Seetha Rama Serial: ಚಾಂದಿನಿ ಆಗಮನದಿಂದ ಹೆಚ್ಚಾಯ್ತು ರಾಮ್‌ ಎದೆಬಡಿತ; ಜೀವದ ಗೆಳೆಯನ ಸ್ಥಿತಿ ಕಂಡು ನಲುಗಿದ ಅಶೋಕ
ಕನ್ನಡ ಸುದ್ದಿ  /  ಮನರಂಜನೆ  /  Seetha Rama Serial: ಚಾಂದಿನಿ ಆಗಮನದಿಂದ ಹೆಚ್ಚಾಯ್ತು ರಾಮ್‌ ಎದೆಬಡಿತ; ಜೀವದ ಗೆಳೆಯನ ಸ್ಥಿತಿ ಕಂಡು ನಲುಗಿದ ಅಶೋಕ

Seetha Rama Serial: ಚಾಂದಿನಿ ಆಗಮನದಿಂದ ಹೆಚ್ಚಾಯ್ತು ರಾಮ್‌ ಎದೆಬಡಿತ; ಜೀವದ ಗೆಳೆಯನ ಸ್ಥಿತಿ ಕಂಡು ನಲುಗಿದ ಅಶೋಕ

Seetha Rama Serial Today Episode: ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ಧಾರಾವಾಹಿ 'ಸೀತಾ ರಾಮ' ಇದೀಗ ನೋಡುಗರ ಗಮನ ಸೆಳೆಯುವುದರ ಜತೆಗೆ ರೋಚಕತೆ ಹೆಚ್ಚಿಸುತ್ತಿದೆ. ಅಕ್ಟೋಬರ್ 17ರ ಸಂಚಿಕೆಯಲ್ಲಿ ಏನೆಲ್ಲಾ ಆಯಿತು ಎಂಬ ವಿವರ ಇಲ್ಲಿದೆ. ಚಾಂದಿನಿಯ ಗುಂಗಲ್ಲಿ ಕತ್ತಲೆಗೆ ಜಾರಿದ್ದಾನೆ ರಾಮ. ಜೀವದ ಗೆಳೆಯ ರಾಮನ ಮನಸ್ಸಿಗಾದ ನೋವು ಅಶೋಕನ ಹೃದಯಕ್ಕೂ ನಾಟಿದೆ.

Seetha Rama Serial: ಚಾಂದಿನಿ ಆಗಮನದಿಂದ ಹೆಚ್ಚಾಯ್ತು ರಾಮ್‌ ಎದೆಬಡಿತ; ಜೀವದ ಗೆಳೆಯನ ಸ್ಥಿತಿ ಕಂಡು ನಲುಗಿದ ಅಶೋಕ
Seetha Rama Serial: ಚಾಂದಿನಿ ಆಗಮನದಿಂದ ಹೆಚ್ಚಾಯ್ತು ರಾಮ್‌ ಎದೆಬಡಿತ; ಜೀವದ ಗೆಳೆಯನ ಸ್ಥಿತಿ ಕಂಡು ನಲುಗಿದ ಅಶೋಕ

ಸೀತಾ ರಾಮ ಧಾರಾವಾಹಿ ಅಕ್ಟೋಬರ್ 17ರ ಸಂಚಿಕೆ: ರಾಮ್‌ ಖುಷಿಯಿಂದ ಇದ್ದಾನೆ, ಎಲ್ಲವೂ ಸರಿಯಾಗಿ ನಡೆಯುತ್ತಿದೆ ಎನ್ನುತ್ತಿರುವಾಗಲೇ ಇದೀಗ ಸೀತಾ ರಾಮ ಸೀರಿಯಲ್‌ನಲ್ಲಿ ಏರಿಳಿತ ಕಾಣಿಸಿದೆ. ರಾಮನ ಬದುಕಿಗೆ ಹಳೇ ಹುಡುಗಿ ಮತ್ತೆ ಎಂಟ್ರಿಯಾಗಿದ್ದಾಳೆ. ಆಫೀಸ್‌ ಮುಂಭಾಗದಲ್ಲಿ ನಿಂತಾಗ ಆಕೆಯ ಕಾರು ಹೋಗಿದ್ದನ್ನು ನೋಡಿದ ರಾಮ್‌ ಅಕ್ಷರಶಃ ನಲುಗಿ ಹೋಗಿದ್ದ. ಇದೀಗ ಒಂದು ಹೆಜ್ಜೆ ಮುಂದೆ ಹೋಗಿ ಅದೇ ಹಳೇ ಹುಡುಗಿ ಚಾಂದಿನಿಯಿಂದ ವಾಟ್ಸಾಪ್‌ ಮೆಸೆಜ್‌ ಸಹ ರಾಮ್‌ ಫೋನಿಗೆ ಬಂದಿದೆ.

