ಕಂಗುವ ಟ್ರೇಲರ್‌ ಅಲ್ಲ ಬೆಂಕಿ! ಬಾಹುಬಲಿ ನೆನಪಿಸುವಂತಹ ಅದ್ಧೂರಿ ಮೇಕಿಂಗ್‌, ಸೂರ್ಯ- ಬಾಬಿ ಡಿಯೋಲ್‌ ಸಿನಿಮಾ ಅಕ್ಟೋಬರ್‌ 10ರಂದು ಬಿಡುಗಡೆ-kollywood news kanguva trailer released remembers bahubali rrr like making suriya bobby deol face off socio fantasy ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  ಕಂಗುವ ಟ್ರೇಲರ್‌ ಅಲ್ಲ ಬೆಂಕಿ! ಬಾಹುಬಲಿ ನೆನಪಿಸುವಂತಹ ಅದ್ಧೂರಿ ಮೇಕಿಂಗ್‌, ಸೂರ್ಯ- ಬಾಬಿ ಡಿಯೋಲ್‌ ಸಿನಿಮಾ ಅಕ್ಟೋಬರ್‌ 10ರಂದು ಬಿಡುಗಡೆ

ಕಂಗುವ ಟ್ರೇಲರ್‌ ಅಲ್ಲ ಬೆಂಕಿ! ಬಾಹುಬಲಿ ನೆನಪಿಸುವಂತಹ ಅದ್ಧೂರಿ ಮೇಕಿಂಗ್‌, ಸೂರ್ಯ- ಬಾಬಿ ಡಿಯೋಲ್‌ ಸಿನಿಮಾ ಅಕ್ಟೋಬರ್‌ 10ರಂದು ಬಿಡುಗಡೆ

Kanguva trailer: ಕಾಲಿವುಡ್‌ನಲ್ಲಿ ಬಾಹುಬಲಿ, ಆರ್‌ಆರ್‌ಆರ್‌, ಕಲ್ಕಿ ಸಿನಿಮಾಗಳನ್ನು ನೆನಪಿಸುವಂತಹ ಕಂಗುವ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಅಕ್ಟೋಬರ್‌ 10ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟ ಸೂರ್ಯ ಅಭಿನಯದ ಈ ಸಿನಿಮಾ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ.

ಕಂಗುವ ಟ್ರೇಲರ್‌ ಬಿಡುಗಡೆ, ಸೂರ್ಯ- ಬಾಬಿ ಡಿಯೋಲ್‌ ಸಿನಿಮಾ ಅಕ್ಟೋಬರ್‌ 10ರಂದು ಬಿಡುಗಡೆ
ಕಂಗುವ ಟ್ರೇಲರ್‌ ಬಿಡುಗಡೆ, ಸೂರ್ಯ- ಬಾಬಿ ಡಿಯೋಲ್‌ ಸಿನಿಮಾ ಅಕ್ಟೋಬರ್‌ 10ರಂದು ಬಿಡುಗಡೆ

