ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Kitchen Vastu Tips: ಮನೆಯಲ್ಲಿ ತಪ್ಪಿಯೂ ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ; ಆರೋಗ್ಯ, ಹಣಕಾಸಿನ ಸಮಸ್ಯೆ ಕಾಡಬಹುದು

Kitchen Vastu Tips: ಮನೆಯಲ್ಲಿ ತಪ್ಪಿಯೂ ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ; ಆರೋಗ್ಯ, ಹಣಕಾಸಿನ ಸಮಸ್ಯೆ ಕಾಡಬಹುದು

ವಾಸ್ತುಶಾಸ್ತ್ರದಲ್ಲಿ ಮನೆ ಹೇಗಿರಬೇಕು, ಮನೆಯಲ್ಲಿ ಯಾವ ವಸ್ತುಗಳು ಎಲ್ಲೆಲ್ಲಿ ಇರಬೇಕು ಎಂಬುದನ್ನೆಲ್ಲಾ ವಿವರವಾಗಿ ತಿಳಿಸಲಾಗಿದೆ. ವಾಸ್ತುಪ್ರಕಾರ ಅಡುಗೆಮನೆಯಲ್ಲಿ ನಾವು ಯಾವ ದಿಕ್ಕಿಗೆ ನಿಂತು ಅಡುಗೆ ಮಾಡುತ್ತೇವೆ ಎಂಬುದು ಸಹ ಮುಖ್ಯವಾಗುತ್ತದೆ. ಅಡುಗೆ ಮಾಡಲು ಸರಿಯಾದ ದಿಕ್ಕು ಆರಿಸಿಕೊಂಡಿಲ್ಲ ಎಂದರೆ ಆರ್ಥಿಕ, ಆರೋಗ್ಯ ಸಮಸ್ಯೆಗಳು ಎದುರಾಗಬಹುದು ಎಚ್ಚರ.

ಮನೆಯಲ್ಲಿ ತಪ್ಪಿಯೂ ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ; ಆರೋಗ್ಯ, ಹಣಕಾಸಿನ ಸಮಸ್ಯೆ ಕಾಡಬಹುದು (ಸಾಂಕೇತಿಕ ಚಿತ್ರ)
ಮನೆಯಲ್ಲಿ ತಪ್ಪಿಯೂ ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ; ಆರೋಗ್ಯ, ಹಣಕಾಸಿನ ಸಮಸ್ಯೆ ಕಾಡಬಹುದು (ಸಾಂಕೇತಿಕ ಚಿತ್ರ)

ಸನಾತನ ಧರ್ಮದಲ್ಲಿ ವಾಸ್ತುಶಾಸ್ತ್ರಕ್ಕೆ ವಿಶೇಷ ಮಹತ್ವವಿದೆ. ಮನೆ ಮತ್ತು ಕಚೇರಿ ನಿರ್ಮಾಣ ಮಾಡುವಾಗ ವಾಸ್ತು ನಿಯಮಗಳನ್ನು ತಪ್ಪದೇ ಅನುಸರಿಸುತ್ತಾರೆ. ವಾಸ್ತು ಪ್ರಕಾರ ಮನೆಯಲ್ಲಿರುವ ವಸ್ತುಗಳನ್ನು ಜೋಡಿಸುವುದು ಬಹಳ ಮುಖ್ಯ. ಆಗ ಮಾತ್ರ ಜೀವನದಲ್ಲಿ ಸಂತೋಷ ಮತ್ತು ನೆಮ್ಮದಿ ಇರುತ್ತದೆ. ವಾಸ್ತುಶಾಸ್ತ್ರದ ತತ್ವಗಳನ್ನು ಸರಿಯಾಗಿ ಅನುಸರಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಡಿರುತ್ತದೆ. ನಕಾರಾತ್ಮಕ ಶಕ್ತಿಗಳನ್ನು ದೂರ ಮಾಡಲು ಇದು ಸಹಕಾರಿ.

