Kannada News  /  Entertainment  /  Rajini Visits Uddhav Thackeray House: Rajinikanth Visits Former Maharashtra Chief Minister Udbhav Thackeray's House; Sources Say There Is No Political Motive
ಉದ್ಭವ್‌ ಠಾಕ್ರೆ ಮನೆಯಲ್ಲಿ ರಜನಿಕಾಂತ್‌
ಉದ್ಭವ್‌ ಠಾಕ್ರೆ ಮನೆಯಲ್ಲಿ ರಜನಿಕಾಂತ್‌

ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಉದ್ಭವ್‌ ಠಾಕ್ರೆ ಮನೆಗೆ ರಜನಿಕಾಂತ್‌ ಭೇಟಿ; ರಾಜಕೀಯ ಉದ್ದೇಶವಿಲ್ಲ ಎಂದ ಮೂಲಗಳು

18 March 2023, 21:33 ISTHT Kannada Desk
18 March 2023, 21:33 IST

Rajini visits Uddhav thackeraýs house: ಉದ್ಭವ್‌ ಠಾಕ್ರೆ ಅವರ ಮಗ ಆದಿತ್ಯ ಠಾಕ್ರೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಜನಿಕಾಂತ್‌ ಜೊತೆ ಇರುವ ಫೋಟೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ʼರಜನಿಕಾಂತ್‌ ಅವರು ನಮ್ಮ ಮನೆ ಮಾತೋಶ್ರೀಗೆ ಮಗದೊಮ್ಮೆ ಭೇಟಿ ನೀಡಿದ್ದು ನಿಜಕ್ಕೂ ಪರಮಾನಂದ ತಂದಿದೆʼ ಎಂದು ಚಿತ್ರ ಶೀರ್ಷಿಕೆ ನೀಡಿದ್ದಾರೆ.

ನಟ ರಜನಿಕಾಂತ್‌ ಇಂದು (ಮಾರ್ಚ್‌ 18) ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ, ಶಿವಸೇನಾ ನಾಯಕ ಉದ್ಭವ್‌ ಠಾಕ್ರೆ ಅವರನ್ನು ಭೇಟಿ ಮಾಡಿದ್ದಾರೆ. ಮುಂಬೈನಲ್ಲಿರುವ ಠಾಕ್ರೆ ಅವರ ಮನೆಗೆ ಭೇಟಿ ನೀಡಿದ ಸೂಪರ್‌ಸ್ಟಾರ್‌ ರಜನಿ, ಠಾಕ್ರೆ ಕುಟುಂಬದವರನ್ನೂ ಕೂಡ ಸಂಧಿಸಿದ್ದಾರೆ. ರಜನಿ ಹಾಗೂ ಉದ್ಭವ್‌ ಅವರ ಈ ಭೇಟಿ ಕುತೂಹಲ ಹುಟ್ಟು ಹಾಕಿದ್ದು ಸುಳ್ಳಲ್ಲ.

ಟ್ರೆಂಡಿಂಗ್​ ಸುದ್ದಿ

ಉದ್ಭವ್‌ ಠಾಕ್ರೆ ಮಗ ಆದಿತ್ಯ ಠಾಕ್ರೆ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ರಜನಿಕಾಂತ್‌ ಜೊತೆ ಇರುವ ಫೋಟೊವೊಂದನ್ನು ಪೋಸ್ಟ್‌ ಮಾಡಿದ್ದಾರೆ. ʼರಜನಿಕಾಂತ್‌ ಅವರು ನಮ್ಮ ಮನೆ ಮಾತೋಶ್ರೀಗೆ ಮಗದೊಮ್ಮೆ ಭೇಟಿ ನೀಡಿದ್ದು, ನಿಜಕ್ಕೂ ಪರಮಾನಂದ ತಂದಿದೆʼ ಎಂದು ಚಿತ್ರ ಶೀರ್ಷಿಕೆ ನೀಡಿದ್ದಾರೆ. ಈ ಫೋಟೊದಲ್ಲಿ ಉದ್ಭವ್‌ ಠಾಕ್ರೆ, ಅವರ ಪತ್ನಿ ರೇಷ್ಮಿ, ಮಕ್ಕಳಾದ ಆದಿತ್ಯ ಹಾಗೂ ತೇಜಸ್‌ ಅವರೊಂದಿಗೆ ರಜನಿಕಾಂತ್‌ ನಿಂತಿರುವುದನ್ನು ಕಾಣಬಹುದು. ಚಿತ್ರದಲ್ಲಿ ತಲೈವಾಗೆ ಹೂಗುಚ್ಛ ನೀಡಿರುವುದನ್ನು ನೋಡಬಹುದಾಗಿದೆ.