ರಾಮ್‌ನನ್ನು ಹೇಗಾದರೂ ಮಾಡಿ ಖುಷಿಯಾಗಿಡಬೇಕು, ಆತ ತನ್ನ ಹಳೇ ದಿನಗಳನ್ನು ಮತ್ತೆ ನೆನಪು ಮಾಡಿಕೊಳ್ಳಬಾರದು ಎಂದು ಅಶೋಕ ಪರಿತಪಿಸುತ್ತಿದ್ದರೂ, ಇಂದಿಗೂ ಚಾಂದಿನಿ ನೆನಪಿನಲ್ಲಿಯೇ ಇದ್ದಾನೆ ರಾಮ. ಇದೇ ವಿಚಾರಕ್ಕೆ ರಾಮ್‌ ಮತ್ತು ಅಶೋಕನ ನಡುವೆ ಮಾತು ಬೆಳೆದಿದೆ. ಇತ್ತ ಮನೆಯಲ್ಲಿ ಮಾತ್ರ ರಾಮ್‌ ಪ್ರೀತಿಯಲ್ಲಿ ಬಿದ್ದ ಎಂದು ಸಂಭ್ರಮಿಸುತ್ತಿದ್ದಾರೆ. ಒಟ್ಟಾರೆ ಸದ್ಯ ರಾಮ್‌ ಟೈಮೇ ಸರಿಯಿಲ್ಲ.

ರಾಮ್‌ ಪ್ರೀತಿಯಲ್ಲಿ ಬಿದ್ದ ಅನ್ನೋ ಕಾರಣವನ್ನೇ ಸಾಧನಾ ಮೂಲಕ ಎಲ್ಲರೂ ಸಂಭ್ರಮಿಸುತ್ತಿದ್ದಾರೆ. ರಾಮ್‌ ಆಗಮಿಸುತ್ತಿದ್ದಂತೆ, ಕಂಗ್ರಾಜುಲೇಷನ್ಸ್‌ ಹೇಳಿದ್ದಾರೆ. ಮೊದಲೇ ಬೇಸರದಲ್ಲಿದ್ದ ರಾಮ್‌ಗೆ ಮನೆಯಲ್ಲಿನ ಈ ವಿಚಾರ ಮತ್ತಷ್ಟು ಬೇಸರ ತರಿಸಿದೆ. ಆ ಥರ ಏನೂ ಇಲ್ಲ ಎಂದು ಹೇಳಿ ಅಲ್ಲಿಂದ ಹೊರಟಿದ್ದಾನೆ. ಇತ್ತ ಭಾರ್ಗವಿ ತನ್ನ ಕಾರ್ಯ ಸಾಧನೆ ಮಾಡಿದ ಖುಷಿಯಲ್ಲಿ ಬೀಗುತ್ತಿದ್ದಾಳೆ.

ರಾಮ್‌ ಜೀವನದ ಕಹಿ ಹೊರಬರುವ ಸೂಚನೆ..

ಸೀತಾಳ ಮುಂದೆ, ರಾಮ್‌ ತನಗೆ ಯಾವತ್ತೂ ಲವ್‌ ಆಗುವುದಿಲ್ಲ ಎಂದೇ ಹೇಳಿಕೊಳ್ಳುತ್ತಿದ್ದಾನೆ. ಆದರೆ, ಇದೀಗ ರಾಮ್‌ ಜೀವನದಲ್ಲಿ ಬಂದ ಹುಡುಗಿ ಯಾರು ಎಂಬ ವಿಚಾರ ಮುನ್ನೆಲೆಗೆ ಬಂದಿದೆ. ಮೊದಲಿಗೆ ಕಾರ್‌ ತೋರಿಸಿ ಕುತೂಹಲ ಮೂಡಿಸಿ, ಚಾಂದಿನಿ ಹೆಸರೂ ಬಹಿರಂಗವಾಗಿತ್ತು. ಇದೀಗ ಆಕೆಯ ನಂಬರ್‌ನಿಂದಲೇ ರಾಮ್‌ಗೆ ಮೆಸೆಜ್‌ ಸಹ ಬಂದಿದೆ. ಈ ಮೂಲಕ ರಾಮ್‌ ಈ ಹಿಂದೆ ಹೇಗಿದ್ದ, ಚಾಂದಿನಿ ಯಾರು? ಎಂಬ ವಿಚಾರ ಮುಂದಿನ ದಿನಗಳಲ್ಲಿ ಹೊರಬರಲಿದೆ.

ಇತ್ತ ಮನೆ ವಿಚಾರಕ್ಕೆ ಸೀತಾ ಬಾಳಲ್ಲಿ ರುದ್ರಪ್ರತಾಪನ ಕಾಟ ಹೆಚ್ಚಾಗಿದೆ. ಆಕೆಯ ಪತಿ ಯಾರು, ಸೀತಾಳಿಗೆ ಅಷ್ಟಕ್ಕೂ ಮದುವೆ ಆಗಿದೆಯಾ? ಇಬ್ಬರೂ ದೂರವಾಗಲು ಕಾರಣ ಏನು? ಹೀಗೆ ಹತ್ತು ಹಲವು ಪ್ರಶ್ನೆಗಳು ಕಾಣಿಸುತ್ತಿವೆಯಾದರೂ, ಒಂದೊಂದಾಗಿಯೇ ಅವು ಹೊರಬೀಳಬೇಕಿದೆ. ಆ ಪೈಕಿ ರಾಮ್‌ ಜೀವನದಲ್ಲಿ ನಡೆದ ಕಹಿ ಘಟನೆಗಳು ಇದೀಗ ಪದರು ರೂಪದಲ್ಲಿ ಬಿಚ್ಚಿಕೊಳ್ಳುತ್ತಿವೆ. ಭಾರ್ಗವಿಯೂ ಇದರಲ್ಲಿ ಪಾಲುದಾರಳು ಎಂಬ ಸತ್ಯ ಈಗಾಗಲೇ ವೀಕ್ಷಕರಿಗೆ ತಿಳಿದಿದೆ.

Whats_app_banner