ಕನ್ನಡ ಸುದ್ದಿ  /  ಕ್ರಿಕೆಟ್  /  ಸಿಎಸ್‌ಕೆ ವಿರುದ್ಧ ಸಿಡಿದೆದ್ದ ಶುಭ್ಮನ್‌ ಗಿಲ್;‌ ಐಪಿಎಲ್‌ನಲ್ಲಿ 4ನೇ ಶತಕ ಸಿಡಿಸಿ ಟೀಕೆಗಳಿಗೆ ಬ್ಯಾಟ್‌ನಿಂದಲೇ ದಿಟ್ಟ ಉತ್ತರ

ಸಿಎಸ್‌ಕೆ ವಿರುದ್ಧ ಸಿಡಿದೆದ್ದ ಶುಭ್ಮನ್‌ ಗಿಲ್;‌ ಐಪಿಎಲ್‌ನಲ್ಲಿ 4ನೇ ಶತಕ ಸಿಡಿಸಿ ಟೀಕೆಗಳಿಗೆ ಬ್ಯಾಟ್‌ನಿಂದಲೇ ದಿಟ್ಟ ಉತ್ತರ

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಅಬ್ಬರಿಸಿದ ಶುಭ್ಮನ್ ಗಿಲ್, ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ಪರ ಅವರ ನಾಲ್ಕನೇ ಶತಕವಾಗಿದೆ.

ಸಿಎಸ್‌ಕೆ ವಿರುದ್ಧ ಸಿಡಿದೆದ್ದ ಶುಭ್ಮನ್‌ ಗಿಲ್
ಸಿಎಸ್‌ಕೆ ವಿರುದ್ಧ ಸಿಡಿದೆದ್ದ ಶುಭ್ಮನ್‌ ಗಿಲ್ (AP)

ಐಪಿಎಲ್‌ 2023ರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್‌ ಗಳಿಸಿ ಆರೇಂಜ್‌ ಕ್ಯಾಪ್‌ ಗೆದ್ದಿದ್ದ ಶುಭ್ಮನ್‌ ಗಿಲ್‌, 2024ರ ಆವೃತ್ತಿಯಲ್ಲಿ ಮಂಕಾಗಿದ್ದರು. ಫಾರ್ಮ್‌ ಸಮಸ್ಯೆಯಿಂದಾಗಿ ಟಿ20 ವಿಶ್ವಕಪ್‌ ತಂಡದಲ್ಲೂ ಸ್ಥಾನ ಕಳೆದುಕೊಂಡರು. ಇದೀಗ ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಗುಜರಾತ್‌ ಜೈಂಟ್ಸ್‌ ನಾಯಕನು ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಸ್ಫೋಟಕ ಶತಕದೊಂದಿಗೆ ಫಾರ್ಮ್‌ಗೆ ಮರಳಿದ್ದಾರೆ. ಇದರೊಂದಿಗೆ ತಮ್ಮ ಡೇಂಜರಸ್‌ ಆಟವನ್ನು ತೋರಿಸಿಕೊಂಡಿದ್ದಾರೆ. ಮತ್ತೋರ್ವ ಆರಂಭಿಕ ಆಟಗಾರ ಸಾಯಿ ಸುದರ್ಶನ್‌ ಜೊತೆಗೂಡಿ ದ್ವಿಶತಕದ ಜೊತೆಯಾಟ ಪೂರೈಸುವುದು ಮಾತ್ರವಲ್ಲದೆ, ತಂಡದ ಮೊತ್ತವನ್ನು ಹಿಗ್ಗಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ತಮ್ಮ ನೆಚ್ಚಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಬ್ಬರದಾಟವಾಡಿದ ಗಿಲ್, ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿದರು. ಇದು ಐಪಿಎಲ್‌ನಲ್ಲಿ ಅವರ ನಾಲ್ಕನೇ ಶತಕ. ಈ ಎಲ್ಲಾ ನಾಲ್ಕು ಶತಕಗಳು ಗುಜರಾತ್‌ ಪರ ಬಂದಿರುವುದು ವಿಶೇಷ. ಟಿ20 ಕ್ರಿಕೆಟ್‌ನಲ್ಲಿ ಇದು ಅವರ 6ನೇ ಸೆಂಚುರಿಯಾಗಿದೆ. ಅತಿ ಹೆಚ್ಚು ಟಿ20 ಸತಕ ಸಿಡಿಸಿದ ಭಾರತೀಯರ ಪಟ್ಟಿಯಲ್ಲಿ ಗಿಲ್‌ ಜಂಟಿಯಾಗಿ ಮೂರನೇ ಸ್ಥಾನದಲ್ಲಿದ್ದಾರೆ.

