ಜಾತಕದಲ್ಲಿ ಸಂತಾನ ದೋಷ ಉಂಟಾಗಲು ರಾಹು ಹೇಗೆ ಕಾರಣನಾಗುತ್ತಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಜಾತಕದಲ್ಲಿ ಸಂತಾನ ದೋಷ ಉಂಟಾಗಲು ರಾಹು ಹೇಗೆ ಕಾರಣನಾಗುತ್ತಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ

ಜಾತಕದಲ್ಲಿ ಸಂತಾನ ದೋಷ ಉಂಟಾಗಲು ರಾಹು ಹೇಗೆ ಕಾರಣನಾಗುತ್ತಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ

ಜಾತಕದಲ್ಲಿ ಒಬ್ಬೊಬ್ಬರಿಗೆ ಒಂದೊಂದು ಸಮಸ್ಯೆ ಇರುತ್ತದೆ. ಕೆಲವೊಂದು ಸಮಸ್ಯೆಗಳು ಸಣ್ಣಪುಟ್ಟವಾದರೆ, ಕೆಲವರು ಗಂಭೀರವಾದ ದೋಷಗಳಾಗಿರುತ್ತವೆ. ಆದರೆ ಜ್ಯೋತಿಷ್ಯದಲ್ಲಿ ಎಲ್ಲದಕ್ಕೂ ಪರಿಹಾರಗಳಿವೆ. ಜಾತಕದಲ್ಲಿ ಸಂತಾನ ದೋಷ ಉಂಟಾಗಲು ರಾಹು ಹೇಗೆ ಕಾರಣನಾಗುತ್ತಾನೆ, ಪರಿಹಾರಗಳೇನು? ಇಲ್ಲಿದೆ ಮಾಹಿತಿ. (ಬರಹ: ಎಚ್. ಸತೀಶ್, ಜ್ಯೋತಿಷಿ)

ಸಂತಾನದೋಷ ಉಂಟಾಗಲು ಕಾರಣ, ಪರಿಹಾರಗಳು
ಸಂತಾನದೋಷ ಉಂಟಾಗಲು ಕಾರಣ, ಪರಿಹಾರಗಳು

ರಾಹು ಗ್ರಹವು ಪಂಚಮ ಸ್ಥಾನದಲ್ಲಿ ಇದ್ದರೆ ಸಂತಾನದೋಷ ಉಂಟಾಗುವುದಿಲ್ಲ. ಪಂಚಮ ಭಾವ, ಪಂಚಮಾಧಿಪತಿ ಮತ್ತು ಪಂಚಮ ಭಾವಕ್ಕೆ ಸಂಬಂಧಿಸಿದ ಗ್ರಹವನ್ನು ಪರಿಗಣಿಸಬೇಕು. ದೇವರಾಗಲಿ ಅಥವ ಗ್ರಹಗಳಗಾಗಲಿ ನಮಗೆ ಎಂದಿಗೂ ತೊಂದರೆ ನೀಡುವುದಿಲ್ಲ. ಆದರೆ ನಮ್ಮ ಜೀವನದಲ್ಲಿ ಮಾಡುವ ತಪ್ಪಿಗೆ ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಉದಾಹರಣೆಗೆ ರವಿ ಗ್ರಹ ಮತ್ತು ನವಮಾಧಿಪತಿ ಮತ್ತು ನವಮ ಭಾವವು ತಂದೆಯನ್ನು ಸೂಚಿಸುತ್ತದೆ.ತಂದೆಯನ್ನು ಗೌರವಿಸದೆ, ತೊಂದರೆ ನೀಡಿದಲ್ಲಿ ಅದಕ್ಕೆ ಸಂಬಂಧಿಸಿದ ಗ್ರಹದ ಶಾಂತಿಯಾಗಲಿ, ಪೂಜೆ ಪುನಸ್ಕಾರವಾಗಲಿ ಯಾವುದೇ ಫಲಗಳನ್ನು ನೀಡುವುದಿಲ್ಲ. ಆದ್ದರಿಂದ ಪ್ರತಿಯೊಬ್ಬರ ಜೀವನವು ಕೇವಲ ಗ್ರಹಗತಿಯನ್ನು ಮಾತ್ರ ಅವಲಂಬಿಸದೆ ಬಾಳಿನ ರೀತಿ ನೀತಿಯನ್ನು ಸಹ ಅವಲಂಬಿಸಿರುತ್ತದೆ. ಕುಂಡಲಿ ದೋಷವನ್ನು ರಾಶಿಗಿಂತಲೂ ಲಗ್ನವನ್ನು ಮುಖ್ಯವಾಗಿ ಪರಿಗಣಿಸಬೇಕು.