Kanguva trailer: ತಮಿಳು ಭಾಷೆಯಲ್ಲಿ ಕಂಗುವ ಎಂದರೆ ಬೆಂಕಿ. ಕಾಲಿವುಡ್‌ನಲ್ಲಿ ಬಾಹುಬಲಿ, ಆರ್‌ಆರ್‌ಆರ್‌, ಕಲ್ಕಿ ಸಿನಿಮಾಗಳನ್ನು ನೆನಪಿಸುವಂತಹ ಕಂಗುವ ಸಿನಿಮಾದ ಟ್ರೇಲರ್‌ ಬಿಡುಗಡೆಯಾಗಿದೆ. ಇದು ಕಂಗುವ ಟ್ರೇಲರ್‌ ಅಲ್ಲ, ಬೆಂಕಿ ಎಂದು ಫ್ಯಾನ್ಸ್‌ ಸಂಭ್ರಮಿಸಿದ್ದಾರೆ. ಅಕ್ಟೋಬರ್‌ 10ರಂದು ಈ ಸಿನಿಮಾ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ನಟ ಸೂರ್ಯ ಅಭಿನಯದ ಈ ಸಿನಿಮಾದ ಟ್ರೇಲರ್‌ನಲ್ಲಿ ಸೂರ್ಯ ಮತ್ತು ಬಾಬಿ ಡಿಯೋಲ್‌ ಅಬ್ಬರದ ದೃಶ್ಯಗಳಿಗೆ ಅಭಿಮಾನಿಗಳು ವಾಹ್‌ ಎಂದಿದ್ದಾರೆ. ಆದಿವಾಸಿ ನಾಯಕನೊಬ್ಬನ ಕಾಲ್ಪನಿಕ ಕಥೆಯಂತೆ ಕಾಣಿಸುವ ಈ ಸಿನಿಮಾದ ಟ್ರೇಲರ್‌ ಅದ್ಧೂರಿಯಾಗಿ ಮೂಡಿಬಂದಿದ್ದು, ಯೂಟ್ಯೂಬ್‌ನಲ್ಲಿ ಕಾಮೆಂಟ್‌ಗಳ ಪ್ರವಾಹವೇ ಹರಿದುಬರುತ್ತಿದೆ.

ರಜನಿಕಾಂತ್‌ ನಟನೆಯ ಅಣ್ಣಾತ್ತೆ ಮುಂತಾದ ಅದ್ಭುತ ಸಿನಿಮಾಗಳನ್ನು ನೀಡಿರುವ ನಿರ್ದೇಶಕ ಶಿವ ಅವರು ಕಂಗುವ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಈ ಸಿನಿಮಾದಲ್ಲಿ ಸೂರ್ಯ, ಬಾಬಿ ಡಿಯೋಲ್‌, ದಿಶಾ ಪಟಾನಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

ಕಂಗುವ ಸಿನಿಮಾದ ಟ್ರೇಲರ್‌ ಅನ್ನು ನಟ ಸೂರ್ಯ ತನ್ನ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದೇ ಸಮಯದಲ್ಲಿ ನಿರ್ದೇಶಕ ಶಿವ ಅವರಿಗೆ ಅವರ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ. "ನಾವೆಲ್ಲರೂ ತಂಡವಾಗಿ ಕೆಲಸ ಮಾಡಿ ಅದ್ಭುತವಾದ ಸಿನಿಮಾ ನಿರ್ಮಿಸಿದ್ದಕ್ಕೆ ಖುಷಿಯಾಗುತ್ತಿದೆ. ಧೈರ್ಯವಂತ ಶಿವನಿಗೆ ಹುಟ್ಟುಹಬ್ಬದ ಶುಭಾಶಯ. ನಮ್ಮ ಕಂಗುವ ಸಿನಿಮಾದ ಟ್ರೇಲರ್‌ ಈ ಮೂಲಕ ಎಲ್ಲರಿಗೂ ನೀಡುತ್ತಿದ್ದೇವೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ.

ಈ ಟ್ರೇಲರ್‌ 2 ನಿಮಿಷ 37 ಸೆಕೆಂಡಿನದ್ದಾಗಿದೆ. ಅಜ್ಜಿಯೊಬ್ಬಳು "ನಾವು ವಾಸಿಸುವ ಈ ದ್ವೀಪದಲ್ಲಿ ಅನೇಕ ನಿಗೂಢ ವಿಷಯಗಳು ಹರಡಿಕೊಂಡಿವೆ. ಆದರೆ ಅವುಗಳಲ್ಲಿ ಅತ್ಯಂತ ದಿಗ್ಭ್ರಮೆಗೊಳಿಸುವಂತದ್ದು..." ಎಂದು ಹೇಳುವ ಮೂಲಕ ಟ್ರೇಲರ್‌ ಆರಂಭಗೊಳ್ಳುತ್ತದೆ. ಸೂರ್ಯ ಮತ್ತು ಬಾಬಿ ಡಿಯೋಲ್‌ರ ಯುದ್ಧವನ್ನು ಈ ಟ್ರೇಲರ್‌ ತೋರಿಸುತ್ತದೆ. ಜತೆಗೆ, ಭಯಂಕರ ಯುದ್ಧಭೂಮಿಯೂ ಕಾಣಿಸುತ್ತದೆ. ಈ ಟ್ರೇಲರ್‌ ನೋಡಿದಾಗ ಬಾಹುಬಲಿ, ಆರ್‌ಆರ್‌ಆರ್‌, ಮಗಧೀರ, ಕಲ್ಕಿ ಮುಂತಾದ ಸಿನಿಮಾಗಳ ಅದ್ಧೂರಿತನ ನೆನಪಿಗೆ ಬರಬಹುದು. ತಮಿಳಿನಲ್ಲಿ ಕಂಗುವ ಎಂದರೆ ಬೆಂಕಿ. ಈ ಸಿನಿಮಾದ ಟ್ರೇಲರ್‌ನಲ್ಲಿ ಬೆಂಕಿಯ ಸುರಿಮಳೆಯೇ ಆಗಿದೆ.

