ಕನ್ನಡ ಸುದ್ದಿ  /  ಮನರಂಜನೆ  /  ಕತ್ರಿನಾ ಕೈಫ್‌ ಜತೆಗಿನ ಬಾಲಿವುಡ್‌ ಚಿತ್ರವನ್ನು ನಿರಾಕರಿಸಿದ್ದೇಕೆ? ಪಾಕಿಸ್ತಾನದ ಗಾಯಕ ಅಬ್ರಾರ್‌ ಉಲ್‌ ಹಕ್‌ ನೀಡಿದ ಕಾರಣಗಳಿವು

ಕತ್ರಿನಾ ಕೈಫ್‌ ಜತೆಗಿನ ಬಾಲಿವುಡ್‌ ಚಿತ್ರವನ್ನು ನಿರಾಕರಿಸಿದ್ದೇಕೆ? ಪಾಕಿಸ್ತಾನದ ಗಾಯಕ ಅಬ್ರಾರ್‌ ಉಲ್‌ ಹಕ್‌ ನೀಡಿದ ಕಾರಣಗಳಿವು

ಕತ್ರಿನಾ ಕೈಫ್‌ ಜತೆಗಿನ ಸಿನಿಮಾದಲ್ಲಿ ನಟಿಸಲು ಪಾಕಿಸ್ತಾನದ ಗಾಯಕ ಅಬ್ರಾರ್‌ ಉಲ್‌ ಹಕ್‌ ನಿರಾಕರಿಸಿದ್ದರು. ಈ ರೀತಿ ನಿರಾಕರಣೆಗೆ ಕಾರಣಗಳೇನು? ಈ ನಿರ್ಧಾರಕ್ಕೆ ಕಾಶ್ಮೀರದ ವಿಷಯ ಹೇಗೆ ಕಾರಣ ಎಂಬ ವಿವರವನ್ನು ಪಾಕಿಸ್ತಾನಿ ಗಾಯಕ ಅಬ್ರಾರ್‌ ಉಲ್‌ ಹಕ್‌ ಬಹಿರಂಗಪಡಿಸಿದ್ದಾರೆ.

ಪಾಕಿಸ್ತಾನದ ಗಾಯಕ ಅಬ್ರಾರ್‌ ಉಲ್‌ ಹಕ್‌
ಪಾಕಿಸ್ತಾನದ ಗಾಯಕ ಅಬ್ರಾರ್‌ ಉಲ್‌ ಹಕ್‌

ಬೆಂಗಳೂರು: ಪಾಕಿಸ್ತಾನದ ಜನಪ್ರಿಯ ಗಾಯಕರಾದ ಅಬ್ರಾರ್‌ ಉಲ್‌ ಹಕ್‌ ಅವರು ಇತ್ತೀಚೆಗೆ ಹಫೀಸ್‌ ಅಹ್ಮದ್‌ ಪಾಡ್‌ಕಾಸ್ಟ್‌ಗೆ ಅತಿಥಿಯಾಗಿದ್ದರು. ಈ ಪಾಡ್‌ಕಾಸ್ಟ್‌ನಲ್ಲಿ ಹಲವು ವಿಷಯಗಳ ಕುರಿತು ಮಾತನಾಡಿದ್ದಾರೆ. ಭಾರತದಿಂದ ದೊರಕಿದ ದೊಡ್ಡ ಆಫರ್‌ ಅನ್ನು ಏಕೆ ತಿರಸ್ಕರಿಸಿದೆ ಎಂದು ಅವರು ಹೇಳಿದ್ದಾರೆ. ನಿಮಗೆ ಬಾಲಿವುಡ್‌ನಿಂದ ಆಫರ್‌ಗಳು ಬರುತ್ತಿವೆಯೇ ಎಂಬ ಪ್ರಶ್ನೆಯನ್ನು ಕೇಳಲಾಯಿತು. ಇದಾದ ಬಳಿಕ ನಟಿ ಕತ್ರಿನಾ ಕೈಫ್‌ ಜತೆಗಿನ ಚಿತ್ರವನ್ನು ನೀವು ಏಕೆ ತಿರಸ್ಕಾರ ಮಾಡಿದ್ದೀರಿ ಎಂದು ಪ್ರಶ್ನಿಸಲಾಯಿತು. ಈ ಪ್ರಶ್ನೆಗಳಿಗೆ ಪಾಕಿಸ್ತಾನದ ಜನಪ್ರಿಯ ಗಾಯಕ ಅಬ್ರಾರ್‌ ಉಲ್‌ ಹಕ್‌ ಉತ್ತರಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಕತ್ರಿನಾ ಕೈಫ್‌ ಚಿತ್ರ ಬೇಡ ಎಂದು ನಿರ್ಧರಿಸಿದ ಹಕ್‌

