ಕನ್ನಡ ಸುದ್ದಿ  /  ಕ್ರಿಕೆಟ್  /  ಆರ್‌ಸಿಬಿ ಫ್ಯಾನ್‌ ಆಗೋದು ಅಷ್ಟು ಸುಲಭ ಅಲ್ಲ ಗುರು; ಪೆನ್ನು-ಪೇಪರ್ ಹಿಡಿದು ಲೆಕ್ಕಾಚಾರ ಶುರು, ಅವರಿವರ ಸೋಲಿಗೆ ಪ್ರಾರ್ಥನೆ

ಆರ್‌ಸಿಬಿ ಫ್ಯಾನ್‌ ಆಗೋದು ಅಷ್ಟು ಸುಲಭ ಅಲ್ಲ ಗುರು; ಪೆನ್ನು-ಪೇಪರ್ ಹಿಡಿದು ಲೆಕ್ಕಾಚಾರ ಶುರು, ಅವರಿವರ ಸೋಲಿಗೆ ಪ್ರಾರ್ಥನೆ

IPL Playoff scenario: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪ್ಲೇಆಫ್ ಪ್ರವೇಶಿಸಲು ಹೇಗೆಲ್ಲಾ ಅವಕಾಶ ಇದೆ? ಯಾವ ತಂಡಗಳು ಸೋಲಬೇಕು, ಆರ್​ಸಿಬಿ ಏನೆಲ್ಲಾ ಮಾಡಬೇಕು ಎಂದು ಅಭಿಮಾನಿಗಳು ಲೆಕ್ಕಾಚಾರ ಹಾಕುತ್ತಿದ್ದಾರೆ.

ಆರ್‌ಸಿಬಿ ಫ್ಯಾನ್‌ ಆಗೋದು ಅಷ್ಟು ಸುಲಭ ಅಲ್ಲ ಗುರು; ಪೆನ್ನು-ಪೇಪರ್ ಹಿಡಿದು ಲೆಕ್ಕಾಚಾರ ಶುರು, ಅವರಿವರ ಸೋಲಿಗೆ ಪ್ರಾರ್ಥನೆ
ಆರ್‌ಸಿಬಿ ಫ್ಯಾನ್‌ ಆಗೋದು ಅಷ್ಟು ಸುಲಭ ಅಲ್ಲ ಗುರು; ಪೆನ್ನು-ಪೇಪರ್ ಹಿಡಿದು ಲೆಕ್ಕಾಚಾರ ಶುರು, ಅವರಿವರ ಸೋಲಿಗೆ ಪ್ರಾರ್ಥನೆ

ಸೋಲಲಿ, ಗೆಲ್ಲಲಿ ಆರ್​ಸಿಬಿ (RCB 2024) ತಂಡಕ್ಕೆ ಸಿಗುವಷ್ಟು ಬೆಂಬಲ ಐಪಿಎಲ್​ನ ಬೇರೆ ಯಾವ ತಂಡಕ್ಕೂ ಸಿಗುವುದಿಲ್ಲ! ಹೌದು, ಅಭಿಮಾನಿಗಳಿಗೆ ಆರ್​ಸಿಬಿ ಅಂದರೆ ಅಷ್ಟೊಂದು ಹುಚ್ಚು. 16 ವರ್ಷಗಳಿಂದ ಟ್ರೋಫಿ ಎಂಬುದು ಮರೀಚಿಕೆಯಾದರೂ ಅಭಿಮಾನಿಗಳ ಸಂಖ್ಯೆ ಏರುತ್ತಿದೆಯೇ ಹೊರತು ಕಡಿಮೆಯಾಗಿಲ್ಲ. ಎಷ್ಟೇ ಪಂದ್ಯ ಸೋತರೂ ನೋವು ನುಂಗಿಕೊಂಡೇ ತಂಡವನ್ನು ಸಮರ್ಥಿಸಿಕೊಳ್ಳುತ್ತಾರೆಯೇ ವಿನಃ ಎಂದೂ ಬಿಟ್ಟುಕೊಟ್ಟವರಲ್ಲ. ಯಾರೂ ಏನೇ ಹೇಳಿದರೂ ಅಭಿಮಾನಿಗಳು ಹೇಳುವುದೊಂದೇ ಈ ಸಲ ಕಪ್​ ನಮ್ದೇ!

