಚು. ಅಸ್ತಮಾ ರೋಗಿಗಳು ಚಳಿ ಸಮಯದಲ್ಲಿ ಹೆಚ್ಚು ಜಾಗರೂಕರಾಗಿರಬೇಕು. ಈ ಸಲಹೆಗಳು ಮತ್ತು ಮುಂಜಾಗ್ರತಾ ಕ್ರಮಗಳನ್ನು ಪಾಲಿಸಿದರೆ, ಉಸಿರಾಟ ಪ್ರಕ್ರಿಯೆ ಸುಗಮಗೊಳಿಸಬಹುದು.
ಚಳಿಗಾಲದಲ್ಲಿ ಕೆಲವು ರೋಗಗಳು ಬಾಧಿಸುವ ಸಾಧ್ಯತೆ ಹೆಚ್ಚು. ಹೆಚ್ಚು ಚಳಿಯು ಅಸ್ತಮಾ ರೋಗಿಗಳ ಮೇಲೂ ಪರಿಣಾಮ ಬೀರುತ್ತದೆ. ದೀರ್ಘಕಾಲದ ಉಸಿರಾಟದ ಸ್ಥಿತಿಯಾದ ಅಸ್ತಮಾ, ಪ್ರಪಂಚದಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುತ್ತದೆ. ಚಳಿಗಾಲ ಬಂತೆಂದರೆ ಈ ಸವಾಲು ದುಪ್ಪಟ್ಟು. ತಾಪಮಾನ ಕಡಿಮೆಯಾದಂತೆ ರೋಗಲಕ್ಷಣ ಕೂಡಾ ಬಾದಲಾಗುತ್ತದೆ. ಶೀತ ಗಾಳಿ, ಅಲರ್ಜಿ ಮತ್ತು ಉಸಿರಾಟದ ಸೋಂಕುಗಳಿಂದ ರೋಗ ಲಕ್ಷಣ ಉಲ್ಬಣಗೊಳ್ಳುತ್ತವೆ. ಚಳಿ, ಶೀತ ಹೆಚ್ಚಿರುವ ಸಮಯದಲ್ಲಿ ಹದಗೆಡುತ್ತಿರುವ ರೋಗಲಕ್ಷಣಗಳಿಗೆ ಕಾರಣವಾಗುವ ಅಂಶಗಳು ಮತ್ತು ಅಸ್ತಮಾ ಉಲ್ಬಣಗೊಳ್ಳುವುದನ್ನು ತಡೆಯಲು ಏನೆಲ್ಲಾ ಮಾಡಬಹುದು ಎಂಬುದನ್ನು ತಿಳಿಯೋಣ.
ಚಳಿಗಾಲದ ಶೀತ, ಶುಷ್ಕ ಗಾಳಿಯು ಉಸಿರಾಟದ ಸಮಸ್ಯೆ ಹೆಚ್ಚಿಸುತ್ತದೆ. ಅಸ್ತಮಾ ದಾಳಿಯನ್ನು ಪ್ರಚೋದಿಸಿ ಮತ್ತು ಉಸಿರಾಟವನ್ನು ಕಷ್ಟಕರವಾಗಿಸುತ್ತದೆ. ಹೀಗಾಗಿ ಅಸ್ತಮಾ ರೋಗಿಗಳು ಹೆಚ್ಚು ಜಾಗರೂಕರಾಗಿರಬೇಕು. ಅಸ್ತಮಾ ಇರುವವರ ಮೇಲೆ ಪರಿಣಾಮ ಬೀರುವ ಕೆಲವು ವಿಧಾನಗಳು ಈ ಕೆಳಗಿನಂತಿವೆ.
ಶೀತ ಗಾಳಿ ಮತ್ತು ಶುಷ್ಕತೆ
ಶೀತ ಅಥವಾ ಶುಷ್ಕ ಗಾಳಿಯು ಉಸಿರಾಟ ವ್ಯವಸ್ಥೆ ಮೇಲೆ ಪರಿಣಾಮ ಬೀರಬಹುದು. ಇದರಿಂದಾಗಿ ಶ್ವಾಸನಾಳಗಳು ಸಂಕುಚಿತಗೊಳ್ಳುತ್ತವೆ. ಇದು ಉಸಿರಾಟವನ್ನು ಕಷ್ಟಕರವಾಗಿಸಿ ಅಸ್ತಮಾಗೆ ಕಾರಣವಾಗಬಹುದು. ಶೀತ ವಾತಾವರಣದಲ್ಲಿ ಹೊರಾಂಗಣ ಚಟುವಟಿಕೆಗಳಲ್ಲಿ ತೊಡಗಿರುವ ವ್ಯಕ್ತಿಗಳು ಈ ಅನುಭವ ಪಡೆದಿರುತ್ತಾರೆ.