ವಾಸ್ತು ಜೀವನದ ಪ್ರತಿಯೊಂದು ಅಂಶದ ಮೇಲೆ ಪರಿಣಾಮ ಬೀರುತ್ತದೆ ಎನ್ನುತ್ತಾರೆ ತಜ್ಞರು. ವಾಸ್ತು ಸರಿಯಾಗಿದ್ದರೆ ಮಾತ್ರ ಜೀವನ ಸುಖಮಯ, ಇಲ್ಲದಿದ್ದರೆ ಒಂದಿಲ್ಲೊಂದು ಸಮಸ್ಯೆ ತಪ್ಪಿದ್ದಲ್ಲ. ಮನೆಯಲ್ಲಿ ಅತ್ಯಂತ ಪ್ರಮುಖ ಭಾಗ ಎಂದರೆ ಅದು ಅಡುಗೆಮನೆ. ಅದಕ್ಕಾಗಿ ಅಡುಗೆ ವಿನ್ಯಾಸಕ್ಕೆ ವಿಶೇಷ ಗಮನ ನೀಡಬೇಕು. ಅಡುಗೆ ಮನೆಯಲ್ಲಿ ಯಾವ ದಿಕ್ಕಿಗೆ ನಿಂತು ಅಡುಗೆ ಮಾಡಬೇಕು, ಯಾವ ವಸ್ತುವನ್ನು ಎಲ್ಲಿ ಇಡಬೇಕು, ಈ ಎಲ್ಲವೂ ಬಹಳ ಮುಖ್ಯ ಎನ್ನಿಸುತ್ತದೆ. ಇದು ಮನೆಯ ಸಂತೋಷ, ನೆಮ್ಮದಿಯ ಜೊತೆಗೆ ಆರ್ಥಿಕ ಪರಿಸ್ಥಿತಿ, ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ.

ಅಡುಗೆ ವಾಸ್ತು ನಿಯಮಗಳು

ವಾಸ್ತು ಪ್ರಕಾರ ಅಡುಗೆ ಮನೆಯು ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಬೇಕು. ಅಡುಗೆ ಮನೆಯ ಬಾಗಿಲನ್ನು ಮನೆಯ ಮುಖ್ಯ ದ್ವಾರಕ್ಕೆ ಕಾಣಿಸದಂತೆ ಮಾಡುವುದು ಬಹಳ ಮುಖ್ಯ. ಅಡುಗೆ ಮಾಡುವಾಗ ಪೂರ್ವ ದಿಕ್ಕಿಗೆ ಮುಖ ಮಾಡಿ ನಿಲ್ಲಬೇಕು. ಇದನ್ನು ಸೂರ್ಯನ ದಿಕ್ಕು ಎಂದು ಪರಿಗಣಿಸಲಾಗಿದೆ. ಮನೆಯಲ್ಲಿ ಶಾಂತಿ, ಸೌಹಾರ್ದತೆ ಇದ್ದರೂ ಕಾಯಿಲೆಗಳು ಬರದಂತೆ ಪೂರ್ವ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದು ಉತ್ತಮ.

ಸ್ನಾನ ಮಾಡದೆ ಅಡುಗೆ ಮಾಡಬೇಡಿ ಅಥವಾ ತಿನ್ನಬೇಡಿ. ಇದು ಆರೋಗ್ಯ ಪರಿಸ್ಥಿತಿಯನ್ನು ಹದಗೆಡಿಸುತ್ತದೆ. ಬೊಜ್ಜಿನಿಂದ ಬಳಲಬೇಕಾಗುತ್ತದೆ. ಅದೇ ಸಮಯದಲ್ಲಿ ಅಡುಗೆ ಮನೆಯ ಪಶ್ಚಿಮ ದಿಕ್ಕಿಗೆ ಅಡುಗೆ ಮಾಡುವುದರಿಂದ ಮನೆಯ ಸದಸ್ಯರಿಗೆ ಚರ್ಮ ರೋಗಗಳು ಬರುತ್ತವೆ. ಆಗ್ನೇಯಕ್ಕೆ ಮುಖ ಮಾಡಿ ಅಡುಗೆ ಮಾಡಿದರೆ ಅದು ನಿಮ್ಮ ಮನೆಯ ಶಾಂತಿಯನ್ನು ಕೆಡಿಸುತ್ತದೆ.

