ಕನ್ನಡ ಸುದ್ದಿ  /  Entertainment  /  Kollywood News Veteran Actress Kasthuri Shankar Shared Old Hot Photos Jaana Kannada Movie Actress Kasturi Rsm

Kasthuri Shankar: ಪ್ರೇಮಲೋಕದ ಪಾರಿಜಾತಕ್ಕೆ ಈಗ ವಯಸ್ಸು 49; ಹಳೆಯ ಹಾಟ್‌ ಫೋಟೋಗಳನ್ನು ಹಂಚಿಕೊಂಡ ಜಾಣ ಸಿನಿಮಾ ನಟಿ ಕಸ್ತೂರಿ ಶಂಕರ್‌

ಕಸ್ತೂರಿ ಶಂಕರ್‌ ಟಾಪ್‌ಲೆಸ್‌ ಫೋಟೋಶೂಟ್‌ ಮಾಡಿಸಿ ಅದನ್ನು ಕೂಡಾ ತಮ್ಮ‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಟಾಪ್‌ಲೆಸ್‌ ಆಗಿ ಮೇಕಪ್‌ ಇಲ್ಲದೆ ಮಗುವೊಂದನ್ನು ತಮ್ಮ ಎದೆಗೆ ಅವುಚಿಕೊಂಡು ಕಸ್ತೂರಿ ಜೇಡ್ ಬೀಲ್ಸ್ ಬರೆದ 'ದಿ ಬಾಡೀಸ್ ಆಫ್ ಮದರ್' ಎಂಬ ಪುಸ್ತಕಕ್ಕಾಗಿ ಫೋಟೊಶೂಟ್ ಮಾಡಿಸಿದ್ದರು.

ಕಸ್ತೂರಿ ಶಂಕರ್‌ ಹಾಟ್‌ ಫೋಟೋಗಳು
ಕಸ್ತೂರಿ ಶಂಕರ್‌ ಹಾಟ್‌ ಫೋಟೋಗಳು (PC: Kasthuri Shankar social media)

ಪ್ರೇಮ ಲೋಕದ ಪಾರಿಜಾತವೇ...ಏಕೆ ನೀನು ಎದೆಯ ತುಂಬಿದೆ ಹಾಡು ಕನ್ನಡ ಸಿನಿ ಅಭಿಮಾನಿಗಳಿಗೆ ಚೆನ್ನಾಗಿ ನೆನಪಿರುತ್ತದೆ. 'ಜಾಣ' ಚಿತ್ರದ ಈ ಹಾಡಿನಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಜೊತೆ ಬಹುಭಾಷಾ ನಟ ಕಸ್ತೂರಿ ಶಂಕರ್‌ ನಟಿಸಿದ್ದರು. ಈ ಚೆಲುವೆ ಮೂಲತ: ತಮಿಳುನಾಡಿಗೆ ಸೇರಿದವರಾದರೂ ಕನ್ನಡ, ತೆಲುಗು, ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ನಾಂಗ ಚಿತ್ರದ ಫೋಟೋಗಳನ್ನು ಹಂಚಿಕೊಂಡ ನಟಿ

ಕಸ್ತೂರಿ ಶಂಕರ್‌ ಈಗ ಸಿನಿಮಾಗಳಲ್ಲಿ ಹೆಚ್ಚು ನಟಿಸುತ್ತಿಲ್ಲ. ಆಕೆ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. ಕಸ್ತೂರಿಗೆ ಈಗ 49 ವರ್ಷ ವಯಸ್ಸು. ತಮ್ಮ ಖಡಕ್‌ ಮಾತುಗಳಿಂದಲೇ ಹೆಚ್ಚು ಸುದ್ದಿಯಲ್ಲಿರುವ ಈ ಬ್ಯೂಟಿ ಈಗ ತಮ್ಮ ಹಳೆಯ ಹಾಟ್‌ ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳನ್ನು ನೋಡಿ ಕೆಲವರು ವಾವ್ಹ್‌ ಎಂದರೆ ಕೆಲವರು ನೆಗೆಟಿವ್‌ ಆಗಿ ಕಾಮೆಂಟ್‌ ಮಾಡಿದ್ದಾರೆ. 2012 ರಲ್ಲಿ ತೆರೆ ಕಂಡ 'ನಾಂಗ' ಚಿತ್ರದ ಹಾಡಿನ ಫೋಟೋಗಳನ್ನು ಕಸ್ತೂರಿ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಹಜ ಸುಂದರಿ ಎಂದು ಕೆಲವರು ಕಾಮೆಂಟ್‌ ಮಾಡಿದರೆ ಇನ್ನೂ ಕೆಲವರು ಈ ವಯಸ್ಸಿನಲ್ಲಿ ಈ ಫೋಟೋಗಳನ್ನು ಹಂಚಿಕೊಳ್ಳುವ ಅವಶ್ಯಕತೆ ಏನಿದೆ ಎಂದು ಕೇಳುತ್ತಿದ್ದಾರೆ.