ಒಳಾಂಗಣ ಅಲರ್ಜಿನ್‌ಗಳು
ಚಳಿಗಾಲದಲ್ಲಿ ಜನರು ಸಾಮಾನ್ಯವಾಗಿ ಮನೆಯ ಒಳಗೆ ಹೆಚ್ಚು ಸಮಯ ಕಳೆಯುತ್ತಾರೆ. ಇದು ಧೂಳು, ಸಾಕುಪ್ರಾಣಿಗಳ ಡ್ಯಾಂಡರ್ ಮತ್ತು ಒಳಾಂಗಣ ವಾಯು ಮಾಲಿನ್ಯದಂತಹ ಒಳಾಂಗಣ ಅಲರ್ಜಿನ್‌ಗಳನ್ನು ಹೆಚ್ಚಿಸುತ್ತದೆ. ಈ ಅಲರ್ಜಿನ್‌ಗಳು ಅಸ್ತಮಾ ರೋಗಲಕ್ಷಣಗಳನ್ನು ಪ್ರಚೋದಿಸಬಹುದು.
ಉಸಿರಾಟದ ಸೋಂಕು
ಜ್ವರ ಮತ್ತು ಶೀತಕ್ಕೆ ಚಳಿಗಾಲವೆಂದರೆ ಪ್ರೀತಿ. ಸಾಮಾನ್ಯ ಶೀತ ಅಥವಾ ವೈರಲ್ ಸೋಂಕುಗಳು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಅಸ್ತಮಾ ನಿಯಂತ್ರಣವನ್ನು ಕಷ್ಟಕರವಾಗಿಸುತ್ತದೆ.
ಚಳಿಗಾಲದಲ್ಲಿ ಅಸ್ತಮಾ ತಡೆಗಟ್ಟಲು ಮತ್ತು ನಿರ್ವಹಿಸಲು ನಿಮ್ಮ ಜೀವನಶೈಲಿಯಲ್ಲಿ ಕೆಲವೊಂದು ಬದಲಾವಣೆ ಮತ್ತು ಹೊಂದಾಣಿಕೆಗಳ ಅಗತ್ಯವಿದೆ. ಜೊತೆಗ ಪೂರ್ವಭಾವಿ ವೈದ್ಯಕೀಯ ಆರೈಕೆಯ ಅಗತ್ಯವಿರುತ್ತದೆ. ಅಸ್ತಮಾ ಇರುವವವರು ತಮ್ಮ ಸ್ಥಿತಿಯ ಮೇಲೆ ಹವಾಮಾನದ ಪ್ರಭಾವ ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ.
ಹೊರಗಡೆ ಇರುವಾಗ ಸ್ಕಾರ್ಫ್ ಅಥವಾ ಮಾಸ್ಕ್ ಧರಿಸಿ
ತಣ್ಣನೆಯ ಗಾಳಿಯು ನಿಮಗೆ ಆಹ್ಲಾದಕರ ಎನಿಸಬಹುದು. ಆದರೆ ಅದು ಅಸ್ತಮಾಗೆ ಪ್ರಚೋದನೆ ನೀಡುತ್ತದೆ. ಹೀಗಾಗಿ ನೀವು ಹೊರಗೆ ಹೋಗುವಾಗ ನಿಮ್ಮ ಮೂಗು ಮತ್ತು ಬಾಯಿಯ ಮೇಲೆ ಸ್ಕಾರ್ಫ್ ಅಥವಾ ಮಾಸ್ಕ್ ಹಾಕಿಕೊಳ್ಳುವ ಮೂಲಕ ಅದರ ಪರಿಣಾಮಗಳನ್ನು ಕಡಿಮೆ ಮಾಡಬಹುದು. ಇದು ನಿಮ್ಮ ಶ್ವಾಸಕೋಶಕ್ಕೆ ಪ್ರವೇಶಿಸುವ ಮೊದಲು ಗಾಳಿಯನ್ನು ಬೆಚ್ಚಗಾಗಲು ಮತ್ತು ಆರ್ದ್ರಗೊಳಿಸಲು ಸಹಾಯ ಮಾಡುತ್ತದೆ.
