ಕನ್ನಡ ಸುದ್ದಿ  /  ಮನರಂಜನೆ  /  Uorfi Javed: ಅಂಗೈನಲ್ಲೇ ಎದೆಯ ಮುಚ್ಚಿ ಪಡ್ಡೆಗಳ ಬೆಚ್ಚಿ ಬೀಳಿಸಿದ ನಟಿ; ಉರ್ಫಿ ಜಾವೇದ್‌ ಹೈಟೆನ್ಷನ್‌ ಫ್ಯಾಷನ್‌ ವಿಡಿಯೋ ವೈರಲ್‌

Uorfi Javed: ಅಂಗೈನಲ್ಲೇ ಎದೆಯ ಮುಚ್ಚಿ ಪಡ್ಡೆಗಳ ಬೆಚ್ಚಿ ಬೀಳಿಸಿದ ನಟಿ; ಉರ್ಫಿ ಜಾವೇದ್‌ ಹೈಟೆನ್ಷನ್‌ ಫ್ಯಾಷನ್‌ ವಿಡಿಯೋ ವೈರಲ್‌

Uorfi Javed Video Viral: ವಿಭಿನ್ನ ಉಡುಗೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಷೆಷನ್‌ ಮೂಡಿಸುವಲ್ಲಿ ಉರ್ಫಿ ಜಾವೇದ್‌ಗೆ ಸರಿಯಾದ ಸಾಟಿ ಯಾರೂ ಇರಲಿಕ್ಕಿಲ್ಲ. ಇದೀಗ ಕಿರುತೆರೆ ನಟಿ ಉರ್ಫಿ ಜಾವೇದ್‌ ಹಂಚಿಕೊಂಡ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಉರ್ಫಿ ಜಾವೇದ್‌ ಹೈಟೆನ್ಷನ್‌ ಫ್ಯಾಷನ್‌ ವಿಡಿಯೋ ವೈರಲ್‌
ಉರ್ಫಿ ಜಾವೇದ್‌ ಹೈಟೆನ್ಷನ್‌ ಫ್ಯಾಷನ್‌ ವಿಡಿಯೋ ವೈರಲ್‌

ಬೆಂಗಳೂರು: ವಿಭಿನ್ನ ಉಡುಗೆ ತೊಟ್ಟು ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಷೆಷನ್‌ ಮೂಡಿಸುವಲ್ಲಿ ಉರ್ಫಿ ಜಾವೇದ್‌ಗೆ ಸರಿಯಾದ ಸಾಟಿ ಯಾರೂ ಇರಲಿಕ್ಕಿಲ್ಲ. ಇನ್‌ಸ್ಟಾಗ್ರಾಂನಲ್ಲಿ ಸದಾ ಭಿನ್ನವಾದ ಫೋಟೋಶೂಟ್‌, ವಿಡಿಯೋಗಳನ್ನು ಹಂಚಿಕೊಳ್ಳುತ್ತ ಅಭಿಮಾನಿಗಳ ಹೃದಯದಲ್ಲಿ ಕಿಚ್ಚು ಮೂಡಿಸ್ತಾರೆ ಉರ್ಫಿ. ಇದೀಗ ಉರ್ಫಿ ಜಾವೇದ್‌ ಹಂಚಿಕೊಂಡಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ಆಕೆ ಪ್ರದರ್ಶಿಸಿದ ಎದೆಗಾರಿಕೆಗೆ ನೆಟ್ಟಿಗರು ಬೆಚ್ಚಿ ಬಿದ್ದಿದ್ದಾರೆ. ಒಂದು ಕುಚಕ್ಕೆ ಹೂವಿನ ಅಲಂಕಾರದ ಉಡುಗೆ, ಮತ್ತೊಂದಕ್ಕೆ ಅಂಗೈನ ಆಸರೆ ಇದೆ.

