ಕನ್ನಡ ಸುದ್ದಿ  /  ಮನರಂಜನೆ  /  Actress Nagma: ಆನ್‌ಲೈನ್‌ ವಂಚನೆಗೆ ಬಲಿಯಾದ ನಗ್ಮಾ... ಮೊಬೈಲ್‌ಗೆ ಬಂದ ಲಿಂಕ್‌ ಕ್ಲಿಕ್‌ ಮಾಡಿ ಹಣ ಕಳೆದುಕೊಂಡ ನಟಿ

Actress Nagma: ಆನ್‌ಲೈನ್‌ ವಂಚನೆಗೆ ಬಲಿಯಾದ ನಗ್ಮಾ... ಮೊಬೈಲ್‌ಗೆ ಬಂದ ಲಿಂಕ್‌ ಕ್ಲಿಕ್‌ ಮಾಡಿ ಹಣ ಕಳೆದುಕೊಂಡ ನಟಿ

ಹಣ ಕಳೆದುಕೊಂಡಿರುವುದು ತಿಳಿಯುತ್ತಿದ್ದಂತೆ ನಗ್ಮಾ, ಕೂಡಲೇ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ.

ಹಣ ಕಳೆದುಕೊಂಡ ನಟಿ ನಗ್ಮಾ
ಹಣ ಕಳೆದುಕೊಂಡ ನಟಿ ನಗ್ಮಾ (PC: Nagma)

ಇತ್ತೀಚಿನ ದಿನಗಳಲ್ಲಿ ಆನ್‌ಲೈನ್‌ ಕ್ರೈಂ ಹೆಚ್ಚು ವರದಿಯಾಗುತ್ತಿದೆ. ಎಷ್ಟೇ ಎಚ್ಚರಿಂದ ಇರುವಂತೆ ಮನವಿ ಮಾಡಿದರೂ ಜನರು ಮೋಸ ಹೋಗುತ್ತಲೇ ಇದ್ಧಾರೆ. ಇದೀಗ ಬಹುಭಾಷಾ ನಟಿ ನಗ್ಮಾ ಕೂಡಾ ತಮ್ಮ ಮೊಬೈಲ್‌ಗೆ ಬಂದ ಲಿಂಕ್‌ವೊಂದನ್ನು ಕ್ಲಿಕ್‌ ಮಾಡಿ ಒಂದು ಲಕ್ಷ ರೂಪಾಯಿ ಹಣ ಕಳೆದುಕೊಂಡಿರುವ ವಿಚಾರ ಬೆಳಕಿಗೆ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಇತ್ತೀಚೆಗೆ ನಗ್ಮಾ ಮೊಬೈಲ್‌ಗೆ ಒಂದು ಲಿಂಕ್‌ ಮೆಸೇಜ್‌ ಬಂದಿದೆ. ನಗ್ಮಾ, ಕೂಡಲೇ ಆ ಲಿಂಕ್‌ ಕ್ಲಿಕ್‌ ಮಾಡಿದ್ದಾರೆ. ನಂತರ ಆ ಕಡೆಯಿಂದ ವ್ಯಕ್ತಿಯೊಬ್ಬ ಕರೆ ಮಾಡಿ ನಗ್ಮಾಗೆ ಕೆವೈಸಿ ಕಂಪ್ಲೀಟ್‌ ಮಾಡುವಂತೆ ಹೇಳಿದ್ದಾನೆ. ವಂಚಕ ಬೆನಿಫಿಷರಿ ಅಕೌಂಟ್‌ ಸೃಷ್ಟಿ ಮಾಡಿ ತನ್ನ ಖಾತೆಗೆ 1 ಲಕ್ಷ ರೂಪಾಯಿ ಹಣ ಟ್ರಾನ್ಸ್‌ಫರ್‌ ಮಾಡಿಕೊಂಡಿದ್ದಾನೆ. ಹಣ ಕಳೆದುಕೊಂಡಿರುವುದು ತಿಳಿಯುತ್ತಿದ್ದಂತೆ ನಗ್ಮಾ, ಕೂಡಲೇ ಸೈಬರ್‌ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ಧಾರೆ. ಹಣ ಕಳೆದುಕೊಂಡಿರುವುದಕ್ಕೆ ನಗ್ಮಾ ಬೇಸರ ವ್ಯಕ್ತಪಡಿಸಿದರೂ, ಮತ್ತೊಂದೆಡೆ ಸದ್ಯಕ್ಕೆ 1 ಲಕ್ಷ ಮಾತ್ರ ಕಳೆದುಕೊಂಡಿರುವ ನೆಮ್ಮದಿಯಲ್ಲಿದ್ದಾರಂತೆ.

