ಕನ್ನಡ ಸುದ್ದಿ  /  ಮನರಂಜನೆ  /  Ear Piercing: ಕಿವಿ ಚುಚ್ಚಿದ ನೋವಿಗೆ ಆಆಓಓ ಎಂದು ಕಿರುಚಿದ್ರು ನಿವೇದಿತಾ ಗೌಡ; ಗೊಂಬೆಯ ಸೌಂದರ್ಯಕ್ಕೆ ಹೊಸ ಕಳೆ ತಂದ ಜೋಡಿ ಕಿವಿಯೋಲೆ

Ear Piercing: ಕಿವಿ ಚುಚ್ಚಿದ ನೋವಿಗೆ ಆಆಓಓ ಎಂದು ಕಿರುಚಿದ್ರು ನಿವೇದಿತಾ ಗೌಡ; ಗೊಂಬೆಯ ಸೌಂದರ್ಯಕ್ಕೆ ಹೊಸ ಕಳೆ ತಂದ ಜೋಡಿ ಕಿವಿಯೋಲೆ

ಬಿಗ್‌ಬಾಸ್ ಸೀಸನ್‌ 5ರ ಸ್ಪರ್ಧಿ, ಚಂದನ್‌ ಶೆಟ್ಟಿ ಮಡದಿ ಈಗ ಎರಡನೇ ಬಾರಿ ಕಿವಿ ಚುಚ್ಚಿಸಿಕೊಂಡಿದ್ದಾರೆ. ಕಿವಿಯೋಲೆ ಚುಚ್ಚಿಸಿಕೊಳ್ಳುವಾಗ ಸಾಕಷ್ಟು ನೋವಾಗುತ್ತದೆ ಎಂದು ತಿಳಿದುಕೊಂಡಿದ್ದರು. ಆದರೆ, ಅಂದುಕೊಂಡಷ್ಟು ನೋವಾಗಲಿಲ್ಲ ಎಂದು ಅವರು ಇನ್‌ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

Ear Piercing: ನಿವೇದಿತಾ ಗೌಡ ಸೌಂದರ್ಯಕ್ಕೆ ಹೊಸ ಕಳೆ ತಂದ ಜೋಡಿ ಕಿವಿಯೋಲೆ
Ear Piercing: ನಿವೇದಿತಾ ಗೌಡ ಸೌಂದರ್ಯಕ್ಕೆ ಹೊಸ ಕಳೆ ತಂದ ಜೋಡಿ ಕಿವಿಯೋಲೆ

ಬೆಂಗಳೂರು: ಕಿವಿಯೋಲೆ ಚುಚ್ಚಿದಾಗ ಇರುವೆ ಕಚ್ಚಿದಂತೆ ಆಗುವ ನೋವನ್ನು ಸಾಕಷ್ಟು ಜನರು ಅನುಭವಿಸಿರುತ್ತಾರೆ. ಮಗಳ ಕಿವಿಗೆ ಚುಚ್ಚಿದಾಗ ಅಪ್ಪ ಅಮ್ಮನ ಕಣ್ಣಲ್ಲಿ ನೀರು ಬರುವುದುಂಟು. ಆದರೆ, ಕಿವಿ ಚುಚ್ಚಿದ ಬಳಿಕ ಕಿವಿಯೋಲೆಯಲ್ಲಿ ಮುದ್ದಾಗಿ ಕಾಣಿಸಿದಾಗ ಹಿಗ್ಗುವುದುಂಟು. ಚಂದನವನದ ಗೊಂಬೆ ನಿವೇದಿತಾ ಗೌಡ ತನ್ನ ಜೋಡಿ ಕಿವಿಗಳಿಗೆ ಮತ್ತೆ ಕಿವಿಯೋಲೆ ಚುಚ್ಚಿಸಿಕೊಂಡಿದ್ದಾರೆ. ಇದು ಎರಡನೇ ಕಿವಿಯೋಲೆ. ಈ ಜೋಡಿ ಕಿವಿಯೋಲೆ ಮೂಲಕ ಇನ್ನಷ್ಟು ಕ್ಯೂಟಾಗಿ ಕಾಣಿಸ್ತಾ ಇದ್ದಾರೆ ಚಂದನ್‌ ಶೆಟ್ಟಿ ಮಡದಿ.

