Darshan 46th Birthday: ದರ್ಶನ್ ಬರ್ತ್‌ಡೇಗೆ ಕ್ಯೂಟ್ ಫೋಟೋ ಹಂಚಿಕೊಂಡ ವಿಜಯಲಕ್ಷ್ಮಿ... ಅಣ್ಣ-ಅತ್ತಿಗೆಗೆ ದೃಷ್ಟಿ ತೆಗಿರೋ ಎಂದ ಫ್ಯಾನ್ಸ್
ಈ ಫೋಟೋ ನೋಡಿ ತುಂಬಾ ಖುಷಿಯಾಗ್ತಿದೆ ಅತ್ತಿಗೆ ನೀವು ಮತ್ತೆ ಅಣ್ಣ ಇದೇ ತರ ನೂರಾರು ಕಾಲ ಖುಷಿಯಾಗಿ ಇರಿ ಹುಟ್ಟುಹಬ್ಬದ ಶುಭಾಶಯಗಳು ಬಾಸ್ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ದೃಷ್ಟಿ ತೆಗಿರೋ ನಮ್ಮ ಅಣ್ಣ ಅತ್ತಿಗೆಗೆ, ಯಾರ್ ಕಣ್ಣು ಬೀಳ್ದೆ ಇರಲಪ್ಪ ದೇವ್ರೇ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.
ಅಭಿಮಾನಿಗಳ ಮೆಚ್ಚಿನ ಡಿ ಬಾಸ್, ಕನ್ನಡ ಚಿತ್ರರಂಗದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು 46ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ನಿನ್ನೆ ರಾತ್ರಿಯಿಂದಲೇ ದರ್ಶನ್ ಮನೆ ಮುಂದೆ ಜನಜಾತ್ರೆ ಸೇರಿದೆ. ತಮ್ಮ ಆರಾಧ್ಯ ದೈವ ದರ್ಶನ್ ಅವರ ದರ್ಶನ ಪಡೆಯಲು ದೂರದ ಊರಿನಿಂದ ಆಗಮಿಸಿ ಹುಟ್ಟುಹಬ್ಬಕ್ಕೆ ಹಾರೈಸಿದ್ದಾರೆ.
ಸ್ಯಾಂಡಲ್‌ವುಡ್ ಸೆಲೆಬ್ರಿಟಿಗಳು, ರಾಜಕೀಯ ಗಣ್ಯರು ಕೂಡಾ ದರ್ಶನ್ ಬರ್ತ್‌ಡೇಗೆ ಶುಭ ಕೋರಿದ್ದಾರೆ. ದರ್ಶನ್ ಪತ್ನಿ ವಿಜಯಲಕ್ಷ್ಮಿ ಕೂಡಾ ಪತಿ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭ ಕೋರಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯಲಕ್ಷ್ಮಿ , ದರ್ಶನ್ ಅವರ ತೋಳುಗಳನ್ನು ಹಿಡಿದು ಕುಳಿತಿರುವ ಫೋಟೋವೊಂದನ್ನು ಅಪ್‌ಲೋಡ್ ಮಾಡಿದ್ದಾರೆ. ಈ ಫೋಟೋ ನೋಡಿ ಅಭಿಮಾನಿಗಳು ಸಂತೋಷ ವ್ಯಕ್ತಪಡಿಸಿದ್ದಾರೆ. ಲೈಕ್, ಕಮೆಂಟ್ ಮೂಲಕ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ''ಈ ಫೋಟೋ ನೋಡಿ ತುಂಬಾ ಖುಷಿಯಾಗ್ತಿದೆ ಅತ್ತಿಗೆ ನೀವು ಮತ್ತೆ ಅಣ್ಣ ಇದೇ ತರ ನೂರಾರು ಕಾಲ ಖುಷಿಯಾಗಿ ಇರಿ ಹುಟ್ಟುಹಬ್ಬದ ಶುಭಾಶಯಗಳು ಬಾಸ್'' ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದಾರೆ. ''ದೃಷ್ಟಿ ತೆಗಿರೋ ನಮ್ಮ ಅಣ್ಣ ಅತ್ತಿಗೆಗೆ, ಯಾರ್ ಕಣ್ಣು ಬೀಳ್ದೆ ಇರಲಪ್ಪ ದೇವ್ರೇ'' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ ಪೋಟೋ ನಿಜಕ್ಕೂ ನೋಡುಗರ ಕಣ್ಮನ ಸೆಳೆಯುತ್ತಿದೆ.
ಪ್ರೀತಿಸಿ ಮದುವೆಯಾಗಿರುವ ದರ್ಶನ್ ಹಾಗೂ ವಿಜಯಲಕ್ಷ್ಮಿ
ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರದ್ದು ಪ್ರೇಮ ವಿವಾಹ. ದರ್ಶನ್ ಚಿತ್ರರಂಗದಲ್ಲಿ, ಧಾರಾವಾಹಿಯಲ್ಲಿ ನಟಿಸುತ್ತಿದ್ದ ಸಮಯದಲ್ಲಿ ಪರಿಚಯವಾದ ಇಬ್ಬರ ಸ್ನೇಹ ನಂತರ ಪ್ರೀತಿಗೆ ತಿರುಗಿದೆ. ಇಂದಿಗೂ ಈ ಪ್ರೀತಿ ಇಂದಿಗೂ ಹಾಗೇ ಇದೆ. ಕಾಮನ್ ಫ್ರೆಂಡ್ ಮೂಲಕ ಪರಿಚಯವಾದ ದರ್ಶನ್ ಹಾಗೂ ವಿಜಯಲಕ್ಷ್ಮಿ ಕೆಲವು ವರ್ಷಗಳ ಕಾಲ ಪ್ರೀತಿಸಿ ನಂತರ ಮನೆಯವರ ಒಪ್ಪಿಗೆ ಪಡೆದು ಗುರುಹಿರಿಯರ ಸಮ್ಮುಖದಲ್ಲಿ 19 ಮೇ 2000ರಲ್ಲಿ ಧರ್ಮಸ್ಥಳದಲ್ಲಿ ಮದುವೆಯಾಗುತ್ತಾರೆ. ಈ ಜೋಡಿಗೆ ವಿನೀಶ್ ಎಂಬ ಮಗ ಇದ್ದಾರೆ. ದರ್ಶನ್ ಹಾಗೂ ವಿಜಯಲಕ್ಷ್ಮಿ ಅವರ ದಾಂಪತ್ಯಕ್ಕೆ 22 ವರ್ಷಗಳು.
