Seetha Rama: ಸೀತಾಳಿಗೆ ಕಾಟ ಕೊಟ್ಟ ಸಾಲಗಾರರಿಗೆ ಫೋನಿನಲ್ಲೇ ಕೌಂಟರ್ ಕೊಟ್ಟ ರಾಮ; ಅಮ್ಮನ ಮುಂದೆ ಸತ್ಯ ಹೇಳ್ತಾಳ ಸಿಹಿ?
ಸಾಲ ಕೊಟ್ಟವರು ಇಡೀ ಮನೆಯನ್ನೇ ಹಾಳು ಮಾಡಿ, ಸೀತಾಳ ಬರುವಿಕೆಯನ್ನೇ ಕಾದಿರುತ್ತಾರೆ. ಭಯದ ಮುಖದಲ್ಲಿ ಗಾಬರಿಯಲ್ಲೇ ಮನೆ ಪ್ರವೇಶಿಸುವ ಸೀತಾಗೆ ಹಣ ಕೊಟ್ಟರೆ ಇಲ್ಲಿಂದ ತೆರಳುವುದಾಗಿ ಹೇಳ್ತಾರೆ. ಸೀತಾ ಎಷ್ಟೇ ಅಂಗಲಾಚಿದರೂ ಬಗ್ಗದ ಸಾಲಗಾರರು, ಬೆದರಿಕೆ ಹಾಕುತ್ತಾರೆ.
Seetha Rama: ಜೀ ಕನ್ನಡದಲ್ಲಿ ಪ್ರೋಮೋ ಮತ್ತು ಶೀರ್ಷಿಕೆ ಹಾಡಿನ ಮೂಲಕವೇ ಕುತೂಹಲ ಮೂಡಿಸಿದ್ದ ಧಾರಾವಾಹಿ ಸೀತಾ ರಾಮ. ಅದ್ದೂರಿತನದ ಮೂಲಕವೇ ಆರಂಭವಾಗಿರುವ ಸೀರಿಯಲ್ ನೋಡುಗರನ್ನು ಹಿಡಿದಿಟ್ಟುಕೊಳ್ಳಲು ಯಶಸ್ವಿಯಾಗಿದೆ. ಪಾತ್ರವರ್ಗದ ಮೂಲಕ ಎಲ್ಲರ ಗಮನಸೆಳೆಯುವುದರ ಜತೆಗೆ, ನವಿರಾದ ಪ್ರೇಮಕಥೆಯೊಂದಿಗೆ ವೀಕ್ಷಕರ ಮನದಲ್ಲಿ ನೆಲೆ ನಿಲ್ಲುತ್ತಿದೆ.
ಗಂಡು ದಿಕ್ಕಿಲ್ಲದ ಮನೆ, ಮಧುಮೇಹಿ ಪೀಡಿತ ಪುಟಾಣಿ ಸಿಹಿ, ಒತ್ತಡದ ಜೀವನ, ಸಾಲಗಾರರ ಕಾಟ ಹೀಗೆ ಸಮಸ್ಯೆಗಳನ್ನೇ ಹೊದ್ದು ಸಾಗುವ ಸೀತಾ ಒಂದೆಡೆಯಾದರೆ, ಐಶಾರಾಮಿ ಬದುಕಿನಲ್ಲೂ ಪ್ರೀತಿ ಕಳೆದುಕೊಂಡು ಪರಿತಪಿಸುವ ರಾಮ ಮತ್ತೊಂದೆಡೆ. ರಾಮನಿಗೆ ಸದಾ ಕೆಡುಕನ್ನೇ ಬಯಸುವ ಚಿಕ್ಕಿ. ಹೀಗೆ ಹಲವು ಪದರಗಳಲ್ಲಿ ಸಾಗುವ ಸೀತಾ ರಾಮ ದಿನದಿಂದ ದಿನಕ್ಕೆ ನೋಡುಗರಿಗೆ ರೋಚಕ ಅನುಭವವನ್ನೇ ನೀಡುತ್ತಿದೆ.