ಟ್ರೆಂಡಿಂಗ್​ ಸುದ್ದಿ

ಹೈಟೆನ್ಷನ್‌ ವಿಡಿಯೋ ಹಂಚಿಕೊಂಡ ಉರ್ಫಿ ಜಾವೇದ್‌

ಸದ್ಯ ಈಕೆ ಪ್ರದರ್ಶಿಸಿದ ವಿನೂತನ ಉಡುಗೆಯನ್ನು ಕಾಥಿ ಆಟ್ಲಿಯರ್‌ ವಿನ್ಯಾಸ ಮಾಡಿದ್ದಾರೆ. ಈಕೆಗೆ ಮೇಕಪ್‌ ಕುದ್ರಾತನಂದ್‌ ಸ್ಟೈಲಿಂಗ್‌ ಮಾಡಿದ್ದಾರೆ. ಕೇಶವಿನ್ಯಾಸ ರಾಣಿಸಾಹು ಮಾಡಿದ್ದಾರೆ. ಮೇಕಪ್‌ ಸ್ವತಃ ಉರ್ಫಿ ಮಾಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಬಗೆಬಗೆಯ ಕಾಮೆಂಟ್‌ ಮಾಡಿದ್ದಾರೆ. ಬಹುತೇಕ ಕಾಮೆಂಟ್‌ಗಳು ನೆಗೆಟಿವ್‌ ಶೇಡ್‌ನಲ್ಲೇ ಇವೆ. ಇನ್ನು ಕೆಲವರು ಈಕೆಯ ಫ್ಯಾಷನ್‌ ಅಭಿರುಚಿಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಈ ವಿಡಿಯೋ ಇಲ್ಲಿದೆ ನೋಡಿ.

ಉರ್ಫಿ ಜಾವೇದ್‌ ಜೀವನಚರಿತ್ರೆ

1997ರ ಅಕ್ಟೋಬರ್‌ 15ರಂದು ಲಖನೌನ ಮುಸ್ಲಿಂ ಫ್ಯಾಮಿಲಿಯಲ್ಲಿ ಜನಿಸಿದ ಉರ್ಫು ಜಾವೇದ್‌ ಟೆಲಿವಿಷನ್‌ ನಟಿಯಾಗಿ ಮತ್ತು ಸೋಷಿಯಲ್‌ ಮೀಡಿಯಾ ಪರ್ಸನಾಲಿಟಿಯಾಗಿ ಜನಪ್ರಿಯತೆ ಪಡೆದಿದ್ದಾರೆ. ವಿಶೇಷವಾಗಿ ಯೂನಿಕ್‌ ಫ್ಯಾಷನ್‌ ಪರ್ಸನಾಲಿಟಿಯಿಂದ ಜನಪ್ರಿಯತೆ ಪಡೆದಿದ್ದಾರೆ. 2021ರಲ್ಲಿ ವೂಟ್‌ನಲ್ಲಿ ಬಿಗ್‌ ಬಾಸ್‌ ಒಟಿಟಿ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ ಬಳಿಕ ಇವರ ಜನಪ್ರಿಯತೆ ಹೆಚ್ಚಾಗಿತ್ತು.

ಉರ್ಫಿ ಜಾವೇದ್‌ ಬಾಲ್ಯ ಅತ್ಯುತ್ತಮವಾಗಿರಲಿಲ್ಲ. ತನ್ನ ತಂದೆಯ ಕೆಟ್ಟ ವರ್ತನೆಯಿಂದ ರೋಸಿ ಹೋಗಿದ್ದರು. ಮೇರಿ ದುರ್ಗಾ ಸಿನಿಮಾದ ನಟ ಪಾರಸ್‌ ಕಲ್ನಾವತ್‌ ಜತೆ ಡೇಟಿಂಗ್‌ನಲ್ಲಿದ್ದರು ಉರ್ಫಿ. 2028ರಲ್ಲಿ ಇವರಿಬ್ಬರ ಸಂಬಂಧ ಬ್ರೇಕಪ್‌ನಲ್ಲಿ ಕೊನೆಗೊಂಡಿತ್ತು. 2022ರಲ್ಲಿ ತನ್ನ ಹೆಸರನ್ನು ಊರ್ಫಿ (Uorfi) ಎಂದು ಬದಲಾಯಿಸಿದ್ದರು. ಹೆಸರಿನ ಸ್ಪೆಲ್ಲಿಂಗ್‌ ಬದಲಾದರೂ ಎಲ್ಲರೂ ಮೊದಲಿನಂತೆ ಈಕೆಯನ್ನು ಉರ್ಫಿ ಎಂದೇ ಕರೆಯುತ್ತಾರೆ.