ಈ ಪಾಡ್‌ಕಾಸ್ಟ್‌ ಉರ್ದುವಿನಲ್ಲಿ ಪ್ರಸಾರವಾಗಿದೆ. "ಹೌದು ನನಗೆ ಭಾರತದಿಂದ ಹಲವು ಚಲನಚಿತ್ರಗಳ ಆಫರ್‌ಗಳು ಬಂದಿವೆ. ನನಗೆ ಆಲ್ಬಂನ ಆಫರ್‌ ಕೂಡ ಬಂದಿತ್ತು. ಆದರೆ, ಇದಕ್ಕೆ ಸಂಬಂಧಪಟ್ಟ ಒಪ್ಪಂದ ನನಗೆ ಅರ್ಥವಾಗಲಿಲ್ಲ. "ನೀವು ಮಾತನಾಡಲು ಸಾಧ್ಯವಿಲ್ಲ. ಕಾಶ್ಮೀರದ ಬಗ್ಗೆ ಮಾತನಾಡಲು ಸಾಧ್ಯವಿಲ್ಲ" ಎಂದು ಒಪ್ಪಂದದಲ್ಲಿ ತಿಳಿಸಿದ್ದರು. ಅಭಿವ್ಯಕ್ತಿ ಸ್ವಾತಂತ್ರ್ಯದಲ್ಲಿ ನಂಬಿಕೆ ಇರುವ ದೇಶವು ಇಂತಹ ಮಾತುಗಳನ್ನು ಹೇಳಬಾರದು ಎನ್ನುವುದು ನನ್ನ ಅಭಿಪ್ರಾಯ. ಹೀಗಾಗಿ ಆ ಆಫರ್‌ ಅನ್ನು ತಿರಸ್ಕರಿಸಿದೆ ಎಂದು ಹಕ್‌ ಹೇಳಿದ್ದಾರೆ.

