ಕನ್ನಡ ಸುದ್ದಿ  /  ಮನರಂಜನೆ  /  Chetan Kumar: 'ವಿಕ್ರಾಂತ್ ರೋಣ' ಚಿತ್ರ ನೋಡಿ ಚೇತನ್ ಹೇಳಿದ್ದೇ ಬೇರೆ...ಸುದೀಪ್ ಫ್ಯಾನ್ಸ್ ಆಕ್ರೋಶಕ್ಕೆ ತುತ್ತಾದ ನಟ

Chetan Kumar: 'ವಿಕ್ರಾಂತ್ ರೋಣ' ಚಿತ್ರ ನೋಡಿ ಚೇತನ್ ಹೇಳಿದ್ದೇ ಬೇರೆ...ಸುದೀಪ್ ಫ್ಯಾನ್ಸ್ ಆಕ್ರೋಶಕ್ಕೆ ತುತ್ತಾದ ನಟ

ಚೇತನ್ ಸಿನಿಮಾಗಳು ಮಾತ್ರವಲ್ಲದೆ, ಸಾಮಾಜಿಕ ಕಾರ್ಯಕರ್ತನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ತಮಗೆ ಅನ್ನಿಸಿದ್ದು ತಪ್ಪೋ ಸರಿಯೋ ಸೋಷಿಯಲ್ ಮೀಡಿಯಾ ಮೂಲಕ ಅವರು ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಚೇತನ್ ಟ್ವೀಟ್,
'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಚೇತನ್ ಟ್ವೀಟ್,

ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾ ಬಿಡುಗಡೆಯಾಗಿ ಒಂದು ವಾರ ಕಳೆದಿದೆ. ಚಿತ್ರಕ್ಕೆ ಸಿನಿಪ್ರಿಯರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಸೆಲಬ್ರಿಟಿಗಳು ಕೂಡಾ ಸಿನಿಮಾ ನೋಡಿ ಸಿನಿಮಾ ಮೇಕಿಂಗ್, ಹಾಡುಗಳು ಹಾಗೂ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಆ ದಿನಗಳು ನಟ ಖ್ಯಾತಿಯ ಚೇತನ್ ಸಿನಿಮಾ ಬಗ್ಗೆ ಬೇರೆಯೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

'ವಿಕ್ರಾಂತ್ ರೋಣ' ತಾಂತ್ರಿಕವಾಗಿ ಮತ್ತು ಅಭಿನಯದ ದೃಷ್ಟಿಯಿಂದ ನೋಡಿದರೆ ಉತ್ತಮವಾಗಿದೆ. ಆದರೆ ದಲಿತರನ್ನು ಬಹುಜನರನ್ನು ದುಷ್ಟ, ಪೈಶಾಚಿಕರಂತೆ ಬಿಂಬಿಸಿ ಮುಸ್ಲಿಂರನ್ನು ಸ್ಟೀರಿಯೋಟೈಪ್ ಮಾಡಿದ್ದಾರೆ, ಈ ಸೂಷ್ಮವಿಲ್ಲದ ಚಿತ್ರಣದಿಂದ ನಾನು ನಿರಾಶೆಗೊಂಡಿದ್ದೇನೆ. ಚಲನಚಿತ್ರ ನಿರ್ಮಣ ಮಾಡುವವರು ಐತಿಹಾಸಿಕ ಅನ್ಯಾಯಗಳನ್ನು ಸೂಕ್ಷವಾಗಿ ಗಮನಿಸಿದರೆ ಕೇಲವ ಲಾಭಕ್ಕಾಗಿ ಜಾತಿ/ಧರ್ಮವನ್ನು ತಮ್ಮ ಚಿತ್ರಗಳಲ್ಲಿ ಬಳಸಿಕೊಳ್ಳುವುದನ್ನು ನಿಲ್ಲಿಸಬೇಕು ಎಂದು ಚೇತನ್ ಟ್ವಿಟ್ಟರ್ ಮೂಲಕ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜನರು ಚೇತನ್ ಅವರ ಟ್ವೀಟ್​​​ಗೆ ಪರ ವಿರೋಧವಾಗಿ ಕಮೆಂಟ್ ಮಾಡುತ್ತಿದ್ದಾರೆ.

