ಕನ್ನಡ ಸುದ್ದಿ  /  ಮನರಂಜನೆ  /  Darshan As Kaatera: ಬರ್ತ್‌ಡೇಗೆ ದರ್ಶನ್‌ ಹೊಸ ಸಿನಿಮಾ ಶೀರ್ಷಿಕೆ ರಿವೀಲ್‌; 1974ರಲ್ಲಿ ನಡೆದ ದಂಗೆಯ ಕಥೆ ಹೇಳಲಿದ್ದಾನೆ ಈ ‘ಕಾಟೇರ’

Darshan as Kaatera: ಬರ್ತ್‌ಡೇಗೆ ದರ್ಶನ್‌ ಹೊಸ ಸಿನಿಮಾ ಶೀರ್ಷಿಕೆ ರಿವೀಲ್‌; 1974ರಲ್ಲಿ ನಡೆದ ದಂಗೆಯ ಕಥೆ ಹೇಳಲಿದ್ದಾನೆ ಈ ‘ಕಾಟೇರ’

‘ಪ್ರತೀ ಮಚ್ಚು ಎರಡು ಸಲ ಕೆಂಪಾಗ್ತದೆ, ಬೆಂಕಿಯಲ್ಲಿ ಬೆಂದಾಗ, ರಕ್ತದಲ್ಲಿ ನೆಂದಾಗ..’ ಎಂಬ ಡೈಲಾಗ್‌ ಮೂಲಕವೇ ನಟ ದರ್ಶನ್‌ ಮತ್ತೆ ಕಾಟೇರ ಚಿತ್ರದಲ್ಲಿ ಲಾಂಗ್‌ ಹಿಡಿದಿದ್ದಾರೆ.

ಬರ್ತ್‌ಡೇಗೆ ದರ್ಶನ್‌ ಹೊಸ ಸಿನಿಮಾ ಘೋಷಣೆ; 1974ರಲ್ಲಿ ನಡೆದ ದಂಗೆಯ ಕಥೆ ಹೇಳಲಿದ್ದಾನೆ ಈ ‘ಕಾಟೇರ’
ಬರ್ತ್‌ಡೇಗೆ ದರ್ಶನ್‌ ಹೊಸ ಸಿನಿಮಾ ಘೋಷಣೆ; 1974ರಲ್ಲಿ ನಡೆದ ದಂಗೆಯ ಕಥೆ ಹೇಳಲಿದ್ದಾನೆ ಈ ‘ಕಾಟೇರ’

Darshan Kaatera Movie: ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗಿಂದು (ಫೆ. 16) ಬರ್ತ್‌ಡೇ ಸಂಭ್ರಮ. ಆ ಬರ್ತ್‌ಡೇಯನ್ನು ಮತ್ತಷ್ಟು ಅರ್ಥಪೂರ್ಣವಾಗಿಸುವ ನಿಟ್ಟಿನಲ್ಲಿ ಅವರ ಅಭಿಮಾನಿಗಳು ಜನಪರ ಕಾರ್ಯಕ್ಕೆ ಕೈ ಹಾಕುತ್ತಿದ್ದಾರೆ. ದರ್ಶನ್‌ ಅವರ ಮಾತಿನ ಅಣತಿಯಂತೆ ಕೇಕ್‌, ಹಾರ ತುರಾಯಿ ತರದೆ, ದಿನಸಿ ಪದಾರ್ಥಗಳನ್ನು ನೀಡುತ್ತಿದ್ದಾರೆ. ಹಾಗೇ ಶೇಖರಣೆಯಾದ ವಸ್ತುಗಳನ್ನು ಅಗತ್ಯವಿರುವವರಿಗೆ ದರ್ಶನ್‌ ಅವರ ಬಳಗ ವಿತರಣೆ ಮಾಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಇತ್ತ ಇದೇ ಅಭಿಮಾನಿಗಳು ಬಹಳ ದಿನದಿಂದ ಕಾಯುತ್ತಿದ್ದ ಕುತೂಹಲಕ್ಕೂ ಫೆ. 16ರರ ಮಧ್ಯರಾತ್ರಿ 12ಕ್ಕೆ ಉತ್ತರ ಸಿಕ್ಕಿದೆ. ಅಂದರೆ ರಾಬರ್ಟ್‌ ಬಳಿಕ ತರುಣ್‌ ಸುಧೀರ್‌ ಮತ್ತು ದರ್ಶನ್‌ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ D56 ಚಿತ್ರಕ್ಕೆ ಶೀರ್ಷಿಕೆ ಘೋಷಣೆ ಆಗಿದೆ. ಚಿತ್ರಕ್ಕೆ ಈ ಹಿಂದೆಯೇ ಸುದ್ದಿಯಾದಂತೆ ‘ಕಾಟೇರ’ ಎಂಬ ಟೈಟಲ್‌ ಅಧಿಕೃತವಾಗಿದೆ. ಕೇವಲ ಶೀರ್ಷಿಕೆ ಮಾತ್ರವಲ್ಲದೆ, ಕಿರು ಟೀಸರ್‌ ಅಷ್ಟೇ ರಗಡ್‌ ಆಗಿದೆ. ಖಡಕ್‌ ಅವತಾರದಲ್ಲಿ ದರ್ಶನ್‌ ಎದುರಾಗಿದ್ದಾರೆ.