ಟ್ರೆಂಡಿಂಗ್​ ಸುದ್ದಿ

ಪ್ರಸಕ್ತ ಆವೃತ್ತಿಯ ಮೊದಲಾರ್ಧದಲ್ಲಿ 7 ಪಂದ್ಯಗಳಲ್ಲಿ 6 ಸೋಲು ಕಂಡಿದ್ದ ಆರ್​ಸಿಬಿ, ದ್ವಿತಿಯಾರ್ಧದಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. ಟೂರ್ನಿಯಲ್ಲಿ 12 ಪಂದ್ಯಗಳಲ್ಲಿ 5ರಲ್ಲಿ ಗೆದ್ದಿದ್ದು, 7ರಲ್ಲಿ ಸೋತಿದೆ. 10 ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ. ಇದರೊಂದಿಗೆ ಟೂರ್ನಿಯಿಂದ ಹೊರಬೀಳುವ ಮೊದಲ ತಂಡ ಎಂದು ಹೇಳುತ್ತಿದ್ದವರ ಭವಿಷ್ಯವನ್ನು ಆರ್​ಸಿಬಿ ಸುಳ್ಳಾಗಿಸಿ, ಪ್ಲೇಆಫ್​ ರೇಸ್​​ನಲ್ಲಿ ಇನ್ನೂ ಉಳಿದುಕೊಂಡಿದೆ. ಇದಕ್ಕಾಗಿ ಪವಾಡವೇ ನಡೆಯಬೇಕು. ಹೀಗಾಗಿ ಆರ್​​ಸಿಬಿ ಅಭಿಮಾನಿಗಳು ಪೆನ್ನು ಪೇಪರ್​, ಕ್ಯಾಲ್ಕುಕೇಟರ್​ ಹಿಡಿದು ಅವರಿವರ ಸೋಲಿಗೆ ಪ್ರಾರ್ಥಿಸುತ್ತಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧ 60 ರನ್​ಗಳಿಂದ ಗೆದ್ದ ಬೆನ್ನಲ್ಲೇ ಆರ್​ಸಿಬಿ ಅಭಿಮಾನಿಗಳ ಕನಸು ಮತ್ತಷ್ಟು ಚಿಗುರೊಡೆದಿದೆ. ಇದರ ಬೆನ್ನಲ್ಲೇ ಅಭಿಮಾನಿಗಳು ತಮ್ಮ ವೈಯಕ್ತಿಕ ಕೆಲಸಗಳನ್ನೇ ಬದಿಗಿಟ್ಟು, ಪ್ಲೇಆಫ್​ ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾವ ತಂಡ ಸೋಲಬೇಕು, ಯಾರು ಗೆಲ್ಲಬೇಕು, ಆರ್​ಸಿಬಿ ಏನು ಮಾಡಬೇಕು? ಹೀಗೆ ಹಲವು ಲೆಕ್ಕಾಚಾರ ಹಾಕಿಕೊಳ್ಳುತ್ತಾ ಕೂತಿದ್ದು, ತುಂಬಾ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಬೇರೆ ಬೇರೆ ತಂಡಗಳ ಸೋಲಿಗೂ ಪ್ರಾರ್ಥನೆ ಕೂಡ ಮಾಡುತ್ತಿದ್ದಾರೆ.