ಚೇತನ್ ಸಿನಿಮಾಗಳು ಮಾತ್ರವಲ್ಲದೆ, ಸಾಮಾಜಿಕ ಕಾರ್ಯಕರ್ತನಾಗಿ ಕೂಡಾ ಗುರುತಿಸಿಕೊಂಡಿದ್ದಾರೆ. ತಮಗೆ ಅನ್ನಿಸಿದ್ದು ತಪ್ಪೋ ಸರಿಯೋ ಸೋಷಿಯಲ್ ಮೀಡಿಯಾ ಮೂಲಕ ಅವರು ಅಭಿಪ್ರಾಯ ಹಂಚಿಕೊಳ್ಳುತ್ತಾರೆ. ಕಳೆದ ವರ್ಷ ಚೇತನ್, ಸ್ಯಾಂಡಲ್​ವುಡ್ ಖ್ಯಾತ ನಟರೊಬ್ಬರ ಜಾತಿ ಬಗ್ಗೆ ಮಾತನಾಡಿ ಸುದ್ದಿಯಾಗಿದ್ದರು. ಕಳೆದ ವರ್ಷ ಸ್ಯಾಂಡಲ್​​ವುಡ್ ಸ್ಟಾರ್ ನಟರೊಬ್ಬರು ಲಾಕ್​ಡೌನ್​ ಸಮಯದಲ್ಲಿ ಜನರಿಗೆ ಆಹಾರ ಧಾನ್ಯ ಹಾಗೂ ಇನ್ನಿತರ ಅಗತ್ಯ ವಸ್ತುಗಳನ್ನು ಹಂಚಿದ್ದರು. ಆದರೆ ನಟ ಚೇತನ್ ಇದರ ಬಗ್ಗೆ ಪ್ರತಿಕ್ರಿಯಿಸಿ, ''ಆ ನಟ ಬ್ರಾಹ್ಮಣ ಸಮುದಾಯಕ್ಕೆ ಮಾತ್ರ ಸಹಾಯ ಮಾಡುತ್ತಿದ್ದಾರೆ'' ಎಂದು ಆರೋಪಿಸಿದ್ದರು. ಅಷ್ಟೇ ಅಲ್ಲ ವಿಡಿಯೋ ಮೂಲಕ ಮತ್ತೆ ಅದೇ ವಿಚಾರವಾಗಿ ಮಾತನಾಡಿದ್ದರು. ಚೇತನ್ ಅವರ ಈ ವಿಡಿಯೋ ನೋಡಿ ಬ್ರಾಹ್ಮಣ ಸಮುದಾಯದವರು ಆಕ್ರೋಶ ಹೊರಹಾಕಿದ್ದರು.

ಚೇತನ್ ಬ್ರಾಹ್ಮಣ ಸಮುದಾಯದ ಬಗ್ಗೆ ವ್ಯಂಗ್ಯವಾಗಿ ಮಾತನಾಡಿದ್ದಾರೆ. ಆ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್​​ಲೋಡ್ ಮಾಡುವ ಮೂಲಕ ಮತ್ತಷ್ಟು ಅವಮಾನ ಮಾಡಿದ್ಧಾರೆ ಎಂದು ಆರೋಪಿಸಿ ವಿಪ್ರ ಯುವ ವೇದಿಕೆ ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿತ್ತು. ದೂರು ಸ್ವೀಕರಿದ ಪೊಲೀಸರು ಚೇತನ್ ವಿರುದ್ಧ ಐಪಿಸಿ 153(ಬಿ), 295(ಎ) ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ ಅಸ್ಪೃಶ್ಯತೆ ಬಗ್ಗೆ ಮಾತನಾಡಿ ವಿವಾದಕ್ಕೆ ಒಳಗಾಗಿದ್ದಾಗ ಚೇತನ್ ಅವರ ಪರ ನಿಂತಿದ್ದರು.

ಹಿಜಾಬ್ ವಿವಾದ ಭುಗಿಲೆದ್ದಾಗ ಕೂಡಾ ನಟ ಚೇತನ್ ಅವರನ್ನು ಪೊಲೀಸರು ಬಂಧಿಸಿದ್ದರು. ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಹೈ ಕೋರ್ಟ್ ನ್ಯಾಯಮೂರ್ತಿಗಳು ನೀಡಿದ ತೀರ್ಪಿನ ಬಗ್ಗೆ ವಿರೋಧ ವ್ಯಕ್ತಪಡಿಸಿ 2 ವರ್ಷಗಳ ಹಿಂದೆ ಚೇತನ್ ಒಂದು ಟ್ವೀಟ್ ಮಾಡಿದ್ದರು. ಹಿಜಾಬ್​​ ವಿಚಾರಣೆಯನ್ನು ಅದೇ ನ್ಯಾಯಮೂರ್ತಿಗಳು ನಡೆಸಿದ್ದರು. ಅತ್ಯಾಚಾರ ಪ್ರಕರಣದಲ್ಲಿ ಅವರು ನೀಡಿದ್ದ ತೀರ್ಪನ್ನು ಉಲ್ಲೇಖಿಸಿದ್ದ ಚೇತನ್, ಅದೇ ನ್ಯಾಯಮೂರ್ತಿಗಳು ಈಗ ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ಬೇಕೇ-ಬೇಡವೇ ಎಂದು ವಿಚಾರಣೆ ನಡೆಸುತ್ತಿದ್ದಾರೆ ಎಂದು ಚೇತನ್ ಟ್ವೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಅವರನ್ನು ಬಂಧಿಸಲಾಗಿತ್ತು. ಇದೀಗ ಚೇತನ್, 'ವಿಕ್ರಾಂತ್ ರೋಣ' ಚಿತ್ರದ ಬಗ್ಗೆ ಮಾತನಾಡಿದ್ದು, ಸುದೀಪ್ ಅಭಿಮಾನಿಗಳು ಅವರ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

IPL_Entry_Point