ರಾಹು ಮತ್ತು ಸಂತಾನ ದೋಷ

ಮೇಷ

ಮೇಷ ರಾಶಿ ಅಥವಾ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ತುಲಾದಲ್ಲಿ ರವಿ ಮತ್ತು ಕನ್ಯಾದಲ್ಲಿ ಶುಕ್ರನಿದ್ದು , ರವಿ ಅಥವ ಶುಕ್ರನಿಗೆ ರಾಹುವಿನ ಯುತಿ ಇದ್ದಲ್ಲಿ ಸಂತಾನ ದೋಷ ಉಂಟಾಗುತ್ತದೆ. ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆ ಮಾಡಿದಲ್ಲಿ ರಾಹುದೋಷ ನಿವಾರಣೆಯಾಗುತ್ತದೆ. ಇದರ ಜೊತೆ ಸೂರ್ಯ ನಮಸ್ಕಾರ ಮಾಡಬೇಕು. 10 ವರ್ಷದ ಒಳಗಿನ ಹೆಣ್ಣು ಮಕ್ಕಳಿಗೆ ಕನ್ಯಾ ಪೂಜೆ ಮಾಡಿ ಮಡಿಲು ತುಂಬುವ ಮೂಲಕ ಸಂತಾನ ದೋಷದಿಂದ ಮುಕ್ತರಾಗಬಹುದು. ಕಪ್ಪು ಬಣ್ಣದ ನಾಯಿಗೆ ಆಹಾರ ನೀಡಿದಲ್ಲಿ ಶುಭ ಉಂಟಾಗುತ್ತದೆ.

ವೃಷಭ

ವೃಷಭ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಕನ್ಯಾದಲ್ಲಿ ಶುಕ್ರನಿದ್ದು, ಬುಧನು ಅಸ್ತನಾಗಿರಬೇಕು. ಶುಕ್ರನ ಜೊತೆಯಲ್ಲಿ ರಾಹುವು ಇದ್ದಲ್ಲಿ ಸಂತಾನ ದೋಷ ಉಂಟಾಗುತ್ತದೆ. ವಲ್ಲಿ ದೇವಸೇನ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯಿಂದ ರಾಹು ದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಪುರುಷಸೂಕ್ತ ಹೋಮವನ್ನು ಮಾಡಬೇಕು. ಶ್ರೀ ಅನ್ನಪೂರ್ಣೇಶ್ವರಿಗೆ ಅಕ್ಕಿ, ಬೇಳೆ ಮತ್ತು ಬೆಲ್ಲವನ್ನು ನೀಡುವುದರಿಂದ ಸಂತಾನ ದೋಷ ದೂರವಾಗುತ್ತದೆ. ಬಿಳಿ ಬಣ್ಣದ ನಾಯಿಗೆ ಆಶ್ರಯ ನೀಡುವುದರಿಂದ ದೋಷವಿಮುಕ್ತಿ ಆಗುತ್ತದೆ.

ಮಿಥುನ

ಮಿಥುನ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ತುಲಾದಲ್ಲಿ ರವಿ ಇದ್ದು, ಶುಕ್ರನು ಕನ್ಯಾದಲ್ಲಿ ನೆಲೆಸಿರಬೇಕು. ರವಿ ಅಥವ ಶುಕ್ರನ ಜೊತೆಯಲ್ಲಿ ರಾಹು ಇದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ದಂಡಪಾಣಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಪೂಜೆಯಿಂದ ರಾಹುದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಶ್ರೀ ಸೂಕ್ತ ಹೋಮವನ್ನು ಮಾಡಬೇಕು. ಕುಲದೇವರ ದೇವಸ್ಥಾನದಲ್ಲಿ ಅನ್ನದಾನ ಮಾಡುವುದರಿಂದ ಸಂತಾನ ದೋಷ ದೂರವಾಗುತ್ತದೆ. ಮಗುವಿಗೆ ಒಂದು ವರ್ಷ ಆಗುವುದರ ಒಳಗೆ ಬೆಲ್ಲದಿಂದ ಮಗುವಿಗೆ ತುಲಾಭಾರ ಮಾಡಿಸಬೇಕು. ಕಪ್ಪು ಬಿಳಿ ಮಿಶ್ರಿತ ನಾಯಿಗಳಿಗೆ ಆಹಾರ ನೀಡುವುದರಿಂದ ಶುಭವಾಗುತ್ತದೆ.