ಮೂಲಗಳ ಪ್ರಕಾರ, ಇದು ರಾಜಕಾರಣಕ್ಕೆ ಸಂಬಂಧಿಸಿದ ಭೇಟಿಯಲ್ಲ. ಈ ಭೇಟಿಗೂ ರಾಜಕೀಯಕ್ಕೂ ಸಂಬಂಧವೇ ಇಲ್ಲ. ರಜನಿಕಾಂತ್‌ ಅವರು ಉದ್ಭವ್‌ ಅವರ ಕುಟುಂಬದೊಂದಿಗೆ ಆತ್ಮೀಯ ಸಂಬಂಧವನ್ನು ಹೊಂದಿದ್ದಾರೆ ಎನ್ನಲಾಗುತ್ತಿದೆ. ಮ್ಯಾಚ್‌ ಸಲುವಾಗಿ ಮುಂಬೈಗೆ ಬಂದಿದ್ದ ಸೂಪರ್‌ಸ್ಟಾರ್‌ ಮಾತೋಶ್ರೀಗೆ ಗೌರವಾನ್ವಿತ ಭೇಟಿ ನೀಡಿದ್ದಾರೆ. ರಜನಿಕಾಂತ್ ಅವರು ಬಾಳ್ ಠಾಕ್ರೆಯವರ ವ್ಯಂಗ್ಯಚಿತ್ರಗಳ ಮಹಾನ್ ಅಭಿಮಾನಿಯಾಗಿದ್ದರು ಎಂದು ಹೇಳಲಾಗುತ್ತದೆ.

ಆದಿತ್ಯ ಠಾಕ್ರೆ ಅವರ ಪೋಸ್ಟ್‌ಗೆ ಅಭಿಮಾನಿಗಳು ತಮಗೆ ತೋಚಿದ ರೀತಿ ಕಮೆಂಟ್‌ ಬರೆದಿದ್ದಾರೆ. ʼಪವರ್‌ ಆಫ್‌ ದಿ ಮಾತೋಶ್ರೀʼ ಎಂದು ಒಬ್ಬರು ಬರೆದಿದ್ದರೆ, ʼಸೂಪರ್‌ ಡೂಪರ್‌ ತಲೈವಾ ಅಟ್‌ ಮಾತೋಶ್ರೀʼ ಎಂದು ಇನ್ನೊಬ್ಬರು ಬರೆದಿದ್ದಾರೆ. ʼಪವರ್‌ಫುಲ್‌ ಪೀಪಲ್‌ ಮೇಕ್ಸ್‌ ಪ್ಲೇಸ್‌ ಪವರ್‌ಫುಲ್‌ʼ ಎಂದು ಇನ್ನೊಬ್ಬರು ಕಮೆಂಟ್‌ ಮಾಡಿದ್ದಾರೆ.

ರಜನಿಕಾಂತ್‌ ಮುಂಬೈನ ವಾಖೆಂಡೆ ಕ್ರೀಡಾಂಗಣದಲ್ಲಿ ಭಾರತ, ಆಸ್ಟ್ರೇಲಿಯಾ ನಡುವಿನ ಅಂತರರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಭಾಗವಹಿಸಲು ಮುಂಬೈಗೆ ಬಂದಿದ್ದರು. ಮುಂಬೈ ಕ್ರಿಕೆಟ್‌ ಅಸೋಸಿಯೇಷನ್‌ ಅವರು ರಜನಿ ಅವರನ್ನು ಮ್ಯಾಚ್‌ಗೆ ಆಹ್ವಾನಿಸಿದ್ದರು.