ಟ್ರೆಂಡಿಂಗ್​ ಸುದ್ದಿ

ಈ ರೀತಿ ಎರಡನೇ ಬಾರಿ ಕಿವಿಯೋಲೆ ಚುಚ್ಚಿದಾಗ ಆದ ನೋವಿನ ಅನುಭವವನ್ನು ನಿವೇದಿತಾ ಗೌಡ ಇನ್‌ಸ್ಟಾಗ್ರಾಂನಲ್ಲಿ ಬರೆದಿದ್ದಾರೆ. "ಅಂದುಕೊಂಡಷ್ಟು ನೋವಾಗಲಿಲ್ಲ" ಎಂದು ಬರೆದರೂ ಅವರು ಹಂಚಿಕೊಂಡ ವಿಡಿಯೋದಲ್ಲಿ "ಆಆಆಆಓಓಓಓ" ಎಂದು ಕಿರುಚಿದ್ದು ನೋಡಿದರೆ ಸಾಕಷ್ಟು ನೋವಾಗಿರುವುದು ಖಾತ್ರಿ. ಈ ವಿಡಿಯೋ ನೋಡಿ ಅಭಿಮಾನಿಗಳು ತೋಚಿದಂತೆ ಕಾಮೆಂಟ್‌ ಮಾಡಿದ್ದಾರೆ. ಒಂದಿಷ್ಟು ಬ್ಯಾಡ್‌ ಕಾಮೆಂಟ್‌ಗಳ ನಡುವೆ ಸಾಕಷ್ಟು ಜನರು "ಕಿವಿಯೋಲೆಯಲ್ಲಿ ಇನ್ನಷ್ಟು ಕ್ಯೂಟಾಗಿ ಕಾಣಿಸುತ್ತಿದ್ದೀರಿ" "ಮುದ್ದಾಗಿ ಕಾಣಿಸುತ್ತಿದ್ದೀರಿ" ಎಂದೆಲ್ಲ ಹೊಗಳಿದ್ದಾರೆ.

"ಅಯ್ಯೋ ನಿವೇದಿತಾ ಇನ್ನು ಯಾವ ಕಾಲದಲ್ಲಿ ಇದ್ದೀರಾ? ಈಗ ಗನ್‌ಶಾಟ್‌ ಮೂಲಕ ಕಿವಿಚುಚ್ಚಿಸಿಕೊಳ್ಳಬಹುದು. ಇದರಲ್ಲಿ ಯಾವುದೇ ನೋವು ಆಗದು" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. "ಸಾಂಪ್ರದಾಯಿಕ ವಿಧಾನ ಯಾವತ್ತೂ ಬೆಸ್ಟ್‌" ಎಂದು ಇನ್ನೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. "ಅಯ್ಯೋ ಅಷ್ಟೊಂದು ಬೊಬ್ಬೆ ಹೊಡೆಯುವ ಅಗತ್ಯ ಇರಲಿಲ್ಲ" ಎಂದು ಮತ್ತೊಬ್ಬರು ತಮಾಷೆ ಮಾಡಿದ್ದಾರೆ. "ಆಆಆಆಓಓಓ ಅಕ್ಕಾ ನಿವೇದಿತಾ ಅಕ್ಕ" ಎಂದೆಲ್ಲ ನೆಟ್ಟಿಗರು ಕಾಮೆಂಟ್‌ ಮಾಡಿದ್ದಾರೆ.