ಕಟಕ

ಕಟಕ ರಾಶಿ ಅಥವಾ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ವೃಶ್ಚಿಕದಲ್ಲಿ ಚಂದ್ರನಿರಬೇಕು. ಲಗ್ನ ಅಥವ ರಾಶಿಯಲ್ಲಿ ಬುಧನಿದ್ದು ಚಂದ್ರ ಅಥವ ಬುಧನ ರಾಹು ಇದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ದುರ್ಗಾಸೂಕ್ತ ಹೋಮ ಮಾಡಿಸಬೇಕು. ಮನ್ಯುಸೂಕ್ತಹೋಮ ಮಾಡಿಸಬೇಕು. ಇದರೊಂದಿಗೆ ಹುಣ್ಣಿಮೆಯ ದಿನ ಶ್ರೀಸತ್ಯನಾರಾಯಣ ಸ್ವಾಮಿ ಪೂಜೆಯನ್ನು ಮಾಡಿದಲ್ಲಿ ಸಂತಾನ ದೋಷ ದೂರವಾಗುತ್ತದೆ. ಅನುಕೂಲವಿದ್ದಲ್ಲಿ ನಾರಾಯಣ ಬಲಿ ಮಾಡಿಸುವುದು ಒಳ್ಳೆಯದು. ನಾಯಿಗಳಿಗೆ ದ್ರವಾಹಾರ ನೀಡುವುದರಿಂದ ಶುಭ ಉಂಟಾಗುತ್ತದೆ.

ಸಿಂಹ

ಸಿಂಹ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಗುರುವು ಮಕರ ರಾಶಿಯಲ್ಲಿ ಇದ್ದರೆ ಮತ್ತು ರಾಹುವಿನ ಯುತಿಯಲ್ಲಿ ಇದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ಇವರು 12 ಗುರುವಾರಗಳು ಶ್ರೀ ದತ್ತಾತ್ರೇಯರ ಪೂಜೆಯನ್ನುಮಾಡಬೇಕಾಗುತ್ತದೆ. ಗುರುವಿನ ಜೊತೆ ರಾಹು ಇದ್ದಲ್ಲಿ ರಾಹುದೋಷವಿರುತ್ತದೆ. ಧರ್ಮಗುರುಗಳ ಪೂಜೆಯಿಂದ ದೋಷವು ದೂರವಾಗುತ್ತದೆ. ಗುರುಮಂದಿರಲ್ಲಿ ಪಂಚಾಮೃತಾಭಿಷೇಕ ಮಾಡಿಸಿ ಹಳದಿ ಬಟ್ಟೆಯನ್ನು ದೇವರಿಗೆ ಸಮರ್ಪಿಸಬೇಕು. ವೃದ್ದರಿಗೆ ಕಡಲೆಬೇಳೆಯಿಂದ ಮಾಡಿದ ಸಿಹಿತಿಂಡಿಯನ್ನು ನೀಡಿ ಅವರ ಆಶೀರ್ವಾದ ಪಡೆದಲ್ಲಿ ಸಂತಾನ ದೋಷ ದೂರವಾಗುತ್ತದೆ. ಮನೆಯಲ್ಲಿ ನಾಯಿಯನ್ನು ಸಾಕುವುದು ಒಳ್ಳೆಯದು.

ಕನ್ಯಾ

ಕನ್ಯಾ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಮಕರದಲ್ಲಿ ಗುರುವಿದ್ದು, ಮೇಷದಲ್ಲಿ ಶನಿ ಇರಬೇಕು. ಗುರು ಅಥವ ಶನಿಯ ಜೊತೆ ರಾಹು ಇದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ಇದರಿಂದ ಮಕ್ಕಳು ಜನಿಸಿದ ನಂತರ ಅಸುನೀಗುವ ಸಾಧ್ಯತೆಗಳು ಇರುತ್ತವೆ. ಆದ್ದರಿಂದ ಮಹಾ ಮೃತ್ಯುಂಜಯ ಹೋಮ ಮತ್ತು ಪವಮಾನಸೂಕ್ತ ಹೋಮ ಮಾಡಿದಲ್ಲಿ ರಾಹುದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಮಗು ಜನಿಸಿದ ನಂತರ ಮೂರು ಅಮಾವಾಸ್ಯೆಗಳು ಶಿವನ ದೇಗುಲಕ್ಕೆ ಬೆಲ್ಲವನ್ನು, ಪಂಚಾಮೃತದ ಪದಾರ್ಥಗನ್ನು ನೀಡುವುದರಿಂದ ಸಂತಾನ ದೋಷ ದೂರವಾಗುತ್ತದೆ. ಕಂದು ಬಣ್ಣದ ನಾಯಿಗೆ ಆಹಾರ ನೀಡಿದಲ್ಲಿ ದೋಷ ಪರಿಹಾರವಾಗುತ್ತದೆ.

