ಕನ್ನಡ ಸುದ್ದಿ  /  ಮನರಂಜನೆ  /  Raymo On Ott: ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಒಟಿಟಿಗೆ ಎಂಟ್ರಿ; Zee5ನಲ್ಲಿ ಮ್ಯೂಸಿಕಲ್‌ ಲವ್‌ಸ್ಟೋರಿ..

Raymo on OTT: ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಒಟಿಟಿಗೆ ಎಂಟ್ರಿ; ZEE5ನಲ್ಲಿ ಮ್ಯೂಸಿಕಲ್‌ ಲವ್‌ಸ್ಟೋರಿ..

‘ರೇಮೊ’ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ‘ರೋಗ್’ ಸಿನಿಮಾ ನಂತರ ಬ್ರೇಕ್ ಪಡೆದುಕೊಂಡಿದ್ದ ನಟ ಇಶಾನ್ ಸಾಕಷ್ಟು ತಯಾರಿಯೊಂದಿಗೆ, ನಯಾ ಲುಕ್‌ನೊಂದಿಗೆ ಈ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು.

ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಒಟಿಟಿಗೆ ಎಂಟ್ರಿ; ZEE5ನಲ್ಲಿ ಮ್ಯೂಸಿಕಲ್‌ ಲವ್‌ಸ್ಟೋರಿ..
ಪವನ್ ಒಡೆಯರ್ ನಿರ್ದೇಶನದ ‘ರೇಮೊ’ ಒಟಿಟಿಗೆ ಎಂಟ್ರಿ; ZEE5ನಲ್ಲಿ ಮ್ಯೂಸಿಕಲ್‌ ಲವ್‌ಸ್ಟೋರಿ..

Raymo on OTT: ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ಒಟಿಟಿ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ಬಿಗ್ ಬಜೆಟ್, ಅದ್ದೂರಿ ಮೇಕಿಂಗ್, ಇಶಾನ್ ಸ್ಟೈಲಿಶ್ ಅವತಾರ ಹೀಗೆ ಸಾಕಷ್ಟು ಕಾರಣಗಳಿಂದ ‘ರೇಮೊ’ ನಿರೀಕ್ಷೆ ಹುಟ್ಟಿಸಿತ್ತು. ನವೆಂಬರ್ 25ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು ಉತ್ತಮ ವಿಮರ್ಶೆ ಪಡೆದುಕೊಂಡ ಸಿನಿಮಾ ಇದೀಗ ZEE5 ಮೂಲಕ ಒಟಿಟಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ.

ಮಾರ್ಚ್ 10ರಂದು ‘ರೇಮೊ’ ಸಿನಿಮಾ ZEE5 ನಲ್ಲಿ ಬಿಡುಗಡೆಯಾಗುತ್ತಿದೆ. ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ ‘ವೇದ’ ಸಿನಿಮಾ ಸೂಪರ್ ಸಕ್ಸಸ್ ಆದ ಬೆನ್ನಲ್ಲೇ ಮತ್ತೊಂದು ಹಿಟ್ ಸಿನಿಮಾವನ್ನು ತನ್ನ ಪ್ರೇಕ್ಷಕರಿಗೆ ನೀಡುತ್ತಿದೆ ZEE5.

‘ವೇದ’ ಸಿನಿಮಾ ಬಿಡುಗಡೆಯಾಗಿ ಅತಿ ಕಡಿಮೆ ಅವಧಿಯಲ್ಲೇ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ವೀವ್ಸ್ ಪಡೆದುಕೊಂಡಿತ್ತು. ಆ ಖುಷಿಯನ್ನು ZEE5 ಸೆಲೆಬ್ರೆಟ್ ಕೂಡ ಮಾಡಿತ್ತು. ಇದೀಗ ಅದರ ಬೆನ್ನಲ್ಲೇ ಅದ್ದೂರಿ ಮೇಕಿಂಗ್, ಮ್ಯೂಸಿಕಲ್ ಲವ್ ಸ್ಟೋರಿ ಮೂಲಕ ಗಮನ ಸೆಳೆದ ‘ರೇಮೊ’ ಸಿನಿಮಾವನ್ನು ಬಿಡುಗಡೆ ಮಾಡುತ್ತಿದೆ.

