ಕನ್ನಡ ಸುದ್ದಿ  /  ಮನರಂಜನೆ  /  Praana Foundation: ಪ್ರಾಣಿಗಳ ರಕ್ಷಣೆಗೆ 'ಪ್ರಾಣ' ಅನಿಮಲ್‌ ಫೌಂಡೇಶನ್‌ ಆರಂಭಿಸಿದ ನಟಿ ಸಂಯುಕ್ತ ಹೊರನಾಡು...!

Praana Foundation: ಪ್ರಾಣಿಗಳ ರಕ್ಷಣೆಗೆ 'ಪ್ರಾಣ' ಅನಿಮಲ್‌ ಫೌಂಡೇಶನ್‌ ಆರಂಭಿಸಿದ ನಟಿ ಸಂಯುಕ್ತ ಹೊರನಾಡು...!

ಪ್ರಾಣಿಗಳಿಗಾಗಿ ಆ್ಯಂಬುಲೆನ್ಸ್ ಮತ್ತು ಹೆಲ್ಪ್‌ಲೈನ್ ಸೇವೆಯನ್ನು ಆರಂಭಿಸಬೇಕು ಎಂದುಕೊಂಡೆ. ಇದು ಆ ಕನಸು ನನಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಪ್ರಾಣ ಫೌಂಡೇಶನ್ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಅರ್ಪಿಸಿದರು.

 'ಪ್ರಾಣ' ಅನಿಮಲ್‌ ಫೌಂಡೇಶನ್‌ ಉದ್ಘಾಟಿಸಿದ‌ ಬಹುಭಾಷಾ ನಟ ಪ್ರಕಾಶ್‌ ರಾಜ್
'ಪ್ರಾಣ' ಅನಿಮಲ್‌ ಫೌಂಡೇಶನ್‌ ಉದ್ಘಾಟಿಸಿದ‌ ಬಹುಭಾಷಾ ನಟ ಪ್ರಕಾಶ್‌ ರಾಜ್ (PC: Samyukta Hornad)

ಸಂಯುಕ್ತಾ ಹೊರನಾಡು, ನಟಿಯಾಗಿ ಮಾತ್ರವಲ್ಲದೆ ಸಮಾಜಸೇವೆಯಲ್ಲಿ ಕೂಡಾ ಗುರುತಿಸಿಕೊಂಡಿದ್ದಾರೆ. ಇದೀಗ ಅವರು ಪ್ರಾಣಿ ರಕ್ಷಣೆಗೆ ಮುಂದಾಗಿದ್ದಾರೆ. ಅದಕ್ಕಾಗಿ 'ಪ್ರಾಣ' ಹೆಸರಿನ ಅನಿಮಲ್‌ ಫೌಂಡೇಶನ್‌ ಒಂದನ್ನು ಆರಂಭಿಸಿದ್ದಾರೆ. ಈ ಸಂಸ್ಥೆ ಮೂಲಕ ಅವರು ಪ್ರಾಣಿಗಳ ಆ್ಯಂಬುಲೆನ್ಸ್ ಸೇವೆ ಕೂಡಾ ಆರಂಭಿಸಿದ್ದಾರೆ.

ಫೆಬ್ರವರಿ 14, ಒಂದೆಡೆ ಪ್ರೇಮಿಗಳ ದಿನ ಆದರೆ ಅದೇ ದಿನ ಸಂಯಕ್ತ ಹೊರನಾಡು ತಾವು ಬಹಳ ಇಷ್ಟಪಡುವ ಪ್ರಾಣಿಗಳಿಗಾಗಿ ಪ್ರಾಣ ಅನಿಮಲ್‌ ಫೌಂಡೇಶನ್‌ ಆರಂಭಿಸಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರಾಜ್‌, ಆ್ಯಂಬುಲೆನ್ಸ್ ಮತ್ತು ಪ್ರಾಣಿಗಳ ರಕ್ಷಣೆಗೆ ಹೆಲ್ಪ್‌ಲೈನ್ ಸೇವೆಯನ್ನು ಬಹುಭಾಷಾ ನಟ ಪ್ರಕಾಶ್ ರಾಜ್ ಉದ್ಘಾಟಿಸಿ ಸಂಯುಕ್ತಾ ಅವರ ಕಾರ್ಯಕ್ಕೆ ಶುಭ ಹಾರೈಸಿದರು. ಈ ವೇಳೆ ಹಿರಿಯ ನಟಿ, ಸಂಯುಕ್ತಾ ತಾಯಿ ಸುಧಾ ಬೆಳವಾಡಿ, ಅವರ ಸಹೋದರ ಪ್ರಕಾಶ್‌ ಬೆಳವಾಡಿ ಹಾಗೂ ಇನ್ನಿತರರು ಹಾಜರಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಸಂಯುಕ್ತ, ''ನನಗೆ ಮೊದಲಿನಿಂದಲೂ ಪ್ರಾಣಿಗಳು ಎಂದರೆ ಬಹಳ ಇಷ್ಟ. ಆದ್ದರಿಂದಲೇ ನಾನು ಪೇಟಾಗೆ (People for the Ethical Treatment of Animals)ಸೇರಿದೆ, ಅದಕ್ಕೆ ಅಂಬಾಸಿಡರ್‌ ಕೂಡಾ ಆದೆ. ವಿವಿಧ ಕಡೆಗಳಿಂದ ಪ್ರಾಣಿಗಳನ್ನು ದತ್ತು ಪಡೆಯಲು ಆರಂಭಿಸಿದೆ. ಇದರ ಬೆನ್ನಲ್ಲೇ ಕೋವಿಡ್‌ ಶುರುವಾಗಿ ಲಾಕ್‌ಡೌನ್‌ ಅನೌನ್ಸ್‌ ಆಯ್ತು. ಆ ವೇಳೆ ಒಂದು ತಂಡ ಕಟ್ಟಿಕೊಂಡು ಬೀದಿನಾಯಿಗಳಿಗೆ ಊಟ ಪೂರೈಸುವ ಕೆಲಸ ಆರಂಭಿಸಿದೆವು. ಸುಮಾರು 60 ದಿನಗಳ ಕಾಲ ಪ್ರತಿ ದಿನ ಸುಮಾರು ಸಾವಿರಾರು ನಾಯಿಗಳಿಗೆ ಊಟ ನೀಡುತ್ತಿದ್ದೆವು. ಈ ಸಮಯದಲ್ಲಿ ನಾನು ಉತ್ತಮ ಸ್ನೇಹಿತರನ್ನು ಕೂಡಾ ಸಂಪಾದಿಸಿದೆ. ಕ್ರಮೇಣ ಪ್ರಾಣಿಗಳಿಗಾಗಿ ಆ್ಯಂಬುಲೆನ್ಸ್ ಮತ್ತು ಹೆಲ್ಪ್‌ಲೈನ್ ಸೇವೆಯನ್ನು ಆರಂಭಿಸಬೇಕು ಎಂದುಕೊಂಡೆ. ಇದು ಆ ಕನಸು ನನಸಾಗಿದೆ ಎಂದು ಸಂತೋಷ ವ್ಯಕ್ತಪಡಿಸಿದರು. ಅಲ್ಲದೆ ಪ್ರಾಣ ಫೌಂಡೇಶನ್ ಸ್ಥಾಪನೆಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ'' ಅರ್ಪಿಸಿದರು.