ತುಲಾ

ತುಲಾ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಮೇಷದಲ್ಲಿ ಶನಿ ಇದ್ದು, ಬುಧನು ಮೀನದಲ್ಲಿ ರಾಹುವಿನ ಜೊತೆ ಇದ್ದಲ್ಲಿ ಸಂತಾನ ಷ ಉಂಟಾಗುತ್ತದೆ. ಇವರು ಅವಶ್ಯಕವಾಗಿ ನಾಗಪ್ರತಿಷ್ಠೆ ಮಾಡಬೇಕು.ರುದ್ರ ಹೋಮ ಮಾಡಿಸುವುದರ ಜೊತೆ 5 ಜನ ಬ್ರಹ್ಮಚಾರಿಗಳಿಗೆ ಉಡುವ ಮತ್ತು ಹೊದಿಕೆ ವಸ್ತ್ರಗಳನ್ನು ನೀಡಿ ಕುಡಿಯಲು ಹಾಲನ್ನು ನೀಡಬೇಕು ಇದರಿಂದ ರಾಹುದೋಷ ನಿವಾರಣೆಯಾಗುತ್ತದೆ. ಹನುಮಾನ್ ಚಾಲೀಸಾವನ್ನು ಪಠಿಸುವುದು ಒಳ್ಳೆಯದು ಇದರಿಂದಾಗಿ ಸಂತಾನ ದೋಷ ದೂರವಾಗುತ್ತದೆ. ನಾಯಿಗಳಿಗೆ ಮಲಗಲು ಸೌಲಭ್ಯ ಕಲ್ಪಿಸಿದಲ್ಲಿ ಶುಭವುಂಟಾಗುತ್ತದೆ.

ವೃಶ್ಚಿಕ

ವೃಶ್ಚಿಕ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಮೀನದಲ್ಲಿ ಬುದನಿದ್ದು, ಮಕರದಲ್ಲಿ ಗುರುವಿದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ಬುಧ ಅಥವ ಗುವುವಿನ ಜೊತೆಯಲ್ಲಿ ರಾಹು ಇದ್ದಲ್ಲಿ ರಾಹುದೋಷ ಉಂಟಾಗುತ್ತದೆ. ಕುಟುಂಬದ ಹಿರಿಯರು ನಾಗಪ್ರತಿಷ್ಠೆ ಮಾಡಿಸಿ ಪೂಜೆ ಸಲ್ಲಿಸಬೇಕು. ಸರ್ಪಬಲಿ ಹೋಮ ಮಾಡಬೇಕು. ಇದರ ಜೊತೆ ಪುರುಷಸೂಕ್ತ ಹೋಮ ಮಾಡಬೇಕು. ಶ್ರೀ ಮಹಾ ಮೃತ್ಯುಂಜಯ ಮಂತ್ರಜಪ ಮಾಡಿದಲ್ಲಿ ಸಂತಾನ ದೋಷ ದೂರವಾಗುತ್ತದೆ. ಕೆಂಪು ಬಣ್ಣದ ನಾಯಿಯನ್ನು ಸಾಕಿದಲ್ಲಿ ಶುಭ ಉಂಟಾಗುತ್ತದೆ.

ಧನಸ್ಸು

ಧನುರ್ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಮೇಷದಲ್ಲಿ ಶನಿ ಇದ್ದು, ಗುರುವು ಮಕರದಲ್ಲಿ ಸ್ಥಿತನಾಗಿರಬೇಕು. ಶನಿ ಅಥವ ಗುರುವಿನ ಜೊತೆಯಲ್ಲಿ ರಾಹುವು ಇದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ಗುರುಗಳ ಪೂಜೆಯಿಂದ ರಾಹುದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಸರಸ್ವತಿ ಸೂಕ್ತ ಹೋಮವನ್ನು ಮಾಡಬೇಕು. ಗುರುಮಂದಿರ ಅಥವ ಶನಿ ದೇಗುಲದಲ್ಲಿ ಅನ್ನದಾನಕ್ಕೆ ಸಹಾಯ ಮಾಡಿದಲ್ಲಿ ಸಂತಾನ ದೋಷ ದೂರವಾಗುತ್ತದೆ. ಮಿಶ್ರ ವರ್ಣದ ನಾಯಿಗಳನ್ನು ಸಲಹುವುದು ಒಳ್ಳೆಯದು.