ಅಭಿಮಾನಿಗಳ ಪ್ರೀತಿಗೆ ಟ್ಯಾಟೂ ಮೂಲಕ ಧನ್ಯವಾದ ಹೇಳಿದ ದರ್ಶನ್
ಹುಟ್ಟುಹಬ್ಬಕ್ಕೂ ಕೆಲವು ದಿನಗಳ ಮುನ್ನ ದರ್ಶನ್ ತಮ್ಮ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ತಮ್ಮ ಅಭಿಮಾನಿಗಳನ್ನು ಸೆಲೆಬ್ರಿಟೀಸ್ ಎಂದೇ ಸಂಬೋಧಿಸಿಸುವ ದರ್ಶನ್ ಅವರನ್ನೇ ತಮ್ಮ ಎದೆಯಲ್ಲಿ ಸೆರೆ ಮಾಡಿಟ್ಟುಕೊಂಡಿದ್ದಾರೆ. ಅಭಿಮಾನಿಗಳ ಪ್ರೀತಿಗೆ ಏನಾದರೂ ಉಡುಗೊರೆ ನೀಡಬೇಕೆಂದು ನಿರ್ಧರಿಸಿ ಹಚ್ಚೆ ಹಾಕಿಸಿಕೊಂಡಿದ್ದಾರೆ. ಎದೆ ಮೇಲೆ 'ನನ್ನ ಸೆಲೆಬ್ರಿಟೀಸ್' ಎಂಬ ಕನ್ನಡ ಅಕ್ಷರದ ಟ್ಯಾಟೂ ಹಾಕಿಸಿದ್ದಾರೆ. ಹೀಗೆ ಹಚ್ಚೆ ಹಾಕಿಸಿದ ಫೋಟೋ ಮತ್ತು ವಿಡಿಯೋಗಳನ್ನು ದರ್ಶನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿದ್ದಂತೆ, ಅವರ ಅಪಾರ ಅಭಿಮಾನಿಗಳು ಮೂಕವಿಸ್ಮಿತರಾಗಿದ್ದಾರೆ. ಕಮೆಂಟ್ ರೂಪದಲ್ಲಿ ನೆಚ್ಚಿನ ನಟನ ಈ ಪ್ರೀತಿಗೆ ಧನ್ಯವಾದ ಅರ್ಪಿಸುತ್ತಿದ್ದಾರೆ.
56ನೇ ಸಿನಿಮಾ ಟೈಟಲ್ ರಿವೀಲ್ ಮಾಡಿದ ಚಿತ್ರತಂಡ
ದರ್ಶನ್ ಹೊಸ ಸಿನಿಮಾ ವಿಚಾರವಾಗಿ ಅಭಿಮಾನಿಗಳು ಬಹಳ ದಿನಗಳಿಂದ ಕಾಯುತ್ತಿದ್ದ ಕುತೂಹಲಕ್ಕೆ ನಿನ್ನೆ (ಫೆ.15) ಮಧ್ಯರಾತ್ರಿ 12ಕ್ಕೆ ಉತ್ತರ ಸಿಕ್ಕಿದೆ. 'ರಾಬರ್ಟ್' ಬಳಿಕ ತರುಣ್ ಸುಧೀರ್ ಮತ್ತು ದರ್ಶನ್ ಮತ್ತೆ ಒಂದಾಗುತ್ತಿದ್ದಾರೆ. ಇಬ್ಬರ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಮೂಡಿ ಬರುತ್ತಿದೆ. D56 ಚಿತ್ರಕ್ಕೆ ಶೀರ್ಷಿಕೆ ಘೋಷಣೆ ಆಗಿದೆ. ಹೊಸ ಚಿತ್ರಕ್ಕೆ 'ಕಾಟೇರ' ಎಂಬ ಟೈಟಲ್ ಅಧಿಕೃತವಾಗಿದೆ. ಕೇವಲ ಶೀರ್ಷಿಕೆ ಮಾತ್ರವಲ್ಲದೆ, ಕಿರು ಟೀಸರ್ ಕೂಡಾ ರಿಲೀಸ್ ಮಾಡಿದ್ದು, ಅಷ್ಟೇ ರಗಡ್ ಆಗಿದೆ. ದರ್ಶನ್, ಖಡಕ್ ಅವತಾರದಲ್ಲಿ ಎದುರಾಗಿದ್ದಾರೆ. ಚಿತ್ರದಲ್ಲಿ ಮಾಲಾಶ್ರೀ ಪುತ್ರಿ ರಾಧನಾ ದರ್ಶನ್‌ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ರಾಕ್‌ಲೈನ್ ವೆಂಕಟೇಶ್ ಬಂಡವಾಳ ಹೂಡುತ್ತಿದ್ದಾರೆ.