ಕನ್ನಡ ಸುದ್ದಿ  /  ಮನರಂಜನೆ  /  Spider-man 4: ಟಾಮ್‌ ಹಾಲೆಂಡ್‌ ನಟನೆಯ ಸ್ಪೈಡರ್‌ ಮ್ಯಾನ್‌ 4 ಬಿಡುಗಡೆ ಯಾವಾಗ? ಇಲ್ಲಿದೆ ಹೆಚ್ಚಿನ ವಿವರ

Spider-Man 4: ಟಾಮ್‌ ಹಾಲೆಂಡ್‌ ನಟನೆಯ ಸ್ಪೈಡರ್‌ ಮ್ಯಾನ್‌ 4 ಬಿಡುಗಡೆ ಯಾವಾಗ? ಇಲ್ಲಿದೆ ಹೆಚ್ಚಿನ ವಿವರ

Spider-Man 4 : ಸ್ಪೈಡರ್‌ಮ್ಯಾನ್‌ ಸಾಹಸದ ಮುಂದಿನ ಅಧ್ಯಾಯದ ಕುರಿತು ಒಂದಿಷ್ಟು ವಿವರಗಳನ್ನು ಇಲ್ಲಿ ನೀಡಲಾಗಿದೆ. ಅಂದರೆ, ಸ್ಪೈಡರ್‌ ಮ್ಯಾನ್‌ 4 ನಿರೀಕ್ಷಿತ ಬಿಡುಗಡೆ ದಿನಾಂಕ, ಪಾತ್ರವರ್ಗದ ವಿವರ, ಕಥೆ ಏನಿರಬಹುದು ಇತ್ಯಾದಿ ವಿವರಗಳನ್ನು ಪಡೆಯೋಣ.

ಟಾಮ್‌ ಹಾಲೆಂಡ್‌ ನಟನೆಯ ಸ್ಪೈಡರ್‌ ಮ್ಯಾನ್‌ 4
ಟಾಮ್‌ ಹಾಲೆಂಡ್‌ ನಟನೆಯ ಸ್ಪೈಡರ್‌ ಮ್ಯಾನ್‌ 4 (pic credit- Marvel studios)

ಸ್ಪೈಡರ್‌ಮ್ಯಾನ್‌ ಸಿನಿಮಾ ಎಂದರೆ ಮಕ್ಕಳಿಂದ ದೊಡ್ಡವರವರೆಗೆ ಎಲ್ಲರಿಗೂ ಇಷ್ಟವಾಗುತ್ತದೆ. ಜೇಡರ ಬಲೆಯಲ್ಲೇ ಹಾರುತ್ತ ನೆಗೆಯುತ್ತ ಸಾಗುವ ಸ್ಪೈಡರ್‌ಮ್ಯಾನ್‌ ಎಂಬ ಸೂಪರ್‌ಹೀರೋ ಸಿನಿಮಾದ ನಾಲ್ಕನೇ ಅಧ್ಯಾಯ ಯಾವಾಗ ಬರಲಿದೆ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಇದಕ್ಕೂ ಮುನ್ನ ಸ್ಪೈಡರ್‌ ಮ್ಯಾನ್‌ ನೋ ವೇ ಹೋಮ್‌ ಬಿಡುಗಡೆಯಾಗಿತ್ತು. ಇದೀಗ ಸ್ಪೈಡರ್‌ಮ್ಯಾನ್‌ನ ಮುಂದಿನ ಆವೃತ್ತಿಯ ಕುರಿತು ಕೆಲಸ ಕಾರ್ಯಗಳು ಆರಂಭವಾಗಿವೆ. ಈ ಹಿಂದೆ ಬಿಡುಗಡೆಯಾದ ನೋ ವೇ ಹೋಮ್‌ನಲ್ಲಿ ಕಥೆ ಮುಂದುವರೆಯುವ ಸುಳಿವು ಇತ್ತು. ಇತ್ತೀಚೆಗೆ ಟಾಮ್‌ ಹಾಲೆಂಡ್‌ ಅವರು "ಸ್ಪೈಡರ್‌ ಮ್ಯಾನ್‌ 4 ಚಿತ್ರದ ಕಥೆ ರಚಿಸಲಾಗುತ್ತಿದೆ" ಎಂಬ ಸುಳಿವು ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸ್ಪೈಡರ್‌ಮ್ಯಾನ್‌ ಸಾಹಸದ ಮುಂದಿನ ಅಧ್ಯಾಯದ ಕುರಿತು ಒಂದಿಷ್ಟು ವಿವರಗಳನ್ನು ಇಲ್ಲಿ ನೀಡಲಾಗಿದೆ. ಅಂದರೆ, ಸ್ಪೈಡರ್‌ ಮ್ಯಾನ್‌ 4 ನಿರೀಕ್ಷಿತ ಬಿಡುಗಡೆ ದಿನಾಂಕ, ಪಾತ್ರವರ್ಗದ ವಿವರ, ಕಥೆ ಏನಿರಬಹುದು ಇತ್ಯಾದಿ ವಿವರಗಳನ್ನು ಪಡೆಯೋಣ.

ಸ್ಪೈಡರ್ ಮ್ಯಾನ್ 4 ಚಿತ್ರದ ನಿರ್ಮಾಣ ಆರಂಭವಾಗಿರುವುದೇ?