1974ರಲ್ಲಿ ನಡೆದ ನೈಜ ಘಟನೆಯೇ ‘ಕಾಟೇರ’

ರಾಕ್‌ಲೈನ್‌ ವೆಂಕಟೇಶ್‌ ಅವರ ರಾಕ್‌ಲೈನ್‌ ಪ್ರೊಡಕ್ಷನ್ಸ್‌ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ‘ಕಾಟೇರ’ ಸಿನಿಮಾದಲ್ಲಿ ಹಳ್ಳಿಗಾಡಿನ ಕಥೆಯೊಂದನ್ನು ಹಿಡಿದು ತಂದಿದ್ದಾರೆ. ಶೀರ್ಷಿಕೆ ಪೋಸ್ಟರ್‌ ಒಂದು ಬಾರಿ ಗಮನಿಸಿದರೆ, 1974ರಲ್ಲಿ ನಡೆದ ನೈಜ ಘಟನೆಯನ್ನೇ ಕಥಾವಸ್ತುವನ್ನಾಗಿಸಿಕೊಂಡ ನಿರ್ದೇಶಕ ತರುಣ್‌ ಸುಧೀರ್‌, ಸಿನಿಮಾ ರೂಪಕ್ಕೆ ತರುತ್ತಿದ್ದಾರೆ. ಏಕೆಂದರೆ ಪೋಸ್ಟರ್‌ನಲ್ಲಿ ಪಾರ್ಲಿಮೆಂಟ್‌ ಚಿತ್ರವೂ ಇದೆ. ದಂಗೆ ಎದ್ದ ರೈತರ ಸಮೂಹವೂ ಕಾಣಿಸುತ್ತಿದೆ.

ಮತ್ತೆ ಲಾಂಗ್‌ ಹಿಡಿದ ‘ಕಾಟೇರ’

ತಮ್ಮ ಹಿಂದಿನ ಸಿನಿಮಾಗಳಲ್ಲಿನ ಖದರ್‌ ಅನ್ನು ಇಲ್ಲಿಯೂ ಮುಂದುವರಿಸಿರುವ ದರ್ಶನ್‌, ಮತ್ತೆ ಮತ್ತೆ ಲಾಂಗ್‌ ಹಿಡಿದು ರಗಡ್‌ ಆಗಿಯೇ ಕಾಣಿಸಿಕೊಂಡಿದ್ದಾರೆ. ಪಂಚೆಯಲ್ಲಿ ಹಳ್ಳಿಗನಾಗಿ ಕಾಣಿಸಿದ್ದಷ್ಟೇ ಅಲ್ಲದೆ, ‘ಪ್ರತೀ ಮಚ್ಚು ಎರಡು ಸಲ ಕೆಂಪಾಗ್ತದೆ, ಬೆಂಕಿಯಲ್ಲಿ ಬೆಂದಾಗ, ರಕ್ತದಲ್ಲಿ ನೆಂದಾಗ..’ ಎಂಬ ಖಡಕ್‌ ಡೈಲಾಗ್‌ ಸಹ ಅವರ ಬಾಯಿಂದ ಹೊರಬಿದ್ದಿದೆ. ಅಂದಹಾಗೆ ಈ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ನೀಡಿದರೆ, ಸುಧಾಕರ್‌ ಎಸ್‌. ರಾಜ್‌ ಅವರ ಛಾಯಾಗ್ರಹಣ, ಕೆ.ಎಂ ಪ್ರಕಾಶ್‌ ಅವರ ಸಂಕಲನ, ಚಿತ್ರಕಥೆಯ ಜವಾಬ್ದಾರಿ ತರುಣ್‌ ಸುಧೀರ್‌ ಮತ್ತು ಜಡೇಶ್‌ ಕುಮಾರ್‌ ಹಂಪಿ ಅವರದ್ದು. ಮಾಸ್ತಿ ಈ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ಕನಸಿನ ರಾಣಿ ಮಾಲಾಶರೀ ಅವರ ಮಗಳು ರಾಧನಾ ರಾಮ್‌ ಕನ್ನಡಕ್ಕೆ ಪರಿಚಿತಗೊಳ್ಳುತ್ತಿದ್ದಾರೆ.

ಅಭಿಮಾನಿಗಳಲ್ಲಿ ಸಂಭ್ರಮ..

ನಟ ದರ್ಶನ್‌ ಅವರ ಬರ್ತ್‌ಡೇಗೆ ಅವರ ಅಭಿಮಾನಿಗಳು ಚಾತಕ ಪಕ್ಷಿಯಂತೆ ಕಾದಿದ್ದರು. ಅದರಂತೆ ಇದೀಗ ಅಭಿಮಾನಿಗಳ ಮನದ ಬಯಕೆಯನ್ನು ದರ್ಶನ್‌ ಈಡೇರಿಸಿದ್ದಾರೆ. ಮಧ್ಯರಾತ್ರಿವರೆಗೂ ಸಾವಿರಾರು ಅಭಿಮಾನಿಗಳು ದರ್ಶನ್‌ ಮನೆ ಬಳಿ ಜಮಾಯಿಸಿದ್ದರು. ನೆಚ್ಚಿನ ನಟನಿಗೆ ಹಸ್ತಲಾಘವ ಮಾಡಿ ಕಣ್ತುಂಬಿಕೊಂಡರು.

ಮನೆ ಬಳಿ ಪೊಲೀಸ್‌ ಬಿಗಿ ಬಂದೋಬಸ್ತ್‌

ಇನ್ನು ಸಾವಿರಾರು ಮಂದಿ ಅಭಿಮಾನಿಗಳು ಆಗಮಿಸಿದ್ದರಿಂದ ದರ್ಶನ್‌ ಅವರ ಬೆಂಗಳೂರಿನ ರಾಜರಾಜೇಶ್ವರಿ ನಗರದ ಮನೆ ಬಳಿ ಬಿಗಿ ಪೊಲೀಸ್‌ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ಸಂಭವಿಸಬಾರದೆಂದು ಖಾಕಿ ಪಡೆ ಬಿಡಾರ ಹೂಡಿತ್ತು.

IPL_Entry_Point