ಮತ್ತಷ್ಟು ಕ್ಯೂಟಾದ್ರು ನಿವೇದಿತಾ ಗೌಡ

ಕಿವಿಗಳಿಗೆ ಮತ್ತೊಂದು ಜೋಡಿ ಓಲೆಗಳನ್ನು ಹಾಕಿಕೊಂಡ ಬಳಿಕ ನಿವೇದಿತಾ ಗೌಡ ಇನ್ನಷ್ಟು ಕ್ಯೂಟಾಗಿ ಕಾಣಿಸುತ್ತಿದ್ದಾರೆ. ಬಿಗ್‌ಬಾಸ್‌ ಸೀಸನ್‌ 5ರಲ್ಲಿ ತನ್ನ ಮುದ್ದಾದ ಮಾತುಗಳು, ಮುದ್ದು ಮುಖ, ನೀಲಕೇಶದಿಂದ ಪ್ರೇಕ್ಷಕರನ್ನು ಸೆಳೆದಿದ್ದರು. ಅದಕ್ಕೂ ಮುನ್ನ ರೀಲ್ಸ್‌ ಮೂಲಕ ಫೇಮಸ್‌ ಆಗಿದ್ದರು. ಬಿಗ್‌ಬಾಸ್‌ ಮನೆಯೊಳಗೆ ಚಂದನ್‌ ಶೆಟ್ಟಿ ಇವರಿಗಾಗಿ ಹಾಡೊಂದನ್ನು ಕಂಪೋಸ್‌ ಮಾಡಿ ಹಾಡಿದ್ದರು. ಬಿಗ್‌ಬಾಸ್‌ನಲ್ಲಿ ಪರಿಚಯವಾದ ಚಂದನ್‌ ಶೆಟ್ಟಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ಯುವ ದಸರಾದಲ್ಲಿ ಚಂದನ್‌ ಶೆಟ್ಟಿ ನಿವೇದಿತಾ ಗೌಡರಿಗೆ ಪ್ರಪೋಸ್‌ ಮಾಡಿದ್ದರು. ಈಗ ನಿವೇದಿತಾ ಗೌಡ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಹಲವು ರಿಯಾಲಿಟಿ ಶೋಗಳಲ್ಲಿಯೂ ಬಿಝಿಯಾಗಿದ್ದಾರೆ. ಸ್ಯಾಂಡಲ್‌ವುಡ್‌ನಲ್ಲಿ ನಿವೇದಿತಾ ಗೌಡ ಗೊಂಬೆ ಎಂದೇ ಖ್ಯಾತಿ ಪಡೆದಿದ್ದಾರೆ.

ಟಿಕ್‌ಟಾಕ್‌ ಮೂಲಕ ಬೆಳಕಿಗೆ ಬಂದ ನಿವೇದಿತಾ ಗೌಡ ಈಗ ಜಿಎಸ್‌ಟಿ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಂದೇಶ್‌ ನಾಗರಾಜ್‌ ಅರ್ಪಿಸುವ, ಸಂದೇಶ್‌ ಎನ್‌ ನಿರ್ಮಾಣದ ಜಿಎಸ್‌ಟಿ ಸಿನಿಮಾದಲ್ಲಿ ಸೃಜನ್‌ ಲೋಕೇಶ್‌ ನಾಯಕನಾಗಿ ನಟಿಸುತ್ತಿದ್ದಾರೆ. ಸೃಜನ್‌ಗೆ ನಾಯಕಿಯಾಗಿ ಬಿಗ್‌ಬಾಸ್‌ ಗೊಂಬೆ ನಿವೇದಿತಾ ಗೌಡ ನಟಿಸುತ್ತಿದ್ದಾರೆ.

ಜಿಎಸ್‌ಟಿ ಸಿನಿಮಾ ಸಾಕಷ್ಟು ವಿಶೇಷಗಳನ್ನು ಹೊಂದಿದೆ. ಈ ಸಿನಿಮಾದಲ್ಲಿ ಗಿರಿಜಾ ಲೋಕೇಶ್‌, ಸೃಜನ್‌ ಲೋಕೇಶ್‌, ಸೃಜನ್‌ ಪುತ್ರ ಸುಕೃತ್‌ ನಟಿಸುತ್ತಿದ್ದಾರೆ. ಅಜ್ಜಿ, ಮಗ ಮತ್ತು ಮೊಮ್ಮಗ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಈ ಸಿನಿಮಾಕ್ಕೆ ನಿವೇದಿತ ಗೌಡರ ಪತಿ ಚಂದನ್‌ ಶೆಟ್ಟಿ ಸಂಗೀತ ನೀಡುತ್ತಿದ್ದಾರೆ.

IPL_Entry_Point