ಸಿಎಸ್​ಕೆ, ಗುಜರಾತ್, ಡೆಲ್ಲಿ, ಲಕ್ನೋ ಗೆದ್ದರೆ ಮತ್ತು ಸೋತರೆ ಆರ್​​ಸಿಬಿಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದರ ಕುರಿತು ಲೆಕ್ಕ ಹಾಕುತ್ತಿದ್ದಾರೆ. ಆದರೆ ಬೇರೆ ಯಾವ ತಂಡದ ಅಭಿಮಾನಿಯೂ ಸಹ ಪ್ಲೇಆಫ್​ ಲೆಕ್ಕಾಚಾರದ ಬಗ್ಗೆ ಯೋಚನೆಯೇ ಮಾಡಿಲ್ಲ. ಅವರು ತಲೆಯೇ ಕಡಿಸಿಕೊಳ್ಳುತ್ತಿಲ್ಲ. ಆದರೆ ಆರ್​ಸಿಬಿ ಫ್ಯಾನ್ಸ್​ ಅಭಿಮಾನಿಗಳು ತಮ್ಮ ಪರ್ಸನಲ್ ಕೆಲಸಗಳನ್ನೇ ಕೈಬಿಟ್ಟು ಅದಕ್ಕಾಗಿ ಸಮಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ ಏಳುವಾಗ, ಮಲಗುವಾಗ ಆರ್​​ಸಿಬಿ ಪ್ಲೇಆಫ್​ ಪ್ರವೇಶಿಸುವ ಕುರಿತೇ ಯೋಚನೆ ಮಾಡುತ್ತಿದ್ದಾರೆ.

ಯಾವ ತಂಡಕ್ಕೆ, ಎಷ್ಟು ಅವಕಾಶ ಇದೆ? (ಶೇಕಡವಾರು)

ಮುಂಬೈ ಇಂಡಿಯನ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಎಲಿಮಿನೇಟ್​ ಆಗಿವೆ. ಯಾವ ತಂಡಕ್ಕೆ ಎಷ್ಟು ಶೇಕಡವಾರು ಪ್ಲೇಆಫ್ ಪ್ರವೇಶಿಸುವ ಸಾಧ್ಯತೆ ಇದೆ ಎಂಬುದರ ಕುರಿತು ಲೆಕ್ಕಹಾಕಿದ್ದಾರೆ. ಕೆಕೆಆರ್​ ಮತ್ತು ಆರ್​ಆರ್​ ತಂಡಕ್ಕೆ ಶೇ 99, ಎಸ್​​ಆರ್​ಹೆಚ್​ ಶೇ 97, ಸಿಎಸ್​ಕೆ ಶೇ 65, ಡೆಲ್ಲಿ ಶೇ 15, ಲಕ್ನೋ ಶೇ 14, ಆರ್​​​ಸಿಬಿ ಶೇ 10ರಷ್ಟು ಪ್ಲೇಆಫ್​ ಪ್ರವೇಶಿಸುವ ಅವಕಾಶ ಇದೆ. ಹಾಗಾಗಿ ಈ ಶೇಕಡವಾರು ಏರಿಸಲು ಆರ್​​ಸಿಬಿ ಫ್ಯಾನ್ಸ್ ಸಿಎಸ್​ಕೆ, ಡೆಲ್ಲಿ, ಲಕ್ನೋ ತಂಡಗಳು ಸೋಲಬೇಕೆಂದು ಪ್ರಾರ್ಥಿಸುತ್ತಿದ್ದಾರೆ. ಆರ್​ಸಿಬಿ ಪ್ಲೇಆಫ್ ಪ್ರವೇಶಿಸಲು ಯಾವೆಲ್ಲಾ ಸಾಧ್ಯತೆ ಇದೆಯೋ ಅದೆಲ್ಲವನ್ನೂ ಹುಡುಕಾಟ ನಡೆಸುತ್ತಿದ್ದು, ಇತರ ತಂಡಗಳ ಸೋಲಿಗೆ ದೇವರ ಮೊರೆ ಹೋಗಿದ್ದಾರೆ.

ಆರ್​ಸಿಬಿ 3ನೇ ಸ್ಥಾನ ಹೇಗೆ ಪಡೆಯಬಹುದು?