ಯಾವ ಸಿನಿಮಾದ ಆಫರ್‌ ಬಂದಿತ್ತು ಎಂದು ಅಬ್ರಾರ್‌ ಉಲ್‌ ಹಕ್‌ ತಿಳಿಸಿಲ್ಲ. ಚಿತ್ರದ ಹೆಸರನ್ನು ಉಲ್ಲೇಖಿಸದೆ ಅವರು ಮಾಹಿತಿ ನೀಡಿದ್ದಾರೆ. "ಎರೋಸ್‌ ಎಂಬ ಕಂಪನಿ ಇದೆ. ಅವರು ಒಂದು ಚಲನಚಿತ್ರದ ಆಫರ್‌ ನೀಡಿದರು. ಆ ಸಿನಿಮಾದಲ್ಲಿ ಕತ್ರಿನಾ ಕೈಫ್‌ ನಟಿಯಾಗಿದ್ದರು. ನನಗೆ ನನ್ನ ಸ್ನೇಹಿತರು ಪ್ರೋತ್ಸಾಹಿಸಿದರು. "ನಿಮಗೆ ಆ ಸಿನಿಮಾ ಮಾಡಲು ಇಷ್ಟವಿಲ್ಲದೆ ಇದ್ದರೆ ನಮಗಾದರೂ ಹೋಗಲು ಬಿಡಿ ಎಂದಿದ್ದರು. ಆದರೆ, ನಾನು ಭಾರತದಲ್ಲಿ ಚಲನಚಿತ್ರದಲ್ಲಿ ಮಾಡಲು ಬಯಸಿಲ್ಲ. "ನಮ್ಮನ್ನು ತುಂಬಾ ಉತ್ಸಾಹದಿಂದ ಕರೆದರು. ನಮ್ಮನ್ನು ಯಾರೂ ನಿರಾಕರಿಸಿಲ್ಲ. ಆದ್ರೆ, ನೀವು ಆಗೋದಿಲ್ಲ ಎಂದಿರಿ. ನಮ್ಮ ಸಿನಿಮಾದ ಭಾಗವಾಗಲು ಇಷ್ಟವಿಲ್ಲ ಎಂದು ಯಾರೂ ಹೇಳಿಲ್ಲ. ನಾವು ಕರೆದಾಗ ನೀವು ಓಡಿ ಬರುವಿರಿ ಎಂದಿಕೊಂಡಿದ್ದೇವೆ ಎಂದು ಅವರು ಹೇಳಿದ್ದರು" ಎಂದು ಅಬ್ರಾರ್‌ ಉಲ್‌ ಹಕ್‌ ನೆನಪಿಸಿಕೊಂಡಿದ್ದಾರೆ.

ಜುಗ್ ಜುಗ್ ಜೀಯೋ ಚಿತ್ರಕ್ಕಾಗಿ ತನ್ನ ಹಾಡನ್ನು ಕದ್ದಿದ್ದಕ್ಕಾಗಿ ಕರಣ್ ಜೋಹರ್ ಮತ್ತು ಟಿ-ಸೀರೀಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳುವ ಮೂಲಕ ಪಾಕಿಸ್ತಾನದ ಗಾಯಕ ಅಬ್ರಾರ್ ಉಲ್ ಹಕ್ 2022ರಲ್ಲಿ ಸುದ್ದಿಯಲ್ಲಿದ್ದರು. ವರುಣ್ ಧವನ್ ಮತ್ತು ಕಿಯಾರಾ ಅಡ್ವಾಣಿ ಅಭಿನಯದ ಈ ಚಿತ್ರದಲ್ಲಿ ದಿ ಪುಂಜಾಬ್ಬನ್ ಹಾಡಿನ ಪರಿಷ್ಕೃತ ಆವೃತ್ತಿ ಇದೆ. ಜುಗ್ ಜಗ್ಗ್ ಜೀಯೋ ಟ್ರೈಲರ್‌ನಲ್ಲಿ ಪುಂಜಾಬ್ಬನ್ ತುಣಕು ಇತ್ತು. "ನಾನು ನನ್ನ ಹಾಡನ್ನು ಯಾರಿಗೂ ಮಾರಾಟ ಮಾಡಿಲ್ಲ. ಚಿತ್ರದ ತಯಾರಕರ ವಿರುದ್ಧ ಕೋರ್ಟ್‌ನಲ್ಲಿ ಹೋರಾಡುವುದಾಗಿ ಟ್ವೀಟ್‌ ಮಾಡಿದ್ದರು. ಇದಕ್ಕೆ ಟಿ-ಸೀರಿಸ್‌ ಪ್ರತಿಕ್ರಿಯೆ ನೀಡಿತ್ತು. ಈ ಹಾಡು ಲೋಲಿವುಡ್‌ ಕ್ಲಾಸಿಕ್ಸ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಲಭ್ಯವಿದೆ. ಈ ಹಾಡಿನ ಹಕ್ಕುಗಳನ್ನು ಕಾನೂನುಬದ್ಧವಾಗಿ ಪಡೆದುಕೊಂಡಿದ್ದೇವೆ" ಎಂದು ಟಿ-ಸೀರಿಸ್‌ ಪ್ರತಿಕ್ರಿಯೆ ನೀಡಿತ್ತು.

IPL_Entry_Point