ಸ್ಪೈಡರ್‌ಮ್ಯಾನ್‌ನ ಮುಂದಿನ ಅಧ್ಯಾಯದ ಪ್ರಾಜೆಕ್ಟ್‌ ಆರಂಭಿಕ ಹಂತದಲ್ಲಿದೆ ಎಂದು ನಿರ್ಮಾಪಕ ಆಮಿ ಪಾಸ್ಕಲ್ ಹೇಳಿದ್ದಾರೆ. ನಮ್ಮ ಬಳಿ ಕಥೆ ಇದೆ ಎಂದು ಇತ್ತೀಚೆಗೆ ಹೇಳಿದ್ದಾರೆ. ಇದೀಗ ನಮ್ಮ ಬರಹಗಾರರು ದೊಡ್ಡ ಆಲೋಚನೆಗಳನ್ನು ಹೊಂದಿದ್ದಾರೆ ಎನ್ನುವ ಮೂಲಕ ಕಥೆ ಕಟ್ಟುವ ಕೆಲಸ ಆರಂಭವಾಗಿದೆ ಎಂಬ ಸುಳಿವನ್ನು ಅವರು ನೀಡಿದ್ದಾರೆ.

ಸ್ಪೈಡರ್ ಮ್ಯಾನ್ 4 ಸಿನಿಮಾ ಬಿಡುಗಡೆ ಯಾವಾಗ?

ಜನವರಿ 2024ರಲ್ಲಿ ಸ್ಪೈಡರ್‌ಮ್ಯಾನ್‌ ಬಿಡುಗಡೆಯಾವುದೇ ಇಲ್ಲವೇ ಎಂಬ ಕುತೂಹಲವಿದೆ. ಈ ದಿನಾಂಕದ ಕುರಿತು ಒಂದಿಷ್ಟು ಅನಿಶ್ಚಿತತೆ ಇದೆ. ಕೆಲವು ಮೂಲಗಳ ಪ್ರಕಾರ 2024ರ ಜುಲೈನಲ್ಲಿ ಸ್ಪೈಡರ್‌ಮ್ಯಾನ್‌ 4 ಪ್ರೊಡಕ್ಷನ್‌ ಆರಂಭವಾಗಬಹುದು ಎನ್ನಲಾಗಿದೆ. ಹಾಲಿವುಡ್‌ ಸ್ಟ್ರೈಕ್‌ನಿಂದಾಗಿ ಪ್ರೊಡಕ್ಷನ್‌ ಕೆಲಸಕ್ಕೆ ಒಂದಿಷ್ಟು ಹಿನ್ನಡೆಯಾಗಿದೆ. ಹಲವು ಪ್ರಮುಖ ಪ್ರಾಜೆಕ್ಟ್‌ಗಳು ನಿರ್ಮಾಣಕ್ಕಾಗಿ ಕಾಯುತ್ತಿವೆ. ಇದು ಸ್ಪೈಡರ್‌ಮ್ಯಾನ್‌ ಮೇಲೂ ಪರಿಣಾಮ ಬೀರಲಿದೆ.

ಸ್ಪೈಡರ್ ಮ್ಯಾನ್ 4 ಪಾತ್ರವರ್ಗ

ನೋ ವೇ ಹೋಮ್‌ನ ಕಥೆ ನೋಡಿಕೊಂಡರೆ, ಅದರ ಮುಂದುವರೆದ ಅಧ್ಯಾಯದಲ್ಲಿ ಯಾರೆಲ್ಲ ಬರಲಿದ್ದಾರೆ ಎಂಬ ಸೂಚನೆ ದೊರಕುತ್ತಿದೆ. ಪೀಟರ್‌ ಪಾರ್ಕರ್‌ ಏಕಾಂಗಿಯಾಗಿದ್ದಾನೆ. ಟಾಮ್‌ ಹಾಲೆಂಡ್‌ ಹಿಂತುರುಗುವ ಸಾಧ್ಯತೆ ಇದೆ. ಝೆಂಡಾಯ, ಜಾಕೊಬ್‌ ಬಾಟಲನ್‌ ಮುಂತಾದವರು ಬರುವ ಸೂಚನೆ ದೊರಕಿದೆ.

ಸ್ಪೈಡರ್‌ ಮ್ಯಾನ್‌ ಕಥೆ ಏನಿರಬಹುದು?

ಮುಂದಿನ ಅಧ್ಯಾಯವು ಸ್ಪೈಡರ್‌ ಮ್ಯಾನ್‌ ಕಥೆಗೆ ಮುಕ್ತಾಯ ಹಾಡುವ ಸಾಧ್ಯತೆಯಿದೆ. ಸ್ಪೈಡರ್‌ ಮ್ಯಾನ್‌ ಕಥೆ ನಾಲ್ಕನೇ ಅಧ್ಯಾಯದಲ್ಲಿ ಕೊನೆಗೊಳ್ಳುವ ಸೂಚನೆ ಅಭಿಮಾನಿಗಳಿಗೆ ಆಘಾತ ನೀಡಿದೆ. "ಸ್ಪೈಡರ್‌ಮ್ಯಾನ್‌ ಕಥೆ ಮುಗಿಸುವಂತಹ ಕಥೆ ಇದ್ದರೆ ಮುಗಿಯಬಹುದು" ಎಂಬ ಸುಳಿವನ್ನು ಸೋನಿ ಕಂಪನಿಯ ಆಮಿ ಪಾಸ್ಕಲ್‌ ಈ ಹಿಂದೆ ನೀಡಿದ್ದರು.

IPL_Entry_Point