2016ರಲ್ಲಿ ಸೋನಿ ಟೀವಿಯಲ್ಲಿ ಬಡೇ ಬಯ್ಯಾ ಕಿ ದುಲ್ಹಾನಿಯಾದಲ್ಲಿ ಅವನಿ ಪಾಂತ್‌ ಆಗಿ ಕಾಣಿಸಿಕೊಂಡಿದ್ದರು. 2016-2017ರಿಂದ ಸ್ಟಾರ್‌ ಪ್ಲಸ್‌ನಲ್ಲಿ ಪ್ರಸಾರವಾದ ಚಂದ್ರ ನಂದಿನಿ ಸೀರಿಯಲ್‌ನಲ್ಲಿ ಛಾಯಾ ಆಗಿ ಕಾಣಿಸಿಕೊಂಡಿದ್ದರು. ಬಳಿಕ ಸ್ಟಾರ್‌ ಪ್ಲಸ್‌ನ ಮೇರಿ ದುರ್ಗಾ ಸೀರಿಯಲ್‌ನಲ್ಲಿ ಆರತಿಯಾಗಿ ಕಾಣಿಸಿಕೊಂಡಿದ್ದರು. 2018ರಲ್ಲಿ ಸಾಬ್‌ ಟಿವಿಯ ಸಾತ್‌ ಫೇರೊ ಕಿಎ ಹೇರ ಫೇರಿಯಲ್ಲಿ ಕಾಮಿನಿ ಜೋಷಿಯಾಗಿ ನಟಿಸಿದ್ದರು. ಕಲರ್ಸ್ ಟಿವಿಯ ಬೇಪನ್ನಾದಲ್ಲಿ ಬೆಲ್ಲಾ ಕಪೂರ್, ಸ್ಟಾರ್ ಭಾರತ್‌ನ ಜಿಜಿ ಮಾದಲ್ಲಿ ಪಿಯಾಲಿ ಮತ್ತು & ಟಿವಿಯ ದಯಾನ್‌ನಲ್ಲಿ ನಂದಿನಿ ಪಾತ್ರವನ್ನು ನಿರ್ವಹಿಸಿದರು.

2018 ರಲ್ಲಿ, ಅವರು ಎಸ್‌ಎಬಿ ಟಿವಿಯ ಸಾತ್ ಫೆರೋ ಕಿ ಹೆರಾ ಫೆರಿಯಲ್ಲಿ ಕಾಮಿನಿ ಜೋಶಿ, ಕಲರ್ಸ್ ಟಿವಿಯ ಬೇಪನ್ನಾದಲ್ಲಿ ಬೆಲ್ಲಾ ಕಪೂರ್, ಸ್ಟಾರ್ ಭಾರತ್‌ನ ಜಿಜಿ ಮಾದಲ್ಲಿ ಪಿಯಾಲಿ ಮತ್ತು ಆಂಡ್‌ ಟಿವಿಯ ದಯಾನ್‌ನಲ್ಲಿ ನಂದಿನಿ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾದರು. ಹೀಗೆ ಹಲವು ಸೀರಿಯಲ್‌ಗಳ ಮೂಲಕ ಪ್ರೇಕ್ಷಕರಿಗೆ ಹತ್ತಿರವಾಗಿದ್ದ ಉರ್ಫಿ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ಹೆಚ್ಚು ಆಕ್ಟಿವ್‌ ಆಗಿದ್ದಾರೆ. ಭಿನ್ನ ಉಡುಗೆ ತೊಟ್ಟು ಹೊಸ ಬಗೆಯ ಫ್ಯಾಷನ್‌ನಿಂದ ವೈರಲ್‌ ಆಗುತ್ತಿದ್ದಾರೆ.

IPL_Entry_Point