ನಟ ಪ್ರಕಾಶ್‌ ರಾಜ್‌ ಮಾತನಾಡಿ, ''ಪ್ರಾಣಿಗಳು ನಮ್ಮಂತೆ ಒಂದು ಜೀವ ಎಂದು ಅದರ ಬಗ್ಗೆ ಮಾತನಾಡಿದವರು ಬೇರೆಯವರಿಗೆ ಹುಚ್ಚರಂತೆ ಕಾಣಿಸಬಹುದು. ಹಳ್ಳಿಗಳಲ್ಲೇ ನಾಯಿಗಳು ಬಹಳ ಆರೋಗ್ಯವಾಗಿದೆ. ಆದರೆ ನಗರಗಳಲ್ಲಿ ಇಲ್ಲಿನ ನಾಗರಿಕತೆಯಿಂದಾಗಿ ಬಹಳ ಸಮಸ್ಯೆ ಆಗುತ್ತಿದೆ. ವಾಯುಮಾಲಿನ್ಯದಿಂದ ಪ್ರಾಣಿಗಳು ಸಾಯುತ್ತಿವೆ. ಕೆಲವೊಮ್ಮೆ ನಾವೇ ಇಂಜೆಕ್ಷನ್‌ ಕೊಟ್ಟು ಸಾಯಿಸುವ ಪರಿಸ್ಥಿತಿ ಬಂದಿದೆ'' ಎಂದು ಬೇಸರ ವ್ಯಕ್ತಪಡಿಸಿದರು. ಸಂಯುಕ್ತ ಹಾಗೂ ತಂಡದ ಈ ಪ್ರಯತ್ನಕ್ಕೆ ಪ್ರಕಾಶ್‌ ರಾಜ್‌ ಶುಭ ಹಾರೈಸಿದರು.

ಮತ್ತಷ್ಟು ಮನರಂಜನೆ ಸುದ್ದಿಗಳು

ದರ್ಶನ್‌ ಬರ್ತ್‌ಡೇಗೆ ಕ್ಯೂಟ್‌ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ... ಅಣ್ಣ-ಅತ್ತಿಗೆಗೆ ದೃಷ್ಟಿ ತೆಗಿರೋ ಎಂದ ಫ್ಯಾನ್ಸ್

ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಕೂಡಾ ದರ್ಶನ್‌ ಬರ್ತ್‌ಡೇಗೆ ಶುಭ ಕೋರಿದ್ದಾರೆ. ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕೂಡಾ ಪತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮಿ , ದರ್ಶನ್‌ ಅವರ ತೋಳುಗಳನ್ನು ಹಿಡಿದು ಕುಳಿತಿರುವ ಫೋಟೋವೊಂದನ್ನು ಅಪ್‌ಲೋಡ್‌ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್‌ ಮಾಡಿ.

ಬರ್ತ್‌ಡೇಗೆ ಶುಭ ಕೋರಿ ಕಿವಿಮಾತು ಹೇಳಿದ ಪ್ರಥಮ್‌...‌ ಅವರಿಗೆ ಬುದ್ಧಿ ಹೇಳುವಷ್ಟು ನೀವು ದೊಡ್ಡವರಲ್ಲ ಎಂದ ಫ್ಯಾನ್ಸ್‌

ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಥಮ್‌ ಕೂಡಾ ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ವಿಶ್‌ ಮಾಡಿದ್ದಾರೆ. ಆದರೆ ಅವರ್ ವಿಶ್‌ ಮಾಡಿರುವ ರೀತಿಗೆ ದಚ್ಚು ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಪೂರ್ತಿ ಸ್ಟೋರಿಗೆ ಇಲ್ಲಿ ಕ್ಲಿಕ್‌ ಮಾಡಿ.

IPL_Entry_Point

ವಿಭಾಗ