Holi 2024: ಹೋಳಿ ಹಬ್ಬದ ಸಂದರ್ಭ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ; ಇದರಿಂದ ತೊಂದರೆ ತಪ್ಪಿದ್ದಲ್ಲ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Holi 2024: ಹೋಳಿ ಹಬ್ಬದ ಸಂದರ್ಭ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ; ಇದರಿಂದ ತೊಂದರೆ ತಪ್ಪಿದ್ದಲ್ಲ

Holi 2024: ಹೋಳಿ ಹಬ್ಬದ ಸಂದರ್ಭ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ; ಇದರಿಂದ ತೊಂದರೆ ತಪ್ಪಿದ್ದಲ್ಲ

ಭಾರತದಾದ್ಯಂತ ಹೋಳಿ ಹಬ್ಬದ ಸಂಭ್ರಮ ಶುರುವಾಗಿದೆ. ಹೋಳಿ ಆಚರಣೆಯಲ್ಲಿ ಕೆಲವು ಸಂಪ್ರದಾಯಗಳಿಗೂ ವಿಶೇಷ ಮಹತ್ವವಿದೆ. ಅದರಲ್ಲಿ ದಾನ ಮಾಡುವುದು ಕೂಡ ಒಂದು. ದಾನ ಮಾಡುವುದು ಪುಣ್ಯದ ಕೆಲಸವೇ ಆದರೂ ಹೋಳಿ ಸಮಯದಲ್ಲಿ ಈ ವಸ್ತುಗಳನ್ನು ತಪ್ಪಿಯೂ ದಾನ ಕೊಡಬಾರದು, ಇದರಿಂದ ತೊಂದರೆ ಖಚಿತ.

ಹೋಳಿ ಹಬ್ಬದ ಸಂದರ್ಭ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ
ಹೋಳಿ ಹಬ್ಬದ ಸಂದರ್ಭ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ

ಪ್ರತಿ ವರ್ಷ ಫಾಲ್ಗುಣ ಮಾಸದ ಹುಣ್ಣಿಮೆಯಂದು ಹೋಳಿ ದಹನವನ್ನು ಆಚರಿಸಲಾಗುತ್ತದೆ ಮತ್ತು ಮರುದಿನ ಬಣ್ಣಗಳ ಹಬ್ಬವಾದ ಹೋಳಿಯನ್ನು ಆಚರಿಸಲಾಗುತ್ತದೆ. ಸನಾತನ ಧರ್ಮದ ಪ್ರಮುಖ ಹಬ್ಬಗಳಲ್ಲಿ ಹೋಳಿಯೂ ಒಂದು. ಹೋಳಿಯು ಜಾತಿ ಭೇದವಿಲ್ಲದೆ ಎಲ್ಲರೂ ಸಂಭ್ರಮದಿಂದ ಆಚರಿಸುವ ಹಬ್ಬವಾಗಿದೆ.

ಸಂಪತ್ತು, ಸಂತೋಷ ಮತ್ತು ಸಮೃದ್ಧಿಯನ್ನು ಪಡೆಯಲು ಹೋಳಿ ಹಬ್ಬದ ಸಂದರ್ಭ ದಾನ ಮಾಡುವುದು ಬಹಳ ಮುಖ್ಯ. ಆದರೆ ಹೋಳಿ ಅಥವಾ ಹೋಳಿಕಾ ದಹನದ ದಿನ ಕೆಲವು ವಸ್ತುಗಳನ್ನು ದಾನ ಮಾಡಿದರೆ ತೊಂದರೆ ಎದುರಾಗುವುದು ಖಚಿತ. ಹಾಗಾಗಿ ಈ ಕೆಳಗಿನ ವಸ್ತುಗಳನ್ನು ತಪ್ಪಿಯೂ ದಾನ ಮಾಡಬೇಡಿ.