ಮುಖ್ಯಮಂತ್ರಿ ಚಂದ್ರು, ವೈಷ್ಟವಿ ಗೌಡ, ಗಗನ್ ಚಿನ್ನಪ್ಪ, ಪೂಜಾ ಲೋಕೇಶ್, ಅಶೋಕ್ ಹೀಗೆ ಹಿರಿದಾದ ಪಾತ್ರವರ್ಗ ಹೊಂದಿರುವ ಸೀತಾ ರಾಮ ಸೀರಿಯಲ್ ಅದ್ದೂರಿ ಮೇಕಿಂಕ್‌ನಿಂದಲೂ ಶ್ರೀಮಂತವಾಗಿದೆ. ಪ್ರಸಾರ ಆರಂಭವಾದಾಗಿನಿಂದ ಕ್ಯೂರಿಯಾಸಿಟಿ ಹೆಚ್ಚಿಸುತ್ತಲೇ ಹೋಗುತ್ತಿದೆ. ಸಂಚಿಕೆಯಿಂದ ಸಂಚಿಕೆಗೆ ಹೆಚ್ಚೆಚ್ಚು ವೀಕ್ಷಕರ ಸೆಳೆಯುತ್ತಿದೆ.
ಇದೀಗ ಹಿಂದಿನ ಸಂಚಿಕೆ ಘಟ್ಟವನ್ನು ನೋಡುವುದಾದರೆ, ಚಿಕ್ಕಿ ಭಾರ್ಗವಿ ಕರೆತಂದ ಮದುವೆ ಸಂಬಂಧವನ್ನು ಮುರಿದುಕೊಂಡ ರಾಮ್, ತನ್ನ ಮನಸ್ಸಿನಲ್ಲೇನಿದೆ ಎಂಬುದನ್ನು ಹೇಳಿಕೊಂಡಿದ್ದಾನೆ. ಇತ್ತ ಸಾಲಗಾರರ ಕಾಟಕ್ಕೆ ಮನೆಗೆ ಹೋಗದೆ ಪಾರ್ಕ್‌ನಲ್ಲೇ ದಿನ ಕಳೆದಿದ್ದಾಳೆ ಸೀತಾ. ಸಿಹಿ ಮಾತಂತೆ ಮದುವೆ ಸಂಬಂಧ ಮುರಿದಿದೆ. ಆ ಪುಟಾಣಿಯ ಬಾಯಿಗೆ ಸಕ್ಕರೆ ಹಾಕಲು ಹೊರಟಿದ್ದ ರಾಮನಿಗೆ, ಅಚಾನಕ್ಕಾಗಿ ಸೀತಾ ಹಾಗೂ ಸಿಹಿ ಕಾಣಿಸುತ್ತಾರೆ. ಕಾರ್ ನಿಲ್ಲಿಸಿ ಸಿಹಿ ಜತೆ ಮಾತನಾಡಿ, ಡ್ರಾಪ್ ನೀಡುವುದಾಗಿಯೂ ಕೇಳುತ್ತಾನೆ ರಾಮ್. ಆದರೆ ನಿಜ ಸ್ಥಿತಿ ವಿವರಿಸದೇ, ನಾವು ಆಟೋದಲ್ಲಿ ಹೋಗುವುದಾಗಿ ಹೇಳುತ್ತಾಳೆ ಸೀತಾ. ಕತ್ತಲಾದ ಮೇಲೆ ಮನೆ ಕಡೆ ತೆರಳುವ ಸೀತಾಗೆ ಅಲ್ಲಿ ಮತ್ತೊಂದು ಶಾಕ್.