ವಿಪರೀತ ಚಳಿಯಲ್ಲಿ ವ್ಯಾಯಾಮ ಮಾಡುವುದನ್ನು ತಪ್ಪಿಸಿ
ಶೀತ ವಾತಾವರಣದಲ್ಲಿ ಹೊರಾಂಗಣದಲ್ಲಿ ವ್ಯಾಯಾಮ ಮಾಡುವುದು ಅಸ್ತಮಾ ಲಕ್ಷಣಗಳನ್ನು ಉಲ್ಬಣಗೊಳಿಸಬಹುದು. ಶೀತ ಗಾಳಿಯು ನಿಮ್ಮ ಉಸಿರಾಟದ ವಾಯುಮಾರ್ಗಗಳನ್ನು ಕಿರಿದಾಗುವಂತೆ ಮಾಡುತ್ತದೆ. ಅದರಲ್ಲೂ ದೈಹಿಕ ಚಟುವಟಿಕೆ ಸಮಯದಲ್ಲಿ ಉಸಿರಾಡಲು ತುಂಬಾ ಕಷ್ಟವಾಗುತ್ತದೆ. ನಿಮಗೆ ಅನುಕೂಲವಾದರೆ, ಚಳಿಗಾಲದ ಒಳಾಂಗಣ ವ್ಯಾಯಾಮಗಳನ್ನು ಮಾಡಿ.
ವೈಯಕ್ತಿಕ ನೈರ್ಮಲ್ಯ ರೂಢಿಸಿಕೊಳ್ಳಿ
ಚಳಿಗಾಲದಲ್ಲಿ ಉಸಿರಾಟದ ಸೋಂಕುಗಳು ಸಾಮಾನ್ಯ. ಹೀಗಾಗಿ ನೈರ್ಮಲ್ಯದತ್ತ ಗಮನ ಇರಲಿ. ಸೋಪ್ ಮತ್ತು ನೀರಿನಿಂದ ನಿಮ್ಮ ಕೈಗಳನ್ನು ಆಗಾಗ ತೊಳೆಯುವುದರಿಂದ ರೋಗಾಣುಗಳ ಹರಡುವಿಕೆ ತಡೆಯಬಹುದು. ಅಸ್ತಮಾವನ್ನು ಹದಗೆಡಿಸುವ ಉಸಿರಾಟದ ಸೋಂಕಿನ ಅಪಾಯ ಕಡಿಮೆ ಮಾಡಲು ವಾರ್ಷಿಕ ಫ್ಲೂ ಲಸಿಕೆ ಹಾಕಿಸಿಕೊಳ್ಳಿ.
ಮನೆಯಲ್ಲಿ ಅಲರ್ಜಿ ಹರಡದಂತೆ ನೋಡಿಕೊಳ್ಳಿ
ಧೂಳು, ಪಿಇಟಿ ಡ್ಯಾಂಡರ್‌ನಂತಹ ಒಳಾಂಗಣ ಅಲರ್ಜಿನ್‌ಗಳು ಅಸ್ತಮಾ ಪ್ರಚೋದಿಸುತ್ತವೆ. ಈ ಅಪಾಯ ಕಡಿಮೆ ಮಾಡಲು, ನಿಯಮಿತವಾಗಿ ಕಾರ್ಪೆಟ್‌ಗಳನ್ನು ನಿರ್ವಾತಗೊಳಿಸಿ. ಹಾಸಿಗೆಯನ್ನು ಬಿಸಿ ನೀರಿನಲ್ಲಿ ತೊಳೆಯಿರಿ. ದಿಂಬು ಮತ್ತು ಹಾಸಿಗೆಗಳ ಮೇಲೆ ಅಲರ್ಜಿ-ನಿರೋಧಕ ಕವರ್‌ಗಳನ್ನು ಬಳಸಿ.