ಮೇಕಪ್ ಬಿಡಿಭಾಗಗಳು

ಹೋಳಿ ಹಬ್ಬದಂದು ಅರಿಶಿನ, ಕುಂಕುಮ, ಸಿಂಧೂರ, ಲೋಟ ಸೇರಿದಂತೆ 16 ಮೇಕಪ್ ವಸ್ತುಗಳನ್ನು ದಾನ ಮಾಡಬಾರದು. ಇವುಗಳನ್ನು ದಾನ ಮಾಡುವುದರಿಂದ ಶುಭ ಫಲಿತಾಂಶ ಸಿಗುತ್ತದೆ ಎಂದು ನಂಬಲಾಗಿದೆ, ಆದರೆ ಇದನ್ನು ಖಂಡಿತ ದಾನವಾಗಿ ಅನ್ಯರಿಗೆ ನೀಡಬಾರದು. ಯಾಕೆಂದರೆ ಅರಿಶಿನ ಮತ್ತು ಕುಂಕುಮವು ಸ್ತ್ರೀ ಸಮೃದ್ಧಿಯ ಸೂಚಕ. ಅವುಗಳನ್ನು ದಾನ ಮಾಡುವುದರಿಂದ ಕೆಡುಕಾಗಬಹುದು.

ಹಣ ದಾನ

ಹೋಳಿ ಹಬ್ಬದಂದು ಹಣ ದಾನ ಮಾಡಬಾರದು. ಇದು ಹಣಕಾಸಿನ ಪರಿಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇತರ ದಿನಗಳಲ್ಲಿ ಹಣವನ್ನು ದಾನ ಮಾಡುವುದು ಉತ್ತಮ ಫಲಿತಾಂಶವನ್ನು ತರುತ್ತದೆ. ಆದರೆ ಹೋಳಿ ಸಂದರ್ಭ ದುಡ್ಡನ್ನು ದಾನವಾಗಿ ಕೊಡುವುದರಿಂದ ನೀವು ಹಣ ಕೊರತೆ ಎದುರಿಸುವಂತಾಗಬಹುದು.

ವಸ್ತ್ರ ದಾನ

ಹೋಲಿಕಾ ದಹನದಂದು ವಸ್ತ್ರವನ್ನು ದಾನ ಮಾಡಬಾರದು. ಧರಿಸಿರುವ, ಹಳೆಯದಾದ ಅಥವಾ ಹೊಸದಾದ ಯಾವುದೇ ಬಟ್ಟೆಗಳನ್ನು ದಾನ ಮಾಡುವುದು ಮನೆಯಲ್ಲಿ ಬಡತನವನ್ನು ತರುತ್ತದೆ ಎಂದು ನಂಬಲಾಗಿದೆ. ಕುಟುಂಬ ಜೀವನದಲ್ಲಿ ಅಶಾಂತಿ ಇರುತ್ತದೆ ಎಂದು ನಂಬಲಾಗಿದೆ. ಸಿರಿಯ ಸಂಪತ್ತು ದೂರವಾಗುತ್ತದೆ.

ಕಬ್ಬಿಣದ ವಸ್ತುಗಳನ್ನು ದಾನ ಮಾಡಬಾರದು

ಹೋಳಿಕಾ ದಹನದ ದಿನ ಶನಿಗೆ ಸಂಬಂಧಿಸಿದ ಕಬ್ಬಿಣ ಮತ್ತು ಉಕ್ಕಿನ ವಸ್ತುಗಳನ್ನು ದಾನ ಮಾಡಬಾರದು. ಹೀಗೆ ಮಾಡುವುದರಿಂದ ಜೀವನದಲ್ಲಿ ಕಷ್ಟಗಳು ಎದುರಾಗುತ್ತವೆ.