ಮುಂಬೈನಲ್ಲಿ ಹುಟ್ಟಿ ಬೆಳೆದ ನಗ್ಮಾ, 1990ರಲ್ಲಿ ತೆರೆ ಕಂಡ 'ಬಾಘಿ' ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಬಂದರು. ಹಿಂದಿ ಹೊರತುಪಡಿಸಿ ತೆಲುಗು, ತಮಿಳು, ಕನ್ನಡ, ಭೋಜ್‌ಪುರಿ, ಬೆಂಗಾಳಿ ಸಿನಿಮಾಗಳಲ್ಲಿ ಕೂಡಾ ನಗ್ಮಾ ನಟಿಸಿದ್ದಾರೆ. ಕನ್ನಡದಲ್ಲಿ ಅವರು ಶಿವರಾಜ್‌ಕುಮಾರ್‌ ಜೊತೆ ಕುರುಬನ ರಾಣಿ, ರವಿಚಂದ್ರನ್‌ ಜೊತೆ ರವಿಮಾಮ, ಡಾ. ವಿಷ್ಣುವರ್ಧನ್‌ ಅವರೊಂದಿಗೆ ಹೃದಯವಂತ ಸಿನಿಮಾಗಳಲ್ಲಿ ನಟಿಸಿದ್ದಾರೆ. 2005 ರ ನಂತರ ಅವರು ಭೋಜ್‌ಪುರಿ ಸಿನಿಮಾಗಳಲ್ಲೇ ಹೆಚ್ಚು ಸಕ್ರಿಯರಾದರು. ಆದರೆ 2008ರ ನಂತರ ಅವರು ಸಿನಿಮಾಗಳಿಂದ ಸಂಪೂರ್ಣ ದೂರವಾದರು. ಈ ಅವರು ರಾಜಕೀಯದಲ್ಲಿ ಸಕ್ರಿಯರಾಗಿದ್ಧಾರೆ.

ಮತ್ತಷ್ಟು ಮನರಂಜನೆ ಸುದ್ದಿಗಳು

ಮಂಗಳವಾರವಷ್ಟೇ ಹೋಳಿ ಸಂಭ್ರಮದಲ್ಲಿ ಭಾಗಿಯಾಗಿದ್ದ ಬಾಲಿವುಡ್‌ ಖ್ಯಾತ ನಟ, ನಿರ್ದೇಶಕ ಸತೀಶ್‌ ಕೌಶಿಕ್‌ ನಿಧನ!

ಬಾಲಿವುಡ್‌ ಖ್ಯಾತ ನಟ ಸತೀಶ್‌ ಕೌಶಿಕ್‌ ಹೃದಯಾಘಾತದಿಂದ ನಿಧನರಾಗಿದ್ದಾರೆ. ಸತೀಶ್‌ ಕೌಶಿಕ್‌ ಹಿಂದಿ ಚಿತ್ರರಂಗದಲ್ಲಿ ನಟನಾಗಿ ಮಾತ್ರವಲ್ಲದೆ ನಿರ್ದೇಶಕ, ನಿರ್ಮಾಪಕನಾಗಿ ಕೂಡಾ ಗುರುತಿಸಿಕೊಂಡಿದ್ದರು. ಬಾಲಿವುಡ್‌ ಖ್ಯಾತ ನಟ ಅನುಪಮ್‌ ಖೇರ್‌, ಸತೀಶ್‌ ನಿಧನದ ಸುದ್ದಿಯನ್ನು ತಮ್ಮ ಟ್ವಿಟ್ಟರ್‌ನಲ್ಲಿ ದೃಢಪಡಿಸಿದ್ದಾರೆ. ಸತೀಶ್‌ ಕೌಶಿಕ್‌ ಅವರಿಗೆ 66 ವರ್ಷ ವಯಸ್ಸಾಗಿತ್ತು. ಪೂರ್ತಿ ಮಾಹಿತಿಗೆ ಈ ಲಿಂಕ್‌ ಒತ್ತಿ.

'ಹೊಯ್ಸಳ' ರೊಮ್ಯಾಂಟಿಕ್‌ ಹಾಡು ರಿಲೀಸ್‌... ಧನಂಜಯ್‌-ಅಮೃತಾ ಕೆಮಿಸ್ಟ್ರಿಗೆ ಫ್ಯಾನ್ಸ್‌ ಫಿದಾ

ಸ್ಯಾಂಡಲ್‌ವುಡ್‌ ನಟರಾಕ್ಷಸ ಡಾಲಿ ಧನಂಜಯ್‌ ಅಭಿನಯದ 'ಹೊಯ್ಸಳ' ಸಿನಿಮಾ ಇನ್ನು ಕೆಲವೇ ದಿನಗಳಲ್ಲಿ ರಿಲೀಸ್‌ ಆಗಲಿದೆ. ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಪೋಸ್ಟರ್‌ಗಳು, ಟೀಸರ್‌, ಹಾಡುಗಳು ಸಿನಿಪ್ರಿಯರ ಗಮನ ಸೆಳೆಯುತ್ತಿದೆ. ಇದೀಗ ಚಿತ್ರದ ರೊಮ್ಯಾಂಟಿಕ್‌ ಹಾಡೊಂದು ರಿಲೀಸ್‌ ಆಗಿದ್ದು, ಇಲ್ಲಿ ಕೂಡಾ ಧನಂಜಯ್‌ ಹಾಗೂ ಅಮೃತಾ ಅಯ್ಯಂಗಾರ್‌ ಕೆಮಿಸ್ಟ್ರಿ ಚೆನ್ನಾಗಿ ವರ್ಕೌಟ್‌ ಆಗಿದೆ. ಪೂರ್ತಿ ಸ್ಟೋರಿ ಓದಲು ಈ ಲಿಂಕ್‌ ಒತ್ತಿ.

IPL_Entry_Point