ಸಾಲ ಕೊಟ್ಟವರು ಇಡೀ ಮನೆಯನ್ನೇ ಹಾಳು ಮಾಡಿ, ಸೀತಾಳ ಬರುವಿಕೆಯನ್ನೇ ಕಾದಿರುತ್ತಾರೆ. ಭಯದ ಮುಖದಲ್ಲಿ ಗಾಬರಿಯಲ್ಲೇ ಮನೆ ಪ್ರವೇಶಿಸುವ ಸೀತಾಗೆ ಹಣ ಕೊಟ್ಟರೆ ಇಲ್ಲಿಂದ ತೆರಳುವುದಾಗಿ ಹೇಳ್ತಾರೆ. ಸೀತಾ ಎಷ್ಟೇ ಅಂಗಲಾಚಿದರೂ ಬಗ್ಗದ ಸಾಲಗಾರರು, ಬೆದರಿಕೆ ಹಾಕುತ್ತಾರೆ. ಈ ವೇಳೆಗೆ ಸರಿಯಾಗಿ ಸಿಹಿಗೆ ಥ್ಯಾಂಕ್ಸ್ ಹೇಳುವ ನೆಪದಲ್ಲಿ ರಾಮ್ ಕಡೆಯಿಂದ ಫೋನ್ ಬರುತ್ತದೆ. ಫೋನ್ ರಿಸಿವ್ ಮಾಡುವ ಸಿಹಿ, ಬ್ಯಾಡ್ ಅಂಕಲ್ ಬಗ್ಗೆ ವಿವರಿಸ್ತಾಳೆ.
ಧೈರ್ಯ ತುಂಬುವ ರಾಮ್, ಒಂದರಿಂದ ಹತ್ತು ಎಣಿಸುವಂತೆ ಸಿಹಿಗೆ ಹೇಳ್ತಾನೆ. ಅಷ್ಟರಲ್ಲಿ ಆ ರೌಡಿಯ ಬಗ್ಗೆ ಅಶೋಕನಿಂದ ಮಾಹಿತಿ ಪಡೆದು, ಸಂಬಂಧಪಟ್ಟವರಿಂದಲೇ ಕರೆ ಮಾಡಿಸುತ್ತಾನೆ. ಬೆದರಿಕೆ ಹಾಕುತ್ತಿದ್ದ ಸಾಲಗಾರ ಬಿದರ್ ಶಂಕರ, ಸೀತಾ ಬಳಿ ಬಂದು ಕ್ಷಮೆ ಕೇಳುತ್ತಾನೆ. ನಿಧಾನಕ್ಕೆ ಹಣ ಮರಳಿಸುವಂತೆ ಕೇಳಿಕೊಳ್ಳುತ್ತಾನೆ. ಈತನ ನಡೆ ಕಂಡು ಆಶ್ಚರ್ಯ ವ್ಯಕ್ತಪಡಿಸುವ ಸೀತಾ, ಏನಾಗ್ತಿದೆ ಎಂದು ಮನದಲ್ಲೇ ಪ್ರಶ್ನೆ ಮಾಡಿಕೊಳ್ತಾಳೆ. ಇತ್ತ ಒಂದೇ ಒಂದು ಫೋನ್ ಕರೆಯಲ್ಲಿ ಸೀತಾ ಮತ್ತು ಸಿಹಿಗೆ ಎದುರಾದ ಸಂಕಷ್ಟವನ್ನು ಬಗೆಹರಿಸ್ತಾನೆ ರಾಮ್. ಸಮಸ್ಯೆ ಬಗೆ ಹರಿಸಿದ್ದು ಫ್ರೆಂಡ್ ರಾಮ್ ಎಂದು ಸಿಹಿ ತನ್ನ ಅಮ್ಮ ಸೀತಾಗೆ ಹೇಳ್ತಾಳಾ? ರಾಮ್ ವರ್ತನೆಯಿಂದ ಮೊದಲೇ ಬೇಸರಗೊಂಡಿದ್ದ ಸೀತಾ ಮುಂದೆ ಏನು ಮಾಡುತ್ತಾಳೆ?