ಕನ್ನಡ ಸುದ್ದಿ  /  ಮನರಂಜನೆ  /  ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್ ಶೂಟಿಂಗ್‌ ಅನುಭವ ರೋಚಕವೆಂದ ಆಶಿಶ್‌ ವಿದ್ಯಾರ್ಥಿ; ಜಿಯೋಸಿನಿಮಾದಲ್ಲಿ ನೋಡಿ ಈ ವೆಬ್‌ ಸರಣಿ

ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್ ಶೂಟಿಂಗ್‌ ಅನುಭವ ರೋಚಕವೆಂದ ಆಶಿಶ್‌ ವಿದ್ಯಾರ್ಥಿ; ಜಿಯೋಸಿನಿಮಾದಲ್ಲಿ ನೋಡಿ ಈ ವೆಬ್‌ ಸರಣಿ

Ranneeti: Balakot & Beyond: ಜಿಯೋ ಸಿನಿಮಾದಲ್ಲಿ ರಣನೀತಿ: ಬಾಲಕೋಟ್‌ ಆಂಡ್‌ ಬಿಯಾಂಡ್‌ ಎಂಬ ವೆಬ್‌ ಸರಣಿ ಆರಂಭವಾಗಿದೆ. ಜಿಮ್ಮಿ ಶೆರ್ಗಿಲ್, ಲಾರಾ ದತ್ತಾ, ಅಶುತೋಷ್ ರಾಣಾ ಮತ್ತು ಪ್ರಸನ್ನ ನಟಿಸಿರುವ ಈ ಸಿನಿಮಾದ ಶೂಟಿಂಗ್‌ ಅನುಭವ "ಗೂಸ್‌ಬಂಪ್‌" ಆಗಿತ್ತು ಎಂದು ನಟ ಆಶಿಶ್‌ ವಿದ್ಯಾರ್ಥಿ ಹೇಳಿದ್ದಾರೆ.

ರಣನೀತಿ: ಬಾಲಾಕೋಟ್‌ & ಬಿಯಾಂಡ್
ರಣನೀತಿ: ಬಾಲಾಕೋಟ್‌ & ಬಿಯಾಂಡ್

ಬೆಂಗಳೂರು: ರಣನೀತಿ: ಬಾಲಾಕೋಟ್ ಅಂಡ್ ಬಿಯಾಂಡ್' ಸರಣಿಯ ಚಿತ್ರೀಕರಣದ ಅನುಭವವನ್ನು ನಟ ಆಶಿಶ್ ವಿದ್ಯಾರ್ಥಿ ಹಂಚಿಕೊಂಡಿದ್ದಾರೆ. ಈ ಚಿತ್ರದಲ್ಲಿ ಜಿಮ್ಮಿ ಶೆರ್ಗಿಲ್, ಲಾರಾ ದತ್ತಾ, ಅಶುತೋಷ್ ರಾಣಾ ಮತ್ತು ಪ್ರಸನ್ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. "ಈ ರಣನೀತಿ ವೆಬ್‌ ಸರಣಿಯಲ್ಲಿ ಕೆಲಸ ಮಾಡುವ ಅವಕಾಶ ದೊರಕಿರುವುದು ಒಂದು ಗೌರವವಾಗಿದೆ. ಈ ಸರಣಿಯ ಆಸಕ್ತಿದಾಯಕ ಅಂಶವೆಂದರೆ ಡಿಟೈಲಿಂಗ್‌. ತೆರೆಮರೆಯಲ್ಲಿ ನಡೆಯುವ ಘಟನೆಗಳನ್ನು ಇದು ವಿವರವಾಗಿ ತಿಳಿಸುತ್ತದೆ. ಇಂತಹ ಸರಣಿ ಆರಂಭಿಸಿರುವುದಕ್ಕೆ ಇಡೀ ತಂಡಕ್ಕೆ ಧನ್ಯವಾದ ಎಂದು ಆಶಿಶ್‌ ವಿದ್ಯಾರ್ಥಿ ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಈ ವೆಬ್‌ ಸರಣಿಯು ನಿಜವಾಗಿಯೂ ನಡೆದ ಘಟನೆಗಳನ್ನು ಆಧರಿಸಿದೆ. ಭಾರತದ ರಕ್ಷಣಾತ್ಮಕ ಕಾರ್ಯಾಚರಣೆಯ ತೆರೆಮರೆಯ ಕಥೆಯನ್ನು ಈ ವೆಬ್‌ ಸರಣಿ ಬಿಚ್ಚಿಟ್ಟಿದೆ. ಪುಲ್ವಾಮಾ ಮತ್ತು ಬಾಲಕೋಟ್ ಘಟನೆಗಳ ಕುರಿತು ಸಾರ್ವಜನಿಕರು ತಿಳಿಯದ ಸಾಕಷ್ಟು ವಿಷಯಗಳಿವೆ. ಈ ಸರಣಿಯಲ್ಲಿ ನೀವು ಸಾಕಷ್ಟು ವಿವರ ಪಡೆಯುವಿರಿ. ತೆರೆಮರೆಯಲ್ಲಿ ಪ್ರಮುಖ ಪಾತ್ರವಹಿಸಿದ ಅನೇಕ ಜನರನ್ನು ಈ ಸರಣಿಯಲ್ಲಿ ತೋರಿಸಿದ್ದೇವೆ" ಎಂದು ಆಶಿಶ್‌ ವಿದ್ಯಾರ್ಥಿ ಹೇಳಿದ್ದಾರೆ.