ಎಂಸಿಎಯ ಟ್ವಿಟರ್‌ನಲ್ಲಿ ಮ್ಯಾಚ್‌ಗೆ ಸಂಬಂಧಿಸಿದ ಕೆಲವು ಫೋಟೊಗಳನ್ನು ಪೋಸ್ಟ್ ಮಾಡಲಾಗಿದೆ. ಚಿತ್ರದಲ್ಲಿ, ರಜನಿಕಾಂತ್ ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ಅವರ ಜೊತೆಯಲ್ಲಿ ಆಟವನ್ನು ಆನಂದಿಸುತ್ತಿರುವುದನ್ನು ಕಾಣಬಹುದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳು ಇಲ್ಲಿವೆ:

ಉರ್ಫಿ ಫ್ಯಾಷನ್‌ ಅಭಿರುಚಿಗೆ ʼಬ್ಯಾಡ್‌ ಟೇಸ್ಟ್‌ʼ ಎಂದ ರಣಬೀರ್‌ ಕಪೂರ್‌!

ಉರ್ಫಿ ಜಾವೇದ್‌, ತನ್ನ ಚಿತ್ರ ವಿಚಿತ್ರ ಉಡುಪುಗಳಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಸುಂದರಿ. ತೀರಾ ಕನಿಷ್ಠ ಬಟ್ಟೆ ಧರಿಸುವ ಮೂಲಕ ಪಡ್ಡೆ ಹುಡುಗರ ಮೈ ಬಿಸಿಯೇರಿಸುವ ಈಕೆಯ ಬಗ್ಗೆ ರಣಬೀರ್‌ ಕಪೂರ್‌ ಮಾತನಾಡಿದ್ದಾರೆ.

ನಿರ್ಮಾಪಕ ಮುನಿರತ್ನ ತೆಕ್ಕೆಗೆ ‘ಉರೀಗೌಡ ನಂಜೇಗೌಡ’ ಶೀರ್ಷಿಕೆ; ಕಲ್ಪಿತ ಕಥೆಯ ಮೂಲಕ ಒಕ್ಕಲಿಗ ಸಮುದಾಯಕ್ಕೆ ಕಳಂಕ ಎಂದ HDK

ರಾಜ್ಯ ರಾಜಕಾರಣದಲ್ಲಿ ಸದ್ಯ ಸುದ್ದಿಯಲ್ಲಿರುವ ಎರಡು ಹೆಸರುಗಳೆಂದರೆ ಅದು ಉರೀಗೌಡ ಮತ್ತು ನಂಜೇಗೌಡ! ಇದಕ್ಕೆ ಕಾರಣ ಇತ್ತೀಚೆಗಷ್ಟೇ ಬಿಜೆಪಿ ನೀಡಿದ್ದ ಹೇಳಿಕೆ. ಟಿಪ್ಪು ಸುಲ್ತಾನ್‌ ಹತ್ಯೆಗೈದ ಒಕ್ಕಲಿಗ ವೀರರೇ ಈ ಉರೀಗೌಡ ಮತ್ತು ನಂಜೇಗೌಡ ಎಂದಿತ್ತು. ಬಿಜೆಪಿಯ ಈ ಹೇಳಿಕೆಗೆ ವಿಪಕ್ಷ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೀವ್ರ ವಾಗ್ದಾಳಿ ನಡೆಸಿದ್ದು, ಒಕ್ಕಲಿಗ ಸಮುದಾಯಕ್ಕೆ ಇದು ಕಳಂಕ ಎಂದು ಆರೋಪಿಸಿದೆ.

ವಿಭಾಗ