ಟಿ20ಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯರು

  • 9 - ವಿರಾಟ್ ಕೊಹ್ಲಿ
  • 8 - ರೋಹಿತ್ ಶರ್ಮಾ
  • 6 - ಶುಭಮನ್ ಗಿಲ್
  • 6 - ರುತುರಾಜ್ ಗಾಯಕ್ವಾಡ್
  • 6 - ಕೆಎಲ್ ರಾಹುಲ್
  • 6 - ಸೂರ್ಯಕುಮಾರ್ ಯಾದವ್

ಮೊದಲ ವಿಕೆಟ್‌ಗೆ 210 ರನ್‌ ಜೊತೆಯಾಟ

ಪಂದ್ಯದಲ್ಲಿ ಒಟ್ಟು 55 ಎಸೆತಗಳನ್ನು ಎದುರಿಸಿದ ಶುಭ್ಮನ್, 9 ಬೌಂಡರಿ ಹಾಗೂ 6 ಮಾರಕ ಸಿಕ್ಸರ್‌ ನೆರವಿನಿಂದ 104 ರನ್‌ ಗಳಿಸಿ ಔಟಾದರು. ಅದಕ್ಕೂ ಮುನ್ನ ಪಂದ್ಯದಲ್ಲಿ ಮತ್ತೋರ್ವ ಬ್ಯಾಟರ್‌ ಸಾಯಿ ಸುದರ್ಶನ್‌ ಕೂಡಾ ಶತಕ ಸಿಡಿಸಿ ಔಟಾದರು. ಉಭಯ ಬ್ಯಾಟರ್‌ಗಳಿಂದ ಮೊದಲ ವಿಕೆಟ್‌ಗೆ 210 ರನ್‌ಗಳ ಭರ್ಜರಿ ಜೊತೆಯಾಟ ಬಂತು.

ಇದನ್ನೂ ಓದಿ | ಸತತ ನಾಲ್ಕನೇ ಗೆಲುವಿಗೆ ಮುತ್ತಿಕ್ಕಿದ ಆರ್​ಸಿಬಿ; ಫಾಫ್ ಪಡೆ ಪ್ಲೇಆಫ್ ಆಸೆ ಜೀವಂತ, ಪಂಜಾಬ್ ಕಿಂಗ್ಸ್ ಎಲಿಮಿನೇಟ್

ಐಪಿಎಲ್‌ನಲ್ಲಿ ಗುಜರಾತ್‌ ತಂಡದ ಪರ ಈವರೆಗೆ ಒಟ್ಟು ಐದು ಶತಕಗಳು ಮಾತ್ರ ಸಿಡಿದಿವೆ. ಇದರಲ್ಲಿ ನಾಲ್ಕು ಸೆಂಚುರಿ ಗಿಲ್‌ ಬ್ಯಾಟ್‌ನಿಂದ ಬಂದರೆ, ಒಂದು ಶತಕವನ್ನು ಸಾಯಿ ಸಿಡಿಸಿದ್ದಾರೆ.

ಇಂದು ಮೊದಲ ಇನ್ನಿಂಗ್ಸ್‌ನಲ್ಲಿ ಇಬ್ಬರು ಬ್ಯಾಟರ್‌ಗಳು ಶತಕ ಸಿಡಿಸುವುದರೊಂದಿಗೆ, ಈ ಬಾರಿಯ ಐಪಿಎಲ್‌ನಲ್ಲಿ ಒಟ್ಟು 14 ಶತಕ ಸಿಡಿದಂತಾಗಿವೆ. ಇದು ಆವೃತ್ತಿಯೊಂದರಲ್ಲಿ ಸಿಡಿದ ಅತಿ ಹೆಚ್ಚು ಶತಕಗಳಾಗಿವೆ. ಈ ಹಿಂದೆ 2023ರಲ್ಲಿ ಬಂದ 12 ಶತಕಗಳೆ ಅತಿ ಹೆಚ್ಚು ಸೆಂಚುರಿ ಬಂದ ಆವೃತ್ತಿಯಾಗಿತ್ತು.

IPL_Entry_Point