ಆಶಿಶ್ 'ಕಹೋ ನಾ ಪ್ಯಾರ್ ಹೈ', 'ಬಿಚೂ', 'ಹಸೀನಾ ಮಾನ್ ಜಾಯೇಗಿ', 'ಭಾಯ್', 'ಬಾಜಿ' ಮತ್ತು ಇನ್ನೂ ಅನೇಕ ಹಿಟ್ ಬಾಲಿವುಡ್ ಚಿತ್ರಗಳಲ್ಲಿ ನೆಗೆಟಿವ್‌ ರೋಲ್‌ನಲ್ಲಿ ನಟಿಸಿದ್ದಾರೆ. ಅರ್ಜುನ್ ಕಪೂರ್ ಮತ್ತು ಟಬು ಅವರ 'ಕುಟ್ಟೆ' ಮತ್ತು 'ಟ್ರಯಲ್ ಬೈ ಫೈರ್' ವೆಬ್ ಸರಣಿಯಲ್ಲಿಯೂ ಅವರು ಕಾಣಿಸಿಕೊಂಡಿದ್ದಾರೆ. ಸ್ಯಾಂಡಲ್‌ವುಡ್‌ನ ಹಲವು ಸಿನಿಮಾಗಳಲ್ಲಿ ವಿಲನ್‌ ರೋಲ್‌ನಲ್ಲಿ ಮಿಂಚಿದ್ದಾರೆ.

ಏಪ್ರಿಲ್ 25 ರಂದು ಅಂದರೆ ಇಂದು ಜಿಯೋ ಸಿನೆಮಾದಲ್ಲಿ ರಣನೀತಿ: ಬಾಲಾಕೋಟ್‌ & ಬಿಯಾಂಡ್ ಬಿಡುಗಡೆಯಾಗಿದೆ. ಈ ವೆಬ್‌ ಸರಣಿಯು ಮನಮೋಹಕ ನಿರೂಪಣೆ ಮತ್ತು ಅದ್ಭುತ ಅಭಿನಯದಿಂದ ಪ್ರೇಕ್ಷಕರನ್ನು ಆಕರ್ಷಿಸಲು ಸಜ್ಜಾಗಿದೆ. ಈ ವೆಬ್‌ ಸೀರಿಸ್‌ ಅನ್ನು ಸ್ಪಿಯರ್ ಒರಿಜಿನ್ಸ್ ಮಲ್ಟಿವಿಷನ್ ಪ್ರೈವೇಟ್ ಲಿಮಿಟೆಡ್‌ನ ಸುಂಜಯ್ ವಾಧ್ವಾ ಮತ್ತು ಕೋಮಲ್ ಸುಂಜಯ್ ಡಬ್ಲ್ಯೂ ನಿರ್ಮಿಸಿದ್ದಾರೆ.

ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್‌ ಬಿಡುಗಡೆ ದಿನಾಂಕ

ಸಂತೋಷ್‌ ಸಿಂಗ್‌ರ ರಣನೀತಿ: ಬಾಲಾಕೋಟ್‌ ಆಂಡ್‌ ಬಿಯಾಂಡ್‌ ವೆಬ್‌ ಸರಣಿಯು ಇಂದಿನಿಂದ (ಏಪ್ರಿಲ್‌ 25) ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ. ಈಗಾಗಲೇ ಇದರ ಟ್ರೇಲರ್‌ ಆನ್‌ಲೈನ್‌ನಲ್ಲಿ ರಿಲೀಸ್‌ ಆಗಿದೆ. ಸಾಕಷ್ಟು ಜನರು ಈ ವೆಬ್‌ ಸರಣಿ ನೋಡಿ ಉತ್ತಮವಾಗಿದೆ ಎನ್ನುತ್ತಿದ್ದಾರೆ.

ರಣನೀತಿ ಟ್ರೇಲರ್‌ ವೀಕ್ಷಿಸಿ

ಬಾಲಕೋಟ್‌ ವೈಮಾನಿಕ ದಾಳಿಯನ್ನು ಹಿನ್ನಲೆಯಾಗಿಟ್ಟುಕೊಂಡ ರಣನೀತಿ: ಬಾಲಕೋಟ್‌ ಆಂಡ್‌ ವೆಬ್‌ಸರಣಿ ನಿರ್ಮಿಸಲಾಗಿದೆ. ಪಾಕಿಸ್ತಾನದ ಬಾಲಕೋಟ್‌ ಮೇಲೆ ದಾಳಿ ನಡೆಸಿರುವುದು ಭಾರತದ ಬೃಹತ್‌ ರಕ್ಷಣಾ ಕಾರ್ಯಾಚರಣೆಯಾಗಿದೆ. ರಣನೀತಿ ವೆಬ್‌ಸರಣಿಯ ಟ್ರೇಲರ್‌ ಇಲ್ಲಿದೆ ನೋಡಿ.

ರಣನೀತಿ: ಬಾಲಾಕೋಟ್‌ & ಬಿಯಾಂಡ್ ಪಾತ್ರವರ್ಗ

ಜಿಮ್ಮಿ ಶೆರ್ಗಿಲ್, ಲಾರಾ ದತ್ತಾ, ಅಶುತೋಷ್ ರಾಣಾ, ಆಶಿಶ್‌ ವಿದ್ಯಾರ್ಥಿ ಮತ್ತು ಪ್ರಸನ್ನ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ವೆಬ್‌ಸರಣಿಯು ಹಿಂದಿ, ತಮಿಳು, ತೆಲುಗು, ಕನ್ನಡ, ಬಂಗಾಳಿ ಮತ್ತು ಮರಾಠಿ ಭಾಷೆಗಳಲ್ಲಿ ಸ್ಟ್ರೀಮಿಂಗ್‌ ಆಗುತ್ತಿದೆ.

IPL_Entry_Point