ಮಕರ

ಮಕರ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಕನ್ಯಾದಲ್ಲಿ ಶುಕ್ರನಿದ್ದು, ಗುರುವು ಮಕರದಲ್ಲಿ ಸ್ಥಿತನಾಗಿರಬೇಕು. ಶುಕ್ರ ಅಥವ ಗುರುವಿನ ಜೊತೆಯಲ್ಲಿ ರಾಹುವು ಇದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ಆಶ್ಲೇಷ ಬಲಿ ಪೂಜೆಯಿಂದ ರಾಹುದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ದುರ್ಗಾ ಹೋಮವನ್ನು ಮಾಡಬೇಕು. ಬಡವರ ಮನೆಯ ಹೆಣ್ಣುಮಗುವಿನ ವಿವಾಹಕ್ಕೆ ನೆರವಾಗುವುದರಿಂದ ಸಂತಾನ ದೋಷವು ದೂರವಾಗುತ್ತದೆ. ಕಪ್ಪು ನಾಯಿಗೆ ಆಹಾರ ನೀಡುವುದು ಒಳ್ಳೆಯದು

ಕುಂಭ

ಕುಂಭ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಕನ್ಯಾದಲ್ಲಿ ಶುಕ್ರ ಅಥವ ಬುಧನು ಮೀನದಲ್ಲಿ ಸ್ಥಿತನಾಗಿರಬೇಕು. ಗುರುವಿನ ಜೊತೆ ರಾಹು ಇದ್ದಲ್ಲಿ ಸಂತಾನದೋಷ ಉಂಟಾಗುತ್ತದೆ. ವಲ್ಲಿ ದೇವಸೇನ ಸಮೇತ ಶ್ರೀ ಸುಬ್ರಹ್ಮಣ್ಯಸ್ವಾಮಿಯ ಪೂಜೆಯಿಂದ ರಾಹುದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಪವಮಾನ ಹೋಮವನ್ನು ಮಾಡಬೇಕು. ಶುಕ್ರವಾರದಂದು ಕನ್ಯಾಮುತ್ತೈದೆಯ ಪೂಜೆ ಮಾಡುವುದರಿಂದ ಸಂತಾನ ದೋಷ ದೂರವಾಗುತ್ತದೆ. ಯಾವುದೇ ಬಣ್ಣದ ನಾಯಿಗೆ ಆಹಾರ ನೀಡುವುದು ಒಳ್ಳೆಯದು.

ಮೀನ

ಮೀನ ರಾಶಿ ಅಥವ ಲಗ್ನದಲ್ಲಿ ಜನಿಸಿದವರ ಕುಂಡಲಿಯಲ್ಲಿ ಕುಜನು ಕಟಕದಲ್ಲಿ ಇದ್ದು ಚಂದ್ರನು ರಾಹುವಿನ ಜೊತೆ ಇರಬೇಕು.ಇದರಿಂದ ಸಂತಾನದೋಷ ಉಂಟಾಗುತ್ತದೆ. ಗುರುವು ಅಸ್ತವಾಗಿದ್ದಲ್ಲಿ ದೋಷವು ಪ್ರಬಲವಾಗಿರುತ್ತದೆ. ಶ್ರೀ ದುರ್ಗಾಪೂಜೆಯಿಂದ ಮತ್ತು ನಾಗಾರಾಧನೆಯಿಂದ ರಾಹು ದೋಷ ನಿವಾರಣೆಯಾಗುತ್ತದೆ. ಇದರೊಂದಿಗೆ ಷಷ್ಠಿಪೂಜೆಯನ್ನು ಮಾಡುವುದರಿಂದ ಸಂತಾನ ದೋಷ ದೂರವಾಗುತ್ತದೆ. ಆಗತಾನೇ ಜನಿಸಿದ ನಾಯಿಮರಿಗಳನ್ನು ರಕ್ಷಿಸಿದಲ್ಲಿ ಶುಭ ಉಂಟಾಗುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್: 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ಹಿಂದೂಸ್ತಾನ್ ಟೈಮ್ಸ್ ಕನ್ನಡ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ.)

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.