ಸಾಸಿವೆ ಎಣ್ಣೆ

ಹೋಳಿಕಾ ದಹನದ ದಿನ ಸಾಸಿವೆ ಎಣ್ಣೆಯನ್ನು ದಾನ ಮಾಡಬಾರದು. ಹೋಳಿಯಲ್ಲಿ ಸಾಸಿವೆ ಎಣ್ಣೆಯನ್ನು ದಾನ ಮಾಡುವುದರಿಂದ ಶನಿ ದೇವರ ಕೋಪ ಗುರಿಯಾಗುತ್ತಾರೆ ಎಂದು ನಂಬಲಾಗಿದೆ. ಬೇರೆ ಯಾವುದೇ ದಿನ ಈ ಎಣ್ಣೆಯನ್ನು ದಾನ ಮಾಡಿದರೆ ಶನಿದೇವನ ಅನುಗ್ರಹ ದೊರೆಯುತ್ತದೆ.

ಗಾಜಿನ ಸಾಮಾನುಗಳು

ಸಾಮಾನ್ಯವಾಗಿ, ಗಾಜಿನ ಸಾಮಾನು ಉಡುಗೊರೆಗಳನ್ನು ನೀಡುವ ಅತ್ಯಂತ ಜನಪ್ರಿಯ ಆಯ್ಕೆಯಾಗಿದೆ. ಆದರೆ ಹೋಳಿ ಹಬ್ಬದಂದು ನೀವು ಉಡುಗೊರೆಗಳನ್ನು ನೀಡಲು ಯೋಜಿಸುತ್ತಿದ್ದರೆ ಯಾವುದೇ ಸಂದರ್ಭದಲ್ಲಿ ನೀವು ಗಾಜಿನ ಸಾಮಾನುಗಳನ್ನು ನೀಡಬಾರದು ಮತ್ತು ಅವುಗಳನ್ನು ದಾನ ಮಾಡಬೇಡಿ. ಹೀಗೆ ಮಾಡುವುದರಿಂದ ವ್ಯಕ್ತಿಯು ಕೌಟುಂಬಿಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಂಬಲಾಗಿದೆ.

ಬಿಳಿ ವಸ್ತು

ಬಣ್ಣಗಳ ಹೋಳಿ ಹಬ್ಬದಂದು ಹಾಲು, ಮೊಸರು, ಸಕ್ಕರೆಯಂತಹ ಬಿಳಿ ವಸ್ತುಗಳನ್ನು ದಾನ ಮಾಡಬಾರದು. ಇದು ಅಶುಭವೆಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಜಾತಕದಲ್ಲಿ ಶುಕ್ರನ ಸ್ಥಾನ ದುರ್ಬಲವಾಗುತ್ತದೆ. ಶುಕ್ರ ದೋಷ ಉಂಟಾಗುವ ಸಾಧ್ಯತೆ ಇದೆ. ಸಂತೋಷದ ಮೇಲೆ ಪರಿಣಾಮ ಬೀರುತ್ತದೆ.

ಹಳದಿ ಬಟ್ಟೆಗಳನ್ನು ಧರಿಸಿ

ಸಕಾರಾತ್ಮಕತೆ ಮತ್ತು ಸಮೃದ್ಧಿಯ ಸಂಕೇತವೆಂದು ಪರಿಗಣಿಸಲಾದ ಹಳದಿ ಬಣ್ಣವನ್ನು ಧರಿಸುವುದು ಒಳ್ಳೆಯದು. ಹಳದಿ ಬಣ್ಣವು ನಕಾರಾತ್ಮಕ ಶಕ್ತಿಯನ್ನು ಹಿಮ್ಮೆಟ್ಟಿಸುತ್ತದೆ. ಧನಾತ್ಮಕ ಶಕ್ತಿಯನ್ನು ಹರಡಲು ಆ ದಿನ ಇಡೀ ಮನೆ ಮತ್ತು ಕಚೇರಿಯನ್ನು ಹಳದಿ ಹೂಗಳಿಂದ ಅಲಂಕರಿಸುವುದು ಒಳ್ಳೆಯದು.

(ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.