ಯಾವ ವಸ್ತುಗಳನ್ನು ಎಲ್ಲಿ ಇಡಬೇಕು?

ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿರುವ ಕಪಾಟುಗಳು ದಕ್ಷಿಣ ಅಥವಾ ಪಶ್ಚಿಮಕ್ಕೆ ಮುಖ ಮಾಡಬೇಕು. ಮಸಾಲೆ ಮತ್ತು ಆಹಾರ ಪದಾರ್ಥಗಳನ್ನು ವಾಯುವ್ಯ ದಿಕ್ಕಿನಲ್ಲಿ ಇಡಬೇಕು. ವಾಸ್ತು ಪ್ರಕಾರ, ಅಡುಗೆಮನೆಯಲ್ಲಿ ಮೈಕ್ರೋವೇವ್ ಓವನ್, ಮಿಕ್ಸರ್ ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಇವುಗಳನ್ನು ಎಂದಿಗೂ ತಪ್ಪು ದಿಕ್ಕಿನಲ್ಲಿ ಇಡಬಾರದು. ಹೀಗೆ ಮಾಡುವುದರಿಂದ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ವಿದ್ಯುತ್ ಉಪಕರಣಗಳನ್ನು ಆಗ್ನೇಯ ಮೂಲೆಯಲ್ಲಿ ಇಡಬೇಕು.

ಮನೆಯಲ್ಲಿ ಇಡುವ ಪಾತ್ರೆಗಳನ್ನು ದಕ್ಷಿಣ ದಿಕ್ಕಿನಲ್ಲಿ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಅಡುಗೆಮನೆಯ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಯಾವುದಾದರೂ ಸಣ್ಣ ವಸ್ತುಗಳನ್ನು ಇಡುವುದು ಉತ್ತಮ.

ಈ ದಿಕ್ಕಿನಲ್ಲಿ ನಿಂತು ಅಡುಗೆ ಮಾಡಬೇಡಿ

ವಾಸ್ತು ಪ್ರಕಾರ ಅಡುಗೆ ಮನೆಗೆ ಅಭಿಮುಖವಾಗಿ ಶೌಚಾಲಯವನ್ನು ಕಟ್ಟಬಾರದು. ಇದನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಅಡುಗೆಮನೆ ಯಾವಾಗಲೂ ಸ್ವಚ್ಛವಾಗಿರಬೇಕು. ಇಲ್ಲದಿದ್ದರೆ ಇದು ಕುಟುಂಬದ ಸದಸ್ಯರ ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ದಕ್ಷಿಣ, ಉತ್ತರ ಮತ್ತು ಪಶ್ಚಿಮ ದಿಕ್ಕಿಗೆ ಮುಖ ಮಾಡಿ ಅಡುಗೆ ಮಾಡುವುದನ್ನು ತಪ್ಪಿಸಿ. ಹೀಗೆ ಮಾಡುವುದರಿಂದ ಆರ್ಥಿಕ ನಷ್ಟವಾಗುತ್ತದೆ. ಆದ್ದರಿಂದ ಈ ವಿಷಯದಲ್ಲಿ ಬಹಳ ಜಾಗರೂಕರಾಗಿರಿ. ಅಡುಗೆ ಮನೆಯನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಂಚಭೂತಗಳು ಸಮತೋಲನದಲ್ಲಿರಬೇಕು. ಗೋಧಿ, ಬೇಳೆಕಾಳುಗಳು, ಅಕ್ಕಿ ಮುಂತಾದ ಧಾನ್ಯಗಳನ್ನು ಸಂಗ್ರಹಿಸಲು ಪಶ್ಚಿಮ ಅಥವಾ ದಕ್ಷಿಣ ದಿಕ್ಕು ಉತ್ತಮ.