‘ರೇಮೊ’ ಮ್ಯೂಸಿಕಲ್ ಲವ್ ಸ್ಟೋರಿ ಸಿನಿಮಾ. ‘ರೋಗ್’ ಸಿನಿಮಾ ನಂತರ ಬ್ರೇಕ್ ಪಡೆದುಕೊಂಡಿದ್ದ ನಟ ಇಶಾನ್ ಸಾಕಷ್ಟು ತಯಾರಿಯೊಂದಿಗೆ, ನಯಾ ಲುಕ್‌ನೊಂದಿಗೆ ಈ ಚಿತ್ರದಲ್ಲಿ ಕಂಬ್ಯಾಕ್ ಮಾಡಿದ್ದಾರೆ. ಶರತ್ ಕುಮಾರ್, ರಾಜೇಶ್ ನಟರಂಗ, ಅಚ್ಯುತ್ ಕುಮಾರ್, ಮಧು ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

ಜಯಾದಿತ್ಯ ಬ್ಯಾನರ್‌ನಡಿ ಸಿ. ಆರ್. ಮನೋಹರ್ ಅದ್ದೂರಿಯಾಗಿ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಸಿ. ಆರ್ ಗೋಪಿ ಸಹ ನಿರ್ಮಾಣವಿದೆ. ವೈದಿ ಕ್ಯಾಮೆರಾ ವರ್ಕ್, ಕೆ.ಎಂ. ಪ್ರಕಾಶ್ ಸಂಕಲನ, ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

ಸಿನಿಮಾ ಸಂಬಂಧಿ ಈ ಸುದ್ದಿಗಳನ್ನೂ ಓದಿ

Malaika Arora bedroom secrets: ಅರ್ಜುನ್‌ ಕಪೂರ್‌‌ ಜತೆಗಿನ ರಾತ್ರಿಯ ಅನುಭವವನ್ನು ಮುಕ್ತವಾಗಿ ಹೇಳಿಕೊಂಡ ನಟಿ ಮಲೈಕಾ ಅರೋರಾ..

ಬಾಲಿವುಡ್‌ ನಟಿ ಮಲೈಕಾ ಅರೋರಾ ಮತ್ತು ಅರ್ಜುನ್‌ ಕಪೂರ್‌ ನಡುವಿನ ಪ್ರೇಮ ಸಲ್ಲಾಪ ಶುರುವಾಗಿ ಕೆಲ ವರ್ಷಗಳೇ ಕಳೆದವು. ಹೋದಲ್ಲೆಲ್ಲ ಕೈ ಕೈ ಹಿಡಿದು ಸುತ್ತಾಡುವ ಈ ಜೋಡಿ, ಒಟ್ಟಿಗೆ ಪ್ರವಾಸದಲ್ಲಿಯೂ ಕಾಣಿಸಿಕೊಂಡು ಎಲ್ಲರ ಕಣ್ಣಿಗೆ ಬಿದ್ದಿದ್ದು ಈಗಿನ ವಿಚಾರವೇನಲ್ಲ. ಬಾಲಿವುಡ್‌ನಲ್ಲಿ ಸಿನಿಮಾ ಸಂಬಂಧಿ ಕಾರ್ಯಕ್ರಮಗಳಲ್ಲಿಯೂ ಕಾಣಿಸಿಕೊಳ್ಳುವ ಈ ಜೋಡಿ ಎಲ್ಲರ ಹುಬ್ಬೇರಿಸಿದೆ. ಆದರೆ, ಈ ಜೋಡಿಯ ಮದುವೆ ಯಾವಾಗ? ಈ ಥರದ ಸುದ್ದಿಗಳಿಗೆ ಯಾವುದೇ ಉತ್ತರ ಸಿಕ್ಕಿಲ್ಲ. ಹಾಗಂತ ಈ ಜೋಡಿ ಬೇರೆ ಬೇರೆ ಇಲ್ಲ. ಜತೆಯಾಗಿಯೇ ಒಂದೇ ಮನೆಯಲ್ಲಿದ್ದಾರೆ! ಪೂರ್ತಿ ವಿವರಕ್ಕೆ ಇಲ್ಲಿ ಕ್ಲಿಕ್‌ ಮಾಡಿ

Janhvi kapoor: ಮೇಲುಡುಗೆ ಧರಿಸದೇ ಫೋಟೋಶೂಟ್‌ಗೆ ಪೋಸ್‌ ನೀಡಿದ ನಟಿ ಜಾನ್ವಿ;‌ ಮೆಚ್ಚುಗೆ ಜತೆಗೆ ಟ್ರೋಲ್‌ ಆದ ಕಪೂರ್‌ ಸುಂದರಿ...

Janhvi kapoor: ಸದಾ ಬಗೆಬಗೆ ಫೋಟೋ ಶೂಟ್‌ ಮೂಲಕ ಸೋಷಿಯಲ್‌ ಮೀಡಿಯಾದಲ್ಲಿ ಹಲ್‌ಚಲ್‌ ಸೃಷ್ಟಿಸುವ ನಟಿ ಜಾನ್ವಿ ಕಪೂರ್‌, ಇದೀಗ ಹೊಸ ಫೋಟೋಶೂಟ್‌ ಮೂಲಕ ಮತ್ತೆ ಎದುರಾಗಿದ್ದಾರೆ. ಫೋಟೋ ನೋಡಲು ಇಲ್ಲಿ ಕ್ಲಿಕ್‌ ಮಾಡಿ

IPL_Entry_Point