 • ಆರ್​ಸಿಬಿ ಕೇವಲ ನಾಲ್ಕನೇ ಸ್ಥಾನವಲ್ಲ, 3ನೇ ಸ್ಥಾನವನ್ನೂ ಪಡೆಯಲು ಅವಕಾಶ ಇದೆ. ಅದಕ್ಕೆ ಇಲ್ಲಿದೆ ನೋಡಿ ಅವಕಾಶ.
 • ಆರ್​ಸಿಬಿ ತನ್ನ ಕೊನೆಯ 2 ಪಂದ್ಯಗಳಲ್ಲಿ ಗೆಲ್ಲಲೇಬೇಕು.
 • ಸನ್​ರೈಸರ್ಸ್ ಹೈದರಾಬಾದ್ (ಜಿಟಿ, ಡಿಸಿ ವಿರುದ್ಧ) ಎಲ್ಲಾ ಪಂದ್ಯಗಳಲ್ಲಿ ಸೋಲಬೇಕು.
 • ಅದೇ ರೀತಿ ಚೆನ್ನೈ ತನ್ನ 3 (ಜಿಟಿ, ಆರ್​ಆರ್, ಆರ್​ಸಿಬಿ​) ಪಂದ್ಯಗಳಲ್ಲೂ ಪರಾಭವಗೊಳ್ಳಬೇಕು.
 • ಮತ್ತೊಂದೆಡೆ ಲಕ್ನೋ, ಡೆಲ್ಲಿ ವಿರುದ್ಧ ಗೆಲ್ಲಬೇಕು, ಆದರೆ ಮುಂಬೈ ವಿರುದ್ಧ ಸೋಲಬೇಕು.
 • ಡೆಲ್ಲಿ ತಂಡವು ಲಕ್ನೋ ಮತ್ತು ಬೆಂಗಳೂರು ವಿರುದ್ಧ ಸೋಲಬೇಕು.
 • ಹೀಗಾದಾಗ ಆರ್​ಸಿಬಿ 14 ಅಂಕಗಳೊಂದಿಗೆ 3ನೇ ಸ್ಥಾನ ಮತ್ತು ಲಕ್ನೋ 14 ಅಂಕಗಳೊಂದಿಗೆ ನಾಲ್ಕನೇ ಸ್ಥಾನ ಪಡೆಯಲಿದೆ.
 • ಲಕ್ನೋ ವಿರುದ್ಧ ಡೆಲ್ಲಿ ಗೆದ್ದರೆ, ಆರ್​​ಸಿಬಿ ವಿರುದ್ಧ ಸೋಲಬೇಕು. ಆಗ ಮುಂಬೈ ವಿರುದ್ಧ ಲಕ್ನೋ ಗೆದ್ದರೂ ಆರ್​ಸಿಬಿ ಮೂರನೇ ಸ್ಥಾನದಲ್ಲೇ ಉಳಿಯಬಹುದು. ಅದಕ್ಕಾಗಿ ಲಕ್ನೋ-ಡೆಲ್ಲಿಗಿಂತ ನೆಟ್​ ರನ್ ರೇಟ್ ಉತ್ತಮವಾಗಿ ಕಾಯ್ದುಕೊಳ್ಳಬೇಕು.

ಆರ್​ಸಿಬಿ 4ನೇ ಸ್ಥಾನ ಪಡೆಯಲು ಹೇಗೆ ಸಾಧ್ಯ?