ಟಾಪ್‌ಲೆಟ್‌ ಫೋಟೋಶೂಟ್‌ ಮಾಡಿಸಿದ್ದ ಕಸ್ತೂರಿ

ಈ ಫೋಟೋಗಳು ಮಾತ್ರವಲ್ಲದೆ ಕೆಲವು ವರ್ಷಗಳ ಹಿಂದೆ ಕಸ್ತೂರಿ ಶಂಕರ್‌ ಟಾಪ್‌ಲೆಸ್‌ ಫೋಟೋಶೂಟ್‌ ಮಾಡಿಸಿ ಅದನ್ನು ಕೂಡಾ ತಮ್ಮ‌ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದರು. ಟಾಪ್‌ಲೆಸ್‌ ಆಗಿ ಮೇಕಪ್‌ ಇಲ್ಲದೆ ಮಗುವೊಂದನ್ನು ತಮ್ಮ ಎದೆಗೆ ಅವುಚಿಕೊಂಡು ಕಸ್ತೂರಿ ಜೇಡ್ ಬೀಲ್ಸ್ ಬರೆದ 'ದಿ ಬಾಡೀಸ್ ಆಫ್ ಮದರ್' ಎಂಬ ಪುಸ್ತಕಕ್ಕಾಗಿ ಫೋಟೊಶೂಟ್ ಮಾಡಿಸಿದ್ದರು. ಇದೇ ಫೋಟೋವನ್ನು ಮೊನ್ನೆ (ಮೇ 14) ರಂದು ವಿಶ್ವ ತಾಯಂದಿರ ದಿನದಂದು ತಮ್ಮ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡು ಶುಭ ಕೋರಿದ್ದರು. ಕಸ್ತೂರಿ ಅವರ ಈ ಫೋಟೋಗಳು ಈಗ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

ಆಂಟಿ ಪದದ ವಿವಾದಕ್ಕೆ ಅನಸೂಯ ಪರ ನಿಂತಿದ್ದ ಕಸ್ತೂರಿ

ಟಾಲಿವುಡ್‌ ನಟಿ, ನಿರೂಪಕಿ ಅನಸೂಯ ಅವರನ್ನು ಕೆಲವರು ಆಂಟಿ ಎಂದು ಸಂಬೋಧಿಸುವುದಕ್ಕೆ ಆಕೆ ಕೋಪಗೊಂಡಿದ್ದರು. ಈ ವಿಚಾರ ಬಹಳ ಸುದ್ದಿಯಾಗಿತ್ತು. ಆ ವೇಳೆ ಅನಸೂಯ ಪರ ನಿಂತಿದ್ದ ಕಸ್ತೂರಿ, ಯಾವುದೇ ಪುರುಷರು ಮಹಿಳೆಯರನ್ನು ಆಂಟಿ ಎಂದು ಕರೆಯಬಾರದು ಅದೊಂದು ರೀತಿ ಅಶ್ಲೀಲ ಪದ. ಆಂಟಿ ಎಂಬ ಪದ ಮಕ್ಕಳಿಗಷ್ಟೇ ಸೀಮಿತ ಎಂದಿದ್ದರು.

ಕಸ್ತೂರಿ ಶಂಕರ್‌ 1991ರಲ್ಲಿ ತೆರೆ ಕಂಡ ತಮಿಳು ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದರು. ಕನ್ನಡದಲ್ಲಿ ಇವರು ನಟಿಸಿದ ಮೊದಲ ಸಿನಿಮಾ ಜಾಣ. ಈ ಚಿತ್ರ 1994 ರಲ್ಲಿ ತೆರೆ ಕಂಡಿತ್ತು. ಇಬ್ಬರ ನಡುವೆ ಮುದ್ದಿನ ಆಟ, ತುತ್ತಾ ಮುತ್ತಾ, ಹಬ್ಬ, ಪ್ರೇಮಕ್ಕೆ ಸೈ ಕನ್ನಡ ಸಿನಿಮಾಗಳಲ್ಲಿ ಕಸ್ತೂರಿ ನಟಿಸಿದ್ದಾರೆ. ಇದೇ ವರ್ಷ ಏಪ್ರಿಲ್‌ 22 ರಂದು ತೆರೆ ಕಂಡ ತಮಿಳರಸನ್‌ ಚಿತ್ರದಲ್ಲಿ ಕಸ್ತೂರಿ ನಟಿಸಿದ್ದಾರೆ. ಇದಾದ ನಂತರ ಅವರು ಅಭಿನಯಿಸಿರುವ ಯಾವುದೇ ಸಿನಿಮಾ ತೆರೆ ಕಂಡಿಲ್ಲ.

ಮನರಂಜನೆ, ಬಿಗ್‌ಬಾಸ್ ಕನ್ನಡ 10 ಮತ್ತು ಒಟಿಟಿ ಕುರಿತ ಅಪ್‌ಡೇಟ್‌ಗಳಿಗಾಗಿ, ಹಿಂದೂಸ್ತಾನ್ ಟೈಮ್ಸ್ ಕನ್ನಡ ,ನೋಡಿ.