ಈ ಟ್ರೇಲರ್‌ನಲ್ಲಿ ಕಂಗುವ ಸಿನಿಮಾದ ಇನ್ನೊಂದು ಕಥೆಯ ಸುಳಿವೂ ದೊರಕಿದೆ. ಈ ಸುಳಿವು ಈ ಹಿಂದೆಯೇ ದೊರಕಿತ್ತು. ಈ ಸಿನಿಮಾದಲ್ಲಿ ಸೂರ್ಯ ಎರಡು ಅವತಾರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಂದರೆ ಆದಿವಾಸಿ ದ್ವೀಪದ ಸೈನಿಕನಾಗಿ ಮತ್ತು ಆಧುನಿಕ ವ್ಯಕ್ತಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಐತಿಹಾಸಿಕ ಮತ್ತು ಆಧುನಿಕ ಅಂಶಗಳನ್ನು ಈ ಸಿನಿಮಾ ಹೊಂದಿರುವ ಸೂಚನೆಯಿದೆ.

ಕಂಗುವ ಸಿನಿಮಾದ ಬಗ್ಗೆ

ಕಂಗುವ ಸಿನಿಮಾವನ್ನು ಸ್ಟುಡಿಯೋ ಗ್ರೀನ್‌ನ ಜ್ಞಾನವೇಲ್ ರಾಜ ಮತ್ತು ಯುವಿ ಕ್ರಿಯೇಷನ್ಸ್‌ನ ವಿ ವಂಶಿ ಕೃಷ್ಣಾ ರೆಡ್ಡಿ ಮತ್ತು ಪ್ರಮೋದ್ ಉಪ್ಪಲಪಾಟಿ ನಿರ್ಮಿಸಿದ್ದಾರೆ. ಇದು ದಿಶಾ ಮತ್ತು ಬಾಬಿಯ ಮೊದಲ ತಮಿಳು ಸಿನಿಮಾ. ದೇವಿ ಶ್ರೀ ಪ್ರಸಾದ್ ಚಿತ್ರದ ಸಂಗೀತ ಸಂಯೋಜನೆ ಮಾಡಿದ್ದಾರೆ.ಅಕ್ಟೋಬರ್ 10 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿರುವ ಈ ಚಿತ್ರದಲ್ಲಿ ಜಗಪತಿ ಬಾಬು, ಯೋಗಿ ಬಾಬು, ರೆಡಿನ್ ಕಿಂಗ್ಸ್ಲಿ, ನಟ್ಟಿ ನಟರಾಜನ್, ಕೆಎಸ್ ರವಿಕುಮಾರ್ ಮತ್ತು ಕೋವೈ ಸರಳಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಚಿತ್ರವು ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಡಬ್‌ ಆಗಿ ರಿಲೀಸ್‌ ಆಗಲಿದೆ. ಇದುದು ಬೃಹತ್‌ ಬಜೆಟ್‌ನ ಸಿನಿಮಾ.