 • ಆರ್​​ಸಿಬಿ ತನ್ನ ಪ್ಲೇಆಫ್​ ಆಸೆಯನ್ನು ಜೀವಂತವಾಗಿಟ್ಟುಕೊಳ್ಳಲು ತನ್ನ ಎರಡೂ ಪಂದ್ಯಗಳನ್ನು ಗೆಲ್ಲಬೇಕು.
 • ಭಯ ತಂಡಗಳಿಗೂ 18 ಅಂಕ ಸಂಪಾದಿಸಲು ಅವಕಾಶವಿರುವ ಕಾರಣ ಎಸ್​ಆರ್​​ಹೆಚ್ ಮತ್ತು ಸಿಎಸ್​ಕೆ ತಂಡಗಳು ತಮ್ಮ ಎಲ್ಲಾ ಪಂದ್ಯಗಳನ್ನು ಸೋಲಬೇಕು. ಅಲ್ಲದೆ ಎರಡೂ ತಂಡಗಳು ಕನಿಷ್ಠ 16 ಅಂಕ ಗಳಿಸಿದರೆ ಆರ್‌ಸಿಬಿಗೆ ಕನಸು ಭಗ್ನವಾಗಲಿದೆ.
 • ಆದಾಗ್ಯೂ, ಈ ಎರಡಲ್ಲಿ ಒಂದು ತಂಡ 16 ಅಥವಾ 18 ಅಂಕ ಗಳಿಸಿದರೆ, ಇನ್ನೊಂದು ತಂಡ 14 ಅಂಕಕ್ಕೆ ಮುಗಿಸಿದರೆ ಆರ್​ಸಿಬಿಗೆ ಮತ್ತೆ ಅವಕಾಶ ಇರಲಿದೆ. ಮತ್ತೊಂದೆಡೆ ಡೆಲ್ಲಿ vs ಲಕ್ನೋ ನಡುವಿನ ಪಂದ್ಯದಲ್ಲಿ ಯಾರೇ ಗೆದ್ದರೂ 14 ಅಂಕ ಆಗಲಿದೆ. ಇಂತಹ ಸನ್ನಿವೇಶದಲ್ಲಿ ಆರ್​ಸಿಬಿ 14 ಅಂಕಗಳಲ್ಲಿ 3 ರೀತಿಯಲ್ಲಿ ಟೈ ಆಗಲಿದೆ. ಆಗ ನೆಟ್ ರನ್​ ರೇಟ್ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ.
 • ಎಸ್​ಆರ್​​ಹೆಚ್​ ಎಲ್ಲಾ ಪಂದ್ಯ ಗೆಲ್ಲಬೇಕು, ಸಿಎಸ್​ಕೆ, ಡೆಲ್ಲಿ ಎಲ್ಲಾ ಸೋಲಬೇಕು. ಆಗ ಎಲ್​ಎಸ್​ಜಿ ಡೆಲ್ಲಿ ವಿರುದ್ಧ ಗೆದ್ದು ಮುಂಬೈ ವಿರುದ್ಧ ಸೋಲಬೇಕು. ಆಗ ಆರ್​ಸಿಬಿ ಮತ್ತು ಲಕ್ನೋ ತಲಾ 14 ಅಂಕ ಪಡೆಯಲಿವೆ. ನೆಟ್​ರೇಟ್​ ಕಾಯ್ದುಕೊಂಡ ತಂಡ 4ನೇ ಸ್ಥಾನ ಪಡೆಯಲಿದೆ. ಪ್ರಸ್ತುತ ಆರ್​ಸಿಬಿ ಧನಾತ್ಮಕ ನೆಟ್​ರನ್​ ರೇಟ್​ ಹೊಂದಿದೆ.
 • ಸಿಎಸ್​ಕೆ/ಎಸ್​​ಆರ್​​ಹೆಚ್​ ಮತ್ತು ಎಲ್​ಎಸ್​ಜಿ/ಡಿಸಿಗಿಂತ ಉತ್ತಮವಾದ ನೆಟ್​ರನ್ ರೇಟ್ ಹೊಂದಬೇಕು. ಲಕ್ನೋ ಮೈನಸ್ ನೆಟ್ ರನ್​ರೇಟ್​ ಹೊಂದಿರುವುದರಿಂದ ಮೇ 14 ರಂದು ನಿರ್ಣಾಯಕ ಪಂದ್ಯದಲ್ಲಿ ಡಿಸಿ ತಂಡವನ್ನು ಲಕ್ನೋ ಸೋಲಿಸಬೇಕು.

ಐಪಿಎಲ್‌ 2024 ಪಾಯಿಂಟ್ಸ್‌ ಟೇಬಲ್

 

IPL_Entry_Point